ಹೈದರಾಬಾದ್ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಕರ್ನಾಟಕ

Posted By:
Karnataka team won against Hyderabad in Vijay Hazare trophy

ನವ ದೆಹಲಿ, ಫೆಬ್ರವರಿ 21: ವಿಜಯ್ ಹಜಾರೆ ಟ್ರೋಫಿಯ ಕ್ವಾಟರ್‌ಫೈನಲ್ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಮಣಿಸಿದ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶಿಸಿದೆ.

ಆಲ್‌ರೌಂಡ್‌ ಪ್ರದರ್ಶನ ತೋರಿದ ಕರ್ನಾಟಕ ತಂಡ 103 ರನ್‌ಗಳ ಬೃಹತ್‌ ಅಂತರದಿಂದ ಹೈದರಾಬಾದ್ ತಂಡವನ್ನು ಸೋಲಿಸಿದೆ. ಆ ಮೂಲಕ ವಿಜಯ್‌ ಹಜಾರೆ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿದ ಮೊದಲ ತಂಡ ಎನಿಸಿಕೊಂಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ ಮಯಾಂಕ್ ಅಗರ್ವಾಲ್ (140) ಮತ್ತು ಆರ್.ಸಮರ್ಥ್(125) ಅವರು ಭರ್ಜರಿ ಶತಕದ ನೆರವಿನಿಂದಾಗಿ 347ರನ್‌ಗಳ ಬೃಹತ್‌ ಮೊತ್ತವನ್ನು ಪೇರಿಸಿತು.

ಗುರಿ ಬೆನ್ನತ್ತಿದ ಹೈದರಾಬಾದ್ ತಂಡ ನಿಗದಿತವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿ 42.5 ಓವರ್‌ಗಳಲ್ಲಿ 244 ರನ್‌ಗಳಿಗೆ ಆಲ್‌ಔಟ್ ಆಗಿ ಕರ್ನಾಟಕದ ಮುಂದೆ ಮಂಡಿ ಊರಿತು.

ಹೈದರಾಬಾದ್ ಪರ ರವಿ ತೇಜ 53 ರನ್ ಹಾಗೂ ಅಂಬಾಟಿ ರಾಯುಡು 64 ರನ್ ಗಳಿಸಿ ಕರ್ನಾಟಕದ ಬೌಲಿಂಗ್‌ಗೆ ಅಲ್ಪ ಪ್ರತಿರೋಧ ತೋರಿದರಾದರೂ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಉಚಿತ ಬೆಂಬಲ ಸಿಗದೆ ಸೋಲು ಕಾಣಬೇಕಾಯಿತು.

ಕರ್ನಾಟಕದ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಎಸ್.ಗೋಪಾಲ್ 5 ವಿಕೆಟ್ ಗಳಿಸಿ ಮಿಂಚಿದರು, ಬ್ಯಾಟಿಂಗ್‌ನಿಂದ ಗಮನ ಸೆಳೆಯಲು ವಿಫಲವಾಗಿದ್ದ ಸ್ಟುವರ್ಟ್‌ ಬಿನ್ನಿ 3 ವಿಕೆಟ್ ಗಳಿಸಿ ಮಿಂಚಿದರು.

Story first published: Wednesday, February 21, 2018, 18:42 [IST]
Other articles published on Feb 21, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