ಲೆಜೆಂಡ್ಸ್ ಲೀಗ್ ಕ್ರಿಕೆಟ್: ಪಠಾಣ್ ಅಬ್ಬರ, ಏಷ್ಯಾ ಲಯನ್ಸ್ ವಿರುದ್ಧ ಗೆದ್ದ ಇಂಡಿಯಾ ಮಹಾರಾಜಸ್

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಏಕದಿನ ಸರಣಿ ಒಂದೆಡೆ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಸದ್ದು ಮಾಡಲು ಆರಂಭಿಸಿದೆ. ಜನವರಿ 20ರಿಂದ ಜನವರಿ 29ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ 3 ತಂಡಗಳು ಸೆಣಸಾಟ ನಡೆಸಲಿದ್ದು ವಿಶ್ವ ಕ್ರಿಕೆಟ್‍ನ ಹಲವಾರು ಮಾಜಿ ಕ್ರಿಕೆಟಿಗರು ಪಾಲ್ಗೊಳ್ಳುತ್ತಿದ್ದಾರೆ.

ಈ ಟೂರ್ನಿಯಲ್ಲಿ ಇಂಡಿಯನ್ ಮಹಾರಾಜಸ್, ಏಷ್ಯಾ ಲಯನ್ಸ್ ಮತ್ತು ವರ್ಲ್ಡ್ ಜಿಯಂಟ್ಸ್ ಎಂಬ 3 ತಂಡಗಳು ಕಣಕ್ಕಿಳಿಯುತ್ತಿದ್ದು, ಇಂದು ( ಜನವರಿ 20 ) ನಡೆಯುತ್ತಿರುವ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಇಂಡಿಯನ್ ಮಹಾರಾಜಾಸ್ ಮತ್ತು ಏಷ್ಯ ಲಯನ್ಸ್ ತಂಡಗಳು ಕಣಕ್ಕಿಳಿದಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಮಹಾರಾಜಾಸ್ ತಂಡದ ನಾಯಕ ಮೊಹಮ್ಮದ್ ಕೈಫ್ ಬೌಲಿಂಗ್ ಆಯ್ದುಕೊಂಡು ಎದುರಾಳಿ ಏಷ್ಯಾ ಲಯನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಹೀಗೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಏಷ್ಯಾ ಲಯನ್ಸ್ ಪರ ಶ್ರೀಲಂಕಾ ಮೂಲದ ಉಪುಲ್ ತರಂಗ 66 ರನ್ ಮತ್ತು ಪಾಕಿಸ್ತಾನದ ಆಟಗಾರ ಮಿಸ್ಬಾ ಉಲ್ ಹಕ್ 44 ರನ್ ಗಳಿಸಿ ಜವಬ್ದಾರಿಯುತ ಆಟವನ್ನಾಡಿದರು. ಈ ಮೂಲಕ ಏಷ್ಯಾ ಲಯನ್ಸ್ 20 ಓವರ್‌ಗಳಲ್ಲಿ 175 ರನ್ ಗಳಿಸಿ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಗೆಲ್ಲಲು 176 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿತು. ಇಂಡಿಯಾ ಮಹಾರಾಜಾಸ್ ತಂಡದ ಪರ ಮನ್ ಪ್ರೀತ್ ಗೋನಿ 3 ವಿಕೆಟ್ ಪಡೆದರೆ, ಇರ್ಫಾನ್ ಪಠಾಣ್ 2 ವಿಕೆಟ್ ಹಾಗೂ ಮುನಾಫ್ ಪಟೇಲ್ ಮತ್ತು ಸ್ಟುವರ್ಟ್ ಬಿನ್ನಿ ತಲಾ ಒಂದೊಂದು ವಿಕೆಟ್ ಪಡೆದರು.

ದ.ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದ ಸೋಲಿಗೆ ಕಾರಣ ಯಾರೆಂಬುದನ್ನು ಬಿಚ್ಚಿಟ್ಟ ನಾಯಕ ರಾಹುಲ್ದ.ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದ ಸೋಲಿಗೆ ಕಾರಣ ಯಾರೆಂಬುದನ್ನು ಬಿಚ್ಚಿಟ್ಟ ನಾಯಕ ರಾಹುಲ್

ಹೀಗೆ ಏಷ್ಯಾ ಲಯನ್ಸ್ ತಂಡ ನೀಡಿದ 176 ರನ್‌ಗಳ ಗುರಿಯನ್ನು ಬೆನ್ನತ್ತಿದ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕ ಆಟಗಾರರಾದ ನಮನ್ ಓಜಾ 20 ರನ್ ಗಳಿಸಿ ಔಟ್ ಆದರೆ, ಸ್ಟುವರ್ಟ್ ಬಿನ್ನಿ 10 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡರು ಮತ್ತು ನಂತರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬದ್ರಿನಾಥ್ ಶೂನ್ಯ ಸುತ್ತಿ ವಾಪಸಾದರು. ಹೀಗೆ ಇಂಡಿಯಾ ಮಹಾರಾಜಸ್ 6.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು.

