ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023 Auction: ಈ ಆಲ್‌ರೌಂಡರ್‌ಗಾಗಿ ಫ್ರಾಂಚೈಸಿಗಳ ನಡುವೆ ಬಿಡ್ಡಿಂಗ್ ಯುದ್ಧ; ಕ್ರಿಕೆಟ್ ತಜ್ಞರು

IPL 2023 Auction: Bidding war Between Franchises For Cameron Green According To Cricket Experts

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜು ಶುಕ್ರವಾರ, ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ. ಎಲ್ಲಾ 10 ಫ್ರಾಂಚೈಸಿಗಳು ಹೊಸ ಸೀಸನ್‌ಗೆ ಮುಂಚಿತವಾಗಿ ತಮ್ಮ ತಂಡಗಳನ್ನು ಬಲಪಡಿಸಲು ಎದುರು ನೋಡುತ್ತಿವೆ.

ಈ ವರ್ಷದ ಹರಾಜು 2022ರ ಮೆಗಾ ಹರಾಜಿಗಿಂತ ಕಡಿಮೆ ಆಟಗಾರರನ್ನು ಒಳಗೊಂಡಿರುತ್ತದೆ. 991 ಆಟಗಾರರಿಂದ 405 ಆಟಗಾರರಿಗೆ ಶಾರ್ಟ್‌ಲಿಸ್ಟ್ ಆಗಿದೆ. ಇದರಲ್ಲಿ 273 ಭಾರತೀಯರು ಮತ್ತು 132 ವಿದೇಶಿ ಆಟಗಾರರು ಮತ್ತು ಸಹವರ್ತಿ ರಾಷ್ಟ್ರಗಳ ನಾಲ್ವರು ಆಟಗಾರರಿದ್ದಾರೆ.

IPL 2023: ಡಿಸೆಂಬರ್ 23ರ ಮಿನಿ ಹರಾಜಿಗೂ ಮುನ್ನ ನೀವು ತಿಳಿದಿರಬೇಕಾದ ಅಂಶಗಳುIPL 2023: ಡಿಸೆಂಬರ್ 23ರ ಮಿನಿ ಹರಾಜಿಗೂ ಮುನ್ನ ನೀವು ತಿಳಿದಿರಬೇಕಾದ ಅಂಶಗಳು

ಇದು ಮಿನಿ ಹರಾಜಾಗಿರುವುದರಿಂದ ಪ್ರತಿ ತಂಡದಲ್ಲಿನ ಪರ್ಸ್ ಬ್ಯಾಲೆನ್ಸ್ ಕಡಿಮೆ ಮೊತ್ತವಾಗಿದೆ. ಆದರೆ ಹರಾಜಿನಲ್ಲಿರುವ ಆಟಗಾರರ ಗುಣಮಟ್ಟವು ಉತ್ತಮವಾಗಿದೆ.

ಬೆನ್ ಸ್ಟೋಕ್ಸ್, ಕ್ಯಾಮರೂನ್ ಗ್ರೀನ್, ಸ್ಯಾಮ್ ಕರ್ರಾನ್, ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್ ಸೇರಿದಂತೆ ಹಲವು ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳು ಸಿದ್ಧರಾಗಿದ್ದಾರೆ.

IPL 2023 Auction: Bidding war Between Franchises For Cameron Green According To Cricket Experts

ಮಿನಿ ಹರಾಜಿನ ದಿನದಂದು ಕೆಲವು ದಾಖಲೆಗಳನ್ನು ಮುರಿಯಬಹುದು ಎಂಬುದು ಖಚಿತವಿಲ್ಲವಾದರೂ, ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ತಜ್ಞರ ಪ್ರಕಾರ, ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಕೆಲವು ದಾಖಲೆಗಳನ್ನು ಛಿದ್ರಗೊಳಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ವಿಶ್ವದ ಶ್ರೀಮಂತ ಟಿ20 ಲೀಗ್‌ನ 16ನೇ ಆವೃತ್ತಿಯ ನೇರಪ್ರಸಾರ ಮಾಡುವ ಡಿಜಿಟಲ್ ಚಾನೆಲ್ ಸ್ಪೋರ್ಟ್ಸ್ 18 ನಡೆಸಿದ ಅಣಕು ಹರಾಜಿನಲ್ಲಿ, ಕ್ಯಾಮೆರಾನ್ ಗ್ರೀನ್ 20 ಕೋಟಿ ರೂಪಾಯಿಗಳಿಗೆ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಪಾಲಾಗಿದ್ದಾರೆ.

