ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೆಮಿಮಾ ಬರ್ತ್‌ಡೇಗೆ ICC ಗಿಫ್ಟ್‌: ಪ್ಲೇಯರ್ ಆಫ್ ದಿ ಮಂತ್ ಅವಾರ್ಡ್‌

Jemimah rodrigues

ಟೀಂ ಇಂಡಿಯಾ ಯುವ ಮಹಿಳಾ ಕ್ರಿಕೆಟರ್ ಜೆಮಿಮಾ ರೋಡ್ರಿಗಸ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 22ನೇ ವಯಸ್ಸಿಗೆ ಕಾಲಿಟ್ಟ ಜೆಮಿಮಾಗೆ ಶುಭಾಶಯಗಳು ಹರಿದು ಬಂದಿವೆ. ಇಂತಹ ವಿಶೇಷ ದಿನದಲ್ಲಿ ಜೆಮಿಮಾಗೆ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕೊಡುಗೆ ನೀಡಿದೆ.

ಭಾರತ ಮಹಿಳಾ ಕ್ರಿಕೆಟ್‌ಗೆ ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಅವಾರ್ಡ್‌ ಅನ್ನು ಸೋಮವಾರ ಘೋಷಣೆ ಮಾಡಿದ್ದು, ಜೆಮಿಮಾ ಸಾಧನೆಗೆ ಮತ್ತೊಂದು ಗರಿ ಬಂದಿದೆ. ಕಳೆದ ಆಗಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿತು.

ಕಾಮನ್‌ವೆಲ್ತ್‌ಗೇಮ್ಸ್‌ನಲ್ಲಿ ಟೀಂ ಇಂಡಿಯಾ ಫೈನಲ್ ತಲುಪಲು ಜೆಮಿಮಾ ಕೊಡುಗೆ ಕೂಡ ಮಹತ್ವದ್ದಾಗಿತ್ತು. ಟೂರ್ನಿಯ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಜೆಮಿಮಾ ಐದನೇ ಸ್ಥಾನದಲ್ಲಿದ್ದಾರೆ. ಐದು ಪಂದ್ಯಗಳಲ್ಲಿ 146ರನ್‌ ಕಲೆಹಾಕುವ ಮೂಲಕ ಜೆಮಿಮಾ ರೋಡ್ರಿಗಸ್‌ ಮಹತ್ವದ ಪ್ರದರ್ಶನ ನೀಡಿದ್ದಾರೆ.

IND vs PAK: ಮೊದಲ ಪಂದ್ಯದಲ್ಲಿ ಹೀರೊ ಆಗಿ ಮೆರೆದ ಭಾರತದ ಇಬ್ಬರು ದ್ವಿತೀಯ ಪಂದ್ಯದಲ್ಲಿ ವಿಲನ್ಸ್!IND vs PAK: ಮೊದಲ ಪಂದ್ಯದಲ್ಲಿ ಹೀರೊ ಆಗಿ ಮೆರೆದ ಭಾರತದ ಇಬ್ಬರು ದ್ವಿತೀಯ ಪಂದ್ಯದಲ್ಲಿ ವಿಲನ್ಸ್!

ಬಾರ್ಬಡೋಸ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ರೋಡ್ರಿಗಸ್ ತಂಡದ ಪರ ಗರಿಷ್ಠ ರನ್‌ ಸ್ಕೋರ್ ಆಗಿದ್ದು 46 ಎಸೆತಗಳಲ್ಲಿ ಅಜೇಯ 56 ರನ್ ಕಲೆಹಾಕುವ ಮೂಲಕ ತಂಡವನ್ನ ಸೆಮಿಫೈನಲ್‌ಗೆ ತಲುಪಿಸುವಲ್ಲಿ ಯಶಸ್ವಿಯಾದ್ರು.

ಐಸಿಸಿ ಪ್ಲೇಯರ್ ಆಫ್ ದಿ ಅವಾರ್ಡ್‌ಗೆ ಜೆಮಿಮಾ ಜೊತೆಗೆ ಆಸ್ಟ್ರೇಲಿಯಾದ ಬೆಥ್ ಮೂನಿ ಹಾಗೂ ತಹಿಲಾ ಮೆಗ್ರಾಥ್ ನಾಮ ನಿರ್ದೇಶನಗೊಂಡಿದ್ದರು. ಆದ್ರೆ ಅಂತಿಮವಾಗಿ ಜೆಮಿಮಾ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಆಸ್ಟ್ರೇಲಿಯಾದ ಬೆಥ್ ಮೂನಿ ಬರ್ಮಿಂಗ್‌ಹ್ಯಾಮ್‌ನ ಸಿಡಬ್ಲ್ಯೂಜಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ್ದ ಆಟಗಾರ್ತಿಯಾಗಿದ್ದು, ಪಾಕಿಸ್ತಾನ ವಿರುದ್ಧದ ಗ್ರೂಪ್ ಪಂದ್ಯದಲ್ಲಿ 49 ಎಸೆತಗಳಲ್ಲಿ 70ರನ್ ಕಲೆಹಾಕಿದರು. ಇದಲ್ಲದೆ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 29 ಎಸೆತಗಳಲ್ಲಿ 36 ರನ್‌ ಸಹ ಮಹತ್ವದ ಸಂದರ್ಭದಲ್ಲಿ ಕಲೆಹಾಕಿದರು.

