
ಮುಂಬೈ, ಮೇ 27: ಐಪಿಎಲ್ 11ನೇ ಆವೃತ್ತಿ ಅಂತ್ಯಗೊಳ್ಳುವುದರಲ್ಲಿದೆ. ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಹಣಾಹಣಿಯೊಂದಿಗೆ ಈ ಐಪಿಎಲ್ ಸೀಸನ್ ಗೆ ತೆರೆ ಬೀಳಲಿದೆ. ಆದರೆ ಅಂತಿಮ ಪಂದ್ಯ ಕಾವೇರಿಸಿದೆ.
(ಲೈವ್ ರನ್ ವಿವರಗಳಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ)
ಧೋನಿ ನಾಯಕತ್ವದ ಚೆನ್ನೈ ಆರಂಭದಿಂದಲೂ ಮುನ್ನಡೆ ಸಾಧಿಸುತ್ತಾ ಬಂದಿತ್ತು. ಐಪಿಎಲ್ ಆರಂಭಿಕ ಪಂದ್ಯದಲ್ಲಿ ಚೆನ್ನೈ ತಂಡ ಹಾಲಿ ಚಾಂಪಿಯನ್ಸ್ ಮುಂಬೈ ಎದುರು 1 ವಿಕೆಟ್ ಗೆಲುವು ದಾಖಲಿಸುವುದರೊಂದಿಗೆ ಉದ್ದಕ್ಕೂ ಜಾಣ ಆಟ ಪ್ರದರ್ಶಿಸಿ ಮೊದಲು ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿತ್ತು.
ಹೈದರಾಬಾದ್ ಏಳು ಬೀಳಿನ ನಡುವೆಯೂ ಪ್ರಶಸ್ತಿ ಸುತ್ತಿಗೆ ಪ್ರವೇಶಿಸುವ ಮೂಲಕ ಬಲಿಷ್ಟ ತಂಡವೆನ್ನುವುದನ್ನು ಸಾಭೀತುಪಡಿಸಿದೆ. ಕ್ವಾಲಿಫೈಯರ್2ರಲ್ಲಿ ರಶೀದ್ ಖಾನ್ ಅವರ ಆಲ್ ರೌಂಡರ್ ಅಟದಿಂದಾಗಿ ಹೈದರಾಬಾದ್ ಕೋಲ್ಕತ್ತಾ ವಿರುದ್ಧ ಗೆಲುವು ದಾಖಲಿಸಿ ಫೈನಲ್ ಪ್ರವೇಶಿತ್ತು. ಅಂತಿಮ ಪಂದ್ಯದಲ್ಲಿ ಗೆಲುವು ಹೈದರಾಬಾದ್ ನದ್ದೋ ಇಲ್ಲ ಚೆನ್ನೈದೋ ಎಂಬ ಕುತೂಹಲ ಮಾಡಿಸಿದೆ.
ತಂಡದ ಬಲಾಬಲಗಳ ಲೆಕ್ಕಾಚಾರದಲ್ಲಿ ಇಂದು ಚೆನ್ನೈ ಗೆಲ್ಲುವ ತಂಡವಾಗಿ ಕಂಡರೂ ಹೈದರಾಬಾದ್ ಸುಲಭವಾಗಿ ಟ್ರೋಫಿ ಬಿಟ್ಟುಕೊಡಲಾರದು. ಚೆನ್ನೈ ಈಗಾಗಲೇ ಐಪಿಎಲ್ ನಲ್ಲಿ ಎರಡುಬಾರಿ ಚಾಂಪಿಯನ್ ಆಗಿ ಮೂಡಿಬಂದಿದ್ದು ಇಂದು ಗೆದ್ದರೆ ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಹೈದರಾಬಾದ್ ಗೆದ್ದರೆ ಅದಕ್ಕೆ ಎರಡನೇ ಟ್ರೋಫಿ ಸಂಭ್ರಮ.