ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಲಿರುವ ಐವರು ಭಾರತೀಯ ಆಟಗಾರರು

Hardik pandya and ishan kishan

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿ ಏಪ್ರಿಲ್ 2, 2022ರಂದು ಪ್ರಾರಂಭಗೊಳ್ಳಲಿದೆ. ಡಿಫೆಂಡಿಂಗ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಉದ್ಘಾಟನಾ ಪಂದ್ಯವನ್ನಾಡಲಿದ್ದು, ಚೆನ್ನೈನ ಚೆಪಾಕ್ ಅಂಗಳ ಆರಂಭಿಕ ಪಂದ್ಯದ ಆತಿಥ್ಯವಹಿಸಲಿದೆ.

ಈ ಬಾರಿ ಎಂಟು ತಂಡಗಳ ಬದಲಿಗೆ ಹತ್ತು ತಂಡಗಳು ಕಣಕ್ಕಿಳಿಯಲು ಸಿದ್ಧಗೊಂಡಿವೆ. ಲಕ್ನೋ ಮತ್ತು ಅಹಮದಾಬಾದ್ ಹೊಸ ಫ್ರಾಂಚೈಸಿಗಳ ಸೇರ್ಪಡೆಯು 15 ಸೀಸನ್‌ನ ಕುತೂಹಲವನ್ನ ದ್ವಿಗುಣಗೊಳಿಸಿದೆ. ಇದರ ಜೊತೆಗೆ ಮೆಗಾ ಐಪಿಎಲ್ ಆಕ್ಷನ್ ಮೇಲೆ ಎಲ್ಲರ ಕಣ್ಣಿದೆ.

27 ಆಟಗಾರರು ರೀಟೈನ್ ಆಗಿದ್ದಾರೆ!

27 ಆಟಗಾರರು ರೀಟೈನ್ ಆಗಿದ್ದಾರೆ!

ಈಗಾಗಲೇ ನಡೆದಿರುವ ರೀಟೈನ್ ಪ್ರಕ್ರಿಯೆಯಲ್ಲಿ ಹಳೆಯ 8 ಫ್ರಾಂಚೈಸಿಗಳು, 19 ಭಾರತೀಯರು ಮತ್ತು 8 ವಿದೇಶಿಯರನ್ನು ಒಳಗೊಂಡಂತೆ ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿವೆ.

19 ಭಾರತೀಯ ಆಟಗಾರರು:
ಎಂಎಸ್ ಧೋನಿ, ರವೀಂದ್ರ ಜಡೇಜಾ, ರುತುರಾಜ್ ಗಾಯಕ್‌ವಾಡ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ, ಮಯಾಂಕ್ ಅಗರ್ವಾಲ್, ಅರ್ಷ್‌ದೀಪ್ ಸಿಂಗ್, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಷಭ್ ಪತ್, ಎ ರಿಷಬ್ ಪಂತ್, ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಅಬ್ದುಲ್ ಸಮದ್, ಉಮ್ರಾನ್ ಮಲಿಕ್ ರಿಟೈನ್ ಮಾಡಿದ 19 ಭಾರತೀಯ ಆಟಗಾರರು.

ದುರದೃಷ್ಟವಶಾತ್, ಫ್ರಾಂಚೈಸಿಗಳು ಹಲವಾರು ಪ್ರತಿಭಾವಂತ ಭಾರತೀಯ ಆಟಗಾರರನ್ನು ಬಿಡುಗಡೆ ಮಾಡಬೇಕಾಯಿತು. ಹೀಗಾಗಿ ಕೆಲವು ಸ್ಟಾರ್‌ ಆಟಗಾರರು ಬಿಡ್ ಪ್ರವೇಶಿಸಲಿದ್ದು, ಹರಾಜಿನಲ್ಲಿ ಯಾವ ಭಾರತೀಯ ಆಟಗಾರ ಹೆಚ್ಚು ಬಿಡ್ ಪಡೆಯುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಆ ಕುರಿತು ಮಾಹಿತಿ ಈ ಕೆಳಗಿದೆ.

ಇಶನ್ ಕಿಶನ್

ಇಶನ್ ಕಿಶನ್

ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬನಾದ ಇಶನ್ ಕಿಶನ್‌ರನ್ನ ಮುಂಬೈ ಫ್ರಾಂಚೈಸಿ ಭಾರದ ಮನಸ್ಸಿನಿಂದ ಬಿಟ್ಟುಕೊಟ್ಟಿತು. ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಕೀರಾನ್ ಪೊಲಾರ್ಡ್ ಅವರನ್ನು ಉಳಿಸಿಕೊಂಡಿದೆ. ಹೀಗಾಗಿ ಇಶಾನ್ ಕಿಶನ್ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.

