ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಂಡೀಸ್ ಸರಣಿಗೂ ಮುನ್ನ ವಿರಾಟ್ ಯೋ ಯೋ ಟೆಸ್ಟ್ ಪಾಸಾಗಬೇಕಿದೆ!

Kohli to undergo yo-yo test to prove fitness ahead of West Indies series

ನವದೆಹಲಿ, ಸೆಪ್ಟೆಂಬರ್ 27: ಏಷ್ಯಾ ಕಪ್ ಟೂರ್ನಿಯ ವೇಳೆ ವಿಶ್ರಾಂತಿಯಲ್ಲಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂಬರಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಮುನ್ನ ತನ್ನ ಫಿಟ್ನೆಸ್ ಸಾಭೀತುಪಡಿಸಬೇಕಿದೆ. ಹೀಗಾಗಿ ಕೊಹ್ಲಿ ಯೋ ಯೋ ಟೆಸ್ಟ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತ vs ಅಫ್ಘಾನಿಸ್ತಾನ ಪಂದ್ಯದ ವೇಳೆ ಕಣ್ಣೀರಿಟ್ಟ ಮಗುವಿನ ಚಿತ್ರ ವೈರಲ್!ಭಾರತ vs ಅಫ್ಘಾನಿಸ್ತಾನ ಪಂದ್ಯದ ವೇಳೆ ಕಣ್ಣೀರಿಟ್ಟ ಮಗುವಿನ ಚಿತ್ರ ವೈರಲ್!

ವರದಿಯೊಂದರಲ್ಲಿ ಹೇಳಿರುವಂತೆ ವಿರಾಟ್ ಕೊಹ್ಲಿ ತವರಿನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಮೊದಲು ಯೋ ಯೋ ಟೆಸ್ಟ್ ನಲ್ಲಿ ಭಾಗವಹಿಸಲಿದ್ದಾರೆ. ಕೊಹ್ಲಿಗೆ ಟೆಸ್ಟ್ ಸೆಪ್ಟೆಂಬರ್ 28ರಂದು ನಡೆಯಲಿದೆ. ಟೆಸ್ಟ್ ಬಳಿಕವೇ ಸರಣಿಗೆ ಸಂಬಂಧಿಸಿ ತಂಡಗಳ ಆಯ್ಕೆ ನಡೆಯಲಿದೆ.

ತಂಡಕ್ಕೆ ಆಯ್ಕೆಯಾಗುವ ಮುನ್ನ ಎಲ್ಲಾ ಆಟಗಾರರೂ ಫಿಟ್ನೆಸ್ ಟೆಸ್ಟ್ ನಲ್ಲಿ ಪಾಸಾಗಬೇಕಾದ ಮಾನದಂಡವನ್ನು ಬಿಸಿಸಿಐ ವಿಧಿಸಿರುವುದರಿಂದ ಇಂಗ್ಲೆಂಡ್ ಟೆಸ್ಟ್ ಸರಣಿ ಬಳಿಕ ವಿಶ್ರಾಂತಿಯಲ್ಲಿದ್ದ ಕೊಹ್ಲಿ ಯೋ ಯೋ ಟೆಸ್ಟ್ ಗೆ ಒಳಪಟ್ಟು ಫಿಟ್ನೆಸ್ ಸಾಭೀತುಪಡಿಸಬೇಕಿದೆ.

ಲಾರ್ಡ್ಸ್ ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ವೇಳೆ ಕೊಹ್ಲಿ ಬೆನ್ನು ನೋವಿನಿಂದ ಬಳಲಿದ್ದರು. ಈ ನಿಟ್ಟಿನಲ್ಲೂ ಕೊಹ್ಲಿ ಫಿಟ್ನೆಸ್ ಟೆಸ್ಟ್ ನಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿದೆ. ಭಾರತದ ಆಟಗಾರರು ಟೆಸ್ಟ್ ನಲ್ಲಿ ಪಾಸಾಗಬೇಕಾದರೆ 16.1 ಪಾಯಿಂಟ್ ಗಳಿಸಬೇಕಿದೆ.

ಭಾರತದ ಇನ್ನಿಬ್ಬರು ಅನುಭವಿ ಆಟಗಾರರಾದ ರವಿಚಂದ್ರನ್ ಅಶ್ವಿನ್ ಮತ್ತು ಇಶಾಂತ್ ಶರ್ಮಾ ಅವರೂ ಸೆಪ್ಟೆಂಬರ್ 29ರಂದು ಫಿಟ್ನೆಸ್ ಟೆಸ್ಟ್ ಗೆ ಒಳಗಾಗಲಿದ್ದಾರೆ. ವಿಂಡೀಸ್ ವಿರುದ್ಧದ ಕ್ರಿಕೆಟ್ ಸರಣಿ ಅಕ್ಟೋಬರ್ 4ರಿಂದ ಆರಂಭಗೊಳ್ಳಲಿದೆ. ಸರಣಿಯು 2 ಟೆಸ್ಟ್, 5 ಏಕದಿನ ಮತ್ತು ಮತ್ತು 3 ಟಿ20 ಪಂದ್ಯಗಳನ್ನು ಒಳಗೊಂಡಿದೆ.

Story first published: Thursday, September 27, 2018, 14:59 [IST]
Other articles published on Sep 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X