ಆಟದ ಮಧ್ಯೆ ಪ್ರವೇಶಿಸಿ ಜಾನಿ ಬೇರ್ಸ್ಟೋವ್‌ಗೆ ಗುದ್ದಿದ ಜಾರ್ವೋ: ವಿಡಿಯೋ

ಲಂಡನ್‌: ಅಂತಾರಾಷ್ಟ್ರೀಯ ಕ್ರಿಕೆಟರ್ ಅಲ್ಲ, ಸೆಲೆಬ್ರಿಟಿ ಅಲ್ಲವೇ ಅಲ್ಲ. ಆದರೂ ಡೇನಿಯಲ್ ಜಾರ್ವಿಸ್ ಯಾನೆ 'ಜಾರ್ವೋ 69' ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಲೇ ಇದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಮತ್ತು ತೃತೀಯ ಟೆಸ್ಟ್ ಪಂದ್ಯದಲ್ಲಿ ಮೈದಾನಕ್ಕೆ ಪ್ರವೇಶಿಸಿ ಪ್ರೇಕ್ಷಕರ ಗಮನ ಸೆಳೆದಿದ್ದ ಜಾರ್ವೋ ಮತ್ತೆ ನಾಲ್ಕನೇ ಟೆಸ್ಟ್‌ ವೇಳೆಯೂ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ.

ರೋಹಿತ್ ಶರ್ಮಾ ಅಪ್ಪಿ ಸಂಭ್ರಮಾಚರಿಸಿದ ವಿರಾಟ್ ಕೊಹ್ಲಿ: ವೈರಲ್ ವಿಡಿಯೋರೋಹಿತ್ ಶರ್ಮಾ ಅಪ್ಪಿ ಸಂಭ್ರಮಾಚರಿಸಿದ ವಿರಾಟ್ ಕೊಹ್ಲಿ: ವೈರಲ್ ವಿಡಿಯೋ

ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯುತ್ತಿರುವ ಭಾರತ vs ಇಂಗ್ಲೆಂಡ್ ನಾಲ್ಕನೇ ಟೆಸ್ಟ್‌ ಪಂದ್ಯದ ವೇಳೆ ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಜಾರ್ವೋ 69 ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಾರಿ ಭಾರತ ಪರ ಬೌಲಿಂಗ್‌ ಮಾಡಲು ಬಂದ ಜಾರ್ವೋ ಆಯತಪ್ಪಿ ಇಂಗ್ಲೆಂಡ್ ಅನುಭವಿ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ಜಾನಿ ಬೇರ್ಸ್ಟೋವ್‌ಗೆ ಗುದ್ದಿದ್ದಾರೆ.

ಪ್ರತೀ ಸಾರಿಯೂ ಭಾರತದ ಪರವೇ ಆಡಲು ಮುಂದಾಗುವ ಜಾರ್ವೋ 69
ಯೂ ಟ್ಯೂಬರ್ ಆಗಿರುವ ಡೇನಿಯಲ್ ಜಾರ್ವಿಸ್ ಹೆಚ್ಚು ಫೇಮಸ್ ಆಗಿದ್ದು ಇದೇ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್‌ ಸರಣಿಯ ವೇಳೆ. ಆರಂಭದಲ್ಲಿ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್‌ ವೇಳೆ ಏಕಾಯೇಕಿ ಮೈದಾನಕ್ಕೆ ಪ್ರವೇಶಿಸಿದ್ದ ಜಾರ್ವೋ ಭಾರತದ ಪರ ಫೀಲ್ಡಿಂಗ್ ಸೆಟ್ ಮಾಡಿ ಫೀಲ್ಡಿಂಗ್ ಮಾಡಲು ಮುಂದಾಗಿದ್ದರು. ಆ ಬಳಿಕ ಲೀಡ್ಸ್‌ನ ಹೆಡಿಂಗ್ಲಿ ಸ್ಟೇಡಿಯಂನಲ್ಲಿ ನಡೆದಿದ್ದ ತೃತೀಯ ಟೆಸ್ಟ್ ಪಂದ್ಯದ ವೇಳೆ ಹೆಲ್ಮೆಟ್, ಪ್ಯಾಡ್ ಕಟ್ಟಿಕೊಂಡು ಬಂದು ಭಾರತದ ಪರ ಬ್ಯಾಟಿಂಗ್‌ ಮಾಡಲು ಯತ್ನಿಸಿದ್ದರು. ಈ ಸಾರಿ ಅಂದರೆ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಭಾರತದ ಪರ ಬೌಲಿಂಗ್‌ ಮಾಡಲು ಮುಂದಾಗಿದ್ದರು. ಇಂಗ್ಲೆಂಡ್ ಮೊದಲನೇ ಇನ್ನಿಂಗ್ಸ್‌ನ 34ನೇ ಓವರ್‌ ವೇಳೆ ಜಾರ್ವೋ ಎಂಟ್ರಿ ಕೊಟ್ಟಿದ್ದರು. ಜಾರ್ವೋ ಮೈದಾನದೊಳಕ್ಕೆ ಸೀದಾ ಬಂದವರೇ ಬೌಲಿಂಗ್ ಆ್ಯಕ್ಷನ್ ಮಾಡುತ್ತ ಆಯತಪ್ಪಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ಜಾನಿ ಬೇರ್ಸ್ಟೋವ್‌ಗೆ ಡಿಕ್ಕಿಯಾದರು. ಇತ್ತ ಬ್ಯಾಟಿಂಗ್‌ ಬಗ್ಗೆ ತಲೆ ಕೆಡಿಸಿಕೊಂಡಿದ್ದ ಬೇರ್ಸ್ಟೋವ್, ತನಗೆ ಅಚಾನಕ್ ಡಿಕ್ಕಿಯಾದ ಜಾರ್ವೋ ಕಂಡು, 'ಯಲಾ ಇವ್ನಾ, ಮತ್ತೆ ಬಂದ್ಬಿಟ್ನಾ..' ಅಂತ ಒಮ್ಮೆ ಜಾರ್ವೋ ಅವರತ್ತಲೇ ದಿಟ್ಟಿಸಿದರು. ಬಳಿಕ ಸೆಕ್ಯುರಿಟಿ ಗಾರ್ಡ್ ಬಂದು ಜಾರ್ವೋ ಅವರನ್ನು ಮೈದಾನದಿಂದ ಹೊರಕ್ಕೆ ಕರೆದೊಯ್ದರು. ಇಷ್ಟಾಗುವಾಗ ಪಂದ್ಯ ವೀಕ್ಷಿಸುತ್ತಿದ್ದ ಪ್ರೇಕ್ಷಕರು ಚಪ್ಪಾಳೆ, ಚೀರಾಟ ನಡೆಸಿದರಲ್ಲದೆ ಜಾರ್ವೋ ಅವತಾರಕ್ಕೆ ಮಜಾ ತೆಗೆದುಕೊಂಡರು.