ಇಶಾನ್ ಕಿಶನ್ ಕಳೆದ ಬಾರಿ ಐಪಿಎಲ್‌ನಲ್ಲಿ MI ಪರ ಪಂದ್ಯವನ್ನು ಆಡಿದಾಗ, ಅವರು ಸನ್‌ರೈಸರ್ಸ್ ಹೈದರಾಬಾದ್ ಬೌಲಿಂಗ್ ವಿಭಾಗವನ್ನ ಧ್ವಂಸ ಮಾಡಿದರು. ಕೇವಲ 32 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದಂತೆ 84 ರನ್ ಗಳಿಸಿದರು. ಹೀಗಾಗಿ ಇಶನ್ ಕಿಶನ್ ಮೇಲೆ ಹಲವು ತಂಡಗಳು ಕಣ್ಣಿಟ್ಟಿವೆ.

ಕೆ.ಎಲ್ ರಾಹುಲ್

ಕೆ.ಎಲ್ ರಾಹುಲ್

ಈಗಾಗಲೇ 8 ಹಳೆಯ ಐಪಿಎಲ್‌ ಫ್ರಾಂಚೈಸಿಗಳು IPL 2022 ಗಾಗಿ ಆಟಗಾರರ ಪಟ್ಟಿಯನ್ನ ಬಿಡುಗಡೆಮಾಡಿದೆ. ಇದರ ನಡುವೆ ಆರ್‌ಸಿಬಿ ಸೇರಿದಂತೆ ಕೆಲ ತಂಡಗಳಷ್ಟೇ ಹೊಸ ನಾಯಕನ ಹುಡುಕಾಟದಲ್ಲಿವೆ. ಆರ್‌ಸಿಬಿ ಪರ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಕೆ.ಎಲ್‌ ರಾಹುಲ್‌ರನ್ನ ಹೇಗಾದ್ರು ಪಡೆಯಬೇಕೆಂಬ ಯೋಜನೆ ಹಾಕಿಕೊಂಡಿವೆ. ಈಗಾಗಲೇ ರಾಹುಲ್ ಲಕ್ನೋ ಫ್ರಾಂಚೈಸಿ ನಾಯಕ ಎಂದೇ ಬಿಂಬಿತವಾಗಿದೆ.

ಆದರೂ ಎಲ್ಲಾ ಫ್ರ್ಯಾಂಚೈಸ್‌ಗಳು ಅವರನ್ನ ಖರೀದಿಸಲು ಆಸಕ್ತಿ ಹೊಂದಿವೆ. ಹೀಗಾಗಿ ಆತ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಬಹುದು. ಕಳೆದ ನಾಲ್ಕು ವರ್ಷಗಳಿಂದ, ಕೆಎಲ್ ರಾಹುಲ್ ಸತತವಾಗಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಐದು ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಪ್ರಸ್ತುತ ಅವರು 94 ಪಂದ್ಯಗಳಲ್ಲಿ 47.43 ಸರಾಸರಿಯಲ್ಲಿ 3273 ರನ್ ಗಳಿಸಿದ್ದಾರೆ.

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

ಮುಂಬೈನ ಸ್ಟಾರ್ ಪ್ಲೇಯರ್ಸ್ ಹಾರ್ದಿಕ್ ಪಾಂಡ್ಯ, ಇಶನ್ ಕಿಶನ್, ಕೃನಾಲ್ ಪಾಂಡ್ಯ ರಾಹುಲ್ ಚಹಾರ್ ಹರಾಜಿಗೆ ಹೋಗಿದ್ದಾರೆ. ಟಿ20 ಕ್ರಿಕೆಟ್‌ಗೆ ಸಂಬಂಧಿಸಿದಂತೆ ಹಾರ್ದಿಕ್ ಪಾಂಡ್ಯ ಅವರಷ್ಟು ಪ್ರತಿಭಾವಂತ ಆಟಗಾರರು ಭಾರತೀಯ ಕ್ರಿಕೆಟ್‌ನಲ್ಲಿ ಸಿಗುವುದು ಬಹಳ ಅಪರೂಪ. ಆತ ಗನ್ ಫಿಲ್ಡರ್ ಆಗಿದ್ದು, ಒಂದೆರಡು ಓವರ್ ಬೌಲಿಂಗ್ ಜೊತೆಗೆ ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲರು.

ಸ್ಲಾಗ್ ಓವರ್‌ಗಳಲ್ಲಿ ದೊಡ್ಡ ಹೊಡೆತಗಳನ್ನು ಹೊಡೆಯಬಲ್ಲ ಹಾರ್ದಿಕ್ ಪಾಂಡ್ಯ ಕೆಲವೇ ಓವರ್‌ಗಳಲ್ಲಿ ಆಟವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಹಾರ್ದಿಕ್ ಪಾಂಡ್ಯರಂತಹ ಆಟಗಾರನನ್ನು ಬಿಡುಗಡೆ ಮಾಡಲು ಮುಂಬೈ ಇಂಡಿಯನ್ಸ್ ನಿರಾಸೆಗೊಂಡಿದೆ. ಉತ್ತಮ ಫಾರ್ಮ್‌ಗಳಲ್ಲಿ ಇಲ್ಲದಿದ್ದರೂ, ಹರಾಜಿನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಖರೀದಿಸಲು ಫ್ರಾಂಚೈಸಿಗಳು ದೊಡ್ಡ ಹಣವನ್ನು ಚೆಲ್ಲುವ ಸಾಧ್ಯತೆಯಿದೆ.

