Breaking: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಐರ್ಲೆಂಡ್‌ನ ಕೆವಿನ್ ಓ’ಬ್ರಿಯನ್

ಐರ್ಲೆಂಡ್‌ನ ಆಲ್‌ರೌಂಡರ್ ಕೆವಿನ್ ಒ'ಬ್ರಿಯನ್ ಅವರು ಮಂಗಳವಾರ, ಆಗಸ್ಟ್ 16ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 38 ವರ್ಷ ವಯಸ್ಸಿನ ಓ'ಬ್ರಿಯನ್ ಜೂನ್ 2006ರಲ್ಲಿ ಪ್ರಾರಂಭವಾದ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದರು.

ಒ'ಬ್ರಿಯನ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಷಯ ಹಂಚಿಕೊಂಡಿದ್ದು, ಐರ್ಲೆಂಡ್‌ ಪರವಾದ ಉನ್ನತ ಮಟ್ಟದ ಕ್ರಿಕೆಟ್‌ನಿಂದ ನಿವೃತ್ತಿ ತೆಗೆದುಕೊಳ್ಳುವ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿದರು.

ಏಷ್ಯಾ ಕಪ್ 2022: ದೊಡ್ಡ ದಾಖಲೆಯ ಮೇಲೆ ಕಣ್ಣಿಟ್ಟ ರವೀಂದ್ರ ಜಡೇಜಾ, ಶಕೀಬ್ ಅಲ್ ಹಸನ್ಏಷ್ಯಾ ಕಪ್ 2022: ದೊಡ್ಡ ದಾಖಲೆಯ ಮೇಲೆ ಕಣ್ಣಿಟ್ಟ ರವೀಂದ್ರ ಜಡೇಜಾ, ಶಕೀಬ್ ಅಲ್ ಹಸನ್

ಐರ್ಲೆಂಡ್ ತಂಡವು ಪಾಕಿಸ್ತಾನವನ್ನು ಸೋಲಿಸಿದ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ 2007ರ ವಿಶ್ವಕಪ್‌ನ ಎರಡನೇ ಸುತ್ತಿಗೆ ಮುನ್ನಡೆದ ಐತಿಹಾಸಿಕ ಪಂದ್ಯದ ಭಾಗವಾಗಿ ಕೆವಿನ್ ಓ'ಬ್ರಿಯನ್ ಇದ್ದರು.

ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಓ'ಬ್ರಿಯನ್ 63 ಎಸೆತಗಳಲ್ಲಿ 113 ರನ್

ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಓ'ಬ್ರಿಯನ್ 63 ಎಸೆತಗಳಲ್ಲಿ 113 ರನ್

ಅದರ ನಂತರ ಕೆವಿನ್ ಓ'ಬ್ರಿಯನ್ ಅವರು 2011ರ ವಿಶ್ವಕಪ್‌ನಲ್ಲಿ ಐರಿಶ್ ತಂಡದ ಪರವಾಗಿ ಅತ್ಯುತ್ತಮ ಪ್ರದರ್ಶನವನ್ನು ಆಡಿದರು. ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಓ'ಬ್ರಿಯನ್ 63 ಎಸೆತಗಳಲ್ಲಿ 113 ರನ್ ಗಳಿಸಿದರು, ಐರ್ಲೆಂಡ್ 328 ರನ್ ಬೆನ್ನಟ್ಟಲು ಸಹಾಯ ಮಾಡಿದರು ಮತ್ತು ಇಂಗ್ಲೆಂಡ್ ತಂಡವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿದರು.

