ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶತಕ ಬಾರಿಸದವರು ಕೊಹ್ಲಿ ಬಗ್ಗೆ ಮಾತನಾಡಲೇಬಾರದು ; ಇಂಗ್ಲೆಂಡ್ ಮಾಜಿ ಕ್ರಿಕೆಟಿಗನಿಗೆ ಸಲ್ಮಾನ್ ಬಟ್ ಟಾಂಗ್

Michael Vaughan never scored ODI century, Virat has 70 international tons says Salman Butt

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಇತ್ತೀಚಿಗಷ್ಟೆ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ನಡುವೆ ಹೋಲಿಕೆಯನ್ನು ಮಾಡಿ ಮಾತನಾಡಿದ್ದರು. ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ನಡುವೆ ಯಾವುದೇ ವ್ಯತ್ಯಾಸವಿಲ್ಲ, ಇಬ್ಬರೂ ಒಂದೇ ಮಟ್ಟದ ಆಟಗಾರರಾಗಿದ್ದು ವಿರಾಟ್ ಕೊಹ್ಲಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿ ಬಳಗ ಹೆಚ್ಚಿದೆ ಮತ್ತು ಜಾಹೀರಾತು ಸಂಭಾವನೆ ಹೆಚ್ಚು ಬರುತ್ತದೆ ಎಂದು ಕೊಹ್ಲಿ ಬಗ್ಗೆ ಪರೋಕ್ಷವಾಗಿ ಮೈಕಲ್ ವಾನ್ ಟೀಕಿಸಿದ್ದರು. ಅಷ್ಟೇ ಅಲ್ಲದೆ ಕೇನ್ ವಿಲಿಯಮ್ಸನ್ ಭಾರತೀಯ ಆಟಗಾರನಾಗಿದ್ದರೆ ವಿರಾಟ್ ಕೊಹ್ಲಿಗಿಂತ ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದ್ದರು ಎಂದು ಮೈಕಲ್ ವಾನ್ ಹೇಳಿಕೆ ನೀಡಿದ್ದರು.

ಇನ್ನು ಮೈಕಲ್ ವಾನ್ ನೀಡಿದ ಈ ಹೇಳಿಕೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದ್ದು ಪಾಕಿಸ್ತಾನದ ಮಾಜಿ ಆಟಗಾರ ಸಲ್ಮಾನ್ ಬಟ್ ಕೂಡ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕೊಹ್ಲಿ ಮತ್ತು ವಿಲಿಯಮ್ಸನ್ ನಡುವೆ ಮೈಕಲ್ ವಾನ್ ಮಾಡಿರುವ ಹೋಲಿಕೆಯ ಕುರಿತು ಮಾತನಾಡಿದ ಸಲ್ಮಾನ್ ಬಟ್ ಮೈಕಲ್ ವಾನ್ ಸಂಬಂಧವೇ ಇಲ್ಲದ ವಿಷಯಗಳ ಕುರಿತು ಚರ್ಚಿಸಿ ವಿವಾದಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ವಿರಾಟ್ ಕೊಹ್ಲಿಯವರನ್ನು ಪರೋಕ್ಷವಾಗಿ ಕಾಲೆಳೆದಿದ್ದ ಮೈಕಲ್ ವಾನ್‌ಗೆ ಬಗ್ಗೆ ಸಲ್ಮಾನ್ ಬಟ್ ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದು ಮುಂದೆ ಇದೆ ಓದಿ.

 ಕೊಹ್ಲಿ 70 ಶತಕಗಳನ್ನು ಸಿಡಿಸಿದ್ದಾರೆ

ಕೊಹ್ಲಿ 70 ಶತಕಗಳನ್ನು ಸಿಡಿಸಿದ್ದಾರೆ

'ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 70 ಶತಕಗಳನ್ನು ಸಿಡಿಸಿ ಮಿಂಚಿದ್ದಾರೆ. ಪ್ರಸ್ತುತ ಕ್ರಿಕೆಟ್ ಯುಗದಲ್ಲಿ ಇಷ್ಟು ದೊಡ್ಡ ಮಟ್ಟದ ಶತಕಗಳನ್ನು ಯಾವ ಆಟಗಾರನಿಗೂ ಸಹ ಬಾರಿಸಲಾಗುತ್ತಿಲ್ಲ. ಇಂತಹ ಆಟಗಾರನ ಜೊತೆ ಇತರೆ ಆಟಗಾರರನ್ನು ಹೋಲಿಕೆ ಮಾಡಿದ ಮೈಕಲ್ ವಾನ್ ಏಕದಿನ ಪಂದ್ಯಗಳಲ್ಲಿ ಒಂದೇ ಒಂದು ಶತಕವನ್ನೂ ಬಾರಿಸಿಲ್ಲ. ಹೀಗಾಗಿ ಏಕದಿನ ಕ್ರಿಕೆಟ್‍ನಲ್ಲಿ ಶತಕವನ್ನೇ ಬಾರಿಸದ ಮೈಕಲ್ ವಾನ್ ಅವರು ವಿರಾಟ್ ಕೊಹ್ಲಿ ಜೊತೆ ಬೇರೆ ಆಟಗಾರರನ್ನು ಹೋಲಿಸಿ ಮಾತನಾಡುವುದು ಸರಿಯಲ್ಲ' ಎಂದು ಸಲ್ಮಾನ್ ಬಟ್ ತಿಳಿಸಿದರು

