ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಜೇಮ್ಸ್ ಆ್ಯಂಡರ್ಸನ್

James Anderson becomes first bowler to play 150 Test matches

ಸೆಂಚುರಿಯನ್, ಡಿಸೆಂಬರ್ 26: ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 150 ಪಂದ್ಯಗಳನ್ನಾಡಿದ ವಿಶ್ವದ ಮೊದಲ ಬೌಲರ್‌ ಆಗಿ ಆ್ಯಂಡರ್ಸನ್ ಗುರುತಿಸಿಕೊಂಡಿದ್ದಾರೆ. ಸೆಂಚುರಿಯನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯದಲ್ಲಿ ಜೇಮ್ಸ್ ಈ ಸಾಧನೆ ಮೆರೆದಿದ್ದಾರೆ.

 ರಣಜಿಯಲ್ಲಿ ಆಡೋ ಅವಕಾಶ ತಪ್ಪಿಸಿಕೊಂಡ ವೇಗಿ ಜಸ್‌ಪ್ರೀತ್ ಬೂಮ್ರಾ! ರಣಜಿಯಲ್ಲಿ ಆಡೋ ಅವಕಾಶ ತಪ್ಪಿಸಿಕೊಂಡ ವೇಗಿ ಜಸ್‌ಪ್ರೀತ್ ಬೂಮ್ರಾ!

ಚೆಂಚುರಿಯನ್‌ ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ 150ನೇ ಟೆಸ್ಟ್‌ ಪಂದ್ಯಕ್ಕಾಗಿ ಮೈದಾನಕ್ಕಿಳಿದಿದ್ದ ಜೇಮ್ಸ್ ಆ್ಯಂಡರ್ಸನ್, ಪಂದ್ಯದ ಆರಂಭಿಕ ಎಸೆತಕ್ಕೆ ಇಂಗ್ಲೆಂಡ್ ಓಪನರ್ ಡೀನ್ ಎಲ್ಗರ್ ಅವರ ವಿಕೆಟ್ ಉರುಳಿಸಿ ಮಿಂಚಿದರು.

ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, 1ನೇ ಟೆಸ್ಟ್, Live ಸ್ಕೋರ್‌ಕಾರ್ಡ್ ಇಲ್ಲಿದೆ

17 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಆ್ಯಂಡರ್ಸನ್, ಇಂಗ್ಲೆಂಡ್‌ ತಂಡದಲ್ಲಿ ಬಲಿಷ್ಠರಾಗಿ ಬೆಳೆಯುತ್ತಿದ್ದಾರೆ. 142 ವರ್ಷಗಳ ಇತಿಹಾಸವಿರುವ ಟೆಸ್ಟ್‌ ಕ್ರಿಕೆಟ್‌ನಲ್ಲಿ 150ನೇ ಪಂದ್ಯವಾಡಿದ ವಿಶ್ವದ 9ನೇ ಆಟಗಾರನಾಗಿಯೂ ಜೇಮ್ಸ್ ಗುರುತಿಸಿಕೊಂಡಿದ್ದಾರೆ.

ಕರ್ನಾಟಕ vs ಹಿಮಾಚಲ ಪ್ರದೇಶ ರಣಜಿ ಪಂದ್ಯವನ್ನೂ ಕಾಡಿದ ಗ್ರಹಣ!ಕರ್ನಾಟಕ vs ಹಿಮಾಚಲ ಪ್ರದೇಶ ರಣಜಿ ಪಂದ್ಯವನ್ನೂ ಕಾಡಿದ ಗ್ರಹಣ!

150ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ವಿಶ್ವದ ಇತರ ಆಟಗಾರರೆಂದರೆ ಭಾರತದ ಸಚಿನ್ ತೆಂಡೂಲ್ಕರ್ (200 ಟೆಸ್ಟ್ ಪಂದ್ಯಗಳು), ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (168), ದಕ್ಷಿಣ ಆಫ್ರಿಕಾದ ಜಾಕ್ ಕ್ಯಾಲೀಸ್ (166), ವೆಸ್ಟ್ ಇಂಡೀಸ್‌ನ ಶಿವನರೀನ್ ಚಂದ್ರಪೌಲ್ (164), ಭಾರತದ ರಾಹುಲ್ ದ್ರಾವಿಡ್ (164), ಇಂಗ್ಲೆಂಡ್‌ನ ಅಲಾಸ್ಟೇರ್ ಕುಕ್ (161), ಆಸ್ಟ್ರೇಲಿಯಾದ ಅಲನ್ ಬಾರ್ಡರ್ (156) ಈ ಸಾಲಿನಲ್ಲಿದ್ದಾರೆ.

 Flashback 2019; ಕ್ರೀಡಾ ಕ್ಷೇತ್ರದಲ್ಲಿನ ಟಾಪ್ 10 ಟ್ರೆಂಡಿಂಗ್ ಸುದ್ದಿಗಳು Flashback 2019; ಕ್ರೀಡಾ ಕ್ಷೇತ್ರದಲ್ಲಿನ ಟಾಪ್ 10 ಟ್ರೆಂಡಿಂಗ್ ಸುದ್ದಿಗಳು

ಟಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ, ಏಡನ್ ಮಾರ್ಕ್ರಮ್ 20, ಝುಬೇರ್ ಹಂಜಾ 39, ಫಾ ಡು ಪ್ಲೆಸಿಸ್ 29, ಕ್ವಿಂಟನ್ ಡಿ ಕಾಕ್ ಅರ್ಧ ಶತಕ, ಡ್ವೇನ್ ಪ್ರಿಟೋರಿಯಸ್ 33 ರನ್‌ನೊಂದಿಗೆ ಆಫ್ರಿಕಾ 66 ಓವರ್‌ ವೇಳೆಗೆ 6 ವಿಕೆಟ್ ನಷ್ಟದಲ್ಲಿ 235 ರನ್‌ ಮಾಡಿತ್ತು.

Story first published: Thursday, December 26, 2019, 20:00 [IST]
Other articles published on Dec 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X