ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

5 ಪಂದ್ಯಗಳಲ್ಲಿ ಕೇವಲ 56 ರನ್: ನಾಯಕನಾದ ಮೇಲೆ ಮಕಾಡೆ ಮಲಗಿದ ಐಪಿಎಲ್ ಆರೆಂಜ್ ಕ್ಯಾಪ್ ಹೋಲ್ಡರ್!

Jos Buttler struggling to score runs after appointed as full time captain of England

ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ಬೀಡುಬಿಟ್ಟಿದ್ದು, ಆಂಗ್ಲರ ವಿರುದ್ಧ ಸೀಮಿತ ಓವರ್ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಮೊದಲಿಗೆ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು ಈಗಾಗಲೇ ಕೈವಶ ಮಾಡಿಕೊಂಡಿರುವ ಟೀಮ್ ಇಂಡಿಯಾ ಇದೀಗ ಏಕದಿನ ಸರಣಿಯ ಮೇಲೂ ಕೂಡ ಕಣ್ಣಿಟ್ಟಿದೆ.

'ನಮ್ಮನ್ನು ನಿನ್ನ ತಂದೆ - ತಾಯಿಯಾಗಿ ಆರಿಸಿದ್ದಕ್ಕೆ ಧನ್ಯವಾದ' ಎನ್ನುತ್ತಾ ತಮ್ಮ ಮಗುವನ್ನು ಪರಿಚಯಿಸಿದ ಉತ್ತಪ್ಪ'ನಮ್ಮನ್ನು ನಿನ್ನ ತಂದೆ - ತಾಯಿಯಾಗಿ ಆರಿಸಿದ್ದಕ್ಕೆ ಧನ್ಯವಾದ' ಎನ್ನುತ್ತಾ ತಮ್ಮ ಮಗುವನ್ನು ಪರಿಚಯಿಸಿದ ಉತ್ತಪ್ಪ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಜುಲೈ 12ರಿಂದ ಆರಂಭವಾಗಿದ್ದು, ಪ್ರಥಮ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಇನ್ನು ಈ ಸರಣಿಗಳ ಮೂಲಕ ಜೋಸ್ ಬಟ್ಲರ್ ಇಂಗ್ಲೆಂಡ್ ತಂಡದ ಪೂರ್ಣಾವಧಿ ಸೀಮಿತ ಓವರ್ ತಂಡದ ನಾಯಕನಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಐಪಿಎಲ್ ಆಡಿದ್ದು ಪ್ಲಸ್ ಪಾಯಿಂಟ್; ಈ ತಂಡವೇ ಟಿ20 ವಿಶ್ವಕಪ್‌ ಗೆಲ್ಲುತ್ತೆ ಎಂದು ಭವಿಷ್ಯ ನುಡಿದ ಮೈಕೆಲ್ ವಾನ್ಐಪಿಎಲ್ ಆಡಿದ್ದು ಪ್ಲಸ್ ಪಾಯಿಂಟ್; ಈ ತಂಡವೇ ಟಿ20 ವಿಶ್ವಕಪ್‌ ಗೆಲ್ಲುತ್ತೆ ಎಂದು ಭವಿಷ್ಯ ನುಡಿದ ಮೈಕೆಲ್ ವಾನ್

