ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022 ಕ್ವಾಲಿಫೈಯರ್ 2: ರಾಜಸ್ಥಾನ ವಿರುದ್ಧ ಆರ್‌ಸಿಬಿ ಆಡುವ 11ರ ಬಳಗದಲ್ಲಿ ಬದಲಾವಣೆಯೇ?

IPL 2022 Qualifier 2; Royal Challengers Bangalore Predicted Playing 11 Against Rajasthan Royals

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಒಂದು ವೇಳೆ ಗೆಲುವು ಸಾಧಿಸಿದರೆ ನಾಲ್ಕನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ತಲುಪಿದಂತಾಗುತ್ತದೆ.

IPL 2022: 'ರಾಯಲ್ಸ್' ಕದನದಲ್ಲಿ ಗೆಲ್ಲುವುದ್ಯಾರು? ರಾಜಸ್ಥಾನ ವಿರುದ್ಧ ಆರ್‌ಸಿಬಿ ಯೋಜನೆ ಹೇಗಿದೆ?IPL 2022: 'ರಾಯಲ್ಸ್' ಕದನದಲ್ಲಿ ಗೆಲ್ಲುವುದ್ಯಾರು? ರಾಜಸ್ಥಾನ ವಿರುದ್ಧ ಆರ್‌ಸಿಬಿ ಯೋಜನೆ ಹೇಗಿದೆ?

ಅದೃಷ್ಟದಾಟದಲ್ಲಿ ಪ್ಲೇಆಫ್‌ಗೆ ಪ್ರವೇಶಿಸಿದ ನಂತರ ಆರ್‌ಸಿಬಿ ನಿರ್ಣಾಯಕ ಪಂದ್ಯದಲ್ಲಿ ಸಂಘಟಿತ ಹೋರಾಟ ನಡೆಸಿ ಎಲಿಮಿನೇಟರ್‌ನಲ್ಲಿ ಲಕ್ನೋ ವಿರುದ್ಧ ಭರ್ಜರಿಯಾಗಿ ಗೆದ್ದರು. ಇದರಲ್ಲಿ ರಜತ್ ಪಾಟಿದಾರ್ ಅವರ ಅಜೇಯ 112 ರನ್ ಕೂಡಾ ಕ್ವಾಲಿಫೈಯರ್ 2 ತಲುಪಲು ಸಹಾಯ ಮಾಡಿತು. ಆದರೆ ಬೌಲಿಂಗ್ ವಿಭಾಗದಲ್ಲಿ ಬೌಲರ್‌ಗಳ ಕಳಪೆ ಪ್ರದರ್ಶನ ಮತ್ತೊಮ್ಮೆ ಪ್ರಮುಖ ಚರ್ಚೆಯಾಗಿದೆ. ಅದರ ಹೊರತಾಗಿಯೂ, ಆರ್‌ಸಿಬಿ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡುವ 11ರ ಬಳಗದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ ಇದೆ.

ಆರ್‌ಆರ್ ವಿರುದ್ಧ ಆರ್‌ಸಿಬಿ ಆಡುವ 11ರ ಬಳಗ ಇಲ್ಲಿದೆ

ಆರ್‌ಆರ್ ವಿರುದ್ಧ ಆರ್‌ಸಿಬಿ ಆಡುವ 11ರ ಬಳಗ ಇಲ್ಲಿದೆ

ಫಾಫ್ ಡು ಪ್ಲೆಸಿಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಈ ಋತುವಿನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ, ಆದರೆ ಲಕ್ನೋ ತಂಡದ ವಿರುದ್ಧ ಗೋಲ್ಡನ್ ಡಕ್‌ಗೆ ಔಟಾದರು. ಅವರು ಶುಕ್ರವಾರದ ಮತ್ತೊಂದು ನಿರ್ಣಾಯಕ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಾಣಲು ಪ್ರಯತ್ನಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ: ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿಯ ಸ್ಟಾರ್ ಬ್ಯಾಟರ್ ಉತ್ತಮವಾದ ಆರಂಭ ಕಂಡರು, ಆದರೆ ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು. ಅವರ ಫಾರ್ಮ್ ಆರ್‌ಸಿಬಿಯ ಗೆಲುವಿನಲ್ಲಿ ಪ್ರಮುಖವಾಗಿದೆ ಮತ್ತು ಇಂದಾದರೂ ಅವರ ಬ್ಯಾಟ್‌ನಿಂದ ಶತಕ ಬರಲಿ ಎನ್ನುವುದು ಕೋಟ್ಯಂತರ ಅಭಿಮಾನಿಗಳ ಹೆಬ್ಬಯಕೆಯಾಗಿದೆ.

