ಈ ಕ್ರಿಕೆಟಿಗರು ಕ್ರಿಕೆಟ್‍ನಲ್ಲಿ ಮಿಂಚಿದ್ದು ಮಾತ್ರವಲ್ಲದೇ ಸಿನಿಮಾಗಳಲ್ಲಿ ಅಭಿನಯಿಸಿ ನಟರಾದದ್ದು ನಿಮಗೆ ಗೊತ್ತಾ?

ಭಾರತದಲ್ಲಿ ಕಟ್ಟಾ ಅಭಿಮಾನಿಗಳನ್ನು ಹೊಂದಬೇಕೆಂದರೆ ವ್ಯಕ್ತಿಯೋರ್ವ ಕ್ರಿಕೆಟರ್ ಆಗಬೇಕು ಅಥವಾ ಸಿನಿಮಾಗಳಲ್ಲಿ ಅಭಿನಯಿಸಿ ನಟನಾಗಬೇಕು. ಹೌದು, ಭಾರತದಲ್ಲಿ ಸಿನಿಮಾ ನಟರಿಗೆ ಹಾಗೂ ಕ್ರಿಕೆಟ್ ಆಟಗಾರರಿಗೆ ಸಿಗುವಷ್ಟು ಕ್ರೇಜ್ ಮತ್ತು ಗೌರವ ಇತರೆ ಯಾವುದೇ ಕ್ಷೇತ್ರದಲ್ಲಿರುವ ವ್ಯಕ್ತಿಗಳಿಗೂ ಕೂಡ ಸಿಗುವುದಿಲ್ಲ ಎಂದು ಹೇಳಬಹುದು.

ಭಾರತ ಏಷ್ಯಾಕಪ್‌ ತಂಡದಲ್ಲಿ ಈ ನಾಲ್ವರು ಇಲ್ಲದಿರುವುದು ಅನ್ಯಾಯ, ತಂಡಕ್ಕೆ ದೊಡ್ಡ ಹೊಡೆತ!ಭಾರತ ಏಷ್ಯಾಕಪ್‌ ತಂಡದಲ್ಲಿ ಈ ನಾಲ್ವರು ಇಲ್ಲದಿರುವುದು ಅನ್ಯಾಯ, ತಂಡಕ್ಕೆ ದೊಡ್ಡ ಹೊಡೆತ!

ಇನ್ನು ಭಾರತದಲ್ಲಿ ಕ್ರಿಕೆಟ್ ಮತ್ತು ಸಿನಿಮಾ ರಂಗ ಎರಡಕ್ಕೂ ಸಹ ಈ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದ್ದು, ಕ್ರಿಕೆಟಿಗರು ಚಲನಚಿತ್ರ ನಟಿಯರನ್ನು ವಿವಾಹವಾದ ಹಲವಾರು ಉದಾಹರಣೆಗಳು ನಮ್ಮ ಮುಂದೆಯೇ ಇವೆ. ಇನ್ನು ಕ್ರಿಕೆಟ್‌ನ ಹಲವು ಟೂರ್ನಮೆಂಟ್ ಉದ್ಘಾಟನೆಗೆ ಸಿನಿಮಾ ನಟರು ಮುಖ್ಯ ಅತಿಥಿಗಳಾಗಿ ಹಾಗೂ ಪ್ರಚಾರಕರಾಗಿ ಆಗಮಿಸಿದ್ದು ಇದೆ, ಹಾಗೆಯೇ ಸಿನಿಮಾ ಆಡಿಯೋ ಮತ್ತು ಟ್ರೈಲರ್ ಬಿಡುಗಡೆಗೆ ಖ್ಯಾತ ಕ್ರಿಕೆಟಿಗರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದೂ ಸಹ ಇದೆ. ಇನ್ನು ಎಂಎಸ್ ಧೋನಿ ಹಾಗೂ ಸಚಿನ್ ತೆಂಡೂಲ್ಕರ್ ರೀತಿಯ ಕ್ರಿಕೆಟಿಗರ ಜೀವನ ಚಲನಚಿತ್ರಗಳಾಗಿದ್ದು, ಎರಡೂ ಕ್ಷೇತ್ರಗಳಿಗೂ ದೊಡ್ಡ ನಂಟಿದೆ.

