ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸರ್ಫಿಂಗ್ ಮಾಡುವಾಗ ಬೆನ್ನುಮೂಳೆ ಮುರಿದುಕೊಂಡ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್

Matthew Hayden suffers multiple injuries while surfing

ಮೆಲ್ಬರ್ನ್, ಅಕ್ಟೋಬರ್ 8: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಸರ್ಫಿಂಗ್ ಮಾಡುವಾಗ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಹೇಡನ್ ಅವರ ಮುಖ, ತಲೆ, ಕತ್ತಿಗೆ ಗಾಯವಾಗಿದ್ದು, ಬೆನ್ನು ಮೂಳೆ ಮುರಿದಿದೆ. 46 ವರ್ಷದ ಹೇಡನ್, ಕ್ವೀನ್ಸ್‌ಲ್ಯಾಂಡ್‌ನ ಸಮುದ್ರದಲ್ಲಿ ಮಗನೊಂದಿಗೆ ರಜಾ ಪ್ರವಾಸದಲ್ಲಿ ಸರ್ಫಿಂಗ್ ಆಡುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಅಭಿಮಾನಿಗಳಿಗೆ ನಿರಾಶೆ! ಭಾರತ ವಿರುದ್ಧದ ಸರಣಿಗೆ ಗೇಲ್ ಇಲ್ಲ ಅಭಿಮಾನಿಗಳಿಗೆ ನಿರಾಶೆ! ಭಾರತ ವಿರುದ್ಧದ ಸರಣಿಗೆ ಗೇಲ್ ಇಲ್ಲ

ಗಾಯಗೊಂಡು ಹಾಸಿಗೆ ಮೇಲೆ ಮಲಗಿರುವ ತಮ್ಮ ಚಿತ್ರವನ್ನು ಹೇಡನ್, ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ.

ತಲೆ ಮತ್ತು ಕತ್ತಿಗೆ ಗಾಯವಾಗಿದ್ದು, ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿದೆ. ಒಂದು ರೀತಿ ದೇಹದೊಳಗೆ ಗುಂಡು ಹೊಕ್ಕಂತಾಗಿದೆ. ಚೇತರಿಸಿಕೊಳ್ಳುವ ಹಾದಿಯಲ್ಲಿದ್ದೇನೆ ಎಂದು ಹೇಡನ್ ಹೇಳಿಕೊಂಡಿದ್ದಾರೆ.

ಬಿರಿಯಾನಿ ಪ್ರಿಯ ಕೊಹ್ಲಿ, ಶುದ್ಧ ಶಾಖಾಹಾರಿ ಆಗಿದ್ದೇಕೆ?ಬಿರಿಯಾನಿ ಪ್ರಿಯ ಕೊಹ್ಲಿ, ಶುದ್ಧ ಶಾಖಾಹಾರಿ ಆಗಿದ್ದೇಕೆ?

Matthew Hayden suffers multiple injuries while surfing

ಮಗನ ಜತೆ ಸರ್ಫಿಂಗ್ ಮಾಡುತ್ತಿದ್ದ ಹೇಡನ್, ಬೃಹತ್ ಅಲೆಗಳ ಮೇಲೆ ಜಾರುತ್ತಾ ಮೋಜು ಮಾಡುತ್ತಿದ್ದರು. ಆದರೆ, ಒಂದು ಬೃಹತ್ ಅಲೆ ಅವರನ್ನು ಎತ್ತಿ ಹಾಕಿದೆ. ಆಗ ನಿಯಂತ್ರಣ ತಪ್ಪಿದ ಹೇಡನ್, ತಲೆಕೆಳಗಾಗು ಮರಳಿನ ದಿಬ್ಬದ ಮೇಲೆ ಬಿದ್ದಿದ್ದರಾರೆ. ಅವರ ಇಡೀ ದೇಹದ ಭಾರ ತಲೆಯ ಮೇಲೆ ಇದ್ದಿದ್ದರಿಂದ ಕತ್ತು ಉಳುಕಿದೆ. ಆಗ ಬೆನ್ನುಹುರಿಗೂ ಹೊಡೆತ ಬಿದ್ದಿದೆ.

ಸಮುದ್ರದಲ್ಲಿ ಇದು ಎರಡನೆಯ ಬಾರಿಗೆ ಹೇಡನ್ ಅಪಘಾತಕ್ಕೆ ಒಳಗಾಗಿರುವುದು. 2000ದಲ್ಲಿ ಅವರು ಮತ್ತು ಆಂಡ್ರ್ಯೂ ಸೈಮಂಡ್ಸ್ ಮೀನು ಹಿಡಿಯಲು ತೆರಳಿದ್ದಾಗ ದೋಣಿ ಮುಳುಗಿತ್ತು. ಇಬ್ಬರೂ ಸುಮಾರು ಒಂದು ಕಿ.ಮೀ. ಈಜಿಕೊಂಡು ದಡ ಸೇರುವಂತಾಗಿತ್ತು.

ಬಿಸಿಸಿಐ ವಿರುದ್ಧ ದನಿಯೆತ್ತಿದ ಕರುಣ್, ವಿಜಯ್ ಗೆ ಸಂಕಷ್ಟ?ಬಿಸಿಸಿಐ ವಿರುದ್ಧ ದನಿಯೆತ್ತಿದ ಕರುಣ್, ವಿಜಯ್ ಗೆ ಸಂಕಷ್ಟ?

2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಹೇಡನ್, 103 ಟೆಸ್ಟ್, 161 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ.

Story first published: Monday, October 8, 2018, 16:18 [IST]
Other articles published on Oct 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X