ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಹಾಗೂ ಪೆಪ್ಸಿ ಜತೆಗಿನ 6 ವರ್ಷಗಳ ಡೀಲ್ ಅಂತ್ಯ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪೆಪ್ಸಿ ಜತೆಗಿನ 6 ವರ್ಷಗಳ ಡೀಲ್ ಅಂತ್ಯವಾಗಿದೆ. ಲಭ್ಯ ಮಾಹಿತಿಯಂತೆ ಸಾಫ್ಟ್ ಡ್ರಿಂಕ್ಸ್ ದಿಗ್ಗಜ ಸಂಸ್ಥೆ ಜತೆ ಒಪ್ಪಂದ ಮುಂದುವರೆಸಲು ಮನಸ್ಸಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

By Mahesh

ಲಂಡನ್, ಜೂನ್ 07: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪೆಪ್ಸಿ ಜತೆಗಿನ 6 ವರ್ಷಗಳ ಡೀಲ್ ಅಂತ್ಯವಾಗಿದೆ. ಲಭ್ಯ ಮಾಹಿತಿಯಂತೆ ಸಾಫ್ಟ್ ಡ್ರಿಂಕ್ಸ್ ದಿಗ್ಗಜ ಸಂಸ್ಥೆ ಜತೆ ಒಪ್ಪಂದ ಮುಂದುವರೆಸಲು ಮನಸ್ಸಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಪಂದ್ಯದ ನಂತರ ತಮ್ಮ ಫೌಂಡೇಶನ್ ಮೂಲಕ ಚಾರಿಟಿ ಕಾರ್ಯಕ್ರಮದಲ್ಲಿ ಕೊಹ್ಲಿ ಮಗ್ನರಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಗಾಗಿ ಫಿಟ್ನೆಸ್ ಉಳಿಸಿಕೊಳ್ಳಬೇಕಾಗಿರುವುದರಿಂದ ಸಾಫ್ಟ್ ಡ್ರಿಂಕ್ಸ್ ತೊರೆದಿದ್ದಾಗಿ ಕೊಹ್ಲಿ ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು

ಸೆಲೆಬ್ರಿಟಿ ರಾಯಭಾರಿ ವಿರಾಟ್ ಕೊಹ್ಲಿ ಅವರು ಅಮೆರಿಕದ ದೈತ್ಯ ಸಾಫ್ಟ್ ಡ್ರಿಂಕ್ಸ್ ಸಂಸ್ಥೆ ಪೆಪ್ಸಿ ಕೋ ಜತೆಗಿನ 6 ವರ್ಷಗಳ ಒಪ್ಪಂದವನ್ನು ಮುಂದುವರೆಸಲು ಇಚ್ಛಿಸಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಕೊಹ್ಲಿ ಅವರು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.

'ನಾನು ನನ್ನ ಫಿಟ್ನೆಸ್ ತರಬೇತಿ ಆರಂಭಿಸಿದ ಮೇಲೆ ನನ್ನ ಜೀವನಶೈಲಿ ಬದಲಾಗಿದೆ. ನನ್ನ ಜೀವನಶೈಲಿ ಬದಲಾಯಿಸಲು ಪೂರಕವಾಗಿರುವ ಅಂಶಗಳನ್ನು ಮಾತ್ರ ನಾನು ಸ್ವೀಕರಿಸುತ್ತಿದ್ದೇನೆ. ಈ ಹಿಂದೆ ನಾನು ಪ್ರಚಾರ ಮಾಡಿದ ಅನೇಕ ಉತ್ಪನ್ನಗಳನ್ನು ಈಗ ತ್ಯಜಿಸಬೇಕಾಗುತ್ತದೆ. ನಾನು ಸೇವಿಸದೆ ಇರುವ ಉತ್ಪನ್ನಗಳ ಪರ ಪ್ರಚಾರ ಮಾಡುವುದರಲ್ಲಿ ಅರ್ಥವಿಲ್ಲ. ದುಡ್ಡು ಸಿಗುತ್ತದೆ ಎಂಬ ಕಾರಣಕ್ಕೆ ಜನರ ಮುಂದೆ ಇಂಥ ಉತ್ಪನ್ನಗಳ ಪ್ರಚಾರಕ್ಕೆ ನಿಲ್ಲುವುದು ಸರಿಯಲ್' ಎಂದು ಸಿಎನ್ಎನ್ ಐಬಿಎನ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಕೊಹ್ಲಿ ಹಾಲಿ ಬ್ರ್ಯಾಂಡ್ ಮೌಲ್ಯ

