ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಲ್ಲಿ ಸಾಕಷ್ಟು ಅವಕಾಶಗಳಿವೆ: ಸನ್‌ರೈಸರ್ಸ್ ತಂಡದಿಂದ ಬಿಡುಗಡೆಯಾದ ವಿಲಿಯಮ್ಸನ್ ಪ್ರತಿಕ್ರಿಯೆ

IPL 2023: Kane Williamson reaction after Released by SunRisers Hyderabad

ಐಪಿಎಲ್ 2023ರ ಆವೃತ್ತಿಗೂ ಮುನ್ನ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಈಗಾಗಲೇ ಆಟಗಾರರ ರೀಟೆನ್ಶನ್ ಪ್ರಕ್ರಿಯೆ ಮುಕ್ತಾಯವಾಗಿದೆ. ಇದರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತಂಡದ ನಾಯಕನಾಗಿದ್ದ ಕೇನ್ ವಿಲಿಯಮ್ಸನ್ ಅವರನ್ನು ಹರಾಜಿಗೆ ಬಿಡುಗಡೆಗೊಳಿಸಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ನಾಯಕನನ್ನೇ ಹರಾಜಿಗೆ ಬಿಟ್ಟುಕೊಟ್ಟಿರುವ ಸನ್‌ರೈಸರ್ಸ್ ಹಯದರಾಬಾದ್ ಮುಂದಿನ ಆವೃತ್ತುಗೆ ಹೊಸತನದೊಂದಿಗೆ ಬರಲು ಸಜ್ಜಾಗಿದೆ. ಈ ಸಂದರ್ಭದಲ್ಲಿ ಕೇನ್ ವಿಲಿಯಮ್ಸನ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

2022ರ ಐಪಿಎಲ್‌ಗೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ ಅವರನ್ನು 14 ಕೋಟಿ ನೀಡಿ ರೀಟೈನ್ ಮಾಡಿಕೊಂಡಿತ್ತು. ಈ ಮೂಲಕ ತಂಡದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು ಕೇನ್ ವಿಲಿಯಮ್ಸನ್. ಕೇನ್ ನಾಯಕತ್ವದಲ್ಲಿ ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 14 ಪಂದ್ಯಗಳ ಪೈಕಿ ಕೇವಲ 6 ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿ 10 ತಂಡಗಳಲ್ಲಿ 8ನೇ ಸ್ಥಾನವನ್ನು ಪಡೆದುಕೊಂಡು ಲೀಗ್ ಹಂತವನ್ನು ಅಂತ್ಯಗೊಳಿಸಿತ್ತು.

IND vs NZ: ಕಿವೀಸ್ ನೆಲದಲ್ಲಿ ಭಾರತದ ಯುವ ಪಡೆಯ ಅಭ್ಯಾಸ ಶುರು, ವಿವಿಎಸ್ ಲಕ್ಷ್ಮಣ್‌ರಿಂದ ಪಾಠIND vs NZ: ಕಿವೀಸ್ ನೆಲದಲ್ಲಿ ಭಾರತದ ಯುವ ಪಡೆಯ ಅಭ್ಯಾಸ ಶುರು, ವಿವಿಎಸ್ ಲಕ್ಷ್ಮಣ್‌ರಿಂದ ಪಾಠ

ಇದೀಗ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಬಿದ್ದಿರುವ ಕೇನ್ ವಿಲಿಯಮ್ಸನ್ ಅವರ ಟಿ20 ಭವಿಷ್ಯದ ಬಗ್ಗೆ ಪ್ರಶ್ನೆ ಕೇಳಿಬಂತು. ಇದಕ್ಕೆ ಉತ್ತರಿಸಿದ ಕೇನ್ "ನಿಜಕ್ಕೂ ನಾನು ಐಪಿಎಲ್‌ನಲ್ಲಿ ನನ್ನ ಭವಿಷ್ಯದ ಬಗ್ಗೆ ಚಿಂತನೆ ನಡೆಸಿಲ್ಲ. ವಿಶ್ವಾದ್ಯಂತ ಈಗ ಸಾಕಷ್ಟು ಪೈಪೋಟಿಗಳಿದೆ. ಐಪಿಎಲ್ ಕೂಡ ಸಾಕಷ್ಟು ಸ್ಪರ್ಧೆಯಿರುವ ಟೂರ್ನಿಯಾಗಿದೆ. ಪ್ರತಿ ಬಾರಿಯೂ ಆಟಗಾರರು ಇಲ್ಲಿ ಭಿನ್ನ ತಂಡಗಳಿಗೆ ಆಡುವುದನ್ನು ನೀವು ಕಾಣಬಹುದು. ಸಾಕಷ್ಟು ಆಯ್ಕೆಗಳು ಕೂಡ ಇದ್ದು ಹೆಚ್ಚಿನ ಕ್ರಿಕೆಟ್ ನನ್ನಲ್ಲಿಯೂ ಉಳಿದುಕೊಂಡಿದೆ. ಎಲ್ಲಾ ಮಾದರಿಯಲ್ಲಿಯೂ ಆಡುವುದನ್ನು ಆನು ಆನಂದಿಸುತ್ತೇನೆ" ಎಂದಿದ್ದಾರೆ ಕೇನ್ ವಿಲಿಯಮ್ಸನ್.

