ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Aus Vs Eng T20: ರನ್ ಗಳಿಸದಿದ್ದರೂ ಈ ಆಟಗಾರ ತಂಡದಲ್ಲಿರಬೇಕು ಎಂದ ಮೊಯಿನ್ ಅಲಿ

Moeen Ali Back All Rounder Ben Stokes For His Performance In T20 Series Against Australia

ಇಂಗ್ಲೆಂಡ್ ಆಲ್‌ರೌಂಡರ್ ಮೊಯಿನ್ ಅಲಿ ತಮ್ಮ ಸಹ ಆಟಗಾರ ಬೆನ್ ಸ್ಟೋಕ್ಸ್‌ಗೆ ಬೆಂಬಲವಾಗಿ ನಿಂತಿದ್ದಾರೆ, ಮುಂಬರುವ ಟಿ20 ವಿಶ್ವಕಪ್ 2022 ನಲ್ಲಿ ಉತ್ತಮ ಪ್ರದರ್ಶನ ನೀಡುವ ಬಗ್ಗೆ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

18 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್, ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡುತ್ತಿರುವ ಬೆನ್‌ ಸ್ಟೋಕ್ಸ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

ಮಹಿಳಾ ಏಷ್ಯಾಕಪ್‌ 2022: ಪಾಕ್‌ ವಿರುದ್ಧ 1ರನ್‌ನಿಂದ ಗೆದ್ದು ಫೈನಲ್ ತಲುಪಿದ ಶ್ರೀಲಂಕಾ ವನಿತೆಯರುಮಹಿಳಾ ಏಷ್ಯಾಕಪ್‌ 2022: ಪಾಕ್‌ ವಿರುದ್ಧ 1ರನ್‌ನಿಂದ ಗೆದ್ದು ಫೈನಲ್ ತಲುಪಿದ ಶ್ರೀಲಂಕಾ ವನಿತೆಯರು

ತಂಡಕ್ಕೆ ವಾಪಸಾಗಿರುವ ಬೆನ್‌ ಸ್ಟೋಕ್ಸ್‌ಗೆ ಬ್ಯಾಟಿಂಗ್‌ನಲ್ಲಿ ಮೂರನೇ ಕ್ರಮಾಂಕಕ್ಕೆ ಬಡ್ತಿ ನೀಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಕೇವಲ 9 ರನ್ ಗಳಿಸಿದ್ದರು. ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ನಡೆದ ಎರಡನೇ ಟಿ20 ನಲ್ಲಿ, ಸ್ಟೋಕ್ಸ್ ಏಳು ರನ್ ಗಳಿಸಿದ ನಂತರ ಆಡಮ್ ಝಂಪಾ ಎಸೆತದಲ್ಲಿ ಬೌಲ್ಡ್ ಆದರು.

ಆದರೆ, ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬೆನ್‌ ಸ್ಟೋಕ್ಸ್ ಮಿಚೆಲ್ ಮಾರ್ಷ್ ವಿಕೆಟ್ ಪಡೆದರು. ಆಸ್ಟ್ರೇಲಿಯಾ ರನ್ ಗಳಿಕೆಗೆ ಕಡಿವಾಣ ಹಾಕುವ ಮೂಲಕ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ ಕಾರಣರಾದರು.

 ಸ್ಟೋಕ್ಸ್ ಬೆಂಬಲಿಸಿದ ಮೊಯಿನ್ ಅಲಿ

ಸ್ಟೋಕ್ಸ್ ಬೆಂಬಲಿಸಿದ ಮೊಯಿನ್ ಅಲಿ

ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ ಮೊಯಿನ್ ಅಲಿ, ಬೆನ್‌ಸ್ಟೋಕ್ಸ್ ಬೆಂಬಲಿಸಿದ್ದಾರೆ. ಆತ ದೊಡ್ಡ ಪಂದ್ಯಗಳಲ್ಲಿ ರನ್ ಗಳಿಸುವ ಸಾಮರ್ಥ್ಯ ಹೊಂದಿರುವ ಆಟಗಾರ ಎಂದು ಹೇಳಿದ್ದಾರೆ.

"ದೊಡ್ಡ ಪಂದ್ಯಗಳು ಬಂದಾಗ, ಅವರು ರನ್ ಗಳಿಸುತ್ತಾರೆ ಮತ್ತು ನಿಮ್ಮ ಮುಖ್ಯ ಆಟಗಾರರಿಂದ ನೀವು ಬಯಸುವುದು ಅದನ್ನೇ. ಮುಂದಿನ ಎರಡು ಪಂದ್ಯಗಳಲ್ಲಿ ಬೆನ್ ಯಾವುದೇ ರನ್ ಗಳಿಸದಿದ್ದರೂ ನಾನು ಹೆದರುವುದಿಲ್ಲ. ವಿಶ್ವಕಪ್ ಪಂದ್ಯಗಳಲ್ಲಿ ಆತ ಉತ್ತಮವಾಗಿ ಆಡುತ್ತಾನೆ ಎಂದು ನನಗೆ ಖಾತ್ರಿಯಿದೆ. ರನ್ ಗಳಿಸದಿದ್ದರೂ ಸಹ, ಬೆನ್ ಸ್ಟೋಕ್ಸ್ ತಂಡದಲ್ಲಿ ಹೊಂದಲು ಉತ್ತಮ ಆಟಗಾರರಾಗಿದ್ದಾರೆ." ಎಂದು ಹೇಳಿದ್ದಾರೆ.

