ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲೆಂಡ್: ಶೇನ್ ಬಾಂಡ್ ದಾಖಲೆ ಮುರಿದ ಕೈಲ್ ಜೇಮಿಸನ್

Kyle Jamieson surpasses Shane Bond to become quickest NZ bowler to 50 Test wickets Milestone

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಎರಡು ತಂಡಗಳು ಕೂಡ ಜಿದ್ದಾಜಿದ್ದಿನ ಪ್ರದರ್ಶನ ನೀಡುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಅಲ್ಪ ಮುನ್ನಡೆ ಪಡೆದುಕೊಂಡ ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದಿದೆ. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತೀಯ ತಂಡದ ವಿರುದ್ಧ ಕಿವೀಸ್ ಪಡೆ ಮತ್ತೊಮ್ಮೆ ಮೇಲುಗೈ ಸಾಧಿಸಿದೆ. ಅದರಲ್ಲೂ ಕೈಲ್ ಜೇಮಿಸನ್ ಆರಂಭದಲ್ಲಿಯೇ ಆಘಾತ ನೀಡುವ ಮೂಲಕ ಭಾರತ ತಂಡಕ್ಕೆ ಸಂಕಷ್ಟವನ್ನು ತಂದೊಡ್ಡಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಕಿವೀಸ್ ಪಡೆದ ಯುವ ವೇಗಿ ಕೈಲ್ ಜೇಮಿಸನ್ ನ್ಯೂಜಿಲೆಂಡ್ ತಂಡದ ಪರವಾಗಿ ಪ್ರಮುಖ ದಾಖಲೆಯೊಂದನ್ನು ಬರೆದಿದ್ದಾರೆ. ಕಿವೀಸ್ ತಂಡದ ಪರವಾಗಿ ಅತ್ಯಮಥ ವೇಗಿವಾಗಿ ಟೆಸ್ಟ್‌ನಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ ಕೈಲ್ ಜೇಮಿಸನ್. ಕಿವೀಸ್ ಪಡೆಯ ಪ್ರಮುಖ ವೇಗಿ ಶೇನ್ ಬಾಂಡ್ ಅವರನ್ನು ಹಿಂದಿಕ್ಕಿದ್ದಾರೆ ಕೈಲ್ ಜೇಮಿಸನ್.

ವಿಜಯ್ ಹಜಾರೆ ಟ್ರೋಫಿ 2021: ಕರ್ನಾಟಕ ತಂಡ ಪ್ರಕಟ, ಯಾರಿಗೆಲ್ಲಾ ಅವಕಾಶ?ವಿಜಯ್ ಹಜಾರೆ ಟ್ರೋಫಿ 2021: ಕರ್ನಾಟಕ ತಂಡ ಪ್ರಕಟ, ಯಾರಿಗೆಲ್ಲಾ ಅವಕಾಶ?

ನ್ಯೂಜಿಲೆಂಡ್ ತಂಡದ ವೇಗಿ ಕೈಲ್ ಜೇಮಿಸನ್ ಭಾರತದ ಎರಡನೇ ಇನ್ನಿಂಗ್ಸ್‌ನ ಆರಂಭದಲ್ಲಿಯೇ ಶುಬ್ಮನ್ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ಶೇನ್ ಬಾಂಡ್ ದಾಖಲೆ ಮುರಿಯುವ ಸನಿಹಕ್ಕೆ ಬಂದಿದ್ದರು ಜೇಮಿಸನ್. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಎಸೆದ ಮೊದಲ ಎಸೆತದಲ್ಲಿಯೇ ಗಿಲ್ ವಿಕೆಟ್ ಪಡೆಯುವ ಮೂಲಕ ಅವರು 9ನೇ ಪಂದ್ಯದಲ್ಲಿ 50 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. 15.02ರ ಸರಾಸರಿಯಲ್ಲಿ ಬೌಲಿಂಗ್ ಮಾಡಿರುವ ಜೇಮಿಸನ್ ಐದು ವಿಕೆಟ್‌ಗಳ ಗೊಂಚಲನ್ನು ಐದು ಬಾರಿ ಪಡೆದುಕೊಂಡಿದ್ದಾರೆ. ಒಂದು ಬಾರಿ 10 ವಿಕೆಟ್‌ಗಳ ಗೊಂಚಲು ಸಂಪಾದಿಸಿದ್ದಾರೆ.

ನ್ಯೂಜಿಲೆಂಡ್ ತಂಡದ ಮಾಜಿ ವೇಗಿ ಶೇನ್ ಬಾಡ್ 50 ವಿಕೆಟ್‌ಗಳ ಮೈಲಿಗಲ್ಲನ್ನು 12 ಪಂದ್ಯಗಳಲ್ಲಿ ಸಾಧಿಸಿ ಕಿವೀಸ್ ರಾಷ್ಟ್ರದ ಪರವಾಗಿ ಅತಿ ವೇಗವಾಗಿ ಈ ಸಾಧನೆ ಮಾಡಿದ ಆಟಗಾರ ಎನಿಸಿದ್ದರು. 2001ರಲ್ಲಿ ಈ ದಿಗ್ಗಜ ಬೌಲರ್ ಆಡಿದ ಸಾಧನೆಯನ್ನು ನ್ಯೂಜಿಲೆಂಡ್ ತಂಡದ ಯುವ ವೇಗಿ ಕೈಲ್ ಜೇಮಿಸನ್ ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಹೊಸ ರೂಪಾಂತರದ ಭಯ: ಭಾರತ 'A' ಕ್ರಿಕೆಟ್ ಸರಣಿ ಮುಂದುವರಿಕೆಗೆ ಮುಂದಾದ ಬಿಸಿಸಿಐ!ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಹೊಸ ರೂಪಾಂತರದ ಭಯ: ಭಾರತ 'A' ಕ್ರಿಕೆಟ್ ಸರಣಿ ಮುಂದುವರಿಕೆಗೆ ಮುಂದಾದ ಬಿಸಿಸಿಐ!

ಇನ್ನು ಒಟ್ಟಾರೆಯಾಗಿ ಕೈಲ್ ಜೇಮಿಸನ್ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾದ ಆರ್ ಅಶ್ವಿನ್ ಕೂಡ ಇಷ್ಟೇ ಪಂದ್ಯಗಳಿಂದ 50 ವಿಕೆಟ್ ಪಡೆದ ಸಾಧನೆ ಮಾಡಿ ನಾಲ್ಕನೇ ಸ್ಥಾನವನ್ನು ಇತರ ಕೆಲ ಆಟಗಾರರೊಂದಿಗೆ ಹಂಚಿಕೊಂಡಿದ್ದಾರೆ.

KS Bharath ಪಂದ್ಯಕ್ಕೆ ಸಿದ್ದವಾಗಿದ್ದು ಕೇವಲ 12 ನಿಮಿಷದಲ್ಲಿ | Oneindia Kannada

ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 50 ವಿಕೆಟ್‌ಗಳನ್ನು ಪಡೆದ ದಾಖಲೆ ಆಸ್ಟ್ರೇಲಿಯಾದ ವೇಗಿ ಚಾರ್ಲ್ಸ್ ಟರ್ನರ್ ಹೆಸರಿನಲ್ಲಿದೆ. 1888ರಲ್ಲಿ ಟರ್ನರ್ 6 ಪಂದ್ಯಗಳಲ್ಲಿ ಈ ಸಾಧನೆ ಮಾಡಿ ದಾಖಲೆ ಬರೆದಿದ್ದು ಈವರೆಗೂ ವಿಶ್ವ ದಾಖಲೆಯಾಗಿಯೇ ಉಳಿದುಕೊಂಡಿದೆ. 20ನೇ ಶತಮಾನದಲ್ಲಿ ವೇಗವಾಗಿ ವಿಕೆಟ್‌ಗಳ ಅರ್ಧ ಶತಕದ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿದ್ದಾರೆ ಜೇಮಿಸನ್. ಕಿವೀಸ್‌ನ ಈ ಆಟಗಾರ 1865 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ವೆರ್ನನ್ ಫಿಲಾಂಡರ್ 1240 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರೆ ಆಸ್ಟ್ರೇಲಿಯಾದ ದಿಗ್ಗಜ ಬೌಲರ್ ಬ್ರೇಟ್ ಲೀ 1844 ಎಸೆತಗಳಲ್ಲಿ ಈ ಸಾಧನೆ ಮಾಡಿ ಮೊದಲ ಎರಡು ಸ್ಥಾನದಲ್ಲಿದ್ದಾರೆ.

Story first published: Monday, November 29, 2021, 10:35 [IST]
Other articles published on Nov 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X