ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಯಾರೂ ಇಷ್ಟು ಅದ್ಭುತ ಬ್ಯಾಟಿಂಗ್ ಮಾಡಿದ್ದನ್ನು ನೋಡಿದ ನೆನಪಿಲ್ಲ: ಕುಮಾರ್ ಸಂಗಕ್ಕರ

IPL 2022: RR director of cricket Kumar Sangakkara praises Jos Buttler for his performance

ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಅದ್ಭುತ ಪ್ರದರ್ಶನ ನೀಡಿದ್ದು ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ಆರ್‌ಆರ್ ತಂಡ ಐಪಿಎಲ್ ಇತಿಹಾಸದಲ್ಲಿ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯುವ ಅವಕಾಶವನ್ನು ಹೊಂದಿದೆ. ಈ ಸಂದರ್ಭದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಿರ್ದೇಶಕ ಕುಮಾರ್ ಸಂಗಕ್ಕರ ಪ್ರತಿಕ್ರಿಯಿಸಿದ್ದು ತಂಡದ ಓರ್ವ ಆಟಗಾರ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಉತ್ತಮ ಪ್ರದರ್ಶನ ನೀಡಲು ಪ್ರಮುಖ ಕಾರಣ ತಂಡದ ಓರ್ವ ಆಟಗಾರ. ಅದು ಬೇರೆ ಯಾರೂ ಅಲ್ಲ, ಆರಂಭಿಕ ಆಟಗಾರ ಜೋಸ್ ಬಟ್ಲರ್. ಟೂರ್ನಿಯಲ್ಲಿ ಬರೊಬ್ಬರಿ ನಾಲ್ಕು ಶತಕಗಳನ್ನು ಸಿಡಿಸಿರುವ ಬಟ್ಲರ್ ಈ ಆವೃತ್ತಿಯೊಂದರಲ್ಲಿಯೇ 800ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ್ದಾರೆ. ಆರ್‌ಸಿಬಿ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿಯೂ ಜೋಸ್ ಬಟ್ಲರ್ ಅಮೋಘ ಆಟವನ್ನು ಪ್ರದರ್ಶಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಕುಮಾರ್ ಸಂಗಕ್ಕರ ಜೋಸ್ ಬಟ್ಲರ್ ರೀತಿಯಲ್ಲಿ ಅದಗಭುತವಾಗಿ ಬ್ಯಾಟ್ ಬೀಸಿದಂತೆ ಇತರ ಯಾವುದೇ ಆಟಗಾರ ಬ್ಯಾಟಿಂಗ್ ಮಾಡಿರುವುದನ್ನು ನೋಡಿದ ನೆನಪಿಲ್ಲ ಎಂದು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಆರ್‌ಸಿಬಿ ಟ್ರೋಫಿ ಆಸೆಗೆ ಕಲ್ಲು ಹಾಕಿದ ಬಟ್ಲರ್‌ಗೆ ಪ್ರಶಸ್ತಿಗಳ ಸುರಿಮಳೆ; ಒಂದೇ ಪಂದ್ಯದಲ್ಲಿ ಸಿಕ್ಕ ಹಣವೆಷ್ಟು?ಆರ್‌ಸಿಬಿ ಟ್ರೋಫಿ ಆಸೆಗೆ ಕಲ್ಲು ಹಾಕಿದ ಬಟ್ಲರ್‌ಗೆ ಪ್ರಶಸ್ತಿಗಳ ಸುರಿಮಳೆ; ಒಂದೇ ಪಂದ್ಯದಲ್ಲಿ ಸಿಕ್ಕ ಹಣವೆಷ್ಟು?

ಆತನ ಕೊಡುಗೆ ವಿವರಿಸುವುದು ಅಸಾಧ್ಯ

ಆತನ ಕೊಡುಗೆ ವಿವರಿಸುವುದು ಅಸಾಧ್ಯ

"ನಮ್ಮ ತಂಡಕ್ಕೆ ಈ ಬಾರಿಯ ಐಪಿಎಲ್‌ನಲ್ಲಿ ಜೋಸ್ ಬಟ್ಲರ್ ನೀಡಿದ ಕೊಡುಗೆಯನ್ನು ವಿವರಿಸುವುದು ಕಷ್ಟ. ಅವರು ಅದ್ಭುತವಾಗಿ ಆರಂಭವನ್ನು ಪಡೆದುಕೊಂಡರು. ಆದರೆ ಒಂದು ಹಂತದಲ್ಲಿ ಸಣ್ಣ ಹಿನ್ನಡೆ ಅನುಭವಿಸಿದರು. ನಂತರ ತನ್ನಷ್ಟಕ್ಕೇ ಅದನ್ನು ಸರಿಪಡಿಸಿಕೊಂಡರು. ಕೇವಲ ಅಭ್ಯಾಸವನ್ನು ಮಾತ್ರವೇ ಮಾಡುವುದರ ಜೊತೆಗೆ ಉತ್ತಮವಾಗಿ ಸಂವಾದವನ್ನು ಕೂಡ ನಡೆಸಿದ್ದಾರೆ" ಎಂದು ಕುಮಾರ್ ಸಂಗಕ್ಕರ ಬಟ್ಲರ್ ಪ್ರದರ್ಶನದ ಬಗ್ಗೆ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ್ದಾರೆ.

