ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕುಲದೀಪ್‌ ಯಾದವ್‌ಗೆ ಗೆಸ್ಟ್‌ಹೌಸ್‌ನಲ್ಲಿ ವ್ಯಾಕ್ಸಿನ್, ತನಿಖೆಗೆ ಆದೇಶ

Kanpur Administration orders probe as cricketer Kuldeep Yadav takes Covid vaccine at Guest House
Vaccine ಹಾಕಿಸಿ ತಗಲಾಕೊಂಡ Kuldeep Yadav | Oneindia Kannada

ಕಾನ್ಪುರ: ಆಸ್ಪತ್ರೆಗೆ ಬದಲು ಗೆಸ್ಟ್‌ ಹೌಸ್‌ನಲ್ಲಿ ಕೋವಿಡ್-19 ವ್ಯಾಕ್ಸಿನ್ ಹಾಕಿಸಿಕೊಂಡ ಟೀಮ್ ಇಂಡಿಯಾದ ಚೈನಾಮನ್ ಬೌಲರ್ ಕುಲದೀಪ್ ಯಾದವ್ ವಿರುದ್ಧ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕಾನ್ಪುರ ಆಡಳಿತಾಧಿಕಾರಿಗಳು ಪ್ರಕರಣ ತನಿಖೆಗೆ ಆದೇಶಿಸಿದ್ದಾರೆ.

ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಎಬಿ ಡಿ ವಿಲಿಯರ್ಸ್!ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಎಬಿ ಡಿ ವಿಲಿಯರ್ಸ್!

ವರದಿಯ ಪ್ರಕಾರ, ಕುಲದೀಪ್ ಯಾದವ್ ಅವರು ಉತ್ತರಪ್ರದೇಶದ ಕಾನ್ಪುರದಲ್ಲಿನ ಗೋವಿಂದನಗರದಲ್ಲಿರುವ ಜಗೇಶ್ವರ್ ಆಸ್ಪತ್ರೆಯಲ್ಲಿ ಕೋವಿಡ್-19 ಮೊದಲ ಡೋಸ್ ತೆಗೆದುಕೊಳ್ಳಲು ನೋಂದಣಿ ಮಾಡಿಸಿದ್ದರು. ಆದರೆ ಕಾನ್ಪುರ ನಿಗಮ್ ಗೆಸ್ಟ್‌ಹೌಸ್‌ನಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ ಎಂಬ ದೂರು ಕೇಳಿ ಬಂದಿದೆ.

ಈ ದೂರಿನ ಬಗ್ಗೆ ಸರಿಯಾಗಿ ವಿಚಾರಿಸಿ ಶೀಘ್ರ ವರದಿ ಸಲ್ಲಿಸುವಂತೆ ಎಡಿಎಂ ಅತುಲ್ ಕುಮಾರ್ ಅವರಿಗೆ ಸೂಚಿಸಲಾಗಿದೆ ಎಂದು ಕಾನ್ಪುರ ಜಿಲ್ಲಾಧಿಕಾರಿ ಅಲೋಕ್ ತಿವಾರಿ ತಿಳಿಸಿದ್ದಾರೆ. ಮೇ 15ರ ಶನಿವಾರ ಕೊರೊನಾ ಮೊದಲ ವ್ಯಾಕ್ಸಿನ್ ಪಡೆದುಕೊಂಡಿದ್ದ ಯಾದವ್, ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಜನರೂ ವಾಕ್ಸಿನ್ ಹಾಕಿಸಿಕೊಳ್ಳಲು ಕೋರಿಕೊಂಡಿದ್ದರು.

ಸಿಡ್ನಿಯಲ್ಲಿ ಆಸ್ಟ್ರೇಲಿಯನ್ ಆಟಗಾರರ ಕ್ವಾರಂಟೈನ್‌ಗೆ ಬಿಸಿಸಿಐ ಹಣ!ಸಿಡ್ನಿಯಲ್ಲಿ ಆಸ್ಟ್ರೇಲಿಯನ್ ಆಟಗಾರರ ಕ್ವಾರಂಟೈನ್‌ಗೆ ಬಿಸಿಸಿಐ ಹಣ!

ಇಂಗ್ಲೆಂಡ್‌ ಪ್ರವಾಸಕ್ಕೆ ಬಿಸಿಸಿಐ ಟೆಸ್ಟ್‌ ತಂಡ ಪ್ರಕಟಿಸಿದ್ದು, ಈ ತಂಡದಲ್ಲಿ ಕುಲದೀಪ್‌ ಕಾಣಿಸಿಕೊಂಡಿರಲಿಲ್ಲ. ಜೂನ್ 2ಕ್ಕೆ ಇಂಗ್ಲೆಂಡ್‌ಗೆ ಹೋಲಿರುವ ಟೀಮ್ ಇಂಡಿಯಾ ಅಲ್ಲಿ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಮತ್ತು ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

Story first published: Wednesday, May 19, 2021, 12:54 [IST]
Other articles published on May 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X