ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್ಸಿಬಿ ತಂಡಕ್ಕೆ ಆಶೀಷ್ ನೆಹ್ರಾ ಬಲ: ಈ ಸಾರಿ ಕಪ್ ಗೆಲ್ಲೋದು ಪಕ್ಕ!

IPL: Ashish Nehra joins Gary Kirsten in RCBs coaching leadership team

ಬೆಂಗಳೂರು, ಸೆಪ್ಟೆಂಬರ್ 5: ಐಪಿಎಲ್ 2019ರ ಸೀಸನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಎತ್ತಲೇಬೇಕನ್ನೋ ಪಣ ತೊಟ್ಟಂತಿದೆ. ಯಾಕೆಂದರೆ ಆರ್ಸಿಬಿ ಕೋಚಿಂಗ್ ಲೀಡರ್ ಶಿಪ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ವೇಗಿ ಆಶೀಷ್ ನೆಹ್ರಾ ಕೂಡ ಸೇರಿಕೊಂಡಿದ್ದು, ತಂಡ ಇನ್ನಷ್ಟು ಬಲಗೊಂಡಿದೆ. (ಚಿತ್ರ ಕೃಪೆ ಆರ್ಸಿಬಿ)

ಅನಧಿಕೃತ ಟೆಸ್ಟ್: ಭಾರತ 'ಎ' ವಿರುದ್ಧ ಆಸ್ಟ್ರೇಲಿಯಾ 'ಎ'ಗೆ 98 ರನ್ ಜಯಅನಧಿಕೃತ ಟೆಸ್ಟ್: ಭಾರತ 'ಎ' ವಿರುದ್ಧ ಆಸ್ಟ್ರೇಲಿಯಾ 'ಎ'ಗೆ 98 ರನ್ ಜಯ

ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ಗ್ಯಾರಿ ಕರ್ಸ್ಟನ್ ಅವರು ಆರ್ಸಿಬಿ ತಂಡಕ್ಕೆ ಇತ್ತೀಚೆಗಷ್ಟೇ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದರು. ನೆಹ್ರಾ ಈ ಮೊದಲೇ ಆರ್ಸಿಬಿ ತಂಡದ ಬೌಲಿಂಗ್ ಕೋಚ್ ಆಗಿ ಇದ್ದರಾದರೂ ಈಗಿನ ಬೆಳವಣಿಗೆಯಲ್ಲಿ ಅವರು ಆರ್ಸಿಬಿ ಕೋಚಿಂಗ್ ಲೀಡರ್ ಶಿಪ್ ತಂಡವನ್ನು ಸೇರಿಕೊಂಡಿರುವುದು ತಂಡದ ಬಗೆಗಿನ ನಿರೀಕ್ಷೆ ಹೆಚ್ಚಿಸಿದೆ.

ಯಶಸ್ವಿಯೆಡೆಗೆ ಮುನ್ನಡೆ

ಯಶಸ್ವಿಯೆಡೆಗೆ ಮುನ್ನಡೆ

'ಕಳೆದ ಐಪಿಎಲ್ ಸೀಸನ್ ನಲ್ಲೇ ನನಗೆ ಆರ್ಸಿಬಿ ತಂಡ ಸೇರಿಕೊಳ್ಳುವ ಅವಕಾಶ ಒದಗಿತ್ತು. ಈಗ ತಂಡದ ಮುಂದಾಳತ್ವ ವಹಿಸುವ ಜವಾಬ್ದಾರಿಯೂ ನನ್ನ ಹೆಗಲ ಮೇಲಿದೆ. ಇಂಥ ಅಪೂರ್ವ ಅವಕಾಶಕ್ಕಾಗಿ ನಾನು ಫ್ರಾಂಚೈಸಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಮುಂದಿನ ಸೀಸನ್ ನಲ್ಲಿ ತಂಡದ ಯಶಸ್ವಿ ನೆಲೆಯಲ್ಲಿ ನಾವೊಂದು ತಂಡವಾಗಿ ಶ್ರಮಿಸಲಿದ್ದೇವೆ' ಎಂದು ಆಶೀಷ್ ಹೇಳಿದ್ದಾರೆ.

