ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಎಸ್ಎಲ್: ಪ್ಲೇ ಆಫ್ ಸ್ಥಾನ ಖಚಿತಪಡಿಸಲು ಬೆಂಗಳೂರು ಹೋರಾಟ

By Isl Media
ISL 2019: Bengaluru keen to seal play-off spot

ಹೊಸದಿಲ್ಲಿ, ಫೆಬ್ರವರಿ 16: ಇತ್ತೀಚಿನ ಪಂದ್ಯಗಳಲ್ಲಿ ನಿರೀಕ್ಷಿತ ಹೋರಾಟ ನೀಡುವಲ್ಲಿ ವಿಲವಾಗಿರುವ ಬೆಂಗಳೂರು ಎಫ್ ಸಿ ಡೈಲ್ಲಿ ಡೈನಮೋಸ್ ವಿರುದ್ಧ ಭಾನುವಾರ (ಫೆಬ್ರವರಿ 17) ನಡೆಯಲಿರುವ ಪಂದ್ಯದಲ್ಲಿ ಜಯ ಗಳಿಸಿ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸುವ ಗುರಿ ಹೊಂದಿದೆ. ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಹೊಂದಿದ್ದರೂ ಬೆಂಗಳೂರಿಗೆ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಏಕೈಕ ಜಯದ ಅಗತ್ಯವಿದೆ.

ಗಣೇಶ್ ಸಾಹಸ, ರಣಜಿ-ಇರಾನಿ ಎರಡೂ ಟ್ರೋಫಿ ಉಳಿಸಿಕೊಂಡ ವಿದರ್ಭಗಣೇಶ್ ಸಾಹಸ, ರಣಜಿ-ಇರಾನಿ ಎರಡೂ ಟ್ರೋಫಿ ಉಳಿಸಿಕೊಂಡ ವಿದರ್ಭ

ಚಳಿಗಾಲದ ವಿಶ್ರಾಂತಿಯ ಬಳಿಕ ಬೆಂಗಳೂರು ತಂಡ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರಲಿಲ್ಲ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಗೆದ್ದಿರುವುದು ಒಂದು ಪಂದ್ಯದಲ್ಲಿ ಮಾತ್ರ, ಬದ್ಧ ಎದುರಾಳಿ ಚೆನ್ನೈಯಿನ್ ವಿರುದ್ಧದ ಪಂದ್ಯದಲ್ಲಿ 1-2 ಗೋಲುಗಳ ಅಂತರದಲ್ಲಿ ಸೋಲಿನ ಆಘಾತ ಕಂಡಿತ್ತು. ಹಿಂದಿನ ಎರಡು ಪಂದ್ಯಗಳಲ್ಲಿ ಬೆಂಗಳೂರು ಪ್ರಥಮಾರ್ಧದಲ್ಲಿ ಹಿನ್ನಡೆ ಕಂಡಿತ್ತು.

1
1042965

ಕೋಚ್ ಕಾರ್ಲಸ್ ಕ್ವಾಡ್ರಾಟ್ ಬೆಂಚ್‌ನಲ್ಲಿರುವ ಆಟಗಾರರಿಗೆ ಅವಕಾಶ ನೀಡಿ, ಅನುಭವಿ ಆಟಗಾರರಿಗೆ ಇದುವರೆಗೂ ವಿಶ್ರಾಂತಿ ನೀಡಿದ್ದಾರೆ. ಚೆನ್ನೈ ' ವಿರುದ್ಧದ ಪಂದ್ಯದಲ್ಲಿ ದಿಮಾಸ್ ಡೆಲ್ಗಾಡೊ, ಉದಾಂತ್ ಸಿಂಗ್ ಹಾಗೂ ಅಲ್ಬರ್ಟ್ ಸೆರಾನ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಪ್ಲೇ ಆಫ್ ಹತ್ತಿರಕ್ಕೆ ಬರುತ್ತಿರುವುದರಿಂದ ಸ್ಪೇನ್ ಮೂಲದ ಕೋಚ್ ತಮ್ಮ ರಣತಂತ್ರವನ್ನು ಮುಂದುವರಿಸುವ ಸಾಧ್ಯತೆ ಇದೆ.