ಈ ಆರು ಪ್ರಮುಖ ಆಟಗಾರರು IPL 2022 ಹರಾಜಿಗೂ ಮೊದಲೇ ಸೇಲ್ ಆಗಲಿದ್ದಾರೆ: ಆಕಾಶ್ ಚೋಪ್ರಾ

ಯುಜವೇಂದ್ರ ಚಹಾಲ್

ಯುಜವೇಂದ್ರ ಚಹಾಲ್

ಯುಜವೇಂದ್ರ ಚಹಾಲ್ 2014ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಪರ ಆಡುತ್ತಿದ್ದು, 2021ರವರೆಗೆ ಒಟ್ಟು ಏಳು ಸೀಸನ್‌ಗಳಲ್ಲಿ ಆರ್‌ಸಿಬಿಯ ಪ್ರಮುಖ ಪ್ಲೇಯರ್ ಆಗಿದ್ದರು. ಆದ್ರೆ ಆರ್‌ಸಿಬಿ ಈ ಬಾರಿ ಕೊಹ್ಲಿ, ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್‌ರನ್ನಷ್ಟೇ ರೀಟೈನ್ ಮಾಡಿಕೊಂಡು ಯುಜವೇಂದ್ರ ಚಹಾಲ್ ಮತ್ತು ಹರ್ಷಲ್ ಪಟೇಲ್ ರಂತಹ ಟಾಪ್ ವಿಕೆಟ್ ಟೇಕರ್‌ಗಳನ್ನ ಪೂಲ್‌ಗೆ ಬಿಟ್ಟಿದೆ.

ಚಹಾಲ್ IPL 2022 ರಲ್ಲಿ ಹೊಸ ಫ್ರಾಂಚೈಸಿಗಾಗಿ ಆಡುವ ಸಾಧ್ಯತೆಯಿದೆ. RCB ಸತತ ಎರಡನೇ ಬಾರಿಗೆ ಪ್ಲೇಆಫ್ ತಲುಪಲು ಸಹಾಯ ಮಾಡಿರುವ ಯುಜ್ವೇಂದ್ರ ಚಹಾಲ್ ಅವರು ಮೆಗಾ ಹರಾಜಿನಲ್ಲಿ ಭಾರಿ ಬೇಡಿಕೆಯನ್ನು ಹೊಂದಿರುತ್ತಾರೆ ಮತ್ತು ಭಾರತೀಯ ಆಟಗಾರರಲ್ಲಿ ಹೆಚ್ಚಿನ ಬಿಡ್ ಅನ್ನು ಆಕರ್ಷಿಸಬಹುದು.

ಸೆಂಚುರಿ ಸಿಡಿಸಿದ್ಮೇಲೆ ಟೀಕಾಕಾರರಿಗೆ ಕನ್ನಡಿಗ ಮಯಾಂಕ್ ತಿರುಗೇಟು ಕೊಟ್ಟಿದ್ದು ಹೀಗೆ.. | Oneindia Kannada
ಹರ್ಷಲ್ ಪಟೇಲ್

ಹರ್ಷಲ್ ಪಟೇಲ್

ಚೊಚ್ಚಲ ಅಂತರಾಷ್ಟ್ರೀಯ ಪಂದ್ಯದಲ್ಲೇ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಹರ್ಷಲ್ ಪಟೇಲ್ ಕಳೆದ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದಾರೆ. 2021ರ ಐಪಿಎಲ್ ಟೂರ್ನಿಯಲ್ಲಿ ಲೀಡಿಂಗ್ ವಿಕೆಟ್ ಟೇಕರ್ ಆಗಿದ್ದ ಹರ್ಷಲ್‌ರನ್ನ ಆರ್‌ಸಿಬಿ ಏಕೆ ರೀಟೈನ್ ಮಾಡಿಕೊಳ್ಳಲಿಲ್ಲ ಎಂಬುದು ನಿಜಕ್ಕೂ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

ಪಟೇಲ್ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಾಡಿದ್ದಲ್ಲದೆ ಅವರು 15 ಪಂದ್ಯಗಳಲ್ಲಿ 14.34 ಸರಾಸರಿಯಲ್ಲಿ 32 ವಿಕೆಟ್‌ಗಳನ್ನು ಪಡೆದಿದ್ದಾರೆ. ಆರ್‌ಸಿಬಿಗಾಗಿ ಕಳೆದ ಸೀಸನ್‌ನಲ್ಲಿ ಅವರು ಹೇಗೆ ಆಡಿದರು ಎಂಬುದನ್ನು ನೋಡಿದರೆ, ಬಹುಶಃ, ಎಲ್ಲಾ ಫ್ರಾಂಚೈಸಿಗಳು ಭಾರತೀಯ ವೇಗಿ ಬಗ್ಗೆ ಆಸಕ್ತಿಯನ್ನು ತೋರಿಸುವ ಸಾಧ್ಯತೆಯಿದೆ.

Story first published: Saturday, December 4, 2021, 15:28 [IST]
Other articles published on Dec 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X