ಈ ಭಾರತೀಯ ಕ್ರಿಕೆಟರ್ ಕಮ್ರನ್ ಅಕ್ಮಲ್ ಪಾಲಿನ ನೆಚ್ಚಿನ ಸಿಕ್ಸ್ ಹಿಟ್ಟರ್!

ಸಿಕ್ಸ್ ಹೊಡೆಯೋದನ್ನ ಇವರನ್ನ ನೋಡಿ ಕಲೀಬೇಕು | Oneindia Kannada

ಲಾಹೋರ್, ಫೆಬ್ರವರಿ 11: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಕಮ್ರನ್ ಅಕ್ಮಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ನೆಚ್ಚಿನ ಸಿಕ್ಸ್‌ ಹಿಟ್ಟರ್ ಬ್ಯಾಟ್ಸ್‌ಮನ್‌ನನ್ನು ಹೆಸರಿಸಿದ್ದಾರೆ. ಇನ್ನೂ ಅಚ್ಚರಿಯ ವಿಚಾರವೆಂದರೆ ಅಕ್ಮಲ್‌ ಮೆಚ್ಚಿದ ಸಿಕ್ಸ್‌ ಹಿಟ್ಟರ್ ಭಾರತೀಯ ಆಟಗಾರ.

 ಭಾರತ vs ಕೀವಿಸ್: ಪಂದ್ಯದ ಮಧ್ಯೆ ರಾಹುಲ್ ಮತ್ತು ಮನೀಶ್ ಕನ್ನಡದಲ್ಲೇ ಮಾತು ಭಾರತ vs ಕೀವಿಸ್: ಪಂದ್ಯದ ಮಧ್ಯೆ ರಾಹುಲ್ ಮತ್ತು ಮನೀಶ್ ಕನ್ನಡದಲ್ಲೇ ಮಾತು

ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್, ಆಕರ್ಷಕ ಬ್ಯಾಟಿಂಗ್‌ಗಾಗಿ ವಿಶ್ವದಗಲ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ವಿಶ್ವ ಕ್ರಿಕೆಟ್‌ನಲ್ಲಿ ತನ್ನ ನೆಚ್ಚಿನ ಸಿಕ್ಸ್ ಹಿಟ್ಟರ್ ಎಂದು ಅಕ್ಮಲ್ ಹೇಳಿಕೊಂಡಿದ್ದಾರೆ.

ರನ್‌ಔಟ್‌ ಆದ ರೀತಿ ನೋಡಿ ಪೃಥ್ವಿ ಶಾ ಫಿಟ್‌ನೆಸ್ ಬಗ್ಗೆ ಆಕಾಶ್ ಚೋಪ್ರಾ ಪ್ರಶ್ನೆರನ್‌ಔಟ್‌ ಆದ ರೀತಿ ನೋಡಿ ಪೃಥ್ವಿ ಶಾ ಫಿಟ್‌ನೆಸ್ ಬಗ್ಗೆ ಆಕಾಶ್ ಚೋಪ್ರಾ ಪ್ರಶ್ನೆ

ಅಕ್ಮಲ್ ಹೇಳಿಕೊಂಡಿರುವುದಕ್ಕೆ ಕಾರಣವೂ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್‌ ಅತ್ಯಧಿಕ ಸಂಖ್ಯೆಯ ಸಿಕ್ಸ್‌ಗಳನ್ನು ಬಾರಿಸಿದ ದಾಖಲೆ ಹೊಂದಿದ್ದಾರೆ.