IPL 2023: ಮಿನಿ ಹರಾಜಿನಲ್ಲಿ ಈ ವಿದೇಶಿ ಆಟಗಾರರಿಗಾಗಿ ಫ್ರಾಂಚೈಸಿಗಳ ನಡುವೆ ಬಿಡ್ಡಿಂಗ್ ಪೈಪೋಟಿIPL 2023: ಮಿನಿ ಹರಾಜಿನಲ್ಲಿ ಈ ವಿದೇಶಿ ಆಟಗಾರರಿಗಾಗಿ ಫ್ರಾಂಚೈಸಿಗಳ ನಡುವೆ ಬಿಡ್ಡಿಂಗ್ ಪೈಪೋಟಿ

20 ಕೋಟಿ ರೂಪಾಯಿ ಮೊತ್ತವು ರಾಬಿನ್ ಉತ್ತಪ್ಪ ಮತ್ತು ಸ್ಕಾಟ್ ಸ್ಟೈರಿಸ್ ನಡುವಿನ ಮೋಜಿನ ಪೈಪೋಟಿಯ ಫಲಿತಾಂಶವಾಗಿದೆ. ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಬಿಡ್ಡಿಂಗ್ ಯುದ್ಧದಲ್ಲಿ ದೊಡ್ಡ ಹಣವನ್ನು ಪಡೆಯಲಿದ್ದಾರೆ ಎಂಬ ಒಮ್ಮತ ಅಭಿಪ್ರಾಯವಿದೆ.

ವಾಸ್ತವವಾಗಿ, ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್‌ಗಿಂತ ಹೆಚ್ಚಾಗಿ ಆಸೀಸ್‌ನ ಕ್ಯಾಮರೂನ್ ಗ್ರೀನ್ ಹೈದರಾಬಾದ್‌ನ ಪ್ರಮುಖ ಆದ್ಯತೆಯಾಗಿರಬಹುದು ಎಂದು ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟೈರಿಸ್ ತಿಳಿಸಿದ್ದಾರೆ.

ಯುವ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಆಸ್ಟ್ರೇಲಿಯಾ ತಂಡವನ್ನು ಇದುವರೆಗೆ 17 ಟೆಸ್ಟ್, 13 ಏಕದಿನ ಪಂದ್ಯಗಳು ಮತ್ತು ಎಂಟು ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.

ಆದರೆ 2022 ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಅವರು ಟಿ20 ಸರಣಿಗಾಗಿ ಭಾರತದ ಪ್ರವಾಸ ಕೈಗೊಂಡಾಗ ಮತ್ತು 61 ಮತ್ತು 52 ರನ್‌ಗಳ ಕೆಲವು ಅದ್ಭುತವಾದ ಪ್ರದರ್ಶನಗಳನ್ನು ನೀಡಿ, ತಾವು ಟಿ20ಯಲ್ಲಿ ದೊಡ್ಡ ಹೊಡೆತಗಾರ ಎನ್ನುವುದನ್ನು ಸಾಬೀತುಪಡಿಸಿದರು.

