ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ನೀಡಿದ ಸಲಹೆಯಿಂದ ನೆನಪುಳಿವ ದಾಖಲೆ ಬರೆದ ಇಶಾನ್ ಕಿಶನ್!

Ishan Kishan Remembered Virat Kohlis Advice When He Faced His First Ball In International Cricket

ಇಶಾನ್ ಕಿಶನ್ ಭಾರತದ ಭರವಸೆಯ ಯುವ ಕ್ರಿಕೆಟಿಗರಲ್ಲೊಬ್ಬರು. ಕಿರಿಯ ವಯಸ್ಸಿನಲ್ಲೇ ಭಾರತ ಕ್ರಿಕೆಟ್ ತಂಡದ ಜರ್ಸಿ ತೊಟ್ಟ ಇಶಾನ್ ಕಿಶನ್ ಅದಕ್ಕಾಗಿ ಪಟ್ಟ ಶ್ರಮ ಅಗಣಿತ.

ದೇಸಿ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದಾಗಿ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆ ಆದ ಇಶಾನ್ ಕಿಶನ್ ತಮ್ಮ ಮೊದಲ ಪಂದ್ಯ ಆಡಿದ್ದು 2021 ರ ಮಾರ್ಚ್ 14ರಂದು ಇಂಗ್ಲೆಂಡ್ ವಿರುದ್ಧ. ತಮ್ಮ ಮೊದಲ ಪಂದ್ಯದಲ್ಲಿಯೇ ಒಂದು ಅಪರೂಪದ ದಾಖಲೆಯನ್ನು ಸಹ ಇಶಾನ್ ಕಿಶನ್ ಬರೆದರು.

ಭಾರತ ತಂಡಕ್ಕಾಗಿ ತಾವಾಡಿದ ಮೊದಲ ಪಂದ್ಯದ ಮೊದಲ ಚೆಂಡಿನಲ್ಲಿಯೇ ಬೌಂಡರಿ ಭಾರಿಸಿದರು ಇಶಾನ್ ಕಿಶನ್, ಈ ದಾಖಲೆ ಬರೆದ ಕೆಲವರಲ್ಲಿ ಒಬ್ಬರೆನಿಸಿಕೊಂಡರು. ಆದರೆ ಈ ದಾಖಲೆ ಆಗಲು ವಿರಾಟ್ ಕೊಹ್ಲಿ ನೀಡಿದ ಸಲಹೆ ಕಾರಣ ಎಂಬುದನ್ನು ಇಶಾನ್ ಕಿಶನ್ ಬಹಿರಂಗಪಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ತಾವಾಡಿದ ಮೊದಲ ಅಂತರಾಷ್ಟ್ರೀಯ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್, ಕೆಎಲ್ ರಾಹುಲ್ ಜೊತೆ ಇನ್ನಿಂಗ್ಸ್ ಓಪನ್ ಮಾಡಿದ್ದರು. ಆದರೆ ಮೊದಲ ಓವರ್‌ನಲ್ಲಿಯೇ ಕೆ.ಎಲ್.ರಾಹುಲ್ ವಿಕೆಟ್ ಚೆಲ್ಲಿದರು. ಎದುರಿಗೆ 165 ರನ್‌ಗಳ ಬೃಹತ್ ಗುರಿ ಇತ್ತು.

ಕೆ.ಎಲ್.ರಾಹುಲ್ ಔಟಾದ ಬಳಿಕ ಸ್ಕ್ರೀಸ್‌ಗೆ ಬಂದಿದ್ದು ಆಗ ತಂಡದ ನಾಯಕ ಆಗಿದ್ದ ವಿರಾಟ್ ಕೊಹ್ಲಿ. ಇಶಾನ್ ಕಿಶನ್ ತಮ್ಮ ಮೊದಲ ಚೆಂಡು ಎದುರಿಸುವ ಮುನ್ನ ಇಶಾನ್‌ಗೆ ಸಲಹೆ ನೀಡಿದ ವಿರಾಟ್ ಕೊಹ್ಲಿ, ''ಮೈದಾನದ ಆ ಭಾಗದಲ್ಲಿ ಯಾರೂ ಫೀಲ್ಡರ್‌ಗಳಿಲ್ಲ ನೀನು ಅಲ್ಲಿ ಸಿಕ್ಸ್ ಹೊಡಿ'' ಎಂದರಂತೆ. ಇದನ್ನು ಕೇಳಿದ ಇಶಾನ್ ಕಿಶನ್, ''ಎದುರಿಗಿರುವುದು ಬೌಲರ್ ಜೊಫ್ರಾ ಆರ್ಚರ್'' ಎಂದರಂತೆ.

ಆದರೆ ವಿರಾಟ್ ಕೊಹ್ಲಿ ಹೇಳಿದ ರೀತಿಯಿಂದ ಸ್ಪೂರ್ತಿ ಪಡೆದ ಇಶಾನ್‌, ವೇಗಿ ಜೊಫ್ರಾ ಆರ್ಚರ್‌ ಎಸೆದ ಮೊದಲ ಚೆಂಡನ್ನು ಕೊಹ್ಲಿ ಹೇಳಿದ ಅದೇ ಜಾಗದಲ್ಲಿ ಬೌಂಡರಿಗಟ್ಟಿದರು. ''ಕೊಹ್ಲಿ ಭಾಯ್ ಹೇಳಿದ ರೀತಿ ನನಗೆ ಸ್ಪೂರ್ತಿ ತುಂಬಿತು, ಅವರು ಹೇಳಿದಾಗ ಅದು ಸರಿ ಎನಿಸಿತು. ಏಕೆಂದರೆ ಮೈದಾನದ ಆ ಭಾಗ ಖಾಲಿ ಇತ್ತು. ಆ ಜಾಗಕ್ಕೆ ಚೆಂಡನ್ನು ಅಟ್ಟಲು ತಯಾರಾಗಿಯೇ ನಾನು ಆ ಚೆಂಡು ಎದುರಿಸಿದೆ ಹಾಗೂ ಬೌಂಡರಿ ಪಡೆದೆ'' ಎಂದಿದ್ದಾರೆ ಕಿಶನ್.

Kohli ಹಾಗು Chahal ಅವರ ಮುಖಾಮುಖಿಯ ಅಂತ್ಯ ಹೀಗಿತ್ತು | Oneindia Kannada

ತಮ್ಮ ಮೊದಲ ಪಂದ್ಯದಲ್ಲಿಯೇ ಇಶಾನ್ ಕಿಶನ್ ಕೇವಲ 32 ಎಸೆತಕ್ಕೆ 52 ರನ್ ಚೆಚ್ಚಿದರು. ಆ ಪಂದ್ಯವನ್ನು ಭಾರತ ಏಳು ವಿಕೆಟ್ ಅಂತರದಲ್ಲಿ ಗೆದ್ದಿತು. ಇಶಾನ್ ಕಿಶನ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಸಹ ಲಭಿಸಿತು. ಅದೇ ವರ್ಷ ಇಶಾನ್ ಕಿಶಾನ್ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ಅಂತರಾಷ್ಟ್ರೀಯ ಒನ್‌ಡೇ ಮ್ಯಾಚ್ ಸಹ ಆಡಿದರು.

Story first published: Wednesday, April 6, 2022, 9:44 [IST]
Other articles published on Apr 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X