ಜಾರ್ವೋಗೆ ಜೀವನಪರ್ಯಂತ ನಿಷೇಧ ಶಿಕ್ಷೆ
ಪಂದ್ಯ ನಡೆಯುತ್ತಿದ್ದಾಗ ಏಕಾಯೇಕಿ ಮೈದಾನಕ್ಕೆ ಪ್ರವೇಶಿಸುವ ಜಾರ್ವೋ ಬೇರೇನೂ ತಪ್ಪೆಸಗಲ್ಲ. ಟೀಮ್ ಇಂಡಿಯಾದ ಬಗ್ಗೆ ಅತೀವ ಅಭಿಮಾನವೇ ಏನೋ ಗೊತ್ತಿಲ್ಲ. ಭಾರತದ ಪರ ಆಡಲು ಅನಧಿಕೃತವಾಗಿ ಹೀಗೆ ಅತೀ ಉತ್ಸಾಹ ತೋರಿಸುತ್ತಿದ್ದಾರಷ್ಟೇ. ಸಾಲದಕ್ಕೆ ಜಾರ್ವೋ ಟೀಮ್ ಇಂಡಿಯಾದ ನಕಲಿ ಜೆರ್ಸಿ ಹಾಕಿಕೊಂಡೇ ಹೀಗೆ ಮೈದಾನಕ್ಕೆ ಆಗಾಗ ನುಗ್ಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಾರ್ವೋ ವರ್ತನೆ ಅಸಮಾಧಾನಕ್ಕೆ ಕಾರಣವಾಗಿಲ್ಲ, ಬದಲಿಗೆ ಬಹುತೇಕ ಕ್ರಿಕೆಟ್ ಅಭಿಮಾನಿಗಳು ಈ ಘಟನೆಯನ್ನು ತಮಾಷೆಯಾಗಿ ವೀಕ್ಷಿಸಿ ಗಮ್ಮತ್ತು ತೆಗೆದುಕೊಳ್ಳುತ್ತಿದ್ದಾರೆ. ಆದರೆ ಕೋವಿಡ್-19 ಭೀತಿಯ ಈ ದಿನಗಳಲ್ಲಿ ಬಯೋ ಬಬಲ್ ಒಳಗೆ ಪಂದ್ಯ ನಡೆಯುತ್ತಿದ್ದಾಗ ಹೀಗೆ ಪಂದ್ಯದ ಮಧ್ಯದಲ್ಲಿ ಮೈದಾನಕ್ಕೆ ಪ್ರವೇಶಿಸೋದು ಸುರಕ್ಷತೆಯ ದೃಷ್ಟಿಯಿಂದ ಅಪರಾಧ. ಹೀಗಾಗಿ ಯಾರ್ಕ್‌ಶೈಕ್ ಕೌಂಟಿ ಕ್ರಿಕೆಟ್ ಕ್ಲಬ್ ಜಾರ್ವೋ ವರ್ತನೆಯನ್ನು ಅಪರಾಧವಾಗಿ ಪರಿಗಣಿಸಿತ್ತು. ಅವರನ್ನು ಜೀವನ ಪರ್ಯಂತ ಲೀಡ್ಸ್‌ ಸ್ಟೇಡಿಯಂಗೆ ಪ್ರವೇಶಿಸದಂತೆ ನಿಷೇಧ ಹೇರಿತ್ತು. ಜಾರ್ವೋ ಈ ಮೊದಲೂ ಇಂಥ ಹುಚ್ಚಾಟ ಅನೇಕ ಸಾರಿ ಮಾಡಿದ್ದರು ಎನ್ನಲಾಗಿದೆ. ಲೀಡ್ಸ್‌ ಸ್ಟೇಡಿಯಂಗೆ ಜಾರ್ವೋ ಇನ್ನು ಪ್ರವೇಶಿಸುವಂತಿಲ್ಲ, ಯಾಕೆಂದರೆ ಅವರ ಮೇಲೆ ನಿಷೇಧ ಹೇರಲಾಗಿದೆ. ಆದರೇನಂತೆ, ಇದು ಲಂಡನ್‌ ಸ್ಟೇಡಿಯಂ ಅಲ್ಲವೆ? ಈ ಸ್ಟೇಡಿಯಂಗೆ ಇನ್ನೂ ಜಾರ್ವೋಗೆ ನಿಷೇಧ ಹೇರಲಾಗಿಲ್ಲ. ಹೀಗಾಗಿ ಜಾರ್ವೋ ನಾಲ್ಕನೇ ಟೆಸ್ಟ್‌ ವೇಳೆ ಮೈದಾನಕ್ಕೆ ಪ್ರವೇಶಿಸಿದ್ದರು.