ಹೌದು, ಇದಕ್ಕೂ ಮುನ್ನ ಇಂಗ್ಲೆಂಡ್ ತಂಡವನ್ನು ಇಯಾನ್ ಮಾರ್ಗನ್ ನಾಯಕನಾಗಿ ಮುನ್ನಡೆಸುತ್ತಿದ್ದರು. ಆದರೆ, ನಾಯಕತ್ವದ ಜತೆ ಇಯಾನ್ ಮಾರ್ಗನ್ ಕಳಪೆ ಫಾರ್ಮ್ ಹೊಂದಿದ ಕಾರಣದಿಂದಾಗಿ ಸಾಲು ಸಾಲು ಪಂದ್ಯಗಳಲ್ಲಿ ಮುಗ್ಗರಿಸಿದರು ಮತ್ತು ಕಳೆದ ತಿಂಗಳ ಅಂತ್ಯದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ರಾಜೀನಾಮೆಯನ್ನು ನೀಡಿದರು. ಈ ಸಂದರ್ಭದಲ್ಲಿ ಇಂಗ್ಲೆಂಡ್ ಪರ ಸ್ಫೋಟಕ ಆಟವನ್ನು ಆಡುತ್ತಿದ್ದ ಜೋಸ್ ಬಟ್ಲರ್ ಅವರನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನೂತನ ನಾಯಕನನ್ನಾಗಿ ಆಯ್ಕೆ ಮಾಡಿತು. ಆದರೆ ಜೋಸ್ ಬಟ್ಲರ್ ಕೂಡ ನಾಯಕತ್ವದ ಜವಾಬ್ದಾರಿ ಹೆಗಲಿಗೆ ಬಿದ್ದ ನಂತರ ಇಯಾನ್ ಮಾರ್ಗನ್ ರೀತಿಯೇ ಸಪ್ಪೆ ಆದಂತಿದೆ. ಪೂರ್ಣಾವಧಿ ನಾಯಕನಾಗಿ ಆಯ್ಕೆಯಾದ ನಂತರ ಜೋಸ್ ಬಟ್ಲರ್ ಇಲ್ಲಿಯವರೆಗೂ ಒಟ್ಟು 5 ಪಂದ್ಯಗಳನ್ನಾಡಿದ್ದು, ಯಾವುದೇ ಪಂದ್ಯದಲ್ಲಿಯೂ ಅರ್ಧಶತಕವನ್ನೂ ಬಾರಿಸಿಲ್ಲ. ಹೀಗೆ ನಾಯಕನಾದ ನಂತರ ಜೋಸ್ ಬಟ್ಲರ್ ಆಡಿರುವ ಪಂದ್ಯಗಳಲ್ಲಿ ಎಷ್ಟು ರನ್ ಕಲೆ ಹಾಕಿದ್ದಾರೆ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ.

ನಾಯಕನಾದ ನಂತರ ಜೋಸ್ ಬಟ್ಲರ್ ಪ್ರದರ್ಶನ

ನಾಯಕನಾದ ನಂತರ ಜೋಸ್ ಬಟ್ಲರ್ ಪ್ರದರ್ಶನ

ಇಂಗ್ಲೆಂಡ್ ತಂಡದ ಪೂರ್ಣಾವಧಿ ನಾಯಕನಾಗಿ ಆಯ್ಕೆಯಾದ ನಂತರ ಜೋಸ್ ಬಟ್ಲರ್ ಕಲೆಹಾಕಿರುವ ಪ್ರತಿ ಇನ್ನಿಂಗ್ಸ್‌ನ ರನ್ ಪಟ್ಟಿ


• ಭಾರತ ವಿರುದ್ಧದ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಗೋಲ್ಡನ್ ಡಕೌಟ್

• ಭಾರತ ವಿರುದ್ಧದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ 5 ಎಸೆತಕ್ಕೆ 4 ರನ್

• ಭಾರತ ವಿರುದ್ಧದ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ 9 ಎಸೆತಗಳಲ್ಲಿ 18 ರನ್

