ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಬೆಂಗಳೂರಿಗೆ ಬಂದ ಎಬಿ ಡಿವಿಲಿಯರ್ಸ್ ಹೇಳಿದ್ದೇನು ಗೊತ್ತಾ?

IPL 2023: RCB Superstar AB de Villiers Back To Bengaluru, Will Chat With Players

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಕಾನ್ ಎಬಿ ಡಿವಿಲಿಯರ್ಸ್ ಬಹಳ ವರ್ಷಗಳ ನಂತರ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ 2023 ರ 16 ನೇ ಸೀಸನ್‌ಗಾಗಿ ತಂಡದ ಬಗ್ಗೆ ಮಹತ್ವದ ಚರ್ಚೆ ಮಾಡಲು ಮತ್ತು ಆಟಗಾರರ ಜೊತೆ ಚರ್ಚೆ ನಡೆಸಲು ಬಂದಿದ್ದೇನೆ ಎಂದು ಹೇಳಿದ್ದಾರೆ.

2023ರ ಐಪಿಎಲ್‌ನಲ್ಲಿ ನಾನು ಆರ್‌ಸಿಬಿ ಜೊತೆ ಇರುತ್ತೇನೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದರು. ಅವರು ಮತ್ತೆ ಮೈದಾನಕ್ಕಿಳಿಯುತ್ತಾರೆ ಎಂದು ಅಭಿಮಾನಿಗಳು ಸಂತಸಗೊಂಡಿದ್ದರು. ಆದರೆ, ಕೆಲವೇ ದಿನಗಳಲ್ಲಿ ಮತ್ತೆ ನಾನು ಕ್ರಿಕೆಟ್ ಆಡುವುದಿಲ್ಲ ಎಂದು ಹೇಳುವ ಮೂಲಕ ನಿರಾಸೆ ಮೂಡಿಸಿದ್ದರು.

SMAT 2022: ಪಂಜಾಬ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಹಿಮಾಚಲ ಪ್ರದೇಶSMAT 2022: ಪಂಜಾಬ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಹಿಮಾಚಲ ಪ್ರದೇಶ

ಆದರೆ, ಆರ್‌ಸಿಬಿ ತಂಡದಲ್ಲಿ ಅವರು ಬೇರೊಂದು ಜವಾಬ್ದಾರಿ ನಿರ್ವಹಿಸಲು ಸಿದ್ಧರಾಗಿದ್ದಾರೆ. ನವೆಂಬರ್ 15ರೊಳಗೆ ತಂಡದ ಆಟಗಾರರನ್ನು ಬಿಡುಗಡೆ ಮಾಡಲು ಐಪಿಎಲ್ ಫ್ರಾಂಚೈಸಿಗಳಿಗೆ ಕೊನೆಯ ದಿನವಾಗಿದ್ದು, ಎಬಿಡಿ ಆಗಮಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ ಡಿವಿಲಿಯರ್ಸ್ ಐಪಿಎಲ್ ಮಿನಿ ಹರಾಜಿಗೂ ಮುನ್ನ ತಂಡವನ್ನು ಕಟ್ಟಲು ಬೆಂಗಳೂರಿಗೆ ಮರಳಿದ್ದಾರೆ. ಎಬಿಡಿ ಆಗಮಿಸಿರುವ ವಿಡಿಯೋವನ್ನು ಆರ್ ಸಿಬಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ತಂಡದಲ್ಲಿನ ಬದಲಾವಣೆ ಬಗ್ಗೆ ಚರ್ಚೆ

ಆರ್‌ಸಿಬಿ ನಿರ್ದೇಶಕ ಮೈಕ್ ಹೆಸ್ಸನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯವನ್ನು ಸ್ಟ್ಯಾಂಡ್‌ನಿಂದ ವೀಕ್ಷಿಸುತ್ತಿದ್ದರು. ಸ್ಥಳೀಯ ಪ್ರತಿಭೆಗಳ ಮೇಲೆ ನಿಗಾ ಇಟ್ಟಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಮಾಜಿ ಆರ್‌ಸಿಬಿ ಆಟಗಾರ ಎಬಿ ಡಿವಿಲಿಯರ್ಸ್ ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿರುವ ಉದ್ದೇಶವೇ ತಂಡದಲ್ಲಿ ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆಸಲು ಎನ್ನಲಾಗಿದೆ.