ಮತ್ತೊಬ್ಬನನ್ನು ನೋಡಿಲ್ಲ

ಮತ್ತೊಬ್ಬನನ್ನು ನೋಡಿಲ್ಲ

"ಆತ ತಾನೋರ್ವ ನಿರ್ದಯಿ ಆಟಗಾರ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಪ್ರತಿ ದಿನವೂ ಆತ ತನ್ನ ಅತ್ಯುನ್ನತ ಪ್ರದರ್ಶನವನ್ನು ನೀಡುತ್ತ ಇರಲು ಸಾಧ್ಯವಿಲ್ಲ. ಆತ ಯಾವ ಕ್ಷಣದಲ್ಲಿಯಾದರೂ ವೇಗವನ್ನು ಹೆಚ್ಚಿಸಿಕೊಳ್ಳಬಲ್ಲರು. ಆತನಲ್ಲಿ ಎಲ್ಲಾ ವಿಧದ ಹೊಡೆತಗಳು ಕೂಡ ಇದೆ. ಆಟವನ್ನು ಅದ್ಭುತವಾಗಿ ಅರ್ಥ ಮಾಡಿಕೊಂಡಿದ್ದಾರೆ. ಐಪಿಎಲ್‌ನ ಇತಿಹಾಸದಲ್ಲಿ ಇಷ್ಟು ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ಮತ್ತೊಬ್ಬ ಆಟಗಾರನ್ನು ನೋಡಿದ ನೆನಪಿಲ್ಲ" ಎಂದಿದ್ದಾರೆ ಕುಮಾರ್ ಸಂಗಕ್ಕರ.

ಸಂಜು ಸ್ಯಾಮ್ಸನ್ ಬಗ್ಗೆಯೂ ಪ್ರಶಂಸೆ

ಸಂಜು ಸ್ಯಾಮ್ಸನ್ ಬಗ್ಗೆಯೂ ಪ್ರಶಂಸೆ

ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಆರ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರ ಪ್ರದರ್ಶನದ ಬಗ್ಗೆಯೂ ಸಂಗಕ್ಕರ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಸಂಜು ಕೂಡ ವಿಶೇಷ ಆಟಗಾರ. ಕಳೆದ ಆವೃತ್ತಿಯಲ್ಲಿ ಯುವ ಆಟಗಾರರ ಬಳಗದೊಂದಿಗೆ ಕಠಿಣ ಪರೀಕ್ಷೆಯನ್ನು ಎದುರಿಸಿದ್ದರು. ಅಲ್ಲದೆ ಕೋವಿಡ್‌ನ ಕಾರಣದಿಂದಾಗಿ ಸಾಕಷ್ಟು ಏರಿಳಿತಗಳು ಉಂಟಾದವು. ಎರಡು ಭಾಗಗಳಾಗಿ ಟೂರ್ನಿಯನ್ನು ವಿಂಗಡಿಸಲಾಯಿತು. ಆದರೆ ಆತ ತನ್ನ ಪಾತ್ರದಲ್ಲಿ ಅದ್ಭುತ ಬೆಳವಣಿಗೆ ಸಾಧಿಸಿದ್ದಾರೆ" ಎಂದು ಸಂಜು ಸ್ಯಾಮ್ಸನ್ ನಾಯಕತ್ವ ಹಾಗೂ ಆಟದ ಬಗ್ಗೆ ಕುಮಾರ್ ಸಂಗಕ್ಕರ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಫೈನಲ್ ಸೆಣೆಸಾಟ

ಫೈನಲ್ ಸೆಣೆಸಾಟ

ಇನ್ನು ಈ ಆವೃತ್ತಿಯ ಫೈನಲ್ ಪಂದ್ಯ ಭಾನುವಾರ ನಡೆಯಲಿದ್ದು ಪ್ರಶಸ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಕಾದಾಡಲಿದೆ. ಬಲಿಷ್ಠ ಆಟಗಾರರನ್ನು ಹೊಂದಿರುವ ಈ ಎರಡು ತಂಡಗಳ ನಡುವಿನ ಕಾದಾಟ ರೋಚಕವಾಗಿರುವುದರಲ್ಲಿ ಅನುಮಾನವಿಲ್ಲ.

ಸ್ಕ್ವಾಡ್ ಹೀಗಿದೆ: ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಶುಬ್ಮನ್ ಗಿಲ್, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಅಭಿನವ್ ಸದಾರಂಗನಿ, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್, ಡೊಮಿನಿಕ್ ಡ್ರೇಕ್ಸ್, ಜಯಂತ್ ಯಾದವ್, ವಿಜಯ್ ಶಂಕರ್, ದರ್ಶನ್ ನಲ್ಕಂಡೆ, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಗುರುಕೀರತ್ ಸಿಂಗ್, ವರುಣ್ ಆರೋನ್, ಬಿ ಸಾಯಿ ಸುದರ್ಶನ್, ರಹಮಾನುಲ್ಲಾ ಗುರ್ಬಾಜ್

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಶಿಮ್ರಾನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್, ರಿಯಾನ್ ಪರಾಗ್, ಕೆಸಿ ಕಾರಿಯಪ್ಪ, ನವದೀಪ್ ಸೈನಿ, ಓಬೇದ್ ಮೆಕಾಯ್, ಅನುನಯ್ ಸಿಂಗ್, ಕುಲದೀಪ್ ಸೇನ್, ಕರುಣ್ ನಾಯರ್, ಧ್ರುವ್ ಜುರೆಲ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಶುಭಂ ಗರ್ವಾಲ್, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇರಿಲ್ ಮಿಚೆಲ್

Story first published: Saturday, May 28, 2022, 21:11 [IST]
Other articles published on May 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X