ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World cup 2022: ತಂಡದಲ್ಲಿ ಬದಲಾವಣೆ ಮಾಡಲು ಕೊನೆ ದಿನಾಂಕ ಯಾವಾಗ? ಈ ತಂಡಗಳಲ್ಲಿ ಬದಲಾವಣೆ?

T20 World Cup 2022

ಐಸಿಸಿ ಪುರುಷರ ಟಿ20 ವಿಶ್ವಕಪ್ 2022 ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 16ರಿಂದ ಪ್ರತಿಷ್ಠಿತ ಟೂರ್ನಿ ಆರಂಭವಾಗಲಿದ್ದು, ನವೆಂಬರ್ 13ರಂದು ಕೊನೆಯಾಗಲಿದೆ. ಈ ಬಾರಿ ಟಿ20 ವಿಶ್ವಕಪ್‌ನಲ್ಲಿ 16 ರಾಷ್ಟ್ರಗಳ ತಂಡಗಳು ಭಾಗವಹಿಸಲಿದ್ದು, ತಮ್ಮ ತಂಡಗಳನ್ನು ಹೆಸರಿಸಿದೆ.

Ind Vs Aus T20: ಈ ಆಟಗಾರನಿಗೆ ಬ್ಯಾಟಿಂಗ್‌ಗೆ ಹೆಚ್ಚಿನ ಅವಕಾಶ ಸಿಗಬೇಕು : ರೋಹಿತ್ ಶರ್ಮಾInd Vs Aus T20: ಈ ಆಟಗಾರನಿಗೆ ಬ್ಯಾಟಿಂಗ್‌ಗೆ ಹೆಚ್ಚಿನ ಅವಕಾಶ ಸಿಗಬೇಕು : ರೋಹಿತ್ ಶರ್ಮಾ

ಪಂದ್ಯಾವಳಿ ಮೊದಲ ಸುತ್ತಿನ ಪಂದ್ಯಗಳೊಂದಿಗೆ ಪ್ರಾರಂಭವಾಗುತ್ತದೆ, ಇದರಲ್ಲಿ ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ನಮೀಬಿಯಾ, ನೆದರ್ಲ್ಯಾಂಡ್ಸ್, ಶ್ರೀಲಂಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಎ ಗುಂಪಿನಲ್ಲಿದ್ದರೆ, ಐರ್ಲೆಂಡ್, ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಬಿ ಗುಂಪಿನಲ್ಲಿದ್ದಾರೆ. ಮೊದಲ ಸುತ್ತಿನ ವಿಜೇತರು ಮತ್ತು ರನ್ನರ್ ಅಪ್ ಈಗಾಗಲೇ ಅರ್ಹತೆ ಪಡೆದ ಎಂಟು ತಂಡಗಳ ಗುಂಪನ್ನು ಸೇರಿಕೊಳ್ಳುತ್ತಾರೆ. ಸೂಪರ್ 12 ರ ಸುತ್ತು, ಇದು ಅಕ್ಟೋಬರ್ 22 ರಂದು ಪ್ರಾರಂಭವಾಗುತ್ತದೆ.

ಎಲ್ಲಾ ತಂಡಗಳು ತಮ್ಮ 15 ಸದಸ್ಯರ ತಂಡವನ್ನು ಘೋಷಿಸಿದ್ದರೂ, ಕೆಲವು ರಾಷ್ಟ್ರಗಳ ತಂಡಗಳಲ್ಲಿ ಸಂಭವನೀಯ ಬದಲಾವಣೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವು ತಂಡಗಳಲ್ಲಿ ವಿಶ್ವಕಪ್‌ ಆರಂಭಕ್ಕೂ ಮುನ್ನ ಅಂತಿಮ ಕ್ಷಣದಲ್ಲಿ ಆಟಗಾರರ ಬದಲಾವಣೆಯಾಗುವ ಸಾಧ್ಯತೆ ಇದೆ.

ಅಕ್ಟೋಬರ್ 9ರವರೆಗೆ ಇದೆ ಅವಕಾಶ

ಅಕ್ಟೋಬರ್ 9ರವರೆಗೆ ಇದೆ ಅವಕಾಶ

ಆದರೆ ಆಟಗಾರರು ಯಾವುದೇ ಗಾಯದ ಸಮಸ್ಯೆಯಿಂದ ಬಳಲುತ್ತಿಲ್ಲವಾದರೂ, ತಂಡಗಳು ತಮ್ಮ ಟಿ20 ವಿಶ್ವಕಪ್ ತಂಡವನ್ನು ಬದಲಾಯಿಸಲು ಅನುಮತಿಸಲಾಗಿದೆಯೇ ಎನ್ನುವ ಪ್ರಶ್ನೆ ಕಾಡುತ್ತದೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ಗಾಗಿ ಐಸಿಸಿಯ ನಿಯಮದ ಪ್ರಕಾರ, ಎಲ್ಲಾ ತಂಡಗಳು ತಮ್ಮ ತಂಡದಲ್ಲಿ ಬದಲಾವಣೆಗಳನ್ನು ಮಾಡಲು ಅಕ್ಟೋಬರ್ 9 ರವರೆಗೆ ಸಮಯವಿದೆ. ಅದರ ನಂತರ, ಅವರು ಐಸಿಸಿಯಿಂದ ಮಂಜೂರಾದ ಯಾವುದೇ ತಂಡ ಬದಲಾವಣೆಗಳನ್ನು ಹೊಂದಿರಬೇಕು.