50 ಓವರ್‌ಗಳ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ನಾಲ್ವರು ಐರ್ಲೆಂಡ್ ಬ್ಯಾಟರ್‌ಗಳಲ್ಲಿ ಬಲಗೈ ಆಟಗಾರ ಕೆವಿನ್ ಓ'ಬ್ರಿಯನ್ ಒಬ್ಬರು. ಇತರ ಮೂವರು ವಿಲಿಯಂ ಪೋರ್ಟರ್‌ಫೀಲ್ಡ್, ಎಡ್ ಜಾಯ್ಸ್ ಮತ್ತು ಪಾಲ್ ಸ್ಟಿರ್ಲಿಂಗ್. 2018ರ ಡಬ್ಲಿನ್‌ನಲ್ಲಿ ಪಾಕಿಸ್ತಾನದ ವಿರುದ್ಧ ಐರ್ಲೆಂಡ್‌ನ ಮೊದಲ ಟೆಸ್ಟ್ ಪಂದ್ಯದ ಭಾಗವಾಗಿ ಒ'ಬ್ರಿಯಾನ್ ಕೂಡ ಇದ್ದರು.

2021ರ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಟಿ20 ಪಂದ್ಯ

2021ರ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಟಿ20 ಪಂದ್ಯ

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ 2021ರ ಟಿ20 ವಿಶ್ವಕಪ್‌ನಲ್ಲಿ ನಮೀಬಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಅನುಭವಿ ಕೊನೆಯದಾಗಿ ರಾಷ್ಟ್ರೀಯ ಜೆರ್ಸಿಯನ್ನು ಧರಿಸಿದ್ದರು. 2019ರಲ್ಲಿ ಕೆವಿನ್ ಓ'ಬ್ರಿಯನ್ ಲಂಡನ್‌ನ ಐಕಾನಿಕ್ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನೂ ಆಡಿದ್ದರು.

ಕೆವಿನ್ ಓ'ಬ್ರಿಯನ್ ಈವರೆಗೆ ಮೂರು ಟೆಸ್ಟ್‌ಗಳು, 153 ಏಕದಿನ ಪಂದ್ಯಗಳು ಮತ್ತು 110 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಓ'ಬ್ರಿಯಾನ್ ನಾಲ್ಕು ಶತಕಗಳು ಮತ್ತು 24 ಅರ್ಧ ಶತಕಗಳ ಸಹಾಯದಿಂದ ಕ್ರಮವಾಗಿ 258, 3619 ಮತ್ತು 1973 ರನ್ ಗಳಿಸಿದ್ದಾರೆ.

ಮಧ್ಯಮ ವೇಗದ ಬೌಲರ್ ಕೂಡ ಆಗಿದ್ದರು

ಮಧ್ಯಮ ವೇಗದ ಬೌಲರ್ ಕೂಡ ಆಗಿದ್ದರು

ಕೆವಿನ್ ಓ'ಬ್ರಿಯನ್ ಬ್ಯಾಟಿಂಗ್ ಪರಾಕ್ರಮದ ಹೊರತಾಗಿ, ಓ'ಬ್ರಿಯಾನ್ ಸೂಕ್ತ ಮಧ್ಯಮ ವೇಗದ ಬೌಲರ್ ಕೂಡ ಆಗಿದ್ದರು. ಅವರು ತಮ್ಮ ಆಲ್‌ರೌಂಡ್ ಪ್ರದರ್ಶನ ತೋರಿಸಲು ಆರು ಬಾರಿ ನಾಲ್ಕು ವಿಕೆಟ್‌ಗಳೊಂದಿಗೆ 172 ವಿಕೆಟ್‌ಗಳನ್ನು ಪಡೆದರು.

ಐರ್ಲೆಂಡ್ ತಂಡದ ಪಾಲ್ ಸ್ಟಿರ್ಲಿಂಗ್ ಮತ್ತು ವಿಲಿಯಂ ಪೋರ್ಟರ್‌ಫೀಲ್ಡ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐರ್ಲೆಂಡ್‌ನ ಪರ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೆವಿನ್ ಓ'ಬ್ರಿಯನ್ ಆಗಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 16, 2022, 16:25 [IST]
Other articles published on Aug 16, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X