IPL 2023 : ಕೆಕೆಆರ್ ತಂಡಕ್ಕೆ ಶಾಕ್: ಐಪಿಎಲ್ ಆಡಲ್ಲ ಎಂದ ಇಬ್ಬರು ಸ್ಟಾರ್ ಆಟಗಾರರು

ಐಪಿಎಲ್ ಮಿನಿ ಹರಾಜಿಗೆ ಫ್ರಾಂಚೈಸಿಗಳು ಸಿದ್ಧವಾಗುತ್ತಿರುವ ಬೆನ್ನಲ್ಲೇ ಕೆಕೆಆರ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರರಾದ ಇಂಗ್ಲೆಂಡ್‌ನ ವಿಕೆಟ್ ಕೀಪರ್ ಬ್ಯಾಟರ್ ಸ್ಯಾಮ್ ಬಿಲ್ಲಿಂಗ್ಸ್ ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್ ಪ್ಯಾಟ್ ಕಮಿನ್ಸ್ ಈ ಬಾರಿ ಐಪಿಎಲ್‌ನಿಂದ ಹೊರಗುಳಿಯುವುದಾಗಿ ಘೋಷಿಸಿದ್ದಾರೆ.

ಇಂಗ್ಲೆಂಡ್‌ನ ವಿಕೆಟ್‌ಕೀಪರ್-ಬ್ಯಾಟರ್ ಸ್ಯಾಮ್ ಬಿಲ್ಲಿಂಗ್ಸ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಏಕದಿನ ಮತ್ತಿ ಟೆಸ್ಟ್ ಕ್ರಿಕೆಟ್‌ನತ್ತ ಗಮನಹರಿಸಲು ಇಂಡಿಯನ್ ಪ್ರೀಮಿಯರ್ ಲೀಗ್ 2023ರಲ್ಲಿ ಆಡುತ್ತಿಲ್ಲ ಎಂದು ಘೋಷಿಸಿದ್ದಾರೆ. 2022ರ ಐಪಿಎಲ್‌ಗೆ ಮುನ್ನ ಕೆಕೆಆರ್ ಮೆಗಾ ಹರಾಜಿನಲ್ಲಿ ಸ್ಯಾಮ್ ಬಿಲ್ಲಿಂಗ್ಸ್‌ರನ್ನು 2 ಕೋಟಿ ರುಪಾಯಿಗೆ ಖರೀದಿ ಮಾಡಿತ್ತು. 2022 ರ ಐಪಿಎಲ್‌ನಲ್ಲಿ ಬಿಲ್ಲಿಂಗ್ಸ್ 8 ಪಂದ್ಯಗಳನ್ನಾಡಿದ್ದರು. 24.14 ರ ಸರಾಸರಿಯಲ್ಲಿ 169 ರನ್ ಗಳಿಸಿದ್ದರು.

ಐಸಿಸಿ ಟಿ20 ವಿಶ್ವಕಪ್ ಅತ್ಯಂತ ಮೌಲ್ಯಯುತ ತಂಡ ಪ್ರಕಟ: ಇಬ್ಬರು ಭಾರತೀಯರಿಗೆ ಸ್ಥಾನಐಸಿಸಿ ಟಿ20 ವಿಶ್ವಕಪ್ ಅತ್ಯಂತ ಮೌಲ್ಯಯುತ ತಂಡ ಪ್ರಕಟ: ಇಬ್ಬರು ಭಾರತೀಯರಿಗೆ ಸ್ಥಾನ

ತಮ್ಮ ನಿರ್ಧಾರದ ಬಗ್ಗೆ ಟ್ವೀಟ್ ಮಾಡಿರುವ ಸ್ಯಾಮ್ ಬಿಲ್ಲಿಂಗ್ಸ್ "ಮುಂದಿನ ಐಪಿಎಲ್‌ನಲ್ಲಿ ನಾನು ಕೆಕೆಆರ್ ತಂಡದ ಜೊತೆ ಆಡುವುದಿಲ್ಲ ಎನ್ನುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಕೌಂಟಿ ತಂಡವಾದ ಕೆಂಟ್ ಜೊತೆ ಟೆಸ್ಟ್, ಏಕದಿನ ಕ್ರಿಕೆಟ್‌ನತ್ತ ಗಮನ ಹರಿಸಲು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.

ಧನ್ಯವಾದ ತಿಳಿಸಿದ ಸ್ಯಾಮ್ ಬಿಲ್ಲಿಂಗ್ಸ್

ಧನ್ಯವಾದ ತಿಳಿಸಿದ ಸ್ಯಾಮ್ ಬಿಲ್ಲಿಂಗ್ಸ್

ಮತ್ತೊಂದು ಟ್ವೀಟ್ ಮಾಡಿರುವ ಅವರು, "ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು ಕೆಕೆಆರ್. ತಂಡದ ಜೊತೆ ಆಡಿದ ಪ್ರತಿ ನಿಮಿಷವನ್ನು ಇಷ್ಟಪಡುತ್ತೇನೆ. ಅದ್ಭುತ ವ್ಯಕ್ತಿಗಳಿರುವ ಅದ್ಭುತ ಪ್ರಾಂಚೈಸಿ. ಭವಿಷ್ಯದಲ್ಲಿ ಮತ್ತೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.

ಅವರು ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಬಿಲ್ಲಿಂಗ್ಸ್ ಐಪಿಎಲ್‌ನಲ್ಲಿ ಒಟ್ಟು 30 ಪಂದ್ಯಗಳನ್ನು ಆಡಿದ್ದಾರೆ, 19.35 ರ ಸರಾಸರಿಯಲ್ಲಿ 503 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 56 ಆಗಿದೆ.

