ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಹರಾಜಿನಲ್ಲಿ ಮಾರಾಟವಾಗದೆ ಉಳಿಯಬಹುದಾದ ಪ್ರಮುಖ ಆಟಗಾರರು ಇವರು

IPL 2023: These 5 Players Can Remain Unsold In IPL Mini Auction

ಐಪಿಎಲ್ 2023ರ ಮಿನಿ ಹರಾಜಿಗೆ ದಿನಗಣನೆ ಆರಂಭವಾಗಿದೆ. ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಎಲ್ಲಾ 10 ಫ್ರಾಂಚೈಸಿಗಳು 990ಕ್ಕೂ ಹೆಚ್ಚು ಆಟಗಾರರಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪೈಪೋಟಿ ನಡೆಸಲಿದ್ದಾರೆ.

ಈ ಬಾರಿ ಮಿನಿ ಹರಾಜಿಗಾಗಿ 900ಕ್ಕೂ ಹೆಚ್ಚಿನ ಆಟಗಾರರು ನೋಂದಾಯಿಸಿಕೊಂಡಿದ್ದಾರೆ, ಆದರೆ 87 ಆಟಗಾರರು ಮಾತ್ರ ವಿವಿಧ ಫ್ರಾಂಚೈಸಿಗಳನ್ನು ಸೇರಲಿದ್ದಾರೆ. ಬೆನ್‌ಸ್ಟೋಕ್ಸ್, ಕ್ಯಾಮರೂನ್ ಗ್ರೀನ್, ಸ್ಯಾಮ್ ಕರನ್ ಸೇರಿದಂತೆ ಪ್ರಮುಖ ಆಟಗಾರರಿಗಾಗಿ ಫ್ರಾಂಚೈಸಿಗಳು ಭಾರಿ ಪೈಪೋಟಿ ನಡೆಸಲಿವೆ.

ಯುಎಇಯಲ್ಲಿ ನಡೆಯುತ್ತಿದ್ದ ಅಬುಧಾಬಿ ಟಿ10 ಲೀಗ್ 2022 ಮುಕ್ತಾಯವಾಗಿದೆ. ಇದನ್ನು ಕ್ರಿಕೆಟ್‌ನ 'ಫಾಸ್ಟೆಸ್ಟ್ ಫಾರ್ಮ್ಯಾಟ್' ಎಂದು ಕರೆಯಲಾಗುತ್ತದೆ. ಅನೇಕ ಪ್ರಮುಖ ಆಟಗಾರರು ಈ ಟೂರ್ನಿಯಲ್ಲಿ ಆಡಿದ್ದರು. ಐಪಿಎಲ್‌ ಫ್ರಾಂಚೈಸಿಗಳಿಗೆ ಈ ಲೀಗ್ ತಮ್ಮ ಆಟಗಾರರನ್ನು ಆಯ್ಕೆ ಮಾಡಲು ಪರೀಕ್ಷೆ ಎನ್ನುವಂತಾಗಿತ್ತು.

FIFA World Cup: ದಕ್ಷಿಣ ಕೊರಿಯಾ ವಿರುದ್ಧ ಸಾಂಬಾ ಪಡೆಗೆ ಭರ್ಜರಿ ಜಯ, ಕ್ವಾರ್ಟರ್ ಫೈನಲ್‌ಗೆ ಪ್ರವೇಶFIFA World Cup: ದಕ್ಷಿಣ ಕೊರಿಯಾ ವಿರುದ್ಧ ಸಾಂಬಾ ಪಡೆಗೆ ಭರ್ಜರಿ ಜಯ, ಕ್ವಾರ್ಟರ್ ಫೈನಲ್‌ಗೆ ಪ್ರವೇಶ

ಅನೇಕ ಆಟಗಾರರು ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಐಪಿಎಲ್‌ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಮತ್ತೆ ಹಲವು ಪ್ರಮುಖ ಆಟಗಾರರು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು, ಹರಾಜಿನಲ್ಲಿ ಮಾರಾಟವಾಗುವುದು ಅನುಮಾನವಾಗಿದೆ. ಅಂತರ ಐವರು ಪ್ರಮುಖ ಆಟಗಾರರು ಇವರು.

