ಐಪಿಎಲ್ 2018ರ ಹರಾಜಿಗೂ ನಿಮಗೆ ಗೊತ್ತಿರಬೇಕಾದ ಸಂಗತಿಗಳು

ಬೆಂಗಳೂರು, ಜನವರಿ 24: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರ ಹರಾಜು ಪ್ರಕ್ರಿಯೆ ಜನವರಿ 27, 28ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಮೈಖೇಲ್ ವೆಬ್ ಸೈಟಿನಲ್ಲಿ ಈ ಬಗ್ಗೆ ಲೈವ್ ಅಪ್ಡೇಟ್ಸ್ ಪಡೆಯಿರಿ.
ಸ್ಟಾರ್ ಆಟಗಾರರಾದ ಎಂಎಸ್ ಧೋನಿ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಅವರು ಮತ್ತೊಮ್ಮೆ ತಮ್ಮ ತಮ್ಮ ತಂಡಗಳಲ್ಲೇ ಉಳಿಸಿಕೊಂಡಿದ್ದಾರೆ. ಆದರೆ, ಗೌತಮ್ ಗಂಭೀರ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಕೈಬಿಡಲಾಗಿದೆ. ಅವರು ಮತ್ತೊಮ್ಮೆ ಹರಾಜಿನಲ್ಲಿ ಭಾಗವಹಿಸಿ ಆಯ್ಕೆಯಾಗಬಹುದಾಗಿದೆ.
ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ತುತ್ತಾಗಿ ಎರಡು ವರ್ಷಗಳ ಕಾಲ ಐಪಿಎಲ್ ನಿಂದ ಹೊರಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಮತ್ತೊಮ್ಮೆ ಐಪಿಎಲ್ ಕಣಕ್ಕಿಳಿಯಲಿವೆ. ಐಪಿಎಲ್ 11ನೇ ಆವೃತ್ತಿಯು ಏಪ್ರಿಲ್ 7 ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಮೇ.27 ರಂದು ನಡೆಯಲಿದೆ.
ಹರಾಜಿನ ಲೆಕ್ಕಾಚಾರ
ಫ್ರಾಂಚೈಸಿಗಳು: 8
ಒಟ್ಟು ನಗದು ಮೊತ್ತ : 422.5 ಕೋಟಿ ರು
ಒಟ್ಟಾರೆ ಅಟಗಾರರ ಗಳಿಕೆ : ಗರಿಷ್ಟ 182 ಮಂದಿ
ಹರಾಜಿನಲ್ಲಿ : 578
ಭಾರತೀಯ ಆಟಗಾರರು : 360
ಹರಾಜು ಪ್ರಕ್ರಿಯೆ ಸ್ಥಳ : ಐಟಿಸಿ ರಾಯಲ್ ಗಾರ್ಡೆನಿಯಾ, ಬೆಂಗಳೂರು
ಹರಾಜು ಹಾಕುವವರು : ರಿಚರ್ಡ್ ಮಡ್ಲೆ
ತಂಡಗಳ ಆರ್ಥಿಕ ಸ್ಥಿತಿ
ರಾಜಸ್ಥಾನ್ ರಾಯಲ್ಸ್ : 67.5 ಕೋಟಿ ರು
ಕಿಂಗ್ಸ್ ಎಲೆವನ್ ಪಂಜಾಬ್ : 67.5 ಕೋಟಿ ರು
ಸನ್ ರೈಸರ್ಸ್ ಹೈದರಾಬಾದ್ : 59 ಕೋಟಿ ರು
ಕೋಲ್ಕತಾ ನೈಟ್ ರೈಡರ್ಸ್ : 59 ಕೋಟಿ ರು
ರಾಯಲ್ ಚಾಲೆಂಜರ್ಸ್ ಬೆಂಗಳೂರು : 49 ಕೋಟಿ ರು
ಚೆನ್ನೈ ಸೂಪರ್ ಕಿಂಗ್ಸ್ : 47 ಕೋಟಿ ರು
ಡೆಲ್ಲಿ ಡೇರ್ ಡೆವಿಲ್ಸ್ : 47 ಕೋಟಿ ರು
ಮುಂಬೈ ಇಂಡಿಯನ್ಸ್ : 47 ಕೋಟಿ ರು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications