ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲಂಡ್: ಕೋಚ್ ಸಿಲ್ವರ್‌ವುಡ್ ರಣತಂತ್ರಕ್ಕೆ ಮೈಕಲ್ ವಾನ್ ಕಿಡಿ

Michael Vaughan questions coach Silverwoods strategy following England loss

ಬೆಂಗಳೂರು, ಆಗಸ್ಟ್ 22: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳು ಈಗ ಮುಕ್ತಾಯವಾಗಿದೆ. ಎರಡು ಪಂದ್ಯಗಳಲ್ಲಿಯೂ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಹಿನ್ನಡೆಯಾಗಿದ್ದು ಲಾರ್ಡ್ಸ್ ಪಂದ್ಯವನ್ನು 151 ರನ್‌ಗಳ ಅಂತರದಿಂದ ಸೋಲು ಕಂಡಿತ್ತು. ಅಂತಿಮ ದಿನದಾಟದಲ್ಲಿ ಮಳೆ ಸುರಿದ ಕಾರಣದಿಂದಾಗಿ ಸರಣಿಯ ಆರಂಭಿಕ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಪಂದ್ಯ ಡ್ರಾ ಫಲಿತಾಂಶವನ್ನು ಕಂಡಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಈಗ 1-0 ಅಂತರದಿಂದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಈ ಫಲಿತಾಂಶದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ತಂಡದ ಕೋಚ್ ಕ್ರಿಸ್ ಸಿಲ್ವರ್‌ವುಡ್ ವಿರುದ್ಧ ಹರಿಹಾಯ್ದಿದ್ದಾರೆ. ಲಾರ್ಡ್ಸ್ ಅಂಗಳದಲ್ಲಿ ವಿರಾಟ್ ಕೊಹ್ಲಿ ಪಡೆಯ ವಿರುದ್ಧ ಇಂಗ್ಲೆಮಡ್ ತಮಡ ಸೋಲು ಕಾಣಲು ಕೋಚ್ ಸಿಲ್ವರ್‌ವುಡ್ ಕೂಡ ಹೊಣೆ ಹೊರಬೇಕಾಗುತ್ತದೆ ಎಂದಿದ್ದಾರೆ ಮೈಕಲ್ ವಾನ್.

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯಲಿದ್ದಾರೆ ಟಿಮ್ ಡೇವಿಡ್ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯಲಿದ್ದಾರೆ ಟಿಮ್ ಡೇವಿಡ್

ಅಂತಿಮ ದಿನದಾಟಕ್ಕೂ ಮುನ್ನ ಇಂಗ್ಲೆಂಡ್ ಪರವಾಗಿದ್ದ ಪಂದ್ಯವನ್ನು ಭಾರತ ಗೆಲ್ಲಲು ತಂಡದ ಆಟಗಾರರಾದ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಪ್ರಮುಖ ಕಾರಣವಾಗಿದ್ದರು. ಈ ಮೂಲಕ ಕ್ರಿಕೆಟ್‌ನ ಮೆಕ್ಕಾ ಎಂದೇ ಖ್ಯಾತಿ ಪಡೆದಿರುವ ಲಾರ್ಡ್ಸ್ ಅಂಗಳದಲ್ಲಿ 89 ವರ್ಷಗಳಲ್ಲಿ ಮೂರನೇ ಜಯವನ್ನು ದಾಖಲಿಸಿದೆ.

ಫೇಸ್‌ಬುಕ್‌ನಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಸುದೀರ್ಘ ಬರಹವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಇಂಗ್ಲೆಂಡ್ ತಂಡದ ಕೋಚ್ ಕಾರ್ಯವೈಖರಿಯ ಬಗ್ಗೆ ಅವರು ಕಿಡಿಕಾರಿದ್ದಾರೆ. "ತಂಡದ ಕೋಚ್ ಆಗಿ ಅವರಿಗೆ ಸಂಪೂರ್ಣವಾದ ಸ್ವಾತಂತ್ರ್ಯವನ್ನು ನೀಡಲಾಗಿದೆ. ಆಟಗಾರರ ಆಯ್ಕೆಯಲ್ಲಿಯೂ ಹೆಚ್ಚಿನ ಸ್ವತಂತ್ರ್ಯವನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಎರಡು ಡ್ರಾ ಹಾಗೂ ಎರಡು ಸೋಲನ್ನು ಕಂಡಿದೆ. ಡ್ರಾ ಗೊಂಡಿರುವ ಎರಡು ಪಂದ್ಯಗಳಿಗೂ ಮಳೆ ಅಡ್ಡಿಯಾಗಿದ್ದು ಇಲ್ಲವಾದಲ್ಲಿ ಆ ಪಂದ್ಯವನ್ನು ಕೂಡ ಇಂಗ್ಲೆಂಡ್ ಸೋಲು ಕಾಣುತ್ತಿತ್ತು" ಎಂದಿದ್ದಾರೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್.