ಉತ್ತಮ ಪ್ರದರ್ಶನ ನೀಡದ ಜೇಸನ್ ರಾಯ್

ಉತ್ತಮ ಪ್ರದರ್ಶನ ನೀಡದ ಜೇಸನ್ ರಾಯ್

ಇಂಗ್ಲೆಂಡ್‌ನ ಜೇಸನ್ ರಾಯ್ ಅಬುಧಾಬಿ ಟಿ10 2022 ರ ಚಾಂಪಿಯನ್ ತಂಡ ಡೆಕ್ಕನ್ ಗ್ಲಾಡಿಯೇಟರ್ಸ್ ಪರವಾಗಿ ಆಡಿದರು. ಇವರು ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಮಾತ್ರ ಆಡಿದರು, ನಾಲ್ಕು ಪಂದ್ಯಗಳಲ್ಲಿ ಇವರು 84 ರನ್ ಗಳಿಸಿದರು, ಅವರ ಸ್ಟ್ರೈಕ್‌ ರೇಟ್ 147.36 ಆಗಿತ್ತು. ಇದು ಕನಿಷ್ಠ 50 ರನ್ ಗಳಿಸಿದ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡದ ಇತರ ಆಟಗಾರರಿಗಿಂತ ಕಡಿಮೆ.

ಒಂದು ಅರ್ಧಶತಕ ಗಳಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಅವರಿಂದ ಯಾವುದೇ ಗಮನಾರ್ಹ ಪ್ರದರ್ಶನ ಬರಲಿಲ್ಲ. ಐಪಿಎಲ್ 2023ರ ಹರಾಜಿನಲ್ಲಿ ಅವರು 1.5 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದು, ಅವರನ್ನು ಖರೀದಿಸಲು ಫ್ರಾಂಚೈಸಿಗಳು ಆಸಕ್ತಿ ತೋರುವ ಸಾಧ್ಯತೆ ಇಲ್ಲ.

IND Vs BAN: 2ನೇ ಏಕದಿನ ಪಂದ್ಯದಲ್ಲಿ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲು ಮುಂದಾದ ಭಾರತ

ಗಮನ ಸೆಳೆಯದ ಚಮಿಕಾ ಕರುಣಾರತ್ನೆ

ಗಮನ ಸೆಳೆಯದ ಚಮಿಕಾ ಕರುಣಾರತ್ನೆ

ಚಾಮಿಕಾ ಕರುಣಾರತ್ನೆ ಅಬುಧಾಬಿ ಟಿ10 ಲೀಗ್ 2022 ರಲ್ಲಿ ಮೋರಿಸ್ವಿಲ್ಲೆ ಸ್ಯಾಂಪ್ ಆರ್ಮಿ ತಂಡದಲ್ಲಿ ಆಡಿದರು. ಶ್ರೀಲಂಕಾದ ಆಲ್ ರೌಂಡರ್ ಏಳು ಪಂದ್ಯಗಳನ್ನು ಆಡಿದರು, ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 30 ರನ್ ಗಳಿಸಿದ್ದಾರೆ.

8.1 ಓವರ್ ಬೌಲ್ ಮಾಡಿರುವ ಕರುಣಾರತ್ನೆ 11.75ರ ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟು ಕೇವಲ 3 ವಿಕೆಟ್ ಪಡೆದರು. 2022ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಅವರನ್ನು ಈ ಬಾರಿ ಬಿಡುಗಡೆ ಮಾಡಲಾಗಿದೆ. ಮಿನಿ ಹರಾಜಿನಲ್ಲಿ ಅವರನ್ನು ಫ್ರಾಂಚೈಸಿಗಳು ಖರೀದಿಸುವ ಸಾಧ್ಯತೆ ಕಡಿಮೆ.

ನಿರೀಕ್ಷಿತ ಪ್ರದರ್ಶನ ನೀಡದ ಕೆನ್ನಾರ್ ಲೆವಿಸ್

ನಿರೀಕ್ಷಿತ ಪ್ರದರ್ಶನ ನೀಡದ ಕೆನ್ನಾರ್ ಲೆವಿಸ್

ಟಿ10 ಲೀಗ್ 2022 ರಲ್ಲಿ ನಾರ್ದರ್ನ್ ವಾರಿಯರ್ಸ್ ತಂಡದ ಪರವಾಗಿ ಆಡಿದ್ದ ಕೆನ್ನಾರ್ ಲೆವಿಸ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಸ್ಫೋಟಕ ಆಟಗಾರ ಎನಿಸಿಕೊಂಡಿರುವ ಲೆವಿಸ್ ಟಿ10 ಲೀಗ್‌ನಲ್ಲಿ ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 41 ರನ್ ಗಳಿಸಿ ನಿರಾಸೆ ಮೂಡಿಸಿದ್ದಾರೆ. ಟಿ10 ಮಾದರಿಯಲ್ಲಿ ಅವರ ಸ್ಟ್ರೈಕ್‌ರೇಟ್ 110.81 ಸಾಕಷ್ಟು ಕೆಟ್ಟದಾಗಿದೆ.