T20 World Cup: ಈ ಬೌಲರ್ ವಿರುದ್ಧ ಟೀಂ ಇಂಡಿಯಾ ಬ್ಯಾಟರ್ ರನ್ ಗಳಿಸಬೇಕು ಎಂದ ಗೌತಮ್ ಗಂಭೀರ್

ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಮಿಂಚಿದ ಸ್ಟೋಕ್ಸ್

ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಮಿಂಚಿದ ಸ್ಟೋಕ್ಸ್

ಬೆನ್ ಸ್ಟೋಕ್ಸ್ ರನ್ ಗಳಿಸದಿದ್ದರೂ ತಂಡಕ್ಕೆ ಕೊಡುಗೆಗಳನ್ನು ನೀಡುವ ಆಟಗಾರ. ಎರಡನೇ ಟಿ20 ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರು. ಆತ ಫೀಲ್ಡಿಂಗ್‌ನಲ್ಲಿ ಕೂಡ ಅದ್ಭುತವಾಗಿದ್ದಾನೆ. ಆತ ತಂಡದಲ್ಲಿ ಇರುವುದು ಯಾವಾಗಲೂ ಅನುಕೂಲಕರ ಎಂದು ಮೊಯಿನ್ ಅಲಿ ಹೇಳಿದರು.

ಪರ್ತ್ ಮತ್ತು ಕ್ಯಾನ್‌ಬೆರಾದಲ್ಲಿ ನಡೆದ ಮೊದಲ ಎರಡು ಟಿ20 ಪಂದ್ಯಗಳಲ್ಲಿ ಗೆದ್ದಿರುವ ಇಂಗ್ಲೆಂಡ್ ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ ಆತಿಥೇಯರ ವಿರುದ್ಧ 2-0 ಮುನ್ನಡೆ ಸಾಧಿಸಿದೆ.

ನಾಯಕತ್ವದ ಬಗ್ಗೆ ಟೀಕೆಗೆ ಉತ್ತರ ನೀಡಿದ ಬಟ್ಲರ್

ನಾಯಕತ್ವದ ಬಗ್ಗೆ ಟೀಕೆಗೆ ಉತ್ತರ ನೀಡಿದ ಬಟ್ಲರ್

ಈ ವರ್ಷದ ಆರಂಭದಲ್ಲಿ ಇಯಾನ್ ಮಾರ್ಗನ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಸೀಮಿತ ಓವರ್ ಮಾದರಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಜೋಸ್ ಬಟ್ಲರ್‌ ಹೊತ್ತಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಸತತ ಸೋಲಿನ ನಂತರ ಅವರ ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

ಆದರೂ, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಬಟ್ಲರ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

ಜೋಸ್ ಬಟ್ಲರ್ ನಾಯಕತ್ವಕ್ಕೆ ಮೆಚ್ಚುಗೆ

ಜೋಸ್ ಬಟ್ಲರ್ ನಾಯಕತ್ವಕ್ಕೆ ಮೆಚ್ಚುಗೆ

ಜೋಸ್ ಬಟ್ಲರ್ ಅದ್ಭುತ ಕ್ರಿಕೆಟ್ ಜ್ಞಾನವನ್ನು ಹೊಂದಿದ್ದಾರೆ. ಅವರು ನಾಯಕನಾಗಿ ಬಹಳ ಮುಕ್ತ ಮನಸ್ಸಿನವರು, ಯಾವಾಗಲೂ ವಿಭಿನ್ನವಾಗಿ ಯೋಚಿಸುತ್ತಾರೆ ಎಂದು ಮೊಯಿನ್ ಅಲಿ ಬಟ್ಲರ್ ನಾಯಕತ್ವನ್ನು ಹೊಗಳಿದ್ದಾರೆ.

"ಅವರು ಕಠಿಣ ಆಟಗಳಲ್ಲಿ ಅಸಾಧಾರಣವಾಗಿ ಉತ್ತಮ ನಾಯಕತ್ವ ವಹಿಸಿದ್ದಾರೆ, ಆಸ್ಟ್ರೇಲಿಯಾದಲ್ಲಿ ಈಗಾಗಲೇ ಎರಡು ಬಾರಿ ರಕ್ಷಿಸಲು ಅವರಿಗೆ ಮತ್ತು ತಂಡಕ್ಕೆ ಉತ್ತಮವಾಗಿದೆ." ಎಂದು ಹೇಳಿದರು.

Story first published: Thursday, October 13, 2022, 21:41 [IST]
Other articles published on Oct 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X