• ಭಾರತ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ 32 ಎಸೆತಗಳಲ್ಲಿ 30 ರನ್

• ಭಾರತ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ 5 ಎಸೆತಗಳಿಗೆ 4 ರನ್

ಆಡಿದ್ದು 5 ಪಂದ್ಯ ಗಳಿಸಿದ್ದು 56 ರನ್

ಆಡಿದ್ದು 5 ಪಂದ್ಯ ಗಳಿಸಿದ್ದು 56 ರನ್

ಜೋಸ್ ಬಟ್ಲರ್ ಇಂಗ್ಲೆಂಡ್ ತಂಡದ ಪೂರ್ಣಾವಧಿ ನಾಯಕನಾಗಿ ಆಯ್ಕೆಯಾದ ನಂತರ ( ಟೀಮ್ ಇಂಡಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದವರೆಗೆ ) ಒಟ್ಟು 5 ಪಂದ್ಯಗಳನ್ನಾಡಿದ್ದು, 56 ರನ್ ಕಲೆಹಾಕಿದ್ದಾರೆ. ಟೀಮ್ ಇಂಡಿಯಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ 30 ರನ್ ಗಳಿಸಿದ್ದು ಬಿಟ್ಟರೆ ಜೋಸ್ ಬಟ್ಲರ್ ಉಳಿದ ಯಾವುದೇ ಪಂದ್ಯದಲ್ಲಿಯೂ 20 ರನ್ ಕೂಡ ದಾಟಿಲ್ಲ ಹಾಗೂ 2 ಪಂದ್ಯಗಳಲ್ಲಿ ಒಂದಂಕಿ ರನ್ ಮತ್ತು ಉಳಿದೊಂದು ಪಂದ್ಯದಲ್ಲಿ ಗೋಲ್ಡನ್ ಡಕ್ ಔಟ್ ಆಗಿ ಮಕಾಡೆ ಮಲಗಿದ್ದಾರೆ.

England ವಿರುದ್ಧ ಹೀನಾಯವಾಗಿ ಸೋತ್ಮೇಲೆ ಟೀಂ‌ ಇಂಡಿಯಾಗೇ ಬಿಗ್ ಶಾಕ್ *Cricket | OneIndia Kannada
ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್, ನೆದರ್ಲೆಂಡ್ಸ್ ವಿರುದ್ಧ ಅಬ್ಬರ

ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್, ನೆದರ್ಲೆಂಡ್ಸ್ ವಿರುದ್ಧ ಅಬ್ಬರ

ಹೀಗೆ ಕಳಪೆ ಫಾರ್ಮ್ ಎದುರಿಸುತ್ತಿರುವ ಜೋಸ್ ಬಟ್ಲರ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಣಕ್ಕಿಳಿದು 17 ಪಂದ್ಯಗಳನ್ನಾಡಿ 4 ಶತಕ ಸಹಿತ 863 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿ ಹೊರಹೊಮ್ಮಿದ್ದರು. ಹಾಗೂ ಇತ್ತೀಚೆಗಷ್ಟೇ ಮುಕ್ತಾಯಗೊಂಡ ನೆದರ್ಲೆಂಡ್ಸ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ 70 ಎಸೆತಗಳಲ್ಲಿ ಅಜೇಯ 162 ರನ್ ಚಚ್ಚಿದ್ದ ಜೋಸ್ ಬಟ್ಲರ್ ತೃತೀಯ ಏಕದಿನ ಪಂದ್ಯದಲ್ಲಿ 64 ಎಸೆತಗಳಲ್ಲಿ ಅಜೇಯ 86 ರನ್ ಬಾರಿಸಿದ್ದರು ಹಾಗೂ ಬಟ್ಲರ್ ದ್ವಿತೀಯ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿರಲಿಲ್ಲ. ಹೀಗೆ ಐಪಿಎಲ್ ಮತ್ತು ನೆದರ್ಲೆಂಡ್ಸ್ ವಿರುದ್ಧದ ಸರಣಿಗಳಲ್ಲಿ ಅಬ್ಬರಿಸಿದ್ದ ಜೋಸ್ ಬಟ್ಲರ್ ನಾಯಕತ್ವ ಸ್ವೀಕರಿಸಿದ ನಂತರ ನೆಲಕಚ್ಚಿರುವುದು ಸುಳ್ಳಲ್ಲ.

Story first published: Thursday, July 14, 2022, 20:56 [IST]
Other articles published on Jul 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X