ಸ್ಟೀವ್‌ ವಾ ಪ್ರಕಾರ ವಿಶ್ವಕಪ್‌ನಲ್ಲಿ ಮಿಂಚುವ ಬ್ಯಾಟ್ಸ್‌ಮನ್‌ಗಳಿವರು!

ಮೆಲ್ಬೋರ್ನ್‌, ಮೇ 24: ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ 12ನೇ ಆವೃತ್ತಿಯಲ್ಲಿ ಮಿಂಚಬಲ್ಲ 3 ಅಗ್ರಮಾನ್ಯ ಬ್ಯಾಟ್ಸ್‌ಮನ್‌ಗಳನ್ನು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್‌ ವಾ ಆಯ್ಕೆ ಮಾಡಿದ್ದಾರೆ.

ಕ್ರಿಕೆಟ್‌ನಿಂದಲೇ ದೂರ ಸರಿಯುವ ಆಲೋಚನೆಯಲ್ಲಿದ್ದ ಹರ್ಮನ್‌ಪ್ರೀತ್‌!

1999ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ವಿಶ್ವಕಪ್‌ ಗೆದ್ದುಕೊಟ್ಟ ನಾಯಕ ಸ್ಟೀವ್‌ ವಾ, ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಇಂಗ್ಲೆಂಡ್‌ ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ ಮತ್ತು ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಅವರನ್ನು ವಿಶ್ವಕಪ್‌ನಲ್ಲಿ ಅಬ್ಬರಿಸಬಲ್ಲ ಟಾಪ್‌ 3 ಬ್ಯಾಟ್ಸ್‌ಮನ್‌ಗಳಾಗಿ ಆಯ್ಕೆ ಮಾಡಿದ್ದಾರೆ.

ಬುಮ್ರಾ ಬೌಲಿಂಗ್‌ನಲ್ಲಿ ರನ್‌ ಗಳಿಸುವ ತಂತ್ರ ಬಿಚ್ಚಿಟ್ಟ ಬ್ರಿಯಾನ್‌ ಲಾರಾ

"ಖಂಡಿತ ವಿರಾಟ್‌ ಕೊಹ್ಲಿ. ಅವರು ನಂ.1 ಬ್ಯಾಟ್ಸ್‌ಮನ್‌,'' ಎಂದು ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ವಿಶ್ವಕಪ್‌ನಲ್ಲಿಎಲ್ಲರ ಹಾಟ್‌ ಫೇವರಿಟ್‌ ಬ್ಯಾಟ್ಸ್‌ಮನ್‌ ಎಂದು ಸ್ಟೀವ್‌ ವಾ ಹೇಳಿದ್ದಾರೆ. ವೃತ್ತಿ ಬದುಕಿನ ಮೂರನೇ ವಿಶ್ವಕಪ್‌ ಟೂರ್ನಿಯಲ್ಲಿ ಆಡುತ್ತಿರುವ ವಿರಾಟ್‌ ಕೊಹ್ಲಿ, ತಮ್ಮ ನಾಯಕತ್ವದಲ್ಲಿ ಮೊದಲ ವಿಶ್ವಕಪ್‌ ಗೆಲ್ಲುವ ತುಡಿತ ಹೊಂದಿದ್ದಾರೆ. ಕಿರಿಯರ ವಿಶ್ವಕಪ್‌ನಲ್ಲಿ ಭಾರತಕ್ಕೆ ಚಾಂಪಿಯನ್ಸ್‌ ಪಟ್ಟ ಗೆದ್ದುಕೊಟ್ಟಿರುವ ಕೊಹ್ಲಿ, ಇದೀಗ ಹಿರಿಯ ವಿಶ್ವಕಪ್‌ನಲ್ಲೂ ಅಂಥದ್ದೇ ಮೋಡಿ ಮಾಡಬಲ್ಲರೆ ಎಂಬುದನ್ನು ಕಾದು ನೋಡಬೇಕಿದೆ.

ಫೇವರಿಟ್ಸ್‌ ಎಂದ ಮಾತ್ರಕ್ಕೆ ಭಾರತ ಪ್ರಶಸ್ತಿ ಗೆದ್ದಂತಲ್ಲ: ಶಾಕಿಬ್‌!