ಇನ್ನು ಮೆಗ್ರಾಥ್ ತನ್ನ ಆಲ್‌ರೌಂಡ್ ಪ್ರದರ್ಶನ ಮೂಲಕ ಗಮನಸೆಳೆದರು. ಆಸ್ಟ್ರೇಲಿಯಾ ಮಹಿಳಾ ತಂಡವು ಕಾಮನ್‌ವೆಲ್ತ್‌ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಈಕೆಯ ಪಾತ್ರ ಮಹತ್ವವಾಗಿತ್ತು. ಟೂರ್ನಿ ಮುಕ್ತಾಯದ ವೇಳೆಗೆ ಎರಡನೇ ಗರಿಷ್ಠ ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದ್ದು, ಮೆಗ್ರಾಥ್ ಐದು ಪಂದ್ಯಗಳಲ್ಲಿ 8 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು.

ಇನ್ನು ಪುರುಷರ ವಿಭಾಗದಲ್ಲಿ ಇಂಗ್ಲೆಂಡ್ ಟೆಸ್ಟ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌, ಜಿಂಬಾಬ್ವೆಯ ಸಿಕಂದರ್ ರಾಝಾ, ನ್ಯೂಜಿಲೆಂಡ್ ತಂಡದ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ನಾಮ ನಿರ್ದೇಶನಗೊಂಡಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಶತಕ ಸಿಡಿಸಿದ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ ಇಂಗ್ಲೆಂಡ್ ನಾಯಕನಾಗಿ ಆಯ್ಕೆಯಾದ ಬಳಿಕ ಮೊಟ್ಟ ಮೊದಲ ಶತಕ ಸಿಡಿಸಿರುವುದು ಇದರ ವಿಶೇಷವಾಗಿದೆ. ಬೆನ್‌ಫೋಕ್ಸ್‌ ಜೊತೆಗೆ ಆರನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಬೆನ್‌ ಸ್ಟೋಕ್ಸ್‌ 158 ಎಸೆತಗಳಲ್ಲಿ ಮೂರಂಕಿ ಗಡಿದಾಟಿದರು. ಇವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 3 ಅಮೋಘ ಸಿಕ್ಸರ್ ಒಳಗೊಂಡಿವೆ.

ಶತಕ ಸಿಡಿಸಿದ್ದಷ್ಟೇ ಅಲ್ಲದೆ ಆಫ್ರಿಕಾದ ಮಧ್ಯಮ ಕ್ರಮಾಂಕದ ವಿಕೆಟ್ ಪಡೆದ ಸ್ಟೋಕ್ಸ್ ಏಡನ್ ಮಕ್ರಾಮ್ ಮತ್ತು ರಾಸ್ಸಿ ವ್ಯಾನ್ ಡಸ್ಸೆನ್ ವಿಕೆಟ್ ಉರುಳಿಸಿದ್ರು.

Pakistanದ ವಿರುದ್ಧ ಸೇಡು ತೀರಿಸಿಕೊಳ್ಳೋದಕ್ಕೆ ಟೀಂ ಇಂಡಿಯಾಗಿದೆ ಮತ್ತೊಂದು ಚಾನ್ಸ್ *Cricket |Oneindia Kannada

ಇನ್ನು ಜಿಂಬಾಬ್ವೆ ಸಿಕಂದರ್ ರಾಜಾ ಆಗಸ್ಟ್‌ ತಿಂಗಳಿನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದು, ಬಾಂಗ್ಲಾದೇಶ ವಿರುದ್ಧ ಮಿಂಚಿದ್ದಲ್ಲದೆ ಮೂರು ಶತಕ ಕೂಡ ಸಿಡಿಸಿದ್ರು. ಜೊತೆಗೆ ನ್ಯೂಜಿಲೆಂಡ್ ನ್ಯೂಜಿಲೆಂಡ್‌ ಮಿಚೆಲ್ ಸ್ಯಾಂಟ್ನರ್ ಬ್ಯಾಟ್ ಮತ್ತು ಬೌಲಿಂಗ್ ಎರಡರಲ್ಲೂ ತಂಡಕ್ಕೆ ನೆರವಾದರು.

Story first published: Tuesday, September 6, 2022, 9:15 [IST]
Other articles published on Sep 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X