ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೀವನದಲ್ಲಿ ಕಠಿಣವೆನಿಸುವ ಸಂದರ್ಭವನ್ನು ಹೇಳಿದ ದಿಗ್ಗಜ ಬೌಲರ್ ಅನಿಲ್ ಕುಂಬ್ಳೆ

It Became Very, Very Difficult’: Anil Kumble

ಭಾರತೀಯ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಬೌಲರ್ ಅನಿಲ್ ಕುಂಬ್ಲೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅನಿಲ್ ಕುಂಬ್ಲೆ ಟೀಮ್ ಇಂಡಿಯಾಗೆ ಓರ್ವ ಬೌಲರ್ ಆಗಿ ಅತ್ಯಂತ ಶ್ರೇಷ್ಠ ಕೊಡುಗೆಯನ್ನು ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 619 ಹಾಗೂ ಏಕದಿನದಲ್ಲಿ 337 ವಿಕೆಟ್ ಪಡೆದು ಭಾರತ ಪರವಾಗಿ ಎರಡು ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ.

1999ರಲ್ಲಿ ಪಾಕಿಸ್ತಾನದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್‌ನ ಎಲ್ಲಾ ಹತ್ತು ವಿಕೆಟ್‌ಗಳನ್ನೂ ಅನಿಲ್ ಕುಂಬ್ಳೆ ಒಬ್ಬರೆ ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಕ್ರಿಕೆಟ್ ಇತಿಹಾಸದ ಅತ್ಯಂತ ಅಪರೂಪದ ಸಾಧನೆಯನ್ನು ಮಾಡಿದ್ದಾರೆ. ಈ ಎಲ್ಲಾ ಸಾಧನೆಗಳ ಮೂಲಕ ಅನಿಲ್ ಕುಂಬ್ಳೆ ಸಮಕಾಲೀನ ಕ್ರಿಕೆಟಿಗರೂ ಆದ ವಿಶ್ವ ಶ್ರೇಷ್ಠ ಸ್ಪಿನ್ ದಿಗ್ಗಜರೆನಿಸಿದ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹಾಗೂ ಆಸ್ಟ್ರೇಲಿಯಾದ ಶೇನ್ ವಾರ್ನ್ ಜೊತೆಗೆ ಹೋಲಿಕೆಗೆ ಒಳಪಡುತ್ತಾರೆ.

ಐಪಿಎಲ್‌ಅನ್ನು ಮಿನಿ ವಿಶ್ವಕಪ್ ಎಂದ ಆಸ್ಟ್ರೇಲಿಯಾ ಆಲ್‌ರೌಂಡರ್ ಮ್ಯಾಕ್ಸ್‌ವೆಲ್ಐಪಿಎಲ್‌ಅನ್ನು ಮಿನಿ ವಿಶ್ವಕಪ್ ಎಂದ ಆಸ್ಟ್ರೇಲಿಯಾ ಆಲ್‌ರೌಂಡರ್ ಮ್ಯಾಕ್ಸ್‌ವೆಲ್

ಆದರೆ ಈ ಹೋಲಿಕೆಯ ಬಗ್ಗೆ ದಿಗ್ಗಜ ಅನಿಲ್ ಕುಂಬ್ಳೆ ಏನು ಹೇಳುತ್ತಾರೆ ಗೊತ್ತಾ ಮುಂದೆ ಓದಿ..

ಇಬ್ಬರು ದಿಗ್ಗಜರ ಬಗ್ಗೆ ಅನಿಲ್ ಕುಂಬ್ಳೆ ಮಾತು

ಇಬ್ಬರು ದಿಗ್ಗಜರ ಬಗ್ಗೆ ಅನಿಲ್ ಕುಂಬ್ಳೆ ಮಾತು

ಟೀಮ್ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಇಬ್ಬರು ದಿಗ್ಗಜ ಸ್ಪಿನ್ ಬೌಲರ್‌ಗಳಾದ ಮುತ್ತಯ್ಯ ಮುರಳೀಧರನ್ ಹಾಗೂ ಶೇನ್ ವಾರ್ನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆ ಇಬ್ಬರೂ ಬೌಲರ್‌ಗಳು ವಿಶ್ವದ ಯಾವುದೇ ಪಿಚ್‌ನಲ್ಲಾದರೂ ಚೆಂಡನ್ನು ಸ್ಪಿನ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಅನಿಲ್ ಕುಂಬ್ಳೆ ಹೇಳಿದರು.