ಅವರ ಇತ್ತೀಚಿನ ಫಾರ್ಮ್ ಅನ್ನು ಗಮನಿಸಿದರೆ ಯಾವುದೇ ತಂಡ ಕೂಡ ಅವರನ್ನು ಸೇರಿಸಿಕೊಳ್ಳಲು ಆಸಕ್ತಿ ತೋರುವುದಿಲ್ಲ.

ಕಾಲಿನ್ ಮುನ್ರೊ ಫ್ಲಾಪ್ ಶೋ

ಕಾಲಿನ್ ಮುನ್ರೊ ಫ್ಲಾಪ್ ಶೋ

ಬಾಂಗ್ಲಾ ಟೈಗರ್ಸ್ ನ್ಯೂಯಾರ್ಕ್ ಸ್ಟ್ರೈಕರ್ಸ್ ವಿರುದ್ಧ ಗೆಲುವಿನೊಂದಿಗೆ ತನ್ನ ಪಂದ್ಯಾವಳಿಯನ್ನು ಪ್ರಾರಂಭಿಸಿತು, ಆದರೆ ಅವರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ 4 ರಲ್ಲಿ ಸ್ಥಾನ ಪಡೆಯುವಲ್ಲಿ ಬಾಂಗ್ಲಾಟೈಗರ್ಸ್ ವಿಫಲವಾಯಿತು. ಬಾಂಗ್ಲಾಟೈಗರ್ಸ್‌ನ ಅನುಭವಿ ಆಟಗಾರ ಕಾಲಿನ್ ಮುನ್ರೋ ಪಂದ್ಯಾವಳಿಯಲ್ಲಿ ನಿರಾಶದಾಯಕ ಪ್ರದರ್ಶನ ನೀಡಿದರು.

ನ್ಯೂಜಿಲೆಂಡ್ ಆಟಗಾರ ಕಾಲಿನ್ ಮುನ್ರೋ 7 ಪಂದ್ಯಗಳಲ್ಲಿ 140 ಸ್ಟ್ರೈಕ್‌ ರೇಟ್‌ನಲ್ಲಿ 78 ರನ್ ಮಾತ್ರ ಗಳಿಸಿದರು. ಟಿ10 ಲೀಗ್‌ನಲ್ಲಿ ಅವರ ನಿರಾಶದಾಯಕ ಪ್ರದರ್ಶನ ಅವರನ್ನು ಐಪಿಎಲ್ ಹರಾಜಿನ ರೇಸ್‌ನಿಂದ ದೂರವಿಡಬಹುದು.

ನಿರೀಕ್ಷಿತ ಪ್ರದರ್ಶನ ನೀಡದ ಡೇವಿಡ್ ಮಲನ್

ನಿರೀಕ್ಷಿತ ಪ್ರದರ್ಶನ ನೀಡದ ಡೇವಿಡ್ ಮಲನ್

ಅಬುಧಾಬಿ ಟಿ10 ಲೀಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆರು ಪಂದ್ಯಗಳನ್ನಾಡಿದ ಅವರು 135.48 ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 84 ರನ್ ಮಾತ್ರ ಗಳಿಸಿದರು.

ಐಪಿಎಲ್ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ತಮ್ಮ ಮೂಲಬೆಲೆಯಲ್ಲಿ 1.5 ಕೋಟಿ ರುಪಾಯಿಗೆ ನಿಗದಿಪಡಿಸಿದ್ದಾರೆ. ಅವರು ಟಿ10 ಲೀಗ್‌ನಲ್ಲಿ ನೀಡಿದ ಪ್ರದರ್ಶನವನ್ನು ಎಲ್ಲಾ ಫ್ರಾಂಚೈಸಿಗಳು ಗಮನಿಸಿವೆ. ಯಾವುದೇ ಫ್ರಾಂಚೈಸಿ ಇಂಗ್ಲಿಷ್ ಆಟಗಾರನಿಗೆ ಮಣೆ ಹಾಕುವ ಸಾಧ್ಯತೆ ಇಲ್ಲ.

Story first published: Tuesday, December 6, 2022, 9:16 [IST]
Other articles published on Dec 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X