ಅನೇಕ ಸ್ಥಳೀಯ ಪ್ರತಿಭೆಗಳನ್ನು ಆಯ್ಕೆ ಮಾಡಲು ಆರ್‌ಸಿಬಿ ಆಸಕ್ತಿ ಹೊಂದಿದೆ ಎನ್ನಲಾಗುತ್ತಿದೆ. ತಂಡದ ಯಾವ ಆಟಗಾರನನ್ನು ಬಿಡುಗಡೆ ಮಾಡಬೇಕು ಎನ್ನುವ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.

ಎಬಿಡಿ ಪಾತ್ರದ ಬಗ್ಗೆ ನಿರ್ಧರಿಸಿಲ್ಲ

ಎಬಿಡಿ ಪಾತ್ರದ ಬಗ್ಗೆ ನಿರ್ಧರಿಸಿಲ್ಲ

ಆರ್‌ಸಿಬಿ ಫ್ರಾಂಚೈಸಿಯಲ್ಲಿ ದಕ್ಷಿಣ ಆಫ್ರಿಕಾದ ಸೂಪರ್‌ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಯಾವ ಪಾತ್ರ ವಹಿಸುತ್ತಾರೆ ಎನ್ನುವ ಕುರಿತು ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಆದರೂ, ಆರ್‌ಸಿಬಿ ಅಭಿಮಾನಿಗಳಿಗೆ ಎಬಿ ಡಿವಿಯಲಿಯರ್ಸ್ ತಂಡದ ಜೊತೆ ಇರುವುದು ಖುಷಿಯ ವಿಚಾರವಾಗಿದೆ.

ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ತಂಡದ ಇಬ್ಬರು ಅನುಭವಿ ಆಟಗಾರರು ಸದ್ಯ ಭಾರತದಲ್ಲಿ ಇಲ್ಲ. ಎಬಿಡಿ ತಂಡದ ಇತರ ಸದಸ್ಯರ ಜೊತೆ ಮಾತನಾಡಿಲಿದ್ದಾರೆ. ಮುಂದಿನ ಐಪಿಎಲ್‌ನಲ್ಲಿ ತಂಡಕ್ಕೆ ಸಹಾಯ ಮಾಡಲಿದ್ದಾರೆ.

ತಂಡಕ್ಕೆ ಮಾರ್ಗದರ್ಶನ ನೀಡುವ ಸಾಧ್ಯತೆ

ತಂಡಕ್ಕೆ ಮಾರ್ಗದರ್ಶನ ನೀಡುವ ಸಾಧ್ಯತೆ

2022ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕ್ವಾಲಿಫೈಯರ್ 2 ರಲ್ಲಿ ಸೋತಿದ್ದರಿಂದ ಆರ್‌ಸಿಬಿ ಪ್ರಶಸ್ತಿ ಗೆಲ್ಲುವುದು ಇನ್ನೂ ಕನಸಾಗಿಯೇ ಉಳಿದಿದೆ. ಕಳೆದ ಋತುವಿನಲ್ಲಿ ಕೊಹ್ಲಿ ಮತ್ತು ಡುಪ್ಲೆಸಿಸ್ ಸ್ಥಿರವಾದ ಪ್ರದರ್ಶನ ನೀಡದ ಕಾರಣ ತಂಡಕ್ಕೆ ಹಿನ್ನಡೆಯಾಗಿತ್ತು.

ತಂಡದ ಬ್ಯಾಟಿಂಗ್ ವಿಭಾಗದ ಜೊತೆ ಎಬಿಡಿ ಕೆಲಸ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ತಂಡದೊಂದಿಗೆ ಬ್ಯಾಟಿಂಗ್ ಮಾರ್ಗದರ್ಶಕರಾಗಿ ಅಥವಾ ಗುಂಪಿನಲ್ಲಿ ಪವರ್ ಸ್ಪೆಷಲಿಸ್ಟ್ ತರಬೇತುದಾರರಾಗಿ ಕೆಲಸ ಮಾಡಬಹುದು. ಎಬಿಡಿ ಮಾರ್ಗದರ್ಶನ ಹಲವು ಯುವ ಆಟಗಾರರಿಗೆ ಸಹಾಯಕವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Story first published: Thursday, November 3, 2022, 16:46 [IST]
Other articles published on Nov 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X