ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ ವರ್ಷವಾದರೂ ಸಮರ್ಥ ನಾಯಕನನ್ನು ಹುಡುಕಿಕೊಳ್ಳಿ: ಆರ್‌ಸಿಬಿಗೆ ಆಕಾಶ್ ಚೋಪ್ರ ಸಲಹೆ!

IPL 2023: Aakash Chopra believes RCB need a replacement for Faf du Plessis

ಮಿನಿ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದ್ದು ಐಪಿಎಲ್ ಪ್ರೇಮಿಗಳ ಚಿತ್ತ ಈಗ ಕೊಚ್ಚಿಯಲ್ಲಿ ನಡೆಯಲಿರುವ ಈ ಹರಾಜಿನ ಮೇಲೆ ನೆಟ್ಟಿದೆ. ಈ ಹರಾಜಿನಲ್ಲಿ ಆರ್‌ಸಿಬಿ 8.75 ಕೋಟಿಗಳ ಪರ್ಸ್ ಮಾತ್ರವೆ ಹೊಂದಿರುವ ಕಾರಣ ಪ್ರಮುಖ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಅವಕಾಶ ಕಡಿಮೆಯಿದೆ. ಹಾಗಿದ್ದರೂ ಆರ್‌ಸಿಬಿ ಫ್ರಾಂಚೈಸಿ ಯಾವ ರೀತಿ ಚಾಣಾಕ್ಷತನದಿಂದ ಹರಾಜಿನಲ್ಲಿ ಭಾಗಿಯಾಗಲಿದೆ ಎಂಬುದು ಮಾತ್ರ ಕುತೂಹಲ ಮೂಡಿಸಿದೆ.

ಇನ್ನು ಈ ಹಿನ್ನೆಲೆಯಲ್ಲಿ ಆಕಾಶ್ ಚೋಪ್ರ ಆರ್‌ಸಿಬಿ ತಂಡದ ಬಗ್ಗೆ ಪ್ರಮುಖ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವ ತೊರೆದ ಬಳಿಕ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಫಾಫ್ ಡು ಪ್ಲೆಸಿಸ್ ಅವರಿಗೆ ಆರ್‌ಸಿಬಿ ತಂಡ ಬದಲಿ ಆಟಗಾರನನ್ನು ಹುಡುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ. ಈ ವರ್ಷ ಅಲ್ಲದಿದ್ದರೂ ಮುಂದಿನ ವರ್ಷ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಈ ಬಗ್ಗೆ ಗಂಭೀರ ಚಿಂತನೆಯನ್ನು ನಡೆಸಲೇ ಬೇಕಿದೆ ಎಂದಿದ್ದಾರೆ.

Ind vs Ban 2ನೇ ಟೆಸ್ಟ್: ಕ್ಲೀನ್ ಸ್ವೀಪ್ ಮೇಲೆ ಭಾರತದ ಕಣ್ಣು: ಟಾಸ್ ವರದಿ, ಆಡುವ ಬಳಗ ಹಾಗೂ Live ಸ್ಕೋರ್Ind vs Ban 2ನೇ ಟೆಸ್ಟ್: ಕ್ಲೀನ್ ಸ್ವೀಪ್ ಮೇಲೆ ಭಾರತದ ಕಣ್ಣು: ಟಾಸ್ ವರದಿ, ಆಡುವ ಬಳಗ ಹಾಗೂ Live ಸ್ಕೋರ್

