ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಎಲ್ಲರಿಗೂ ಧನ್ಯವಾದ ಹೇಳಿದ ಕನ್ನಡಿಗ ರಾಹುಲ್

IPL 2022: KL Rahul posted about Punjab Kings in Koo application

ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಲಕ್ನೋ ಮತ್ತು ಅಹ್ಮದಾಬಾದ್ ತಂಡಗಳ ಸೇರ್ಪಡೆಯಾಗುತ್ತಿರುವ ಕಾರಣ ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಅಸ್ತಿತ್ವದಲ್ಲಿರುವ 8 ಫ್ರಾಂಚೈಸಿಗಳು ತಮ್ಮ ತಂಡದಲ್ಲಿರುವ ಯಾರಾದರೂ ಗರಿಷ್ಠ 4 ಆಟಗಾರರನ್ನು ರಿಟೇನ್ ಮಾಡಿಕೊಳ್ಳುವ ಅನುಮತಿಯನ್ನು ಬಿಸಿಸಿಐನಿಂದ ಪಡೆದುಕೊಂಡಿದ್ದವು. ಹೀಗೆ ವಿವಿಧ ಫ್ರಾಂಚೈಸಿಗಳಿಗೆ ಆಟಗಾರರನ್ನು ರಿಟೈನ್ ಮಾಡಿಕೊಳ್ಳುವುದಕ್ಕೆ ನವೆಂಬರ್ 30ನ್ನು ಅಂತಿಮ ದಿನಾಂಕವನ್ನಾಗಿ ಘೋಷಿಸಲಾಗಿತ್ತು. ಅದರಂತೆಯೇ ಎಲ್ಲಾ 8 ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಿದ್ದು, ನವೆಂಬರ್‌ 30ರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಆ ಪಟ್ಟಿಗಳ ಹೆಸರುಗಳನ್ನು ಬಹಿರಂಗಪಡಿಸಲಾಗಿದೆ.

ದೊಡ್ಡ ಮೊತ್ತ ಪಡೆಯುತ್ತಿದ್ದ ಧೋನಿಗೆ ಈ ಸಲ ಕಡಿಮೆ ಮೊತ್ತ ಸಿಕ್ಕಿದ್ದಕ್ಕೆ ಕಾರಣ ಆ ಒಬ್ಬ ಆಟಗಾರ!ದೊಡ್ಡ ಮೊತ್ತ ಪಡೆಯುತ್ತಿದ್ದ ಧೋನಿಗೆ ಈ ಸಲ ಕಡಿಮೆ ಮೊತ್ತ ಸಿಕ್ಕಿದ್ದಕ್ಕೆ ಕಾರಣ ಆ ಒಬ್ಬ ಆಟಗಾರ!

ಚೆನ್ನೈ ಸೂಪರ್ ಕಿಂಗ್ಸ್ ತಂಡದ ರವೀಂದ್ರ ಜಡೇಜಾ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ 16 ಕೋಟಿ ಪಡೆಯುವುದರ ಮೂಲಕ ಈ ಬಾರಿಯ ಐಪಿಎಲ್ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅತಿ ದೊಡ್ಡ ಮೊತ್ತ ಪಡೆದ ಆಟಗಾರರು ಎನಿಸಿಕೊಂಡರು. ಹಾಗೂ ಈ ಬಾರಿಯ ಐಪಿಎಲ್ ರಿಟೆನ್ಷನ್ ಆರಂಭವಾಗುವ ಮುನ್ನ ಕೆಎಲ್ ರಾಹುಲ್ ವಿಚಾರವಾಗಿ ವಿವಾದಕ್ಕೆ ಒಳಗಾಗಿದ್ದ ಪಂಜಾಬ್ ಕಿಂಗ್ಸ್ ತಂಡ ಮಯಾಂಕ್ ಅಗರ್ವಾಲ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ರಿಟೈನ್ ಮಾಡಿಕೊಂಡಿದೆ. ಈ ಮೂಲಕ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡದಿಂದ ಹೊರಬಿದ್ದಿದ್ದು ಮುಂಬರಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ನೂತನವಾಗಿ ಆಯ್ಕೆಯಾಗಿರುವ ಲಖನೌ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿವೆ.