ಇನ್ನು ಈ ಸಂದರ್ಭದಲ್ಲಿ ಕೇನ್ ವಿಲಿಯಮ್ಸನ್ ಹೈದರಾಬಾದ್ ಫ್ರಾಂಚೈಸಿ ತಂಡದಿಂದ ಬಿಡುಗಡೆಗೊಳಿಸುವ ನಿರ್ಧಾರವನ್ನು ಕೆಲ ದಿನಗಳ ಹಿಂದೆಯೇ ತನಗೆ ತಿಳಿಸಿತ್ತು ಎಂದು ಕೇನ್ ವಿಲಿಯಮ್ಸನ್ ತಿಳಿಸಿದ್ದಾರೆ. ಸನ್‌ರೈಸರ್ಸ್ ಹಯದರಾಬಾದ್ ತಂಡದಲ್ಲಿ ಸಾಕಷ್ಟು ಅದ್ಭುತವಾದ ನೆನಪುಗಳಿದೆ. ರೀಟೆನ್ಶನ್ ಪಟ್ಟಿ ಪ್ರಕಟವಾದಾಗ ನನಗೆ ಯಾವುದೇ ಆಶ್ಷರ್ಯಗಳು ಉಂಟಾಗಲಿಲ್ಲ ಎಂದಿದ್ದಾರೆ ಕೇನ್ ವಿಲಿಯಮ್ಸನ್.

IPL 2023: ನಿವೃತ್ತಿ ಘೋಷಿಸಿದ ಪೊಲಾರ್ಡ್‌ಗೆ ಸಚಿನ್, ರೋಹಿತ್ ಹೇಳಿದ್ದೇನು?IPL 2023: ನಿವೃತ್ತಿ ಘೋಷಿಸಿದ ಪೊಲಾರ್ಡ್‌ಗೆ ಸಚಿನ್, ರೋಹಿತ್ ಹೇಳಿದ್ದೇನು?

ಸನ್‌ರೈಸರ್ಸ್ ಹೈದ್ರಾಬಾದ್ ತಂಡ ರೀಟೈನ್ ಮಾಡಿಕೊಂಡ ಆಟಗಾರರು: ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್‌, ಅಭಿಷೇಕ್ ಶರ್ಮಾ, ಐಡೆನ್ ಮಕ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲ್ಲಿಕ್, ಟಿ. ನಟರಾಜನ್, ಕಾರ್ತಿಕ್ ತ್ಯಾಗಿ, ಫಜಲಕ್ ಫಾರೂಕಿ

ಸನ್‌ರೈಸರ್ಸ್ ಹೈದ್ರಾಬಾದ್ ತಂಡದಿಂದ ರಿಲೀಸ್ ಆದ ಆಟಗಾರರು: ಕೇನ್ ವಿಲಿಯಮ್ಸನ್, ನಿಕೋಲಸ್ ಪೂರನ್, ಜಗದೀಶ ಸುಚಿತ್, ಪ್ರಿಯಾಮ್ ಗರ್ಗ್‌, ರವಿಕುಮಾರ್ ಸಮರ್ಥ್‌, ರೊಮಾರಿಯೊ ಶೆಫರ್ಡ್‌, ಸೌರಭ್ ದುಬೆ, ಸೇನ್ ಅಬೋಟ್, ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಸುಶಾಂತ್ ಮಿಶ್ರಾ, ವಿಷ್ಣು ವಿನೋದ್

Story first published: Wednesday, November 16, 2022, 21:43 [IST]
Other articles published on Nov 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X