ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೂಜುಕೋರರಿಗೆ ಸಿಹಿ ಸುದ್ದಿ: ಬೆಟ್ಟಿಂಗ್ ಸಕ್ರಮಗೊಳಿಸಲು ಶಿಫಾರಸು

By Manjunatha
Law commission recommended to legalize betting in sports

ನವದೆಹಲಿ, ಜುಲೈ 07: ಜೂಜುಕೋರರಿಗೆ ಸಿಹಿಸುದ್ದಿಯೊಮದು ಬರುವ ನಿರೀಕ್ಷೆ ಇದೆ. ಕಾನೂನು ಆಯೋಗವು ಕ್ರಿಕೆಟ್ ಸೇರಿದಂತೆ ಕ್ರೀಡೆಗಳ ಬೆಟ್ಟಿಂಗ್ ಅನ್ನು ಕಾನೂನುಬದ್ಧಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡಿದೆ.

ಕ್ರಿಕೆಟ್ ಸೇರಿ ಹಲವು ಕ್ರೀಡೆಗಳ ಮೇಲೆ ಈಗಾಗಲೇ ಅನಿಯಂತ್ರಿತ ಬೆಟ್ಟಿಂಗ್ ನಡೆಯುತ್ತಿದ್ದು, ಬೆಟ್ಟಿಂಗ್ ಕಾನೂನುಬದ್ಧಗೊಳಿಸಿದರೆ ಇದರ ಮೇಲೆ ನಿಯಂತ್ರಣ ಸಾಧ್ಯ ಅಲ್ಲದೆ ಇದೊಂದು ಭರಪೂರ ಆದಾಯದ ಮೂಲವೂ ಆಗಲಿದೆ ಎಂದು ಆಯೋಗವು ವರದಿಯಲ್ಲಿ ಹೇಳಿದೆ.

ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಬೆಟ್ಟಿಂಗ್ ಕಾನೂನು ಬದ್ಧವಾಗಿದೆ. ರಾಹುಲ್ ದ್ರಾವಿಡ್ ಅವರೂ ಸಹ ಈ ಹಿಂದೆ ಒಮ್ಮೆ ಬೆಟ್ಟಿಂಗ್ ಅನ್ನು ಕಾನೂನುಬದ್ಧ ಮಾಡುವುದರ ಪರವಾಗಿ ಮಾತನಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಜೂಜಾಟವನ್ನು ಪ್ರತ್ಯಕ್ಷ ಅಥವಾ ಪರೋಕ್ಷ ತೆರಿಗೆ ಒಳಪಡಿಸಿ ಕಾನೂನು ಬದ್ಧಗೊಳಿಸಿದರೆ ಆದಾಯ ಮೂಲವೂ ಆಗುತ್ತದೆ. ಅಲ್ಲದೆ ಈಗ ನಿಯಂತ್ರಣ ಸಾಧ್ಯವಿಲ್ಲದ ಬೆಟ್ಟಿಂಗ್ ದಂಧೆಯ ಮೇಲೆ ನಿಯಂತ್ರಣ ಹೇರಲೂ ಸಹ ಇದು ಸಹಾಯವಾಗಲಿದೆ ಎಂದು ಆಯೋಗವು ಅಭಿಪ್ರಾಯ ಪಟ್ಟಿದೆ.

ಜೂಜಾಟವನ್ನು ಕಾನೂನು ಬದ್ಧಗೊಳಿಸಿದರೆ ವಿದೇಶಿ ಬಂಡವಾಳ ನೇರ ಹೂಡಿಕೆಯನ್ನಾಗಿಯೂ ಬಳಸಿಕೊಳ್ಳಬಹುದು. ನೇರ ನಿಯಂತ್ರಣ ಸಾಧ್ಯವಾಗದ ಇಂತಹಾ ಚಟುವಟಿಕೆಯನ್ನು ಕಾನೂನು ಬದ್ಧಗೊಳಿಸಿ ನಿಯಂತ್ರಿಸಲು ಸಾಧ್ಯ ಎಂದು ವರದಿಯಲ್ಲಿ ಹೇಳಲಾಗಿದೆ.

ಜೂಜಾಟ ಅಥವಾ ಬೆಟ್ಟಿಂಗ್ ಅನ್ನು ನಗದುರಹಿತಗೊಳಿಸಿ ಕೇವಲ ಡಿಜಿಟಲ್ ರೂಪಕ್ಕೆ ಅವಕಾಶ ಕೊಡಬೇಕು. ಬೆಟ್ಟಿಂಗ್ ದಾರರ ಆಧಾರ್ ಸಂಖ್ಯೆ ಅಥವಾ ಪ್ಯಾನ್ ದಾಖಲೆಗಳನ್ನು ಬಳಸಿಕೊಂಡು ಹಣದ ವಿನಿಯೋಗ ಮತ್ತು ವರ್ಗಾವಣೆಯನ್ನು ನಿಯಂತ್ರಿಸಬಹುದು ಎಂದು ಸಲಹೆ ನೀಡಿದೆ.

Story first published: Saturday, July 7, 2018, 11:34 [IST]
Other articles published on Jul 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X