ಫಾಫ್ ಆರ್‌ಸಿಬಿಗೆ ದೀರ್ಘ ಕಾಲದ ನಾಯಕತ್ವದ ಆಯ್ಕೆಯಲ್ಲ

ಫಾಫ್ ಆರ್‌ಸಿಬಿಗೆ ದೀರ್ಘ ಕಾಲದ ನಾಯಕತ್ವದ ಆಯ್ಕೆಯಲ್ಲ

2022ರ ಐಪಿಎಲ್ ಆವೃತ್ತಿಗೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಆರ್‌ಸಿಬಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಅನುಭವಿ ಆಟಗಾರ ಫಾಫ್ ಡು ಪ್ಲೆಸಿಸ್ ಅವರನ್ನು 7 ಕೋಟಿ ನೀಡಿ ತೆಕ್ಕೆಗೆ ಹಾಕಿಕೊಂಡಿತ್ತು, ಬಳಿಕ ನಾಯಕತ್ವದ ಜವಾಬ್ಧಾರಿ ನೀಡಲಾಗಿತ್ತು. ಆದರೆ 39 ವರ್ಷದ ಸನಿಹದಲ್ಲಿರುವ ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ ಆರ್‌ಸಿಬಿಗೆ ಸುದೀರ್ಘ ಕಾಳದ ನಾಯಕತ್ವದ ಆಯ್ಕೆಯಲ್ಲ ಎಂದಿದ್ದಾರೆ ಆಕಾಶ್ ಚೋಪ್ರ. ಈ ವರ್ಷದ ಹರಾಜಿನಲ್ಲಿ ಅಲ್ಲದಿದ್ದರೂ ಮುಂದಿನ ಬಾರಿಯಾದರೂ ಆರ್‌ಸಿಬಿ ಫಾಫ್ ಡು ಪ್ಲೆಸಿಸ್‌ಗೆ ಬದಲಿ ಆಟಗಾರನನ್ನು ಹುಡುಕಿಕೊಳ್ಳುವ ಅನಿವಾರ್ಯತೆಯಿದೆ ಎಂದಿದ್ದಾರೆ ಆಕಾಶ್ ಚೋಪ್ರ.

ಆರ್‌ಸಿಬಿಗೆ ಸ್ಪೋಟಕ ಆಟಗಾರನ ಅಗತ್ಯವಿದೆ

ಆರ್‌ಸಿಬಿಗೆ ಸ್ಪೋಟಕ ಆಟಗಾರನ ಅಗತ್ಯವಿದೆ

ಆರ್‌ಸಿಬಿ ಈ ವರ್ಷವಲ್ಲದಿದ್ದರೂ ಮುಂದಿನ ವರ್ಷವಾದರೂ ಫಾಪ್ ಡು ಪ್ಲೆಸಿಸ್‌ಗೆ ಬದಲಿಯನ್ನು ಹುಡುಕಿಕೊಳ್ಳಬೇಕಿದೆ. ಆ ಬಗ್ಗೆ ಈಗಾಗಲೇ ಆರ್‌ಸಿಬಿ ಯೋಚಿಸುತ್ತಿದೆಯಾ ಎಂಬುದು ಗೊತ್ತಿಲ್ಲ. ಹಾಗಂತ ಆರ್‌ಸಿಬಿ ಜೋ ರೂಟ್ ಅಥವಾ ಕೇನ್ ವಿಲಿಯಮ್ಸನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಸಾಧ್ಯವಿಲ್ಲ. ಯಾಕೆಂದರೆ ಪಂದ್ಯದುದ್ದಕ್ಕೂ ಸಿಂಗಲ್ ಅಥವಾ ಎರಡು ರನ್‌ಗಳನ್ನು ತೆಗೆದುಕೊಳ್ಳುವ ಆಟಗಾರ ಬೆಂಗಳುರಿನ ಮೈದಾನಕ್ಕೆ ಸೂಕ್ತವಾಗಲಾರ. ಹಾಗಾಗಿ ಆರ್‌ಸಿಬಿ ತಂಡಕ್ಕೆ ್ಪೋಟಕ ಆಟಗಾರನ ಅಗತ್ಯವಿದೆ. ಆದರೆ ನಾಯಕತ್ವದ ದೃಷ್ಟಿಯಿಂದ ನೋಡಿದರೆ ಜೇಸನ್ ಹೋಲ್ಡರ್ ಇದ್ದಾರೆ. ಆದರೆ ಅವರನ್ನು ಕೊಂಡುಕೊಳ್ಳುವ ಸಾಮರ್ಥ್ಯ ಆರ್‌ಸಿಬಿಗೆ ಇದ್ದಂತೆ ಕಾಣಿಸುತ್ತಿಲ್ಲ. ಈ ವರ್ಷ ಆರ್‌ಸಿಬಿ ಯಾವುದೇ ದೊಡ್ಡ ಮೊತ್ತವನ್ನು ಒಬ್ಬ ಆಟಗಾರನ ಮೇಲೆ ಹೂಡುವುದು ಅಸಾಧ್ಯ" ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ.

