ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕುಲ್‌ದೀಪ್‌ಗೆ ಮ್ಯಾನ್ ಆಫ್‌ ದಿ ಮ್ಯಾಚ್ ಪ್ರಶಸ್ತಿ: ಏನ್ ಗುರು ಇದು, ಲಾಟರಿ ಮೂಲಕ ಆಯ್ಕೆನಾ?

Kuldeep yadav

ಐಪಿಎಲ್‌ 15ನೇ ಸೀಸನ್‌ನಲ್ಲಿ ಬುಧವಾರ(ಏ.20) ನಡೆದ ಪಂದ್ಯದಲ್ಲಿ ಅತ್ಯಂತ ಕಡಿಮೆ ಸ್ಕೋರ್‌ಗೆ ಪಂಜಾಬ್ ಕಿಂಗ್ಸ್ ಅನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಡೆಲ್ಲಿ ಕ್ಯಾಪಿಟಲ್ಸ್‌, ಕೇವಲ 10.3 ಓವರ್‌ಗಳಲ್ಲಿ ಗುರಿ ತಲುಪುವ ಮೂಲಕ ಭರ್ಜರಿ ಗೆಲುವು ಪಡೆಯಿತು. ಆದ್ರೆ ಈ ಗೆಲುವಿನ ಬಳಿಕ ಕುಲ್‌ದೀಪ್ ಯಾದವ್‌ಗೆ ನೀಡಿದ ಪಂದ್ಯ ಪುರುಷೋತ್ತಮ ಪ್ರಶಸ್ತಿ ಇದೀಗ ದೊಡ್ಡ ವಿವಾದ ಆಗಿ ಸ್ಫೋಟಿಸಿದೆ.

100 ರನ್‌ಗಳೊಳಗೆ 8 ವಿಕೆಟ್ ಕಳೆದುಕೊಂಡ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 115ರನ್‌ಗಳಿಗೆ ಆಲೌಟ್ ಆಯ್ತು. ಇದನ್ನ ಸುಲಭವಾಗಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ 41 ರನ್, ಡೇವಿಡ್ ವಾರ್ನರ್ ಅಜೇಯ 60 ರನ್ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

ಡೆಲ್ಲಿ ಕ್ಯಾಪಿಟಲ್ಸ್ ಗುರಿ ಬೆನ್ನತ್ತುವ ಮೊದಲು ಬೌಲರ್ಸ್‌ ಬೊಂಬಾಟ್ ಪ್ರದರ್ಶನ ನೀಡಿದರು. ಆರಂಭಿಕ ಪವರ್‌ಪ್ಲೇ ಓವರ್‌ಗಳಲ್ಲಿಯೇ ಪಂಜಾಬ್‌ ಕಿಂಗ್ಸ್‌ ಟಾಪ್ ಆರ್ಡರ್‌ ಬ್ಯಾಟರ್‌ಗಳನ್ನ ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾದ್ರು.

24 ರನ್‌ಗೆ 2 ವಿಕೆಟ್ ಪಡೆದ ಕುಲ್‌ದೀಪ್ ಯಾದವ್‌

24 ರನ್‌ಗೆ 2 ವಿಕೆಟ್ ಪಡೆದ ಕುಲ್‌ದೀಪ್ ಯಾದವ್‌

ದೆಹಲಿಯ ಮೂವರು ಸ್ಪಿನ್ನರ್‌ಗಳಾದ ಲಲಿತ್ ಯಾದವ್, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಆರು ವಿಕೆಟ್‌ಗಳನ್ನು ಹಂಚಿಕೊಂಡರು. ಕುಲದೀಪ್ ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ 24 ರನ್‌ಗಳಿಗೆ 2 ವಿಕೆಟ್‌ಗಳನ್ನು ಗಳಿಸಿದರು. ಪಂಜಾಬ್‌ನ ಕೆಳ ಕ್ರಮಾಂಕದ ಕಗಿಸೊ ರಬಾಡ ಮತ್ತು ನಾಥನ್ ಎಲ್ಲಿಸ್ ಅವರನ್ನು ತ್ವರಿತ ಸಮಯದಲ್ಲಿ ಔಟ್ ಮಾಡಿದರು.

MI vs CSK: ಫ್ಯಾಂಟೆಸಿ ಡ್ರೀಮ್ ಟೀಂ, ಯಾವ ಆಟಗಾರರಿಗೆ ಹೆಚ್ಚಿನ ಬೇಡಿಕೆ? ನಾಯಕ, ಉಪನಾಯಕನ ಆಯ್ಕೆ!

10 ರನ್‌ಗೆ 2 ಪ್ರಮುಖ ವಿಕೆಟ್ ಪಡೆದ ಅಕ್ಷರ್ ಪಟೇಲ್

10 ರನ್‌ಗೆ 2 ಪ್ರಮುಖ ವಿಕೆಟ್ ಪಡೆದ ಅಕ್ಷರ್ ಪಟೇಲ್

ಅಕ್ಷರ್ ಅವರ ನಾಲ್ಕು ಓವರ್‌ಗಳಲ್ಲಿ 2.50 ರ ಅದ್ಭುತ ಎಕಾನಮಿಯಲ್ಲಿ ಕೇವಲ 10 ರನ್‌ ನೀಡಿದ 2 ವಿಕೆಟ್ ಕಬಳಿಸುವಲ್ಲಿ ಅಕ್ಷರ್ ಪಟೇಲ್ ಯಶಸ್ವಿಯಾದ್ರು. ಎಡಗೈ ಸ್ಪಿನ್ನರ್ ಸ್ಫೋಟಕ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರ ದೊಡ್ಡ ವಿಕೆಟ್ ಅನ್ನು ಪಡೆದರು. ಇದಾದ ಬಳಿಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್‌ ಶರ್ಮಾ ವಿಕೆಟ್ ಬೇಟೆಯಾಡಿದ ಅಕ್ಷರ್‌, ಎದುರಾಳಿಯ ಪ್ರಮುಖ ವಿಕೆಟ್ ಪಡೆದರು.

IPL 2022: ದಿಕ್ಕೆಟ್ಟ ಮುಂಬೈ ಇಂಡಿಯನ್ಸ್‌ಗೆ ಬಲ ತುಂಬಲಿದ್ದಾನೆ ಈ ಅನುಭವಿ ಬೌಲರ್

ಕುಲ್‌ದೀಪ್ ಯಾದವ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ

ಕುಲ್‌ದೀಪ್ ಯಾದವ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ

ಪಂದ್ಯ ಮುಗಿದ ಬಳಿಕ ಆಶ್ಚರ್ಯವೆಂಬಂತೆ, ಚೈನಾಮೆನ್ ಬೌಲರ್ ಕುಲ್‌ದೀಪ್ ಯಾದವ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ನೀಡಿರುವುದು ಬಹಳ ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿತು. ಅಕ್ಷರ್ ಪಟೇಲ್ 10 ರನ್‌ಗೆ 2 ಪ್ರಮುಖ ವಿಕೆಟ್ ಪಡೆದ್ರೆ, ಕುಲ್‌ದೀಪ್ ಯಾದವ್ 24 ರನ್ ನೀಡಿ ಕೆಳಕ್ರಮಾಂಕದ ಬ್ಯಾಟರ್‌ಗಳ ವಿಕೆಟ್ ಪಡೆದಿದ್ರು. ಹೀಗಿದ್ರೂ ಸಹ ಆಯ್ಕೆಗಾರರು ಕುಲ್‌ದೀಪ್ ಯಾದವ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ್ರು.

ಪ್ರಶಸ್ತಿ ಸ್ವೀಕಾರದ ವೇಳೆ ಕುಲ್‌ದೀಪ್ ಯಾದವ್ ಸ್ವತಃ ನನಗಿಂತ ಚೆನ್ನಾಗಿ ಅಕ್ಷರ್ ಪಟೇಲ್ ಬೌಲಿಂಗ್ ಮಾಡಿದ್ದಾರೆ. ಈ ಪ್ರಶಸ್ತಿಯನ್ನ ಅವರೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಘಂಟಾಘೋಷವಾಗಿ ಹೇಳಿದ್ದು, ಸತ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು.

ಕುಲ್‌ದೀಪ್‌ಗೆ ಪ್ರಶಸ್ತಿ, ಟ್ವಿಟ್ಟರ್‌ನಲ್ಲಿ ಭಾರೀ ಅಸಮಾಧಾನ

ಅಕ್ಷರ್ ಪಟೇಲ್‌ಗೆ ಬಿಟ್ಟು, ಕುಲ್‌ದೀಪ್‌ ಯಾದವ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ನೀಡಿದ್ದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಅಸಮಾಧಾನ ವ್ಯಕ್ತವಾಗಿದೆ. ಟ್ವಿಟ್ಟರ್‌ನಲ್ಲಿ ನೆಟ್ಟಿಗರು, ಬಿಸಿಸಿಐ, ಐಪಿಎಲ್‌ ಸಮಿತಿ ಹಾಗೂ ಪಂದ್ಯದ ಆಯೋಜಕರ ವಿರುದ್ಧ ಕಿಡಿಕಾರಿದ್ದಾರೆ.

ಇನ್ನು ಕೆಲವು ನೆಟ್ಟಿಗರಂತು ಈ ಪ್ರಶಸ್ತಿಯನ್ನ ಲಾಟರಿ ಮೂಲಕ ಆಯ್ಕೆ ಮಾಡುಲಾಗುತ್ತಿದೆಯೇ? ಪಂದ್ಯವನ್ನೇ ನೋಡಿಲ್ಲದೆ ಆಯ್ಕೆ ಮಾಡಲಾಗುತ್ತಿದೆಯೇ ಎಂಬೆಲ್ಲಾ ಪ್ರಶ್ನೆಗಳನ್ನ ಕೇಳಿದ್ದಾರೆ.
ತಲೆಯಲ್ಲಿ ಮೆದುಳು ಇಲ್ಲದ ಜನರು ಮಾತ್ರ ಈ ರೀತಿಯಾಗಿ ಪ್ರಶಸ್ತಿಗೆ ಆಯ್ಕೆ ಮಾಡಲು ಸಾಧ್ಯ ಎಂದು ಕಟು ಟೀಕೆ ಮಾಡಿದ್ದಾರೆ. ಒಟ್ಟಿನಲ್ಲಿ ಈ ಪ್ರಶಸ್ತಿಯನ್ನ ಯಾವ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂಬುದನ್ನ ಅಧಿಕೃತವಾಗಿ ಐಪಿಎಲ್ ಅಧಿಕಾರಿಗಳೇ ತಿಳಿಸಬೇಕಿದೆ.

Rohit Sharma ದಾಖಲೆ ಪ್ರಮಾಣದಲ್ಲಿ ಸೊನ್ನೆ ಸುತ್ತಿದ್ದಾರೆ | Oneindia Kannada

Story first published: Thursday, April 21, 2022, 17:39 [IST]
Other articles published on Apr 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X