ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs RR: ರಜತ್ ಪಾಟೀದಾರ್ ಕ್ಯಾಚ್ ಬಿಟ್ಟು ಟ್ರೋಲ್ ಆದ ರಿಯಾನ್ ಪರಾಗ್‌!

Riyan parag

ರಾಜಸ್ಥಾನ್ ರಾಯಲ್ಸ್ ಯುವ ಬ್ಯಾಟ್ಸ್‌ಮನ್ ರಿಯಾನ್ ಪರಾಗ್ ಐಪಿಎಲ್ 2022 ರ ಋತುವಿನಲ್ಲಿ ಆಟಕ್ಕಿಂತ ಹೆಚ್ಚು ವರ್ತನೆಯೊಂದಿಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಕ್ವಾಲಿಫೈಯರ್ 1 ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಅಶ್ವಿನ್ ಜೊತೆಗಿನ ಸಣ್ಣ ವಾಗ್ವಾದಕ್ಕಾಗಿ ರಿಯಾನ್ ಪರಾಗ್ ಇತ್ತೀಚೆಗೆ ಸುದ್ದಿಯಲ್ಲಿದ್ದರು. ಜೊತೆಗೆ ತಂಡದ ಸಹ ಆಟಗಾರ ದೇವದತ್ ಪಡಿಕ್ಕಲ್ ಅವರ ಮೇಲೆ ಗಂಭೀರವಾಗಿ ವರ್ತಿಸಿದ್ದರು.

ಇದಕ್ಕೂ ಮುನ್ನ ಬೆಂಗಳೂರಿನ ಆಟಗಾರ ಹರ್ಷಲ್ ಪಟೇಲ್ ಜತೆ ರಿಯಾನ್ ಪರಾಗ್ ವಾಗ್ವಾದ ನಡೆಸಿದ್ದರು. ಇದು ರಿಯಾನ್ ಪರಾಗ್ ಅವರ ವರ್ತನೆಗೆ ವ್ಯಾಪಕ ಟೀಕೆಗೆ ಕಾರಣವಾಯಿತು. ಹೀಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ನೆಟಿಜನ್‌ಗಳಿಂದ ಅವರು ನಿರಂತರವಾಗಿ ಟ್ರೋಲ್ ಆಗುತ್ತಿದ್ದಾರೆ.

ಕ್ವಾಲಿಫೈಯರ್ 2ನಲ್ಲಿ ಕ್ಯಾಚ್ ಬಿಟ್ಟ ಪರಾಗ್

ಶುಕ್ರವಾರ ನಡೆದ ಆರ್‌ಸಿಬಿ ವರ್ಸಸ್ ರಾಜಸ್ತಾನ್ ರಾಯಲ್ಸ್‌ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಿಯಾನ್ ಪರಾಗ್ ದೊಡ್ಡ ತಪ್ಪು ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಪಂದ್ಯದಲ್ಲಿ ಆಕ್ರಮಣಕಾರಿ ಆಟವಾಡಿದ ರಜತ್ ಪಾಟಿದಾರ್ ಕ್ಯಾಚ್ ಮಿಸ್ ಮಾಡಿದರು. ಕಳೆದ ಪಂದ್ಯದಲ್ಲಿ ರಜತ್ ಪಾಟಿದಾರ್ ಶತಕ ಬಾರಿಸಿದ್ದು ಗೊತ್ತೇ ಇದೆ. ರಜತ್ ಪಾಟಿದಾರ್ ಅವರ ವಿಕೆಟ್ ನಿರ್ಣಾಯಕ ಕ್ಷಣದಲ್ಲಿ ಪರಾಗ್ ಕ್ಯಾಚ್ ಅನ್ನು ಬಿಟ್ಟಿದ್ದರಿಂದ ನೆಟಿಜನ್‌ಗಳು ರಿಯಾನ್ ಪರಾಗ್ ಅವರನ್ನು ಮತ್ತೊಮ್ಮೆ ಟ್ರೋಲ್‌ ಮಾಡಿದರು.