ಕಪ್ ಗೆಲ್ಲಬೇಕಾದರೆ ಈ ಹರಾಜನ್ನು ಅದ್ಭುತವಾಗಿ ಬಳಸಿಕೊಳ್ಳಬೇಕಿದೆ!

ಕಪ್ ಗೆಲ್ಲಬೇಕಾದರೆ ಈ ಹರಾಜನ್ನು ಅದ್ಭುತವಾಗಿ ಬಳಸಿಕೊಳ್ಳಬೇಕಿದೆ!

"ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲಬೇಕು ಎಂದಿದ್ದರೆ ಈ ಬಾರಿಯ ಹರಾಜನ್ನು ಅದ್ಭುತವಾಗಿ ಬಳಸಿಕೊಳ್ಳಬೇಕಿದೆ. ಆದರೆ ಅವರದ್ದು ಈಗಾಗಲೇ ಸೆಟಲ್ ಆಗಿರುವ ತಂಡವಾಗಿದೆ ಎಂಬುದು ಕೂಡ ನಿಜ. ಅವರು ಯಾವುದೇ ಪ್ರಮುಖ ಆಟಗಾರನನ್ನು ಬಿಟ್ಟುಕೊಟ್ಟಿಲ್ಲ. ಪರ್ಸ್ ಹೆಚ್ಚಿಸಿಕೊಳ್ಳುವ ದೃಷ್ಟಿಕೋನದಿಂದ ಅವರು ನೊಡಿಲ್ಲ. ಆರ್‌ಸಿಬಿ ತಂಡ ಈಗಾಗಲೇ ಸಿದ್ಧವಾಗಿದೆ" ಎಂದಿದ್ದಾರೆ ಆಕಾಶ್ ಚೋಪ್ರ

ಈಗಾಗಲೇ ಆರ್‌ಸಿಬಿ ತಂಡ ಸಜ್ಜಾಗಿದೆ

ಈಗಾಗಲೇ ಆರ್‌ಸಿಬಿ ತಂಡ ಸಜ್ಜಾಗಿದೆ

ಮುಂದುವರಿದು ಮಾತನಾಡಿದ ಆಕಾಶ್ ಚೋಪ್ರ ಆರ್‌ಸಿಬಿ ತಂಡ ಈಗಾಗಲೇ ಸಜ್ಜಾಗಿದೆ ಎಂದಿದ್ದಾರೆ. "ತಂಡ ಸಜ್ಜುಗೊಂಡಿದೆ. ಫಾಪ್ ನಾಯಕನಾಗಿದ್ದು ವಿರಾಟ್ ಕೊಹ್ಲಿ ಇದ್ದಾರೆ, ರಜತ್ ಪಾಟಿದಾರ್ ಅದ್ಭುತವಾಗಿ ಆಡುತ್ತಿದ್ದಾರೆ. ಅನುಜ್ ರಾವತ್ ಆರಂಭಿಕ ಸ್ಥಾನಕ್ಕೂ ಮತ್ತೊಂದು ಉತ್ತಮ ಆಯ್ಕೆಯಾಗಿದ್ದಾರೆ. ಫಿನಿಷರ್ ಸ್ಥಾನವನ್ನು ದಿನೇಶ್ ಕಾರ್ತಿಕ್ ಉತ್ತಮವಾಗಿ ನಿಭಾಯಿಸಿದರೆ ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಫಿನ್ ಅಲೆನ್, ವನಿಂದು ಹಸರಂಗ, ಶಹ್ಬಾಜ್ ಅಹ್ಮದ್ ಇದ್ದು ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್ ತಂಡದಲ್ಲಿದ್ದಾರೆ. ಒಟ್ಟಾರೆಯಾಗಿ ಆರ್‌ಸಿಬಿ ಒಂದು ಡೀಸೆಂಟ್ ತಂಡವಾಗಿ ಗೋಚರಿಸುತ್ತದೆ" ಎಂದಿದ್ದಾರೆ ಆಕಾಶ್ ಚೋಪ್ರ.

Story first published: Thursday, December 22, 2022, 12:56 [IST]
Other articles published on Dec 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X