ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜು; ಹರಾಜಿಗೂ ಮುನ್ನ ನೀವು ತಿಳಿದಿರಲೇಬೇಕಾದ ಅಂಶಗಳು

ಬಹು ನಿರೀಕ್ಷಿತ ಐಪಿಎಲ್ ಹರಾಜು ಪ್ರಕ್ರಿಯೆ ನಾಳೆ(ಡಿಸೆಂಬರ್ 19) ನಡೆಯಲಿದೆ. ಇದಕ್ಕೆ ಈಗಾಗಲೆ ಅಂತಿಮ ಸಿದ್ಧತೆಗಳು ಕೂಡ ಆಗಿದೆ. 8 ತಂಡಗಳು ಕೂಡ ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದು ತಮಗಿರುವ ಸೀಮಿತ ಮೊತ್ತದಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ರಣತಂತ್ರವನ್ನು ಹೆಣೆದಿದ್ದಾರೆ.

ಕೊಲ್ಕತ್ತಾದಲ್ಲಿ ಈ ಬಾರಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೆ ಹರಾಜು ಪ್ರಕ್ರಿಯೆಗಾಗಿ ಫ್ರಾಂಚೈಸಿಗಳ ಪ್ರತಿನಿಧಿಗಳು ಕೊಲ್ಕತ್ತಾ ತಲುಪಿದ್ದಾರೆ. ಕೊಲ್ಕತ್ತಾದಲ್ಲಿ ಇದೇ ಮೊದಲ ಬಾರಿಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಐಪಿಎಲ್ ನ 8 ತಂಡಗಳಲ್ಲಿ 73 ಸ್ಥಾನಗಳು ಮಾತ್ರವೇ ಬಾಕಿ ಉಳಿದಿದ್ದು ಆರಂಭದಲ್ಲಿ ಈ ಸ್ಥಾನಕ್ಕಾಗಿ 971 ಆಟಗಾರರು ಪೈಪೋಟಿಗಿಳಿದಿದ್ದರು. ಪಟ್ಟಿ ಈಗ ಪರಿಷ್ಕೃತವಾಗಿದ್ದು 332 ಆಟಗಾರರು ಮಧ್ಯೆ ಪೈಪೋಟಿ ನಡೆಯಲಿದೆ.

ಪಂಜಾಬ್ ಮತ್ತು ಕೆಕೆಆರ್ ತಂಡಗಳು ಹೆಚ್ಚಿನ ಮೊತ್ತವನ್ನು ಹೊಂದಿದ್ದು ನಾಳಿನ ಹರಾಜಿನಲ್ಲಿ ಹೆಚ್ಚು ಆಟಗಾರರನ್ನು ಖರೀದಿ ಮಾಡಲಿದ್ದಾರೆ. ಚೆನ್ನೈ ಹಾಗೂ ಮುಂಬೈ ಕಡಿಮೆ ಮೊತ್ತವನ್ನು ಉಳಿಸಿಕೊಂಡಿರುವ ತಂಡಗಳಾಗಿವೆ.

ಹರಾಜಾಗಲಿರುವ ಆಟಗಾರರ ಅಂಕಿಅಂಶ

ಹರಾಜಾಗಲಿರುವ ಆಟಗಾರರ ಅಂಕಿಅಂಶ

ಹರಾಜು ಪ್ರಕ್ರಿಯೆಯಲ್ಲಿ ಅಂತಿಮವಾಗಿ 332 ಆಟಗಾರರು ಉಳಿದುಕೊಂಡಿದ್ದಾರೆ. ಇದರಲ್ಲಿ 143 ವಿದೇಶಿ ಆಟಗಾರರಾಗಿದ್ದಾರೆ. ಜೊತೆಗೆ ಮೂರು ಅಸೋಸಿಯೇಟ್ ರಾಷ್ಟ್ರಗಳ ಆಟಗಾರರು ಹರಾಜಿನಲ್ಲಿ ಭಾಗಿಯಾಗಲಿದ್ದಾರೆ. ಆರಂಭದಲ್ಲಿ 971 ಆಟಗಾರರು ಹರಾಜು ಪ್ರಕ್ರಿಯೆಯಲ್ಲಿದ್ದರು ಬಳಿಕ 8 ಫ್ರಾಂಚೈಸಿಗಳು ಖರೀದಿಗೆ ಆಸಕ್ತಿ ಹೊಂದಿರುವ ಪಟ್ಟಿಯನ್ನು ಕೊಟ್ಟ ಬಳಿಕ ಈ ಪಟ್ಟಿಯಲ್ಲಿ 332 ಆಟಗಾರರು ಉಳಿದುಕೊಂಡಿದ್ದಾರೆ.

ತಂಡಗಳು ಹೊಂದಿರುವ ಮೊತ್ತ;

ತಂಡಗಳು ಹೊಂದಿರುವ ಮೊತ್ತ;

ಎಂಟು ತಂಡಗಳು ಒಟ್ಟಾರೆಯಾಗಿ 207.65 ಕೋಟಿ ಮೊತ್ತವನ್ನು ಹೊಂದಿದೆ. 332 ಆಟಗಾರರಿಂದ ಉತ್ತಮ, ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. 7 ಆಟಗಾರರು ಗರಿಷ್ಠ 2 ಕೋಟಿ ಮೂಲ ಬೆಲೆಯನ್ನು ಹೊಂದಿದ್ದಾರೆ. ಅದರೆ ಯಾವುದೇ ಭಾರತೀಯ ಕ್ರಿಕೆಟಿಗರು ಕೂಡ ಎರಡು ಕೋಟಿ ಮೂಲ ಬೆಲೆಯನ್ನು ಹೊಂದಿಲ್ಲ. 1.5 ಕೋಟಿ ಬೆಲೆಯನ್ನು ಹೊಂದಿರುವ ರಾಬಿನ್ ಉತ್ತಪ್ಪ ಅತಿಹೆಚ್ಚು ಮೂಲ ಬೆಲೆಯನ್ನು ಹೊಂದಿರುವ ಆಟಗಾರರಾಗಿದ್ದಾರೆ. ಒಟ್ಟು 19 ಟೀಮ್ ಇಂಡಿಯಾ ಪ್ರತಿನಿಧಿಸಿರುವ ಆಟಗಾರರು ತಮ್ಮ ಭವಿಷ್ಯ ಕಂಡುಕೊಳ್ಳಲಿದ್ದಾರೆ.