ಇದೆಂಥ ಅನ್ಯಾಯ: ರೋಹಿತ್, ಕೊಹ್ಲಿಗಿಂತ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಏಷ್ಯಾಕಪ್ ತಂಡದಲ್ಲಿಲ್ಲ ಸ್ಥಾನ!ಇದೆಂಥ ಅನ್ಯಾಯ: ರೋಹಿತ್, ಕೊಹ್ಲಿಗಿಂತ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಏಷ್ಯಾಕಪ್ ತಂಡದಲ್ಲಿಲ್ಲ ಸ್ಥಾನ!

ಈ ಎಲ್ಲಾ ಅಂಶಗಳಿಗೂ ಮಿಗಿಲಾಗಿ ಕ್ರಿಕೆಟ್ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಕ್ರಿಕೆಟಿಗರು ಚಲನಚಿತ್ರ ರಂಗಗಳಲ್ಲಿಯೂ ಅಭಿನಯಿಸಿದ ಹಲವಾರು ಉದಾಹರಣೆಗಳಿವೆ. ಹೌದು, ಕ್ರಿಕೆಟರ್ ಮಾತ್ರವಲ್ಲದೇ ಚಿತ್ರನಟರಾಗಿ ಕಾಣಿಸಿಕೊಂಡ ಆ ಆಟಗಾರರ ಪಟ್ಟಿ ಕೆಳಕಂಡಂತಿದೆ.

ಇರ್ಫಾನ್ ಪಠಾಣ್

ಇರ್ಫಾನ್ ಪಠಾಣ್

ಟೀಂ ಇಂಡಿಯಾದ ಖ್ಯಾತ ವೇಗಿಗಳಲ್ಲಿ ಒಬ್ಬರಾದ ಇರ್ಫಾನ್ ಪಠಾಣ್ ತಮಿಳು ಚಿತ್ರರಂಗದ ಬಿಡುಗಡೆಗೆ ಸಿದ್ಧವಾಗಿರುವ ಕೋಬ್ರಾ ಎಂಬ ಚಿತ್ರದಲ್ಲಿ ಅಭಿನಯಿಸಿದ್ದು ಅಸ್ಲಾನ್ ಯಿಲ್ಮಾಜ್ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ತಮಿಳು ನಟ ವಿಕ್ರಂ ನಾಯಕನಟನಾಗಿ ಕಾಣಿಸಿಕೊಂಡಿದ್ದರೆ ಕರ್ನಾಟಕ ಮೂಲದ ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ.

ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್

ಟೀಂ ಇಂಡಿಯಾದ ಖ್ಯಾತ ಸ್ಪಿನ್ನರ್ ಟರ್ಬೊನೇಟರ್ ಎಂದೇ ಖ್ಯಾತಿಯನ್ನು ಪಡೆದಿರುವ ಹರ್ಭಜನ್ ಸಿಂಗ್ ಕಳೆದ ವರ್ಷ ಬಿಡುಗಡೆಯಾದ ತಮಿಳು ನಟ ಸಂತಾನಂ ಅಭಿನಯದ ದಿಕ್ಕಿಲೋನ ಎಂಬ ತಮಿಳು ಚಿತ್ರದಲ್ಲಿ ಅಭಿನಯಿಸಿದ್ದರು.