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್‌ನಿಂದ ಆಶ್ಚರ್ಯಕರ ಉತ್ತರ ಪಡೆದ ಸೂರ್ಯಕುಮಾರ್; ಪೋಸ್ಟ್ ವೈರಲ್

ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಬಿಲ್ಲಿಂಗ್ಸ್

ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಬಿಲ್ಲಿಂಗ್ಸ್

ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಬೆನ್‌ ಸ್ಟೋಕ್ಸ್ ನಾಯಕನಾದ ಮೇಲೆ ಮತ್ತು ಬ್ರೆಂಡನ್ ಮೆಕಲಮ್ ಮುಖ್ಯ ಕೋಚ್ ಆಗಿ ನೇಮಕವಾದ ಮೇಲೆ ಸ್ಯಾಮ್ ಬಿಲ್ಲಿಂಗ್ಸ್ ಅವಕಾಶ ಪಡೆಯುತ್ತಿದ್ದಾರೆ. ಬೆನ್‌ ಫೋಕ್ಸ್‌ಗೆ ಬ್ಯಾಕ್-ಅಪ್ ವಿಕೆಟ್ ಕೀಪರ್ ಆಗಿ ಸ್ಯಾಮ್‌ ಬಿಲ್ಲಿಂಗ್ಸ್‌ರನ್ನು ಆಯ್ಕೆ ಮಾಡಲಾಗುತ್ತಿದೆ.

ಇಂಗ್ಲೆಂಡ್ ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಡಿಸೆಂಬರ್ ತಿಂಗಳಿನಲ್ಲಿ ಅವರು ಮೂರು ಟೆಸ್ಟ್‌ ಪಂದ್ಯಗಳ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಮಾಡಲಿದ್ದಾರೆ. ಇದು ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ನ ಭಾಗವಾಗಿರುತ್ತದೆ.

ಪ್ಯಾಟ್ ಕಮಿನ್ಸ್ ಕೂಡ ಐಪಿಎಲ್‌ನಿಂದ ಹೊರಕ್ಕೆ

ಪ್ಯಾಟ್ ಕಮಿನ್ಸ್ ಕೂಡ ಐಪಿಎಲ್‌ನಿಂದ ಹೊರಕ್ಕೆ

ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ, ಕೆಕೆಆರ್ ತಂಡದ ಪ್ರಮುಖ ಆಲ್‌ರೌಂಡರ್ ಆಗಿದ್ದ ಪ್ಯಾಟ್ ಕಮಿನ್ಸ್ ಕೂಡ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. 2022ರ ಮೆಗಾ ಹರಾಜಿನಲ್ಲಿ 7.25 ಕೋಟಿ ರುಪಾಯಿಗೆ ಕಮಿನ್ಸ್ ಅವರನ್ನು ಖರೀದಿ ಮಾಡಿದ್ದರು. ಅದಕ್ಕೂ ಮುನ್ನ 2020ರಲ್ಲಿ ಕಮಿನ್ಸ್‌ಗೆ ಕೆಕೆಆರ್ 15.50 ಕೋಟಿ ರುಪಾಯಿಗಳನ್ನು ನೀಡಿ ಖರೀದಿ ಮಾಡಿತ್ತು.

ಐಪಿಎಲ್‌ 2022ರಲ್ಲಿ ಪ್ಯಾಟ್ ಕಮಿನ್ಸ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿರಲಿಲ್ಲ. ಓವರ್‌ಗೆ ಸರಾಸರಿ 10 ರನ್‌ಗಳನ್ನು ಸೋರಿಕೆ ಬಿಟ್ಟುಕೊಟ್ಟು ದುಬಾರಿಯಾಗಿದ್ದರು. ಕೆಕೆಆರ್ ಲಾಕಿ ಫರ್ಗುಸನ್‌ರನ್ನು ಗುಜರಾತ್ ಜೈಂಟ್ಸ್‌ಗೆ ಬಿಟ್ಟುಕೊಟ್ಟು ರಹಮಾನುಲ್ಲಾ ಗುರ್ಬಾಜ್ ಅವರನ್ನು ಪಡೆದುಕೊಂಡಿದೆ.

ಮಿನಿ ಹರಾಜಿಗೆ ಮುನ್ನ ಕೆಕೆಆರ್ ತಂಡ

ಮಿನಿ ಹರಾಜಿಗೆ ಮುನ್ನ ಕೆಕೆಆರ್ ತಂಡ

ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ಶಿವಂ ಮಾವಿ, ಶೆಲ್ಡನ್ ಜಾಕ್ಸನ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಅಂಕುಲ್ ರಾಯ್, ರಸಿಖ್ ದಾರ್, ಚಮಿಕಾ ಕರುಣಾರತ್ನೆ, ಬಾಬಾ ಇಂದ್ರಜಿತ್, ಅಭಿಜೀತ್ ತೋಮರ್, ಅಲೆಕ್ಸ್ ಹೇಲ್ಸ್, ರಮೇಶ್ ಕುಮಾರ್, ಮೊಹಮ್ಮದ್ ನಬಿ, ಅಮನ್ ಖಾನ್, ಉಮೇಶ್ ಯಾದವ್, ರಹಮಾನುಲ್ಲಾ ಗುರ್ಬಾಜ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, November 14, 2022, 14:46 [IST]
Other articles published on Nov 14, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X