ಅತಿ ಹೆಚ್ಚು ಮತ್ತು ಅತಿ ಕಡಿಮೆ ಬಜೆಟ್

ಅತಿ ಹೆಚ್ಚು ಮತ್ತು ಅತಿ ಕಡಿಮೆ ಬಜೆಟ್

42. 70 ಕೋಟಿ ಮೊತ್ತವನ್ನುಕಿಂಗ್ಸ್ ಇಲೆವೆನ್ ಪಂಜಾಬ್ ತನ್ನ ಬಳಿಯಿರಿಸಿಕೊಂಡಿದ್ದು ಅತಿ ಹೆಚ್ಚು ಬಜೆಟ್ ಹೊಂದಿರುವ ತಂಡವಾಗಿದೆ. ಹಾಲಿ ಚಾಂಪಿಯನ್ನರಾಗಿರುವ ಮುಂಬೈ ಇಂಡಿಯನ್ಸ್ ತಂಡ ಅತಿ ಕಡೆಮೆ ಬಜೆಟ್ ಹೊಂದಿರು ತಂಡವಾಗಿದೆ. ಮುಂಬೈ ಇಂಡಿಯನ್ಸ್‌ನಲ್ಲಿ ಕೇವಲ 13.05 ಕೋಟಿ ಬಜೆಟ್ ಹೊಂದಿದೆ.

ಅತಿ ಹೆಚ್ಚಿನ ಬೇಡಿಕೆಹೊಂದಿರುವ ಆಟಗಾರರು;

ಅತಿ ಹೆಚ್ಚಿನ ಬೇಡಿಕೆಹೊಂದಿರುವ ಆಟಗಾರರು;

ಕ್ರಿಸ್ ಲೇನ್, ಪ್ಯಾಟ್ ಕಮಿನ್ಸ್ ಇಯಾನ್ ಮಾರ್ಗನ್, ಜೇಸನ್ ರಾಯ್, ಬ್ರ್ಯಾಂಡನ್ ಕಿಂಗ್, ಶಿಮ್ರಾನ್ ಹೇಟ್ಮೆರ್, ಲೆಂಡ್ಲ್ ಸಿಮನ್ಸ್, ಎವಿನ್ ಲಿವಿಸ್, ನೂರ್ ಅಹ್ಮದ್ ಲಖನ್ವಾಲ್ ಇವರೆಲ್ಲಾ ಹೆಚ್ಚಿನ ಬೇಡಿಕೆ ಹೊಂದಿರುವ ಆಟಗಾರರಾಗಿದ್ದಾರೆ. ದೇಸಿ ಆಟಗಾರರ ಪೈಕಿ ಯಶಸ್ವಇ ಜೈಸ್ವಾಲ್, ಸಾಯಿ ಕಿಶೋರ್, ರೋಹನ್ ಕದಂ,, ಪ್ರಿಯಂ ಗಾರ್ಗ್, ಜಿ ಪೆರಿಯಸ್ವಾಮಿ ಹರಾಜು ಕೇಂದ್ರದಲ್ಲಿ ಸಂಚಲನ ಮೂಡಿಸಿರುವ ಆಟಗಾರರಾಗಿದ್ದಾರೆ.

ನೇರಪ್ರಸಾರ:

ನೇರಪ್ರಸಾರ:

13ನೇ ಆವೃತ್ತಿಯ ಐಪಿಎಲ್‌ಗಾಗಿ ನಡೆಯುತ್ತಿರುವ ಹರಾಜುಪ್ರಕ್ರಿಯೆ ಇದಾಗಿದೆ. ಇದೇ ಮೊದಲ ಬಾರಿಗೆ ಕೊಲ್ಕತ್ತಾ ನಗರದಲ್ಲಿ ಈ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಮಧ್ಯಾಹ್ನ 3.30ರ ವೇಳೆಗೆ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್‌ ನೆಟ್‌ವರ್ಕ್‌ನಲ್ಲಿ ಹರಾಜು ಪ್ರಕ್ರಿಯೆ ನೇರಪ್ರಸಾರವಾಗಲಿದೆ. ಮಾತ್ರವಲ್ಲದೆ ಹಾಟ್‌ಸ್ಟಾರ್‌ನಲ್ಲೂ ನೇರಪ್ರಸಾರದಲ್ಲಿ ನೀವು ವೀಕ್ಷಣೆ ಮಾಡಬಹುದಾಗಿದೆ. ಮೈಖೇಲ್ ತಂಡವೂ ಕೂಡ ಈ ಹರಾಜು ಪ್ರಕ್ರಿಯೆಯ ಕ್ಷಣಕ್ಷಣದ ಮಾಹಿತಿಯನ್ನು ನಿಮಗೆ ನೀಡಲಿದೆ.

Story first published: Thursday, December 19, 2019, 10:43 [IST]
Other articles published on Dec 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X