ಕೊಹ್ಲಿ ಹಾಲಿ ಬ್ರ್ಯಾಂಡ್ ಮೌಲ್ಯ

ಕೊಹ್ಲಿ ಅವರ ಈ ಸಮಯದ ಬ್ರ್ಯಾಂಡ್ ಮೌಲ್ಯ 120 ದಶಲಕ್ಷ ಡಾಲರ್​ಗೂ (773 ಕೋಟಿ ರೂ) ಅಧಿಕವಾಗಿದೆ. ಕೊಹ್ಲಿ ಅವರು ಹೊಸ ಒಪ್ಪಂದಗಳ ಜಾಹೀರಾತು-ಪ್ರಚಾರಗಳಿಗೆ ದಿನಕ್ಕೆ 5 ಕೋಟಿ ರೂ. ಸಂಭಾವನೆ ಪಡೆಯುವ ಸುದ್ದಿಯಿದೆ. ಜಾಹೀರಾತುಗಳಿಂದ ಬರುವ ಅನೇಕ ಮೊತ್ತವನ್ನು ಸಾಮಾಜಿಕ ಕಳಕಳಿ ಕಾರ್ಯಗಳಿಗೆ ಬಳಸುತ್ತಿದ್ದಾರೆ.

ಧೋನಿ ನಂತರ ಕೊಹ್ಲಿ

ಧೋನಿ ನಂತರ ಕೊಹ್ಲಿ

2016ರಲ್ಲಿ ಎಂಎಸ್ ಧೋನಿ ಅವರು ಪೆಪ್ಸಿ ಜತೆಗಿನ 11 ವರ್ಷಗಳ ಡೀಲ್ ಕ್ಯಾನ್ಸಲ್ ಮಾಡಿಕೊಂಡ ಬಳಿಕ ಟೀಂ ಇಂಡಿಯಾದ ಅತ್ಯಂತ ಜನಪ್ರಿಯ ಆಟಗಾರ ವಿರಾಟ್ ಕೊಹ್ಲಿ ಅವರು ಪೆಪ್ಸಿಯ ಪ್ರಚಾರಕರಾಗಿದ್ದರು. ಏಪ್ರಿಲ್ 30, 2017ಕ್ಕೆ ಕೊಹ್ಲಿ ಅವರ ಒಪ್ಪಂದದ ಅವಧಿ ಮುಕ್ತಾಯವಾಗಿದೆ. ಕೊಹ್ಲಿಗೆ ಡೀಲ್ ಮುಂದುವರೆಸುವುದು ಬೇಕಿಲ್ಲ, ಆದರೆ, ಕೊಹ್ಲಿ ಅವರನ್ನು ಪ್ರತಿನಿಧಿಸುವ ಕಾರ್ನರ್ ಸ್ಟೋನ್ ಸಂಸ್ಥೆ ಮಾತ್ರ ಇನ್ನೂ ಪೆಪ್ಸಿ ಜತೆ ಡೀಲ್ ಮಾಡುತ್ತಿದೆ.

18 ಬ್ರ್ಯಾಂಡ್​ಗಳ ಸರದಾರ

18 ಬ್ರ್ಯಾಂಡ್​ಗಳ ಸರದಾರ

ಕೊಹ್ಲಿ ಅವರು ಸರಿ ಸುಮಾರು ಒಟ್ಟು 18 ಬ್ರ್ಯಾಂಡ್​ಗಳ ಪ್ರಚಾರ ರಾಯಭಾರಿಯಾಗಿದ್ದಾರೆ. ಇದರಲ್ಲಿ ಆಹಾರೋತ್ಪನ್ನ, ಪಾನೀಯ, ಆಡಿ ಕಾರ್, ಕೋಲ್ಗೆಟ್, ಪುಮಾ ಕ್ರೀಡಾ ಉಡುಪು, ಎಂಆರ್​ಎಫ್ ಟೈರ್, ಟಿಸಾಟ್ ವಾಚ್, ಲಗೇಜ್ ಬ್ಯಾಗ್ ಮುಂತಾದವು ಸೇರಿವೆ. ಕಳೆದ ಫೆಬ್ರವರಿಯಲ್ಲಿ ಅವರು ಪ್ಯೂಮಾ ಜತೆ 110 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಕೋಲಾ ಬೇಡ ಎಂದ ಸೆಲೆಬ್ರಿಟಿಗಳು

ಕೋಲಾ ಬೇಡ ಎಂದ ಸೆಲೆಬ್ರಿಟಿಗಳು

2001ರ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದ ಪುಲ್ಲೇಲಾ ಗೋಪಿಚಂದ್ ಅವರಿಗೆ ಸಾಫ್ಟ್ ಡ್ರಿಂಕ್ಸ್ ಕಂಪನಿ ಕೋಕಾ ಕೋಲಾ ಪ್ರಚಾರ ರಾಯಭಾರಿಯಾಗುವಂತೆ ಆಫರ್ ನೀಡಿತ್ತು. ಆದರೆ ಗೋಪಿ ಇದನ್ನು ತಿರಸ್ಕರಿಸಿದ್ದರು. 2014ರಲ್ಲಿ ಅಮಿತಾಭ್ ಬಚ್ಚನ್ ಕೂಡ ಪೆಪ್ಸಿ ಬ್ರ್ಯಾಂಡ್ ಪ್ರಚಾರದಿಂದ ಹೊರನಡೆದಿದ್ದರು.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X