Ind Vs Aus T20: ರಾಹುಲ್ ದ್ರಾವಿಡ್ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ

ವಿಶ್ವಕಪ್ ತಂಡದಲ್ಲಿ ಗ್ರೀನ್‌ಗೆ ಅವಕಾಶ

ವಿಶ್ವಕಪ್ ತಂಡದಲ್ಲಿ ಗ್ರೀನ್‌ಗೆ ಅವಕಾಶ

ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಆಸ್ಟ್ರೇಲಿಯಾದ ಟಿ20 ವಿಶ್ವಕಪ್ 2022 ತಂಡದ ಭಾಗವಾಗಿಲ್ಲ. ಸೆಪ್ಟೆಂಬರ್ 25 ರಂದು ಕೊನೆಗೊಂಡ ಟಿ20 ಸರಣಿಯಲ್ಲಿ ಭಾರತದಲ್ಲಿ ಅವರ ಅತ್ಯುತ್ತಮ ಪ್ರದರ್ಶನ ಗಮನ ಸೆಳೆದಿದೆ. ಅವರನ್ನು ಆಸ್ಟ್ರೇಲಿಯಾ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವ ಬಗ್ಗೆ ಒತ್ತಾಯಿಸಲಾಗುತ್ತಿದೆ.

ಭಾರತದ ವಿರುದ್ಧದ ಸರಣಿಯಲ್ಲಿ ಮೊಹಾಲಿ ಮತ್ತು ಹೈದರಾಬಾದ್ ಪಂದ್ಯದಲ್ಲಿ ಕ್ಯಾಮರೂನ್ ಗ್ರೀನ್ ಭರ್ಜರಿ ಅರ್ಧಶತಕ ಗಳಿಸಿದ್ದರು. ಹೈದರಾಬಾದ್‌ನಲ್ಲಿ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಭಾರತದ ವಿರುದ್ಧ ವೇಗವಾಗಿ ಅರ್ಧಶತಕ ಗಳಿಸಿದ ಆಟಗಾರ ಎನಿಸಿಕೊಂಡರು.

ಟೀಂ ಇಂಡಿಯಾದಲ್ಲಿ ಬದಲಾವಣೆ?

ಟೀಂ ಇಂಡಿಯಾದಲ್ಲಿ ಬದಲಾವಣೆ?

ಐಸಿಸಿ ವಿಶ್ವಕಪ್‌ಗೆ ಆಯ್ಕೆಯಾಗಿರುವ ಟೀಮ್ ಇಂಡಿಯಾದ ಕೆಲವು ವೇಗದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಲು ಹೆಣಗಾಡುತ್ತಿದ್ದಾರೆ. ಅಂತಿಮ ಓವರ್ ಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಡುತ್ತಿರುವುದು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

ಅಂತಿಮ ಕ್ಷಣದಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆ ಆಗುವ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲದಿದ್ದರೂ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಬೌಲರ್ ಗಳು ಕಳಪೆ ಪ್ರದರ್ಶನ ನೀಡಿದರೆ ಮಾತ್ರ ಭಾರತ ತಂಡದಲ್ಲಿ ಬದಲಾವಣೆ ಮಾಡುವ ಬಗ್ಗೆ ಚಿಂತಿಸುವ ಸಾಧ್ಯತೆ ಇದೆ.

ಪಾಕಿಸ್ತಾನ ತಂಡದಲ್ಲಿ ಬದಲಾವಣೆ

ಪಾಕಿಸ್ತಾನ ತಂಡದಲ್ಲಿ ಬದಲಾವಣೆ

ಟಿ20 ವಿಶ್ವಕಪ್ ಪಾಕಿಸ್ತಾನ ತಂಡದಲ್ಲಿ ಕೂಡ ಹಲವು ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂಗ್ಲೆಂಡ್ ವಿರುದ್ಧ 7 ಪಂದ್ಯಗಳ ಸರಣಿಯನ್ನಾಡುತ್ತಿರುವ ಪಾಕಿಸ್ತಾನ ತನ್ನ ಆಟಗಾರರ ಪ್ರದರ್ಶನವನ್ನು ಗಮನಿಸುತ್ತಿದೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಪಾಕಿಸ್ತಾನ ಮಧ್ಯಮ ಕ್ರಮಾಂಕ ಉತ್ತಮವಾಗಿಲ್ಲ ಎಂದು ಟೀಕಿಸಿದ್ದರು. ಶೋಯೆಬ್‌ ಮಲಿಕ್‌ಗೆ ಅವಕಾಶ ನೀಡಬೇಕಿತ್ತು ಎನ್ನುವ ಒತ್ತಾಯ ಕೂಡ ಕೇಳಿ ಬಂದಿತ್ತು. ಸದ್ಯ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 2-2ರಲ್ಲಿ ಸಮಬಲಗೊಳಿಸಿರುವ ಪಾಕಿಸ್ತಾನ, ಸರಣಿ ಮುಕ್ತಾಯದ ವೇಳೆಗೆ ಬದಲಾವಣೆ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ.

Story first published: Monday, September 26, 2022, 14:48 [IST]
Other articles published on Sep 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X