
ಕೊಹ್ಲಿ ಮೊದಲ ಸ್ಥಾನ
ವಿರಾಟ್ ಕೊಹ್ಲಿ 884 ರೇಟಿಂಗ್‌ನೊಂದಿಗೆ ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಜಿಂಬಾಬ್ವೆ ವಿರುದ್ಧ ತವರಿನಲ್ಲಿ ನಡೆದ ಏಕದಿನ ಸರಣಿಯನ್ನು 3-0ಯಿಂದ ಗೆದ್ದುಕೊಂಡ ಬಳಿಕ ದಕ್ಷಿಣ ಆಫ್ರಿಕಾದ ಬೌಲರ್‌ಗಳಾದ ಕಗಿಸೋ ರಬಾಡ ಮತ್ತು ಇಮ್ರಾನ್ ತಾಹೀರ್ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಐಸಿಸಿ ODI ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ರಶೀದ್ ಖಾನ್!

ಮೇಲೇರಿದ ರಬಾಡ
ಟೆಸ್ಟ್‌ನಲ್ಲಿ ಎರಡನೆಯ ಸ್ಥಾನದಲ್ಲಿರುವ ರಬಾಡ, ಜಿಂಬಾಬ್ವೆ ವಿರುದ್ಧ ಎರಡು ಪಂದ್ಯಗಳಲ್ಲಿ ಐದು ವಿಕೆಟ್ ಕಬಳಿಸಿ ಮೂರು ಸ್ಥಾನಗಳನ್ನು ಮೇಲೇರಿದ್ದಾರೆ. ಅವರು ಶ್ರೇಯಾಂಕದಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಇದೇ ಸರಣಿಯಲ್ಲಿ ಎರಡನೆಯ ಪಂದ್ಯದಲ್ಲಿ ಹ್ಯಾಟ್ರಿಕ್ ಸೇರಿದಂತೆ ಹತ್ತು ವಿಕೆಟ್ ಪಡೆದ ತಾಹೀರ್ ಕೂಡ ಮೂರು ಸ್ಥಾನ ಮೇಲಕ್ಕೇರಿದ್ದು ಏಳನೇ ಶ್ರೇಯಾಂಕದಲ್ಲಿದ್ದಾರೆ.
ಬಿಸಿಸಿಐ ವಿರುದ್ಧ ದನಿಯೆತ್ತಿದ ಕರುಣ್, ವಿಜಯ್ ಗೆ ಸಂಕಷ್ಟ?

ಭಾರತ ಎರಡನೆಯ ಸ್ಥಾನ
#1 ಇಂಗ್ಲೆಂಡ್ ತಂಡ : ಪಂದ್ಯಗಳು 51, 6,470 ಅಂಕಗಳು, 127 ರೇಟಿಂಗ್
#2 ಭಾರತ : ಪಂದ್ಯಗಳು 53, 6,492 ಅಂಕಗಳು, 122 ರೇಟಿಂಗ್
#3 ನ್ಯೂಜಿಲೆಂಡ್ : ಪಂದ್ಯಗಳು 41, 4602 ಅಂಕಗಳು, 112 ರೇಟಿಂಗ್
#4 ದಕ್ಷಿಣ ಆಫ್ರಿಕಾ : ಪಂದ್ಯಗಳು 42, 427635 ಅಂಕಗಳು, 110 ರೇಟಿಂಗ್
#5 ಪಾಕಿಸ್ತಾನ : ಪಂದ್ಯಗಳು 41, 4145 ಅಂಕಗಳು, 101 ರೇಟಿಂಗ್

ಏಕದಿನ ಬ್ಯಾಟ್ಸ್‌ಮನ್ ಗಳು ಟಾಪ್ 05
1. ವಿರಾಟ್ ಕೊಹ್ಲಿ (ಭಾರತ), 884 ರೇಟಿಂಗ್
2. ರೋಹಿತ್ ಶರ್ಮ (ಭಾರತ), 842 ರೇಟಿಂಗ್
3. ಜೋ ರೂಟ್ (ಇಂಗ್ಲೆಂಡ್), 818 ರೇಟಿಂಗ್
4. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), 803 ರೇಟಿಂಗ್
5. ಶಿಖರ್ ಧವನ್ (ಭಾರತ), 802 ರೇಟಿಂಗ್

ಏಕದಿನ ಟಾಪ್ 05 ಬೌಲರ್‌ಗಳು
1. ಜಸ್ ಪ್ರೀತ್ ಬೂಮ್ರಾ (ಭಾರತ), 797 ರೇಟಿಂಗ್
2. ರಶೀದ್ ಖಾನ್ (ಅಫ್ಘಾನಿಸ್ತಾನ) 788 ರೇಟಿಂಗ್
3. ಕುಲದೀಪ್ ಯಾದವ್ (ಭಾರತ), 700 ರೇಟಿಂಗ್
4. ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್), 699 ರೇಟಿಂಗ್
5. ಜೋಶ್ ಹೇಜಲ್ ವುಡ್ (ಆಸ್ಟ್ರೇಲಿಯಾ), 696 ರೇಟಿಂಗ್