ಇನ್ನು ಇಂಗ್ಲೆಂಡ್‌ ತಂಡದ ಸ್ಟೋಟಕ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌, ವಾ ಅವರ ಆಯ್ಕೆಯ ಎರಡನೇ ಬ್ಯಾಟ್ಸ್‌ಮನ್‌ ಆಗಿದ್ದಾರೆ. "ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಜೋಸ್‌ ಬಟ್ಲರ್‌ ಅವರನ್ನು 2ನೇ ಸ್ಥಾನದಲ್ಲಿ ನೋಡಲು ಬಯಸುತ್ತೇನೆ,'' ಎಂದು ವಾ ಹೇಳಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಬಟ್ಲರ್‌ ಅಮೋಘ ಪ್ರದರ್ಶನ ನೀಡಿದ್ದಾರೆ. ಕೇವಲ ಏಕದಿನದಲ್ಲಿ ಮಾತ್ರವಲ್ಲ ಟೆಸ್ಟ್‌ ಹಾಗೂ ಟಿ20ಯಲ್ಲೂ ಬಟ್ಲರ್‌ ಅಬ್ಬರಿಸಿದ್ದಾರೆ. ಇತ್ತೀಚೆಗಷ್ಟೇ ನಡೆದ ಪಾಕಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಬಟ್ಲರ್‌ 50 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದರು.

ವಿಶ್ವಕಪ್‌: ಆಸ್ಟ್ರೇಲಿಯಾ ತಂಡದ ದೌರ್ಬಲ್ಯ ಬಿಚ್ಚಿಟ್ಟ ರಿಕಿ ಪಾಂಟಿಂಗ್‌!

ಬಾಲ್‌ ಟ್ಯಾಂಪರಿಂಗ್‌ನಲ್ಲಿ ಸಿಕ್ಕಿಬಿದ್ದು ಕ್ರಿಕೆಟ್‌ ಆಸ್ಟ್ರೇಲಿಯಾದಿಂದ 13 ತಿಂಗಳ ನಿಷೇಧಕ್ಕೆ ಗುರಿಯಾಗಿದ್ದ ಆಸ್ಟ್ರೇಲಿಯಾ ತಂಡದ ಮಾಜಿ ಉಪನಾಯಕ ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಅವರನ್ನು ಸ್ಟೀವ್‌ ವಾ ಮೂರನೇ ಸ್ಥಾನದಲ್ಲಿ ಇಟ್ಟಿದ್ದಾರೆ. "ಆರೊನ್‌ ಫಿಂಚ್‌ ಕೂಡ ಈ ಸ್ಥಾನದಲ್ಲಿ ಕಾಣಿಸಿಕೊಳ್ಳಬಲ್ಲರು. ಆದರೆ, ಡೇವಿಡ್‌ ವಾರ್ನರ್‌ ಅವರನ್ನು ಮೂರನೇ ಬ್ಯಾಟ್ಸ್‌ಮನ್‌ ಆಗಿ ಆಯ್ಕೆ ಮಾಡುತ್ತೇನೆ,'' ಎಂದು ವಾ ವಿವರಿಸಿದ್ದಾರೆ.

ವಿಶ್ವಕಪ್‌: ಪಾಕ್‌ ತಂಡದ ಸಾಮರ್ಥ್ಯ ವಿವರಿಸಿದ ಶಾಹಿದ್‌ ಅಫ್ರಿದಿ

ವಿಶ್ವಕಪ್‌ಗೂ ಮುನ್ನ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಪಾಲ್ಗೊಂಡಿದ್ದ ಡೇವಿಡ್‌ ವಾರ್ನರ್‌, ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ 12 ಪಂದ್ಯಗಳನ್ನಾಡಿ 692 ರನ್‌ಗಳನ್ನು ಚಚ್ಚುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಆಗಿ ಆರೆಂಜ್‌ ಕ್ಯಾಪ್‌ ಪಡೆದುಕೊಂಡಿದ್ದರು. ಇದೀಗ ವಿಶ್ವಕಪ್‌ನಲ್ಲೂ ವಾರ್ನರ್‌ ಇದೇ ರೀತಿ ಅಬ್ಬರಿಸುತ್ತಾರೆ ಎಂಬುದು ಸ್ಟೀವ್‌ ವಾ ಅವರ ನಿರೀಕ್ಷೆಯಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Friday, May 24, 2019, 16:32 [IST]
Other articles published on May 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X