ನನಗೆ ತುಂಬಾ ಕಠಿಣವೆನಿಸುತ್ತದೆ

ನನಗೆ ತುಂಬಾ ಕಠಿಣವೆನಿಸುತ್ತದೆ

ಆಸ್ಟ್ರೇಲಿಯಾದ ಶೆನ್ ವಾರ್ನ್ ಅಥವಾ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರೊಂದಿಗೆ ನನ್ನನ್ನು ಹೋಲಿಕೆ ಮಾಡುವುದು ನನಗೆ ಅತ್ಯಂತ ಕಠಿಣವೆನಿಸುವ ಸಂಗತಿಯಾಗಿದೆ ಎಂದು ಅನಿಲ್ ಕುಂಭ್ಳೆ ಹೇಳಿದ್ದಾರೆ. ಶ್ರೀಲಂಕಾದೊಂದಿಗೆ ಹೆಚ್ಚಿನ ಪಂದ್ಯಗಳು ನಡೆಯುತ್ತಿದ್ದ ಕಾರಣ ಮುರಳೀಧರನ್ ಆಟವನ್ನು ನಾನು ಹೆಚ್ಚು ಬಾರಿ ಹತ್ತಿತದಿಂದ ಗಮನಿಸಿದ್ದೇನೆ ಎಂದಿದ್ದಾರೆ.

ಮುಂಚಿತವಾಗಿ ಮುರಳೀಧರನ್‌ಗೆ ಶುಭ ಕೋರಿದ್ದ ಕುಂಬ್ಳೆ

ಮುಂಚಿತವಾಗಿ ಮುರಳೀಧರನ್‌ಗೆ ಶುಭ ಕೋರಿದ್ದ ಕುಂಬ್ಳೆ

ನಾನು ಪ್ರತಿಯೊಂದು ಮೈಲಿಗಲ್ಲು ದಾಟಿದಾಗಲೂ ಮುರಳೀಧರನ್ ನನ್ನನ್ನು ಅಭಿನಂದಿಸುತ್ತಿದ್ದರು. 500ನೇ ವಿಕೆಟ್ ಮೈಲಿಗಲ್ಲಿಗೆ 30 ವಿಕೆಟ್‌ ದೂರದಲ್ಲಿದ್ದರು ಮುತ್ತಯ್ಯ ಮುರಳೀಧರನ್. ಆಗ ನಾನು ಅವರಿಗೆ ಮುರಳಿ ಈ ಮೈಲಿಗಲ್ಲಿಗೆ ಕೇವಲ 30 ವಿಕೆಟ್ ಮಾತ್ರವೇ ದೂರದಲ್ಲಿದ್ದಿರಿ ಅಭಿನಂದನೆಗಳು ಎಂದಿದ್ದೆ. ಅದಕ್ಕೆ ಅವರು, ಇಲ್ಲ ಇಲ್ಲ, ಅದಿನ್ನೂ ಬಹಳ ದೂರವಿದೆ. ಅದಕ್ಕೆ ನಾನು ಪ್ರತಿಯಾಗಿ ನಿಮಗೆ 3 ಟೆಸ್ಟ್ ಮ್ಯಾಚ್ ಸಾಕು ಎಂದಿದ್ದೆ' ಎಂದು ಅನಿಲ್ ಕುಂಬ್ಳೆ ಸ್ಮರಿಸಿಕೊಂಡಿದ್ದಾರೆ.

ಉತ್ತಮ ಸಂಬಂಧವನ್ನು ಹೊಂದಿದ್ದೇವೆ

ಉತ್ತಮ ಸಂಬಂಧವನ್ನು ಹೊಂದಿದ್ದೇವೆ

ಇದೇ ಸಂದರ್ಭದಲ್ಲಿ ಅನಿಲ್ ಕುಂಬ್ಳೆ, ಶೇನ್ ವಾರ್ನ್ ಹಾಗೂ ಮುತ್ತಯ್ಯ ಮುರಳೀಧರನ್ ಅವರೊಂದಿಗೆ ಪರಸ್ಪರ ಅತ್ಯುತ್ತಮ ಸಂಬಂಧವನ್ನು ಹೊಂದಿದ್ದೇವೆ. ನಾವೆಲ್ಲರೂ ನಮ್ಮ ನಮ್ಮ ದೇಶಗಳಿಗೆ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದೇವೆ ಎಂಬುದು ನಿಜಕ್ಕೂ ಖುಷಿಯ ಸಂಗತಿ ಎಂದು ಹೇಳಿದ್ದಾರೆ. ಜಿಂಬಾಬ್ವೆಯ ಪಾಮಿ ಎಂಬಾಗ್ವ ಜೊತೆಗಿನ ಇನ್ಸ್ಟಾಗ್ರಾಮ್ ಸಂದರ್ಶನದಲ್ಲಿ ಅನಿಲ್ ಕುಂಬ್ಳೆ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Story first published: Thursday, July 23, 2020, 16:56 [IST]
Other articles published on Jul 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X