ರಜತ್ ಪಾಟಿದಾರ್: ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ನಂತರ ಬ್ಯಾಟಿಂಗ್‌ಗೆ ಬರುವ ಪಾಟಿದಾರ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಶಕ್ತಿ ತುಂಬಲಿದ್ದಾರೆ. ರಜತ್ ಪಾಟಿದಾರ್ ಎಲ್‌ಎಸ್‌ಜಿ ವಿರುದ್ಧ ಅಜೇಯ 112 ರನ್‌ಗಳನ್ನು ಬಾರಿಸಿ ಅಬ್ಬರಿಸಿದರು. ಈ ಯುವ ಬ್ಯಾಟರ್‌ನಿಂದ ಮತ್ತೊಂದು ದೊಡ್ಡ ಸ್ಕೋರ್ ಬರಲಿ ಎಂದು ಆರ್‌ಸಿಬಿ ಪ್ರಾಂಚೈಸಿ ಬಯಸಿದೆ.

277 ರನ್ ಗಳಿಸಿರುವ ಆಸ್ಟ್ರೇಲಿಯನ್ ಬ್ಯಾಟ್ಸ್‌ಮನ್

277 ರನ್ ಗಳಿಸಿರುವ ಆಸ್ಟ್ರೇಲಿಯನ್ ಬ್ಯಾಟ್ಸ್‌ಮನ್

ಗ್ಲೆನ್ ಮ್ಯಾಕ್ಸ್‌ವೆಲ್: 12 ಪಂದ್ಯಗಳಲ್ಲಿ ಕೇವಲ 277 ರನ್ ಗಳಿಸಿರುವ ಆಸ್ಟ್ರೇಲಿಯನ್ ಬ್ಯಾಟ್ಸ್‌ಮನ್ ಪ್ರಸಕ್ತ ಐಪಿಎಲ್‌ನಲ್ಲಿ ಅವರಿಂದ ಅತ್ಯುತ್ತಮ ಪ್ರದರ್ಶನ ಮೂಡಿಬಂದಿಲ್ಲ. ಗ್ಲೆನ್ ಮ್ಯಾಕ್ಸ್‌ವೆಲ್ ಅವರು ರಾಜಸ್ಥಾನ ರಾಯಲ್ಸ್ ವಿರುದ್ಧ ನೈಜ ಮತ್ತು ಸ್ಫೋಟಕ ಬ್ಯಾಟಿಂಗ್ ಮಾಡಲು ಯತ್ನಿಸಲಿದ್ದಾರೆ.

ಮಹಿಪಾಲ್ ಲೊಮ್ರೋರ್: ಈ ಆಲ್‌ರೌಂಡರ್‌ಗೆ ಒತ್ತಡದ ಸಂದರ್ಭಗಳಲ್ಲಿ ಅವಕಾಶ ನೀಡಿದರೆ ಖಂಡಿತವಾಗಿಯೂ ಚೆಂಡನ್ನು ಹೊಡೆಯಬಹುದು ಎಂದು ತೋರಿಸಿದ್ದಾರೆ. ಆದಾಗ್ಯೂ, ಅವರು ಇಲ್ಲಿಯವರೆಗೆ ದೊಡ್ಡ ಹೊಡೆತವನ್ನು ಆಡಲು ವಿಫಲರಾಗಿದ್ದಾರೆ. ಆದರೂ ಇಂದಿನ ತಂಡದಲ್ಲಿ ಅವರು ಸ್ಥಾನ ಪಡೆಯಬಹುದು.

ದಿನೇಶ್ ಕಾರ್ತಿಕ್: ವಿಕೆಟ್ ಕೀಪರ್-ಬ್ಯಾಟರ್ ಲಕ್ನೋ ವಿರುದ್ಧ ಸುಂದರ ಇನ್ನಿಂಗ್ಸ್ ಕಟ್ಟಿ, ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. ಹಾಗಾಗಿ ಆರ್‌ಸಿಬಿ ತಂಡ ಲಕ್ನೋ ತಂಡದ ವಿರುದ್ಧ ದೊಡ್ಡ ಮೊತ್ತವನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಅವರು ಮತ್ತೊಮ್ಮೆ ಆರ್‌ಸಿಬಿ ಇನ್ನಿಂಗ್ಸ್‌ಗೆ ಅಂತಿಮ ಓವರ್‌ಗಳಲ್ಲಿ ರನ್ ಪ್ರವಾಹ ಹರಿಸುವ ಸಾಧ್ಯತೆ ಇದೆ.

ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನ

ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನ

ಶಹಬಾಜ್ ಅಹ್ಮದ್: ಈ ಆಲ್‌ರೌಂಡರ್ ಒತ್ತಡದ ಸಂದರ್ಭಗಳಲ್ಲಿ ತಂಡಕ್ಕೆ ಆಸರೆಯಾಗುತ್ತಾರೆ. ಪ್ರಸಕ್ತ ಟೂರ್ನಿಯ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಇಲ್ಲಿಯವರೆಗೆ ಉತ್ಸಾಹಭರಿತ ಆಟಗಾರರಾಗಿದ್ದಾರೆ. ಅವರು ರಾಜಸ್ಥಾನ ರಾಯಲ್ಸ್ ವಿರುದ್ಧ ಇಂದಿನ ಪಂದ್ಯದಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ತಂಡಕ್ಕೆ ಕೊಡುಗೆ ನೀಡಲು ನೋಡುತ್ತಾರೆ.

ವನಿಂದು ಹಸರಂಗಾ: ಶ್ರೀಲಂಕಾದ ಲೆಗ್ ಸ್ಪಿನ್ನರ್ ಈ ಋತುವಿನಲ್ಲಿ 15 ಪಂದ್ಯಗಳಲ್ಲಿ 25 ವಿಕೆಟ್‌ಗಳೊಂದಿಗೆ ಆರ್‌ಸಿಬಿ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ಯುಜ್ವೇಂದ್ರ ಚಹಾಲ್ ನಂತರ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಇವತ್ತು ಈ ಆಟಗಾರನ ವಿಕೆಟ್ ಬೇಗ ಪಡ್ಕೊಂಡ್ರೆ RCB ಫೈನಲ್ ಗೇರೋದು ಗ್ಯಾರೆಂಟಿ | #cricket | Oneindia Kannada
ಹೆಚ್ಚು ವಿಶ್ವಾಸಾರ್ಹವಾದ ಹರ್ಷಲ್ ಪಟೇಲ್

ಹೆಚ್ಚು ವಿಶ್ವಾಸಾರ್ಹವಾದ ಹರ್ಷಲ್ ಪಟೇಲ್

ಹರ್ಷಲ್ ಪಟೇಲ್: ಕಳೆದ ವರ್ಷದ ಪರ್ಪಲ್ ಕ್ಯಾಪ್ ವಿಜೇತ ಹರ್ಷಲ್ ಪಟೇಲ್ ಈ ಋತುವಿನಲ್ಲಿ ಹೆಚ್ಚು ವಿಶ್ವಾಸಾರ್ಹರಾಗಿದ್ದಾರೆ ಮತ್ತು 7.5 RPO ನಲ್ಲಿ 19 ವಿಕೆಟ್‌ಗಳನ್ನು ಪಡೆದಿದ್ದಾರೆ.

ಜೋಶ್ ಹೇಜಲ್‌ವುಡ್: ಎಲ್‌ಎಸ್‌ಜಿ ವಿರುದ್ಧದ ತನ್ನ ಮೊದಲ ಮೂರು ಓವರ್‌ಗಳಲ್ಲಿ 35 ರನ್‌ಗಳನ್ನು ಬಿಟ್ಟುಕೊಟ್ಟ ನಂತರ, ಹ್ಯಾಜಲ್‌ವುಡ್ ಅದ್ಭುತವಾಗಿ 19ನೇ ಓವರ್ ಬೌಲ್ ಮಾಡಿದರು ಮತ್ತು ಪ್ರಮುಖ ಕೆಎಲ್ ರಾಹುಲ್ ಸೇರಿದಂತೆ ಎರಡು ವಿಕೆಟ್ ಪಡೆದರು.

ಮೊಹಮ್ಮದ್ ಸಿರಾಜ್: ಈ ಋತುವಿನಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಫಾರ್ಮ್ ಆರ್‌ಸಿಬಿಗೆ ದೊಡ್ಡ ಚಿಂತೆಯಾಗಿದೆ. ಹಿಂದಿನ ಪಂದ್ಯದ ಆರಂಭದಲ್ಲಿ ಉತ್ತಮ ಸ್ಪೆಲ್ ಮಾಡಿದ ನಂತರ ಮತ್ತೊಂದು ವಿಕೆಟ್ ಪಡೆಯುವಲ್ಲಿ ವಿಫಲರಾದರು ಮತ್ತು ನಾಲ್ಕು ಓವರ್‌ಗಳಲ್ಲಿ 41 ರನ್ ಬಿಟ್ಟುಕೊಟ್ಟರು.

Story first published: Friday, May 27, 2022, 16:14 [IST]
Other articles published on May 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X