"ಅಂಕಿಅಂಶಗಳು ನಮಗೆ ಆತಂಕವನ್ನು ಮೂಡಿಸುತ್ತಿದ್ದೆ. ಅದರಲ್ಲೂ ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಆಶಸ್ ಸರಣಿ ನಡೆಯುತ್ತಿದ್ದು ಕಳವಳ ಮೂಡಿಸುತ್ತಿದೆ. ನನಗಿರುವ ಮತ್ತೊಂದು ದೊಡ್ಡ ಕಳವಳವೆಂದರೆ ಯಾವ ರೀತಿಯ ತಂಡವನ್ನು ಹೊಂದಬೇಕೆಂದು ಕ್ರಿಸ್ ಸಿಲ್ವರ್‌ವುಡ್ ಇನ್ನು ಕೂಡ ಅರ್ಥ ಮಾಡಿಕೊಂಡಿಲ್ಲ. ಅವರು ಮೊದಲ ಇನ್ನಿಂಗ್ಸ್‌ನಲ್ಲಿನ ರನ್‌ಗಳ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾರೆ. ನಂತರ ಶಿಸ್ತಿ ಬದ್ಧ ಬೌಲಿಂಗ್ ದಾಳಿಯ ಬಗ್ಗೆ ಹೇಳುತ್ತಾರೆ. ಆದರೆ ಅದು ಎಲ್ಲಾ ಕ್ರಿಕೆಟ್‌ ತಂಡಗಳು ಕೂಡ ಅರ್ಥ ಮಾಡಿಕೊಂಡಿರುವ ಸಾಮಾನ್ಯ ಜ್ಞಾನವಾಗಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡ ಯಾವ ತಂತ್ರವನ್ನು ಅಥವಾ ಮನಸ್ಥಿತಿಯನ್ನು ಗುರಿಯಾಗಿರಿಸಿಕೊಂಡಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಪ್ರದರ್ಶನಗಳಲ್ಲಿ ಸಾಕಷ್ಟು ಏರುಪೇರಾಗಿದೆ. ಕೆಲವೇ ಆಟಗಾರರ ವೈಯಕ್ತಿಕ ಪ್ರದರ್ಶನಗಳು ಮಾತ್ರವೇ ಗಮನಾರ್ಹವಾಗಿ ಕಾಣಿಸುಕೊಳ್ಳುತ್ತಿದೆ" ಎಂದಿದ್ದಾರೆ ಮೈಕಲ್ ವಾನ್.

ಐಪಿಎಲ್ 2021 ದ್ವಿತೀಯ ಹಂತ: ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಆಡಲ್ಲ
ಇನ್ನು ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡ ಭೋಜನ ವಿರಾಮಕ್ಕೂ 80 ನಿಮಿಷಗಳ ಮುನ್ನ ಮಾಡಿಕೊಂಡ ರಣತಂತ್ರದಲ್ಲಿನ ಎಡವಟ್ಟು ಇಂಗ್ಲೆಂಡ್ ತಂಡವನ್ನು ಗೆಲುವಿನಿಂದ ದೂರವಾಗುವಂತೆ ಮಾಡಿತು ಎಂದಿದ್ದಾರೆ ಮೈಕಲ್ ವಾನ್. ಜಸ್ಪ್ರೀತ್ ಬೂಮ್ರಾ ವಿಕೆಟ್ ಪಡೆಯಲು ನಡೆಸಿದ ಪ್ರಯತ್ನದಲ್ಲಿ ಇಂಗ್ಲೆಂಡ್ ತಂಡ ವೈಫಲ್ಯತೆಯನ್ನು ಅನುಭವಿಸಿತು. ಮತ್ತೊಂದೆಡೆ ಅನುಭವಿ ಆಟಗಾರರಿಂದ ನಾಯಕ ಜೋ ರೂಟ್‌ಗೆ ಉತ್ತಮ ಬೆಂಬಲ ದೊರೆಯದೆ ಹೋಯಿತು. ಈ ಸಂದರ್ಭದಲ್ಲಿ ಕೋಚ್ ಕ್ರಿಸ್ ಸಿಲ್ವರ್‌ವುಡ್ ಅವರಿಂದಲೂ ನಾನು ಸಾಕಷ್ಟು ನಿರೀಕ್ಷಿಸಿದ್ದೆ ಎಂದಿದ್ದಾರೆ ಮೈಕಲ್ ವಾನ್.

Story first published: Sunday, August 22, 2021, 12:40 [IST]
Other articles published on Aug 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X