ವಿಶ್ವಕಪ್ ಗೆದ್ದ ತಂಡದಲ್ಲಿ ನೆಹ್ರಾ

ವಿಶ್ವಕಪ್ ಗೆದ್ದ ತಂಡದಲ್ಲಿ ನೆಹ್ರಾ

ವಿಶ್ವಕಪ್ ಗೆದ್ದ ತಂಡಲ್ಲಿ ಪಾಲುದಾರನಾಗಿ ಕಾಣಿಸಿಕೊಳ್ಳಲು ಹೆಚ್ಚಿನ ಕ್ರಿಕೆಟ್ ಆಟಗಾರರ ಬಯಸುತ್ತಾರೆ. ನೆಹ್ರಾ ಅವರು ವಿಶ್ವಕಪ್ ಫೈನಲ್ ಭಾರತ ತಂಡದಲ್ಲಿ ಎರಡು ಬಾರಿ ಇದ್ದ ಸಾಧನೆ ಹೊಂದಿದ್ದಾರೆ. 2003 (ರನ್ನರ್ಸ್) ಮತ್ತು 2011ರ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ಆಶೀಷ್ ಇದ್ದರು.

ಪ್ರತಿಭಾನ್ವಿತ ಆಟಗಾರ

ಪ್ರತಿಭಾನ್ವಿತ ಆಟಗಾರ

ಪ್ರತಿಭಾನ್ವಿತ ಆಟಗಾರರಾಗಿ ಗುರುತಿಸಿಕೊಂಡಿದ್ದ ನೆಹ್ರಾ ಎಲ್ಲಾ ಮಾದರಿಯ ಕ್ರಿಕೆಟ್ ನ ಅನುಭವ ಹೊಂದಿದ್ದಾರೆ. ಎರಡು ಬಾರಿ ವಿಶ್ವ ಕಪ್ ಫೈನಲ್ ತಂಡದಲ್ಲಿ ಇರುವುದರ ಜೊತೆಗೆ ಎರಡು ಏಷ್ಯ ಕಪ್, ಮೂರು ಐಸಿಸಿ ಚಾಂಪಿಯನ್ಸ್ ಟ್ರೋಫಿಗಳಲ್ಲಿ ಆಡಿರುವ ಅನುಭವ ನೆಹ್ರಾಗಿದೆ.

ಕಪ್ ಗೆಲ್ಲೋದು ಪಕ್ಕ

ಕಪ್ ಗೆಲ್ಲೋದು ಪಕ್ಕ

ಐಪಿಎಲ್ 2018ರ ಸೀಸನ್ ನಲ್ಲಿ ಬೆಂಗಳೂರು ತಂಡವನ್ನು ಹುರಿದುಂಬಿಸುವ ಸಲುವಾಗಿ 'ಈ ಸಲ ಕಪ್ ನಮ್ದೇ' ಸಾಲು ಭರ್ಜರಿಯಾಗಿ ಕೇಳಿಬಂದಿತ್ತು, ಹರಿದಾಡಿತ್ತು. ಆದರೆ ಆರ್ಸಿಬಿ ಸಾಲು ಸಾಲಾಗಿ ಸೋತು ಕಳಪೆ ಬ್ಯಾಟಿಂಗ್ ಗೆ ಸಾಕ್ಷಿಯಾಗುವ ಮೂಲಕ ಕಪ್ ಅಂದರೆ ಕನ್ನಡಿಗರ ಪಿತ್ತ ನೆತ್ತಿಗೇರುವಂತಾಗಿತ್ತು. ಈ ಸೀಸನ್ ನಲ್ಲಿ ಆರ್ಸಿಬಿ ಕೋಚಿಂಗ್ ಟೀಮ್ ಸಾಕಷ್ಟು ಬಲಗೊಂಡಿದ್ದು, ಕಪ್ ಗೆಲ್ಲುವ ನೆಲೆಯಲ್ಲಿ ತಂಡ ತಯಾರಾಗುವುದರಲ್ಲಿ ಅನುಮಾನವಿಲ್ಲ.

Story first published: Wednesday, September 5, 2018, 17:58 [IST]
Other articles published on Sep 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X