ಒಲಿಂಪಿಕ್ಸ್ ವೇಳೆಯೂ ಹುಚ್ಚಾಟ ನಡೆಸಿದ್ದ ಜಾರ್ವೋ
ಇದೇ ಜಾರ್ವೋ ಒಲಿಂಪಿಕ್ಸ್ ಕ್ರೀಡಾಕೂಟವೊಂದರ ವೇಳೆಯೂ ಹೀಗೇ ಹುಚ್ಚಾಟ ನಡೆಸಿದ್ದಾರೆ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯಾವ ಒಲಿಂಪಿಕ್ಸ್ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಬಹುಶಃ ಬ್ರೆಝಿಲ್‌ನಲ್ಲಿ 2016ರಲ್ಲಿ ನಡೆದಿದ್ದ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ವೇಳೆ ಇರಬೇಕು; ಆವತ್ತು ಡೈವಿಂಗ್ ಸ್ಪರ್ಧೆ ನಡೆಯುತ್ತಿದ್ದಾಗ ನಡುವೆ ಪ್ರವೇಶಿಸಿದ್ದ ಜಾರ್ವೋ ಸ್ಥಳದಲ್ಲೇ ಬಟ್ಟೆ, ಪ್ಯಾಂಟು ಕಳಚಿ ಎತ್ತರದಿಂದ ನೀರಿಗೆ ಡೈವ್ ಮಾಡಿದ್ದರು. ಆ ಬಳಿಕ ತನಗೇ ಗೋಲ್ಡು ಮೆಡಲು ಬಂದಿದೆ ಎನ್ನುವಂತೆ ಪ್ರೇಕ್ಷಕರಿದ್ದೆಡೆಗೆ ತಿರುಗಿ ವಂದಿಸಿ ಪೋಸು ಬೇರೆ ಕೊಟ್ಟಿದ್ದರು. ಆವತ್ತು ಕೂಡ ಜಾರ್ವೋ ಅವತಾರ ಸ್ಪರ್ಧೆ ವೀಕ್ಷಿಸಲು ಕೂತಿದ್ದವರನ್ನು ಬಿಟ್ಟಿಯಾಗಿ ರಂಜಿಸುತ್ತು. ಅಂದ್ಹಾಗೆ, ಲಂಡನ್‌ನಲ್ಲಿನ ಹುಚ್ಚಾಟಕ್ಕಾಗಿ ಈ ಸ್ಟೇಡಿಯಂನಿಂದಲೂ ಜಾರ್ವೋಗೆ ನಿಷೇಧವಾಗುವ ನಿರೀಕ್ಷೆಯಿದೆ.

ಆಟದ ನಡುವೆ ಮೈದಾನಕ್ಕೆ ನುಗ್ಗುತ್ತಿದ್ದ ಜಾರ್ವೋಗೆ ಇಂಗ್ಲೆಂಡ್ ಪೊಲೀಸ್ ಮಾಡಿದ್ದೇನು? | Oneindia Kannada

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, September 3, 2021, 23:59 [IST]
Other articles published on Sep 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X