ಪುಲ್ವಾಮಾ ದಾಳಿ: ಮಾನವೀಯ ಮುಖ'ದಿಂದ ಮನಗೆದ್ದ ವೀರೇಂದ್ರ ಸೆಹ್ವಾಗ್ಪುಲ್ವಾಮಾ ದಾಳಿ: ಮಾನವೀಯ ಮುಖ'ದಿಂದ ಮನಗೆದ್ದ ವೀರೇಂದ್ರ ಸೆಹ್ವಾಗ್

'ಖಂಡಿತಾ, ಪಿಚ್‌ನಲ್ಲಿ ಯಾವಾಗಲೂ ಸಮಸ್ಯೆ ಇದ್ದೇ ಇರುತ್ತದೆ. ತಂಡದಲ್ಲಿ ಆಗಾಗ ಬದಲಾವಣೆ ಮಾಡುತ್ತಿರಬೇಕು. ಅಂಕಪಟ್ಟಿಯಲ್ಲಿ ನಾವಿರುವ ಸ್ಥಾನ ನಮ್ಮ ತಂಡದಲ್ಲಿ ಬದಲಾವಣೆಗೆ ಅವಕಾಶ ಮಾಡಿಕೊಡುತ್ತದೆ. ಇದರಿಂದ ಕೆಲವು ತಪ್ಪುಗಳಾಗುವುದು ಸಹಜ. ಈ ವಿಷಯದಲ್ಲಿ ನಮ್ಮದು ಅದೃಷ್ಟದ ತಂಡ.' ಎಂದು ಬೆಂಗಳೂರು ಕೋಚ್ ಹೇಳಿದ್ದಾರೆ.

ಬೌಲರ್‌ಗಳಿಗೆ ಮುಖವಾಡ ಬೇಕು: ದಿಂಡಾ, ಉನಾದ್ಕತ್, ಅಶ್ವಿನ್ ಒತ್ತಾಯ!ಬೌಲರ್‌ಗಳಿಗೆ ಮುಖವಾಡ ಬೇಕು: ದಿಂಡಾ, ಉನಾದ್ಕತ್, ಅಶ್ವಿನ್ ಒತ್ತಾಯ!

ಪ್ಲೇ ಆಫ್ ನಿಂದ ಹೊರತಳ್ಳಲ್ಪಟ್ಟಿರುವ ಡೆಲ್ಲಿ ಈಗ ಸೇಡಿಗಾಗಿ ಕಾಯುತ್ತಿದೆ. ಡೆಲ್ಲಿ ತಂಡ ಅಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿರಬಹುದು, ಆದರೆ ಬೆಂಗಳೂರು ತಂಡವನ್ನು ಸೋಲಿಸುವ ವಿಷಯದಲ್ಲಿ ಆ ತಂಡವನ್ನು ಯಾರಿಂದಲೂ ತಡೆಯಲಾಗುದು, ಈ ಹಿಂದೆ ಬೆಂಗಳೂರಿನಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದವು, ಉದಾಂತ್ ಸಿಂಗ್ ಕೊನೆಯ ಕ್ಷಣದಲ್ಲಿ ಗಳಿಸಿದ ಗೋಲು ಡೆಲ್ಲಿ ತಂಡವನ್ನು ಸೋಲಿಗೆ ನೂಕಿತ್ತು. ಇತ್ತೀಚಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಡೆಲ್ಲಿ ತಂಡ ಬೆಂಗಳೂರು ವಿರುದ್ಧವೂ ಅಚ್ಚರಿಯ ಲಿತಾಂಶದ ನಿರೀಕ್ಷೆಯಲ್ಲಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಡೆಲ್ಲಿ ಎರಡು ಜಯ ಹಾಗೂ ಎರಡು ಸೋಲು ಕಂಡಿತ್ತು. ತಂಡದ ಡಿಫೆನ್ಸ್ ವಿಭಾಗ ಉತ್ತಮವಾಗಿತ್ತು, ನಾಲ್ಕು ಪಂದ್ಯಗಳಲ್ಲಿ ನೀಡಿದ್ದು ಕೇವಲ ಎರಡು ಗೋಲು.

'ಉತ್ತಮ ಆಟಗಾರರಿಂದ ಕೂಡಿರುವ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಇತರ ತಂಡಗಳಂತೆ ಬೆಂಗಳೂರು ವಿರುದ್ಧದ ಪಂದ್ಯ ನಮಗೂ ಕಠಿಣವೆನಿಸಲಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ನಮ್ಮ ತಂಡ ಉತ್ತಮವಾಗಿಯೇ ಆಡಿದೆ. ಭಾನುವಾರ ನಮ್ಮ ತಂಡ ಉತ್ತಮ ಪ್ರದರ್ಶನ ತೋರಲಿದೆ, ' ಎಂದು ಡೆಲ್ಲಿ ಕೋಚ್ ಗೊಂಬೊವ್ ಹೇಳಿದ್ದಾರೆ.

Story first published: Saturday, February 16, 2019, 20:06 [IST]
Other articles published on Feb 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X