 ವಿರಾಟ್ ಕೊಹ್ಲಿ ದೊಡ್ಡ ದೇಶದ ಆಟಗಾರ

ವಿರಾಟ್ ಕೊಹ್ಲಿ ದೊಡ್ಡ ದೇಶದ ಆಟಗಾರ

ಭಾರತ ಒಂದು ದೊಡ್ಡ ದೇಶ, ದೊಡ್ಡ ಮಟ್ಟದಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವಂತಹ ದೇಶ. ಹೀಗಿರುವಾಗ ವಿರಾಟ್ ಕೊಹ್ಲಿಯಂತಹ ಅತ್ಯುತ್ತಮ ಆಟಗಾರನಿಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಅಭಿಮಾನ ಬಳಗ ಇರಲೇಬೇಕು ಎಂದು ಸಲ್ಮಾನ್ ಬಟ್ ತಿಳಿಸಿದ್ದಾರೆ.

 ಕೊಹ್ಲಿ ಒಬ್ಬ ಅತ್ಯದ್ಭುತ ಚೇಸರ್

ಕೊಹ್ಲಿ ಒಬ್ಬ ಅತ್ಯದ್ಭುತ ಚೇಸರ್

ವಿರಾಟ್ ಕೊಹ್ಲಿ ನಾಯಕನಾಗಿ ಮಾತ್ರವಲ್ಲದೆ ಓರ್ವ ಬ್ಯಾಟ್ಸ್‌ಮನ್‌ ಆಗಿ ಟೀಮ್ ಇಂಡಿಯಾಗೆ ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಚೇಸಿಂಗ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅವರ ಪ್ರದರ್ಶನ ಅತ್ಯದ್ಭುತ, ವಿರಾಟ್ ಕೊಹ್ಲಿ ರೀತಿ ಪ್ರಸ್ತುತ ಬೇರೆ ಯಾವ ಆಟಗಾರನೂ ಸಹ ಪ್ರದರ್ಶನವನ್ನು ನೀಡಲಾಗುವುದಿಲ್ಲ ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.

 ವಿಲಿಯಮ್ಸನ್ ಕೂಡ ಅತ್ಯದ್ಭುತ ನಾಯಕ

ವಿಲಿಯಮ್ಸನ್ ಕೂಡ ಅತ್ಯದ್ಭುತ ನಾಯಕ

ವಿಲಿಯಮ್ಸನ್ ಕೂಡ ಓರ್ವ ಅತ್ಯದ್ಭುತ ಆಟಗಾರ ಮತ್ತು ನಾಯಕ. ಓರ್ವ ನಾಯಕನಾಗಿ ವಿಲಿಯಮ್ಸನ್ ಯಶಸ್ವಿಯಾಗಿರಬಹುದು, ಆದರೆ ಮೈಕಲ್ ವಾನ್ ನಾಯಕತ್ವದ ಕುರಿತು ಮಾತನಾಡದೆ ಇಬ್ಬರೂ ಆಟಗಾರರ ಆಟದ ಕುರಿತು ಮಾತನಾಡಿದ್ದಾರೆ. ಓರ್ವ ಆಟಗಾರನಾಗಿ ವಿರಾಟ್ ಕೊಹ್ಲಿ ಅತ್ಯದ್ಭುತ ಹಾಗೂ ಮೈಕಲ್ ವಾನ್ ಅವರ ಈ ಹೋಲಿಕೆ ನಿಜಕ್ಕೂ ಸರಿಯಾದದ್ದಲ್ಲ ಎಂದು ಸಲ್ಮಾನ್ ಬಟ್ ಆಕ್ಷೇಪ ವ್ಯಕ್ತಪಡಿಸಿದರು.

Story first published: Sunday, May 16, 2021, 14:54 [IST]
Other articles published on May 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X