ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಪ್ರಮುಖ ಆಟಗಾರನನ್ನು ಕೈಬಿಟ್ಟ ಮುಂಬೈ, ಸಿಎಸ್‌ಕೆ ತಂಡದಲ್ಲೇ ಉಳಿಯಲಿದ್ದಾರೆ ಸ್ಟಾರ್ ಆಲ್‌ರೌಂಡರ್

IPL 2023: Mumbai Indians Released Kieron Pollard, Ravindra Jadeja Will Continue With CSK

ಮುಂಬೈ ಇಂಡಿಯನ್ಸ್ ತಂಡ ಕೊನೆಗೂ ಪ್ರಮುಖ ಆಟಗಾರ ಕೀರನ್ ಪೊಲಾರ್ಡ್‌ರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಅನುಭವಿ ಆಲ್‌ರೌಂಡರ್ 2021ರಿಂದ ಮುಂಬೈ ಇಂಡಿಯನ್ಸ್ ಪರವಾಗಿ ಆಡುತ್ತಿದ್ದಾರೆ. ಆದರೆ, ಅವರ ಇತ್ತೀಚಿನ ಫಾರ್ಮ್‌ ಅನ್ನು ಗಮನಿಸಿ ಮುಂಬೈ ಇಂಡಿಯನ್ಸ್ ಈ ನಿರ್ಧಾರ ತೆಗೆದುಕೊಂಡಿದೆ.

ಮುಂಬೈ ಇಂಡಿಯನ್ಸ್ ಮತ್ತು ಸಿಎಸ್‌ಕೆ ತಂಡಗಳು ಬಿಸಿಸಿಐಗೆ ತಮ್ಮ ತಂಡಗಳಲ್ಲಿ ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಸಲ್ಲಿಸಿವೆ. ಚೆನ್ನೈ ತಂಡದಿಂದ ರವೀಂದ್ರ ಜಡೇಜಾ ದೂರವಾಗುತ್ತಾರೆ ಎನ್ನುವ ವದಂತಿಗಳಿಗೆ ತೆರೆ ಬಿದ್ದಿದೆ, ಅವರನ್ನು ತಂಡದಲ್ಲೇ ಉಳಿಸಿಕೊಳ್ಳುವಲ್ಲಿ ಸಿಎಸ್‌ಕೆ ಯಶಸ್ವಿಯಾಗಿದೆ.

ಟಿ20 ವಿಶ್ವಕಪ್‌ 2022: ಭಾರತದ ಈ 5 ಆಟಗಾರರಿಗೆ ಮುಂದಿನ T20 ವಿಶ್ವಕಪ್‌ನಲ್ಲಿ ಅವಕಾಶ ಸಿಗದು!ಟಿ20 ವಿಶ್ವಕಪ್‌ 2022: ಭಾರತದ ಈ 5 ಆಟಗಾರರಿಗೆ ಮುಂದಿನ T20 ವಿಶ್ವಕಪ್‌ನಲ್ಲಿ ಅವಕಾಶ ಸಿಗದು!

ವರದಿಯ ಪ್ರಕಾರ, ಮುಂಬೈ ಇಂಡಿಯನ್ಸ್ ಪೊಲಾರ್ಡ್ ಜೊತೆಯಲ್ಲಿ ಫ್ಯಾಬ್ ಅಲೆನ್ ಮತ್ತು ಟೈಮಲ್‌ ಮಿಲ್ಸ್‌ರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಕ್ರಿಸ್‌ ಜೋರ್ಡಾನ್, ಆಡಮ್ ಮಿಲ್ನೆ ಮತ್ತು ಮಿಚೆಲ್ ಸ್ಯಾಂಟ್ನರ್ ಅವರನ್ನು ತಂಡದಿಂದ ಬಿಡುಗಡೆ ಮಾಡಲು ನಿರ್ಧರಿಸಿದೆ.

ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಾಗಿವೆ. ಈ ಎರಡೂ ತಂಡಗಳು ಅತಿ ಹೆಚ್ಚು ಬಾರಿ ಕಪ್ ಗೆದ್ದಿರುವ ದಾಖಲೆಯನ್ನು ಹೊಂದಿವೆ.

ಮುಂಬೈ ಇಂಡಿಯನ್ಸ್ ತಂಡದಿಂದ ಕಠಿಣ ನಿರ್ಧಾರ

ಮುಂಬೈ ಇಂಡಿಯನ್ಸ್ ತಂಡದಿಂದ ಕಠಿಣ ನಿರ್ಧಾರ

ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್ 2022 ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿತ್ತು. 5 ಬಾರಿ ಚಾಂಪಿಯನ್ ಪಟ್ಟ ಅಲಂಕಿರಿಸಿರುವ ಅವರು, ಕಳೆದ ಐಪಿಎಲ್‌ನಲ್ಲಿ 10ನೇ ಸ್ಥಾನವನ್ನು ಪಡೆದು ಮುಖಭಂಗ ಅನುಭವಿಸಿದ್ದರು.