ಕೊಹ್ಲಿ ಮತ್ತೆ ಫ್ಲಾಪ್‌, ಮಿಂಚದ ಉಳಿದ ಬ್ಯಾಟರ್ಸ್‌

ಕೊಹ್ಲಿ ಮತ್ತೆ ಫ್ಲಾಪ್‌, ಮಿಂಚದ ಉಳಿದ ಬ್ಯಾಟರ್ಸ್‌

ಈ ಪಂದ್ಯದಲ್ಲಿ ಕೊಹ್ಲಿ ಹಾಗೂ ಡುಪ್ಲೆಸಿಸ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಎರಡನೇ ಓವರ್ ನಲ್ಲಿ ಪ್ರಸಿದ್ ಕೃಷ್ಣ ಎಸೆತದಲ್ಲಿ ಕೊಹ್ಲಿ (7) ಬೌಲ್ಡ್ ಆದರು. ನಂತರ ಕ್ರೀಸ್‌ಗೆ ಬಂದ ರಜತ್ ಪಾಟಿದಾರ್ ಡುಪ್ಲೆಸಿಸ್ ಜೊತೆಗೆ ಪಂದ್ಯದ ಇನಿಂಗ್ಸ್ ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡರು. 4ನೇ ಓವರ್‌ನಲ್ಲಿ ಮೊದಲ ಎಸೆತಕ್ಕೆ ಬೌಂಡರಿ ಬಾರಿಸಿದ ಪಾಟಿದಾರ್ 6ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್‌ನಲ್ಲಿ ಸತತ 3 ಮತ್ತು 4 ಎಸೆತಗಳಲ್ಲಿ ಬೌಂಡರಿ ಬಾರಿಸಿದರು.

ಈ ವೇಳೆ ಮೂರನೇ ಎಸೆತದಲ್ಲಿ ಪ್ರಸಿದ್ ಲೆಂಥ್ ಎಸೆದರು ಮತ್ತು ಪಾಟಿದಾರ್ ಅವರ ಹೊಡೆತವು ಗಲ್ಲಿಯಲ್ಲಿ ರಿಯಾನ್ ಪರಾಗ್ ಅವರ ಮೇಲೆ ಬೌನ್ಸ್ ಆಯಿತು. ರಿಯಾನ್ ಪರಾಗ್ ಅವರು ಹಾರಾಡುತ್ತ ಚೆಂಡನ್ನು ಹಿಡಿಯಲು ಸಮರ್ಥರಾದರು. ಆದಾಗ್ಯೂ, ಪರಾಗ್ ಸ್ವಲ್ಪಮಟ್ಟಿಗೆ ಹಾರಿದರು ಆದರೆ ತನ್ನ ಸಡಿಲವಾದ ಕೈಗಳಿಂದ ಕ್ಯಾಚ್ ಅನ್ನು ಬಿಟ್ಟರು. ಆಗ ಪಾಟಿದಾರ್ ಅವರ ಸ್ಕೋರ್ 13 ಎಸೆತಗಳಲ್ಲಿ 13 ರನ್ ಆಗಿತ್ತು. ಆದ್ರೆ ರಿಯಾನ್ ಮಾಡಿದ ತಪ್ಪಿಗೆ ಪಾಟೀದಾರ್ 42 ಎಸೆತಗಳಲ್ಲಿ 58 ರನ್ ಕಲೆಹಾಕಿದರು.

ರಿಯಾನ್ ಪರಾಗ್ ಕಾಲೆಳೆದ ನೆಟಿಜನ್ಸ್‌

ರಿಯಾನ್ ಪರಾಗ್ ಕ್ಯಾಚ್ ಕೈ ತಪ್ಪಿದ ಹಿನ್ನೆಲೆಯಲ್ಲಿ ನೆಟಿಜನ್‌ಗಳು ಟ್ವೀಟ್, ಮೀಮ್‌ಗಳು ಮತ್ತು ಪೋಸ್ಟ್‌ಗಳ ರೂಪದಲ್ಲಿ ಅವರ ಅಸಹನೆಯನ್ನು ತೋರಿಸುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ರಿಯಾನ್ ಪರಾಗ್ ಅನ್ನು 'ವರ್ಸ್ಟ್' ರೇಂಜ್ ನಲ್ಲಿ ಎಂದು ನೆಟಿಜನ್ ಗಳು ಮೀಮ್ ಮಾಡಿದ್ದಾರೆ. ರಿಯಾನ್ ಪರಾಗ್ ಅವರ ಕಳಪೆ ಫೀಲ್ಡಿಂಗ್ ಪಂದ್ಯದ ಸ್ವರೂಪವನ್ನೇ ಬದಲಿಸಲಿದೆ ಎಂದು ಹಲವರು ಭವಿಷ್ಯ ನುಡಿದರು.

ಉಭಯ ತಂಡಗಳ ಪ್ಲೇಯಿಂಗ್ 11

ಉಭಯ ತಂಡಗಳ ಪ್ಲೇಯಿಂಗ್ 11

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ 11): ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೂರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ವನಿಂದು ಹಸರಂಗ್, ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್‌

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ 11): ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್, ನಾಯಕ), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಓಬೇದ್ ಮೆಕಾಯ್, ಯುಜವೇಂದ್ರ ಚಹಾಲ್

Story first published: Saturday, May 28, 2022, 9:43 [IST]
Other articles published on May 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X