ಹೀಗಿರುವಾಗಲೇ ಕೆಎಲ್ ರಾಹುಲ್ ಭಾರತದ ಜನಪ್ರಿಯ ಮೈಕ್ರೋ ಬ್ಲಾಗಿಂಗ್ ವೇದಿಕೆಯಾದ ಕೂ ಅಪ್ಲಿಕೇಶನ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹೌದು, ಪಂಜಾಬ್‌ ಕಿಂಗ್ಸ್ ತಂಡವು ನಾಯಕ, ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಕೈಬಿಟ್ಟ ನಂತರ, ಅವರು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ.

ಮೈಕ್ರೋ ಬ್ಲಾಗಿಂಗ್ ವೇದಿಕೆಯಾದ ಕೂ ನಲ್ಲಿ ಕನ್ನಡದಲ್ಲಿ ತಮ್ಮ ಮನದ ಮಾತುಗಳ್ಳನ್ನು ಹಂಚಿಕೊಂಡಿರುವ ರಾಹುಲ್, ಇದೊಂದು ಉತ್ತಮ ಪಯಣವಾಗಿತ್ತು, ನಿಮ್ಮ ಪ್ರೀತಿಗೆ ಧನ್ಯವಾದಗಳು ಮತ್ತೊಮ್ಮೆ ಭೇಟಿಯಾಗೋಣ' ಎಂದು ಬರೆದುಕೊಂಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟ್ವೆಂಟಿ-20 ಕ್ರಿಕೆಟ್‌ನ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮಂಗಳವಾರ ಸಲ್ಲಿಸಿತ್ತು.

ಐಪಿಎಲ್: ರಿಟೈನ್ ಆದ ಎಲ್ಲಾ ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ; ಈ ಮೂವರಿಗೆ ಅತಿಹೆಚ್ಚು ಹಣಐಪಿಎಲ್: ರಿಟೈನ್ ಆದ ಎಲ್ಲಾ ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ; ಈ ಮೂವರಿಗೆ ಅತಿಹೆಚ್ಚು ಹಣ

ಕೂ ಬಗ್ಗೆ:
ಕೂ ಅನ್ನು ಮಾರ್ಚ್ 2020 ರಲ್ಲಿ ಸ್ಥಾಪಿಸಲಾಯಿತು, ಬಹುಭಾಷಾ ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿ ಭಾರತೀಯ ಭಾಷೆಗಳಲ್ಲಿ ಮತ್ತು ಈಗ ಭಾರತದಾದ್ಯಂತ 15 ಮಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಇದು ಬಹು ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ, ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ತಾವು ವ್ಯಕ್ತಪಡಿಸಬಹುದು. ಕೇವಲ 10% ಇಂಗ್ಲಿಷ್ ಮಾತನಾಡುವ ನಮ್ಮ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ತಲ್ಲೀನಗೊಳಿಸುವ ಭಾಷೆಯ ಅನುಭವಗಳನ್ನು ನೀಡಲು ಮತ್ತು ಅವರನ್ನು ಸಂಪರ್ಕಿಸಲು ಸಹಾಯ ಮಾಡುವ ಸಾಮಾಜಿಕ ಮಾಧ್ಯಮ ವೇದಿಕೆಯ ಆಳವಾದ ಅವಶ್ಯಕತೆ ಇದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ ಕೂ ಒಂದು ಉತ್ತಮ ಬಳಕೆದಾರ ಸ್ನೇಹಿ ವೇದಿಕೆಯನ್ನು ಒದಗಿಸುತ್ತದೆ.

ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಲು ವಿರಾಟ್ ಕೊಹ್ಲಿ ಸಿದ್ಧ | Oneindia Kannada

Story first published: Wednesday, December 1, 2021, 18:01 [IST]
Other articles published on Dec 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X