ಮುಂಬೈ ಇಂಡಿಯನ್ಸ್ ಒಟ್ಟು 10 ಆಟಗಾರರನ್ನು ಉಳಿಸಿಕೊಂಡಿದ್ದು, 5 ಆಟಗಾರರನ್ನು ಬಿಡುಗಡೆ ಮಾಡಿದೆ. ಮೂಲಗಳ ಪ್ರಕಾರ, ರೋಹಿತ್ ಶರ್ಮಾ, ಡೆವಾಲ್ಡ್ ಬ್ರೂವಿಸ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೇನಿಯಲ್ ಸಾಮ್ಸ್, ಟಿಮ್ ಡೇವಿಡ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ತಿಲಕ್ ವರ್ಮಾ ಅವರನ್ನು ಉಳಿಸಿಕೊಳ್ಳಲಾಗಿದೆ.

ಫ್ಯಾಬಿಯನ್ ಅಲೆನ್, ಕೀರಾನ್ ಪೊಲಾರ್ಡ್, ಟೈಮಲ್ ಮಿಲ್ಸ್, ಮಯಾಂಕ್ ಮಾರ್ಕಾಂಡೆ ಮತ್ತು ಹೃತಿಕ್ ಶೌಕಿನ್ ಅವರನ್ನು ಬಿಡುಗಡೆ ಮಾಡಲಾಗಿದೆ.

ಮುಂದಿನ T20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಈ ಮುಖಗಳನ್ನ ನೋಡಲು ಬಯಸುವುದಿಲ್ಲ: ವೀರೇಂದ್ರ ಸೆಹ್ವಾಗ್

ಸಿಎಸ್‌ಕೆ ತಂಡದಲ್ಲೇ ಉಳಿಯಲಿದ್ದಾರೆ ರವೀಂದ್ರ ಜಡೇಜಾ

ಸಿಎಸ್‌ಕೆ ತಂಡದಲ್ಲೇ ಉಳಿಯಲಿದ್ದಾರೆ ರವೀಂದ್ರ ಜಡೇಜಾ


ಐಪಿಎಲ್‌ 2022ರಲ್ಲಿ ಸಿಎಸ್‌ಕೆ ತಂಡಕ್ಕೆ ಧೋನಿ ಬದಲಾಗಿ ರವೀಂದ್ರ ಜಡೇಜಾರನ್ನು ನೇಮಕ ಮಾಡಲಾಗಿತ್ತು. ಜಡೇಜಾ ನಾಯಕತ್ವದಲ್ಲಿ ತಂಡ ಕಳಪೆ ಪ್ರದರ್ಶನ ನೀಡಿದ ನಂತರ, ಪಂದ್ಯಾವಳಿಯ ಮಧ್ಯದಲ್ಲೇ ಜಡೇಜಾ ಗಾಯದ ಕಾರಣದಿಂದ ಹೊರಗುಳಿದರು, ನಾಯಕನ ಸ್ಥಾನಕ್ಕೆ ಧೋನಿಯವರನ್ನು ನೇಮಿಸಲಾಗಿತ್ತು. ಆದರೂ, 2022ರಲ್ಲಿ ಸಿಎಸ್‌ಕೆ ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಯಿತು.

ಅದಾದ ನಂತರ, ಸಿಎಸ್‌ಕೆ ತಂಡದಿಂದ ಜಡೇಜಾ ದೂರವಾಗುತ್ತಾರೆ ಎಂದು ಹೇಳಲಾಗಿತ್ತು. ಜಡೇಜಾ ಕೂಡ ತಂಡದಿಂದ ಅಂತರ ಕಾಯ್ದುಕೊಂಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ರವೀಂದ್ರ ಜಡೇಜಾರನ್ನು ಸೇರಿಸಿಕೊಳ್ಳಲು ಆಸಕ್ತಿ ಹೊಂದಿತ್ತಾದರೂ, ಸಿಎಸ್‌ಕೆ ತನ್ನ ಸ್ಟಾರ್ ಆಲ್‌ರೌಂಡರ್ ರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

4 ಆಟಗಾರರನ್ನು ಕೈಬಿಟ್ಟ ಚೆನ್ನೈ ಸೂಪರ್ ಕಿಂಗ್ಸ್

4 ಆಟಗಾರರನ್ನು ಕೈಬಿಟ್ಟ ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ 9 ಆಟಗಾರರನ್ನು ಉಳಿಸಿಕೊಂಡಿದ್ದು, 4 ಆಟಗಾರರನ್ನು ಬಿಡುಗಡೆ ಮಾಡಿದೆ. ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ಮೊಯಿನ್ ಅಲಿ, ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮುಖೇಶ್ ಚೌಧರಿ, ಡ್ವೇನ್ ಪ್ರಿಟೋರಿಯಸ್ ಮತ್ತು ದೀಪಕ್ ಚಹಾರ್ ಅವರನ್ನು ಐಪಿಎಲ್ 16 ನೇ ಸೀಸನ್‌ಗೆ ಉಳಿಸಿಕೊಂಡಿದೆ. ಕ್ರಿಸ್ ಜೋರ್ಡಾನ್, ಆಡಮ್ ಮಿಲ್ನೆ, ನಾರಾಯಣ್ ಜಗದೀಶನ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ.

ಐಪಿಎಲ್ 2023ರ ಮಿನಿ ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ. ನವೆಂಬರ್ 15ರೊಳಗೆ ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೆ ಸೂಚನೆ ನೀಡಿದೆ.

Story first published: Saturday, November 12, 2022, 16:23 [IST]
Other articles published on Nov 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X