ರೋಹಿತ್ ಆಕ್ರಮಣಕಾರಿ ಬ್ಯಾಟಿಂಗ್

ರೋಹಿತ್ ಆಕ್ರಮಣಕಾರಿ ಬ್ಯಾಟಿಂಗ್

ಭಾರತ ಕ್ರಿಕೆಟ್‌ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ತಂಡದ ಪ್ರಮುಖ ಆಟಗಾರರು. ಅದರಲ್ಲೂ ಆಕ್ರಮಣಕಾರಿ ಬ್ಯಾಟಿಂಗ್‌ಗಾಗಿ ರೋಹಿತ್ ಹೆಚ್ಚು ಗಮನ ಸೆಳೆಯುತ್ತಿರುತ್ತಾರೆ. ಟ್ವಿಟರ್‌ನಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಅಕ್ಮಲ್, ಸಿಕ್ಸ್‌ ಬಾರಿಸುವವರಲ್ಲಿ ತನ್ನ ನೆಚ್ಚಿನ ಬ್ಯಾಟ್ಸ್‌ಮನ್ ರೋಹಿತ್ ಎಂದಿದ್ದಾರೆ.

ಟ್ವಿಟರ್‌ನಲ್ಲಿ ಪ್ರಶ್ನೆ

ಟ್ವಿಟರ್‌ನಲ್ಲಿ ಪ್ರಶ್ನೆ

ಮರಿಯ ಹಮೀದ್ ಎಂಬ ಕ್ರಿಕೆಟ್‌ ಅಭಿಮಾನಿಯೊಬ್ಬರು ಅಕ್ಮಲ್ ಅವರಲ್ಲಿ, 'ಯಾವ ಆಟಗಾರನ ಸಿಕ್ಸರ್ ನಿಮಗೆ ಹೆಚ್ಚು ಇಷ್ಟವಾಗುತ್ತದೆ?,' ಎಂದು ಟ್ವಟರ್‌ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಅಕ್ಮಲ್, 'ರೋಹಿತ್ ಶರ್ಮಾ,' ಎಂದು ಎರಡೇ ಪದದಲ್ಲಿ ಉತ್ತರಿಸಿದ್ದಾರೆ.

ಅತ್ಯಧಿಕ ಸಿಕ್ಸ್ ಸರದಾರ

ಅತ್ಯಧಿಕ ಸಿಕ್ಸ್ ಸರದಾರ

ಅಂತಾರಾಷ್ಟ್ರೀಯ ಟಿ20ಯಲ್ಲಿ ರೋಹಿತ್ ಶರ್ಮಾ ಅತೀ ಹೆಚ್ಚು ಸಿಕ್ಸ್‌ ಬಾರಿಸಿದ ದಾಖಲೆ ರೋಹಿತ್ ಶರ್ಮಾ ಹೊಂದಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಸದ್ಯ ರೋಹಿತ್ ಶರ್ಮಾ (127 ಸಿಕ್ಸ್‌ಗಳು), ನ್ಯೂಜಿಲೆಂಡ್‌ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮಾರ್ಟಿನ್ ಗಪ್ಟಿಲ್ (109 ಸಿಕ್ಸ್‌ಗಳು), ಕಾಲಿನ್ ಮುನ್ರೋ (107 ಸಿಕ್ಸ್‌ಗಳು) ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.

ಶರ್ಮಾ ಸಿಕ್ಸ್‌ ದಾಖಲೆಗಳು

ಶರ್ಮಾ ಸಿಕ್ಸ್‌ ದಾಖಲೆಗಳು

ಅಂತಾರಾಷ್ಟ್ರೀಯ ಟಿ20ಯಲ್ಲಿ ರೋಹಿತ್ 127 ಸಿಕ್ಸ್‌ಗಳನ್ನು ಬಾರಿಸಿದ್ದರೆ, ಇನ್ನುಳಿದ ಮಾದರಿಗಳಲ್ಲೂ ಅತೀ ಹೆಚ್ಚು ಸಿಕ್ಸರ್‌ಗಳು ರೋಹಿತ್ ಬ್ಯಾಟ್‌ನಿಂದ ಸಿಡಿದಿವೆ. ಟೆಸ್ಟ್‌ನಲ್ಲಿ 52 ಸಿಕ್ಸ್‌, 216 ಬೌಂಡರಿ, ಏಕದಿನದಲ್ಲಿ 244 ಸಿಕ್ಸ್‌, 817 ಬೌಂಡರಿಗಳನ್ನು ಶರ್ಮಾ ಬಾರಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, February 11, 2020, 17:25 [IST]
Other articles published on Feb 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X