ಶ್ರೀಶಾಂತ್

ಶ್ರೀಶಾಂತ್

ಭಾರತದ ವೇಗಿ ಶ್ರೀಶಾಂತ್ ಮೊದಲಿಗೆ ತನ್ನ ರೋಷಾವೇಶದ ಆಟದಿಂದ ಖ್ಯಾತಿಯನ್ನು ಪಡೆದು ತದನಂತರ ವಿವಾದ ಹಾಗೂ ನಿಷೇಧದ ಸುದ್ದಿಗಳಿಂದ ಹೆಚ್ಚಾಗಿ ವೈರಲ್ ಆದವರು. ಹೀಗೆ ಕಾಲಕ್ರಮೇಣ ಕ್ರಿಕೆಟ್ ಕ್ಷೇತ್ರದಿಂದ ದೂರ ಉಳಿದ ಶ್ರೀಶಾಂತ್ ಬಾಲಿವುಡ್ ಚಿತ್ರರಂಗದ ಅಕ್ಸರ್ 2 ಹಾಗೂ ಕ್ಯಾಬರೆಟ್ ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದು, ತಮಿಳಿನ ಕಾದುವಾಕುಲ ರೆಂಡು ಕಾದಲ್, ಮಲಯಾಳಂನ ಟೀಮ್ ಫೈವ್ ಹಾಗೂ ಕನ್ನಡದ ಕೆಂಪೇಗೌಡ 2 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಕಪಿಲ್ ದೇವ್

ಕಪಿಲ್ ದೇವ್

ಭಾರತಕ್ಕೆ ಚೊಚ್ಚಲ ಐಸಿಸಿ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಸ್ಟಂಪ್ಡ್ ಹಾಗೂ ಮುಜ್ಸೆ ಶಾದಿ ಕರೋಗಿ ಎಂಬ ಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಡ್ವೇನ್ ಬ್ರಾವೊ

ಡ್ವೇನ್ ಬ್ರಾವೊ

ವೆಸ್ಟ್ ಇಂಡೀಸ್ ತಂಡದ ಖ್ಯಾತ ಕ್ರಿಕೆಟಿಗ ಡ್ವೇನ್ ಬ್ರಾವೋ ಚಿದಿರಮ್ ಪೇಸುದಡಿ 2 ಎಂಬ ತಮಿಳು ಚಿತ್ರದ ಏಂಡ ಎಂಬ ಹಾಡಿನಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ

ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮ ಕ್ರಿಕೆಟ್ ಬದುಕಿನ ಡಾಕ್ಯುಮೆಂಟರಿ ಸಚಿನ್ ಎ: ಬಿಲಿಯನ್ ಡ್ರೀಮ್ಸ್ ನಲ್ಲಿ ಅಭಿನಯಿಸಿದ್ದರು.

ವಿಶ್ವ ಕ್ರಿಕೆಟ್ ಕಂಡ ಖ್ಯಾತ ಸ್ಪಿನ್ನರ್ ಅನಿಲ್ ಕುಂಬ್ಳೆ ಮೀರಾಬಾಯ್ ನಾಟೌಟ್ ಚಿತ್ರದಲ್ಲಿ ನಟಿಸಿದ್ದರು

ಯುವರಾಜ್ ಸಿಂಗ್

ಯುವರಾಜ್ ಸಿಂಗ್

ಟೀಮ್ ಇಂಡಿಯಾದ ಆಲ್ ರೌಂಡರ್ ಆಟಗಾರ, ವಿಶ್ವಕಪ್ ಹೀರೋ ಯುವರಾಜ್ ಸಿಂಗ್ 1992ರಲ್ಲಿ ತೆರೆಕಂಡಿದ್ದ ಮೆಹಂದಿ ಶಗ್ನಾ ದಿ ಎಂಬ ಪಂಜಾಬಿ ಚಿತ್ರದಲ್ಲಿ ಶಾಲಾ ಕ್ರೀಡಾಪಟುವಾಗಿ ಕಾಣಿಸಿಕೊಂಡಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, August 12, 2022, 19:13 [IST]
Other articles published on Aug 12, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X