ಕೈಫ್, ಯೂಸುಫ್ ಪಠಾಣ್ ಜತೆಯಾಟ

ಕೈಫ್, ಯೂಸುಫ್ ಪಠಾಣ್ ಜತೆಯಾಟ

ನಂತರ ನಾಲ್ಕನೇ ವಿಕೆಟ್‍ಗೆ ಜತೆಯಾದ ನಾಯಕ ಮೊಹಮ್ಮದ್ ಕೈಫ್ ಮತ್ತು ಯೂಸುಫ್ ಪಠಾಣ್ 117 ರನ್‌ಗಳ ಜತೆಯಾಟ ಆಡಿದರು. ಯೂಸುಫ್ ಪಠಾಣ್ 80 ರನ್ ಗಳಿಸಿದ್ದಾಗ ರನ್ ಔಟ್ ಆದರು. ಹೀಗೆ ಯೂಸುಫ್ ಪಠಾಣ್ ಔಟ್ ಆದ ಬೆನ್ನಲ್ಲೇ ಇರ್ಫಾನ್ ಪಠಾಣ್ ಕಣಕ್ಕಿಳಿದರು. ಕೊನೆಯದಾಗಿ 18 ಎಸೆತಗಳಲ್ಲಿ ಇಂಡಿಯಾ ಮಹಾರಾಜಾಸ್ ಗೆಲ್ಲಲು 24 ರನ್‌ಗಳ ಅಗತ್ಯತೆಯಲ್ಲಿತ್ತು. ಆದರೆ, 18ನೇ ಓವರ್‌ನಲ್ಲಿ ಮೊಹಮ್ಮದ್ ಹಫೀಜ್ ಕೇವಲ 6 ರನ್ ನೀಡಿ ಇಂಡಿಯಾ ಮಹಾರಾಜಸ್ ತಂಡಕ್ಕೆ ಒತ್ತಡ ಹೆಚ್ಚಾಗುವಂತೆ ಮಾಡಿದರು.

ಅಂತಿಮವಾಗಿ ಅಬ್ಬರಿಸಿದ ಇರ್ಫಾನ್ ಪಠಾಣ್

ಅಂತಿಮವಾಗಿ ಅಬ್ಬರಿಸಿದ ಇರ್ಫಾನ್ ಪಠಾಣ್

ಕೊನೆಯದಾಗಿ ಇಂಡಿಯನ್ ಮಹಾರಾಜಾಸ್ ತಂಡಕ್ಕೆ 12 ಎಸೆತಗಳಿಗೆ 18 ರನ್ ಬೇಕಿದ್ದಾಗ 19ನೇ ಓವರ್‌ನಲ್ಲಿ ಕುಲಶೇಖರಗೆ ಇರ್ಫಾನ್ ಪಠಾಣ್ 1 ಸಿಕ್ಸ್‌, 2 ಬೌಂಡರಿ ಹಾಗೂ 2 ರನ್ ಚಚ್ಚುವುದರ ಮೂಲಕ ಓವರ್ ಮುಕ್ತಾಯವಾಗುವಷ್ಟರಲ್ಲಿ ಪಂದ್ಯ ಡ್ರಾ ಆಗುವಂತೆ ಮಾಡಿದರು.

19.1 ಓವರ್‌ಗೆ ಪಂದ್ಯ ಮುಗಿಸಿದ ಮಹಾರಾಜಸ್

19.1 ಓವರ್‌ಗೆ ಪಂದ್ಯ ಮುಗಿಸಿದ ಮಹಾರಾಜಸ್

ಇನ್ನು ಪಂದ್ಯದ ಅಂತಿಮ ಓವರ್‌ನ ಮೊದಲನೇ ಎಸೆತಕ್ಕೆ ನಾಯಕ ಮೊಹಮ್ಮದ್ ಕೈಫ್ ಬೌಂಡರಿ ಬಾರಿಸುವ ಮೂಲಕ ಇಂಡಿಯಾ ಮಹಾರಾಜಾಸ್ ತಂಡ 19.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿ 6 ವಿಕೆಟ್‍ಗಳ ರೋಚಕ ಗೆಲುವನ್ನು ಸಾಧಿಸಿತು. ಈ ಮೂಲಕ ಇಂಡಿಯಾ ಮಹಾರಾಜಸ್ ಟೂರ್ನಿಯಲ್ಲಿನ ತನ್ನ ಚೊಚ್ಚಲ ಪಂದ್ಯದಲ್ಲಿಯೇ ಗೆಲುವು ಸಾಧಿಸಿ ಶುಭಾರಂಭವನ್ನು ಮಾಡಿದೆ.ಯೂಸುಫ್ ಪಠಾಣ್ 40 ಎಸೆತಗಳಲ್ಲಿ 80 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನುಳಿದಂತೆ ಇರ್ಫಾನ್ ಪಠಾಣ್ 10 ಎಸೆತಗಳಲ್ಲಿ ಅಜೇಯ 21 ರನ್ ಹಾಗೂ ಮೊಹಮ್ಮದ್ ಕೈಫ್ 37 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, January 21, 2022, 11:01 [IST]
Other articles published on Jan 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X