IPL Mini Auction: ಮಾಜಿ ಆರ್‌ಸಿಬಿ ಸ್ಪಿನ್ನರ್ ಗುರಿಯಾಗಿಸಿಕೊಂಡ ಈ ಮೂರು ಫ್ರಾಂಚೈಸಿಗಳುIPL Mini Auction: ಮಾಜಿ ಆರ್‌ಸಿಬಿ ಸ್ಪಿನ್ನರ್ ಗುರಿಯಾಗಿಸಿಕೊಂಡ ಈ ಮೂರು ಫ್ರಾಂಚೈಸಿಗಳು

ಈ ವರ್ಷ ಭಾರತದಲ್ಲಿಯೇ ಸಂಪೂರ್ಣ ಐಪಿಎಲ್ ಪಂದ್ಯಾವಳಿ ನಡೆಯುವುದರಿಂದ, ಕ್ಯಾಮರೂನ್ ಗ್ರೀನ್‌ ಅವರ ಸ್ಫೋಟಕ ಬ್ಯಾಟಿಂಗ್ ಫ್ರಾಂಚೈಸಿಗಳಿಗೆ ಹೆಚ್ಚು ಸೂಕ್ತವಾಗಿರುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇನ್ನು ಅವರ ಮಧ್ಯಮ ವೇಗದ ಬೌಲಿಂಗ್ ಇನ್ನು ಪ್ರಗತಿಯಲ್ಲಿದೆಯಾದರೂ, ಚೆಂಡಿನೊಂದಿಗೆ ತನ್ನ ಕೌಶಲ್ಯಗಳನ್ನು ಇನ್ನಷ್ಟು ತೀಕ್ಷ್ಣಗೊಳಿಸಲು ಮತ್ತು ಸಂಪೂರ್ಣ ಆಲ್‌ರೌಂಡರ್ ಆಗಲು ಐಪಿಎಲ್ ಟೂರ್ನಿ ಅವರಿಗೆ ಸೂಕ್ತ ವೇದಿಕೆಯಾಗಬಹುದು.

ಫ್ರಾಂಚೈಸಿಗಳ ಪರ್ಸ್ ಬ್ಯಾಲೆನ್ಸ್ ಕರಗಿ ಹೋದಂತೆ ಅವರು ಬಿಡ್ಡಿಂಗ್ ಪೈಪೋಟಿಯನ್ನು ಪ್ರಚೋದಿಸಲು ಹೋದರೆ ಕ್ಯಾಮರೂನ್ ಗ್ರೀನ್ ಅವರನ್ನು ಪಡೆಯಲು ಅನೇಕ ಫ್ರಾಂಚೈಸಿಗಳಿಗೆ ಸಾಧ್ಯವಾಗುವುದಿಲ್ಲ.

ಹಾಗೆ ನೋಡಿದರೆ, ಸನ್‌ರೈಸರ್ಸ್ ಹೈದರಾಬಾದ್ 42.5 ಕೋಟಿ ರೂ. ಹೊಂದಿದ್ದು, ದೊಡ್ಡ ಮೊತ್ತಕ್ಕೆ ಪೈಪೋಟಿ ನಡೆಸುವ ಏಕೈಕ ತಂಡವಾಗಿದೆ. ಇನ್ನು ಪಂಜಾಬ್ ಕಿಂಗ್ಸ್ 32.20 ಕೋಟಿ ರೂ. ಹೊಂದಿದ್ದು, ಸ್ವಲ್ಪ ಪೈಪೋಟಿ ನೀಡುವ ಸಾಧ್ಯತೆ ಇದೆ.

ಲಕ್ನೋ ಸೂಪರ್ ಜೈಂಟ್ಸ್ 23.35 ಕೋಟಿ ರೂ., ಮುಂಬೈ ಇಂಡಿಯನ್ಸ್ 20.55 ಕೋಟಿ ರೂ., ಚೆನ್ನೈ ಸೂಪರ್ ಕಿಂಗ್ಸ್ 20.45 ಕೋಟಿ ರೂ. ಹೊಂದಿರುವುದರಿಂದ ಒಂದು ಹಂತದವರೆಗೆ ಬಿಡ್ಡಿಂಗ್ ಪೈಪೋಟಿಗೆ ಇಳಿಯಲಿವೆ.

Story first published: Thursday, December 22, 2022, 18:11 [IST]
Other articles published on Dec 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X