ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈತ ಚೆನ್ನಾಗಿ ಆಡುವುದು ತಲೆಮಾರಿಗೊಮ್ಮೆ; ಹೀನಾಯ ಟ್ರೋಲ್‌ಗೆ ತುತ್ತಾದ ಮಾಜಿ ಆರ್‌ಸಿಬಿ ಆಟಗಾರ

IPL 2022: Twitter slams Devdutt Padikkal as he cheaply got out against KKR

ಒಂದೆಡೆ ಈ ಹಿಂದೆ ನೀಡಿದ್ದ ಕಳಪೆ ಪ್ರದರ್ಶನದ ಕಾರಣಕ್ಕಾಗಿ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ಕೆಲ ಅನುಭವಿ ಆಟಗಾರರು ಉತ್ತಮ ಪ್ರದರ್ಶನ ನೀಡಿ ಕಮ್‌ಬ್ಯಾಕ್ ಮಾಡುತ್ತಿದ್ದರೆ ಮತ್ತೊಂದೆಡೆ ಕಳೆದ ಕೆಲ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಮಿಂಚಿ ಉತ್ತಮ ಪ್ರದರ್ಶನ ನೀಡಿದ್ದ ಕೆಲ ಯುವ ಆಟಗಾರರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿಫಲರಾಗಿದ್ದು ರನ್ ಗಳಿಸಲು ಪರದಾಡುತ್ತಿದ್ದಾರೆ.

ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಯುವ ಆಟಗಾರರಾದ ಇಶನ್ ಕಿಶನ್, ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್ ಮತ್ತು ವೆಂಕಟೇಶ್ ಐಯ್ಯರ್ ವಿಫಲರಾಗಿದ್ದಾರೆ. ಈ ಪೈಕಿ ಇಶಾನ್ ಕಿಶನ್ ಆರಂಭದ ಪಂದ್ಯವೊಂದರಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ಸಫಲರಾಗಿಲ್ಲ ಹಾಗೂ ರುತುರಾಜ್ ಗಾಯಕ್ವಾಡ್ ಅವರದ್ದೂ ಕೂಡ ಇದೇ ಕತೆ. ಸತತ 8 ಪಂದ್ಯಗಳಲ್ಲಿ ದೊಡ್ಡ ರನ್ ಗಳಿಸುವಲ್ಲಿ ಯಶಸ್ವಿಯಾಗದೇ ಇದ್ದ ರುತುರಾಜ್ ಗಾಯಕ್ವಾಡ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಒಂದು ರನ್‌ನಿಂದ ಶತಕ ವಂಚಿತರಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇನ್ನು ವೆಂಕಟೇಶ್ ಐಯ್ಯರ್ ಕೂಡ ಟೂರ್ನಿಯಲ್ಲಿ ಒಂದು ಅರ್ಧಶತಕ ಬಾರಿಸಿದ್ದು ಬಿಟ್ಟರೆ ಉಳಿದ ಯಾವುಧೇ ಪಂದ್ಯದಲ್ಲಿಯೂ 20 ರನ್ ಗಡಿ ದಾಟಿಲ್ಲ. ಇನ್ನುಳಿದಂತೆ ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಣಕ್ಕಿಳಿದಿರುವ ದೇವದತ್ ಪಡಿಕ್ಕಲ್ ವಿಷಯವೇನೂ ಭಿನ್ನವಾಗಿಲ್ಲ.

ದೇವದತ್ ಪಡಿಕ್ಕಲ್ ಕೂಡ ಒಂದು ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಮಕಾಡೆ ಮಲಗಿದ್ದಾರೆ. 9 ಪಂದ್ಯಗಳನ್ನಾಡಿರುವ ದೇವದತ್ ಪಡಿಕ್ಕಲ್ 214 ರನ್ ಮಾತ್ರ ಗಳಿಸಿದ್ದು, ಒಂದು ಅರ್ಧಶತಕವನ್ನು ಬಾರಿಸಿದ್ದಾರೆ. ಇನ್ನು ಇಂದು ( ಮೇ 2 ) ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿಯೂ ದೇವದತ್ ಪಡಿಕ್ಕಲ್ ಮುಗ್ಗರಿಸಿದ್ದಾರೆ. ಜೋಸ್ ಬಟ್ಲರ್ ಜೊತೆ ಆರಂಭಿಕನಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ 5 ಎಸೆತಗಳಲ್ಲಿ 2 ರನ್ ಗಳಿಸಿ ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.

ಹೀಗೆ ಈ ಪಂದ್ಯದಲ್ಲಿಯೂ ವಿಫಲರಾಗಿರುವ ದೇವದತ್ ಪಡಿಕ್ಕಲ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಟ್ರೋಲ್‌ಗಳಾಗುತ್ತಿವೆ.

ನೆಟ್ಟಿಗನೋರ್ವ ದೇವದತ್ ಪಡಿಕ್ಕಲ್ ತಲೆಮಾರಿನ ಕ್ರಿಕೆಟಿಗ, ಏಕೆಂದರೆ ಪಡಿಕ್ಕಲ್ ತಲೆಮಾರಿಗೊಮ್ಮೆ ಮಾತ್ರ ಉತ್ತಮ ಪ್ರದರ್ಶನ ನೀಡುವ ಆಟಗಾರ ಎಂದು ಕಾಲೆಳೆದಿದ್ದಾರೆ.

ಸತತ ಸೋಲಿನಿಂದ ಕಂಗೆಟ್ಟಿದ್ದ ಶ್ರೇಯಸ್ ಗೆಲುವು ಸಿಕ್ಕಿದ್ಮೇಲೆ‌ ಹೇಳಿದ್ದೇನು? | Oneindia Kannada

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಮತ್ತೋರ್ವ ನೆಟ್ಟಿಗ ದೇವದತ್ ಪಡಿಕ್ಕಲ್ ಕೇವಲ ಎರಡು ಐಪಿಎಲ್ ಆವೃತ್ತಿಗಳ ಅದ್ಭುತ ಎಂದು ಹೀನಾಯವಾಗಿ ಟೀಕಿಸಿದ್ದಾರೆ.

Story first published: Monday, May 2, 2022, 21:54 [IST]
Other articles published on May 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X