For Quick Alerts
ALLOW NOTIFICATIONS  
For Daily Alerts
 

ಚೂಯಿಂಗ್ ಗಮ್‌ ತಿನ್ನಲು ಅನುಮತಿಯಿದೆಯೇ: ಡುಪ್ಲೆಸಿಸ್ ಪ್ರಶ್ನೆ

Is chewing gum allowed? i need clarity: du plessis

ಜೊಹಾನ್ಸ್ ಬರ್ಗ್, ಜುಲೈ 7: ಚೆಂಡು ವಿರೂಪಗೊಳಿಸುವ ಪ್ರಕರಣಗಳಿಗೆ ವಿಧಿಸುವ ಶಿಕ್ಷೆಯನ್ನು ಕಠಿಣಗೊಳಿಸುವ ನಿರ್ಧಾರವನ್ನು ಸ್ವಾಗತಿಸಿರುವ ದಕ್ಷಿಣ ಆಫ್ರಿಕಾದ ನಾಯಕ ಫಾಫ್ ಡುಪ್ಲೆಸಿಸ್, 'ಚೆಂಡು ವಿರೂಪದ' ಕುರಿತ ವ್ಯಾಖ್ಯಾನಗಳು ತಮ್ಮನ್ನು ಗೊಂದಲಕ್ಕೆ ನೂಕಿವೆ ಎಂದು ವ್ಯಂಗ್ಯವಾಡಿದ್ದಾರೆ.

ಚೆಂಡು ವಿರೂಪಗೊಳಿಸುವ ಪ್ರಕರಣ ಎಂಬುದನ್ನು ಗುರುತಿಸುವ ಮೊದಲು ಮೈದಾನದೊಳಗೆ ಚೂಯಿಂಗ್ ಗಮ್ ಜಗಿಯಲು ಅನುಮತಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಿ ಎಂದು ಖಾರವಾಗಿ ಹೇಳಿದ್ದಾರೆ.

ಐಸಿಸಿ ದಂಡಗಳ ಜತೆಗೆ ಶಿಕ್ಷೆಯನ್ನು ಕಠಿಣಗೊಳಿಸಿದೆ. ಆದರೆ ಬಾಯಿಯೊಳಗೆ ಮಿಂಟ್‌ ಹಾಕಿಕೊಳ್ಳುವುದಕ್ಕೆ ಅವಕಾಶ ಇದೆಯೇ ಎಂದೇ ಹೇಳಿಲ್ಲ. ನಿಮ್ಮ ಬಾಯಲ್ಲಿ ಏನನ್ನಾದರೂ ಹಾಕಿಕೊಂಡು ಅದರಿಂದ ಚೆಂಡಿಗೆ ಹೊಳಪು ನೀಡಿದರೆ ತಪ್ಪೇನಿಲ್ಲ ಎನ್ನುವುದು ನನ್ನ ಅಭಿಪ್ರಾಯ.

ಈ ವಿಚಾರದಲ್ಲಿ ನನಗೆ ಸ್ಪಷ್ಟತೆ ಬೇಕು. ಇದಕ್ಕಾಗಿ ಪ್ರತಿ ಪಂದ್ಯಕ್ಕೂ ಮುನ್ನ ಅಂಪೈರ್ ಬಳಿ ತೆರಳಿ ಚೂಯಿಂಗ್ ಗಮ್ ಜಗಿಯಬಹುದೇ ಎಂದು ಕೇಳುತ್ತೇನೆ. ದಿನೇಶ್ ಚಂಡಿಮಾಲ್ ಕೂಡ ಇದನ್ನು ಕೇಳುತ್ತಾರೆ ಎಂದು ನನಗೆ ಖಾತರಿಯಿದೆ ಎಂದು ಡುಪ್ಲೆಸಿಸ್ ಹೇಳಿದ್ದಾರೆ.

ಡು ಪ್ಲೆಸಿಸ್ ಅವರು ಚೆಂಡು ವಿರೂಪ ಪ್ರಕರಣದಲ್ಲಿ ಎರಡು ಬಾರಿ ಶಿಕ್ಷೆಗೆ ಒಳಗಾಗಿದ್ದಾರೆ. ಬಾಯಲ್ಲಿನ ಸಿಹಿಯಾದ ಪದಾರ್ಥವನ್ನು ಚೆಂಡಿಗೆ ಅಂಟಿಸಿ ವಿರೂಪಗೊಳಿಸಲು ಅವರು ಪ್ರಯತ್ನಿಸಿದ್ದರು ಎಂಬುದಾಗಿ ಆರೋಪಿಸಲಾಗಿತ್ತು.

ಆದರೆ, ಡುಪ್ಲೆಸಿಸ್ ಈ ಆರೋಪವನ್ನು ನಿರಾಕರಿಸಿದ್ದರು. ಚೂಯಿಂಗ್ ಗಮ್ ಅಗಿಯುವ ತಾವು ಸಹಜವಾಗಿಯೇ ಎಂಜಲನ್ನು ಚೆಂಡಿಗೆ ತಾಗಿಸಿ ತಿಕ್ಕಿದ್ದಾಗಿ ವಾದಿಸಿದ್ದರು.

Story first published: Saturday, July 7, 2018, 17:29 [IST]
Other articles published on Jul 7, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+