ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫಾರ್ಮ್‌ನಲ್ಲಿಲ್ಲದ ಅಜರುದ್ದೀನ್ ವೃತ್ತಿ ಬದುಕಿಗೆ ತಿರುವು ಕೊಟ್ಟ ಪಾಕ್ ದಿಗ್ಗಜನ ಸಲಹೆ

Mohammad Azharuddin Reveals Zaheer Abbas Helped Him Play More Freely

ಮೊಹಮದ್ ಅಜರುದ್ದೀನ್ ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರು. 90ರ ದಶಕದ ಮಧ್ಯದಲ್ಲಿ ಭಾರತೀಯ ಕ್ರಿಕೆಟ್ ಎದುರಾಳಿಗಳಿಗೆ ಪ್ರಭಲ ಪ್ರತಿಸ್ಪರ್ದೆಯನ್ನು ನೀಡುವ ತಂಡವನ್ನಾಗಿ ರೂಪಿಸಿದರು. ಸಚಿನ್ ತೆಂಡೂಲ್ಕರ್‌ರನ್ನು ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿಸಿ ತಂಡಕ್ಕೆ ದೀರ್ಘಾವಧಿಯ ಅಸ್ತ್ರವಾಗುವಂತೆ ಮಾಡಿದ್ದರು.

ಆದರೆ 1989ರಲ್ಲಿ ತಮ್ಮ ಕ್ರಿಕೆಟ್ ಜೀವನದ ಆರಂಭಿಕ ಹಂತದಲ್ಲಿ ಫಾರ್ಮ್ ಕೊರತೆಯನ್ನು ಅನುಭವಿಸಿದ್ದರು. ಈ ಪರಿಸ್ಥಿತಿಯಿಂದ ಹೊರಬರಲು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಹೀರ್ ಅಬ್ಬಾಸ್ ನೀಡಿದ ಸಲಹೆ ಮುಖ್ಯ ಕಾರಣ ಎಂಬ ವಿಚಾರವನ್ನು ಅಜರುದ್ದೀನ್ ಹಂಚಿಕೊಂಡಿದ್ದಾರೆ. ಇದು ಕ್ರಿಕೆಟ್ ಬದುಕಿನಲ್ಲಿ ಸಾಕಷ್ಟು ಸಹಾಯ ಮಾಡಿತು ಎಂಬ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಕಾಣಲಿರುವ ಪ್ರಮುಖ ಬದಲಾವಣೆಗಳಿವುಈ ಬಾರಿಯ ಐಪಿಎಲ್‌ನಲ್ಲಿ ಕಾಣಲಿರುವ ಪ್ರಮುಖ ಬದಲಾವಣೆಗಳಿವು

ಅಭ್ಯಾಸ ನಡೆಸುವಲ್ಲಿಗೆ ಬಂದಿದ್ದ ಜಹೀರ್ ಅಬ್ಬಾಸ್

ಅಭ್ಯಾಸ ನಡೆಸುವಲ್ಲಿಗೆ ಬಂದಿದ್ದ ಜಹೀರ್ ಅಬ್ಬಾಸ್

1989ರಲ್ಲಿ ಪಾಕಿಸ್ತಾದ ವಿರುದ್ಧದ ಪಂದ್ಯಕ್ಕೆ ನಾನು ಅಯ್ಕೆಯಾಗುವ ಬಗ್ಗೆ ನನಗೆ ನಂಬಿಕೆಯಿರಲಿಲ್ಲ. ಯಾಕೆಮದರೆ ಬ್ಯಾಟಿಂಗ್‌ನಲ್ಲಿ ನಾನು ಸಾಕಷ್ಟು ಪರದಾಟುತ್ತಿದ್ದೆ. ನನಗಿನ್ನೂ ನೆನಪಿದೆ ಕರಾಚಿಯಲ್ಲಿ ನಾವು ಅಭ್ಯಾಸವನ್ನು ನಡೆಸುತ್ತಿದ್ದಾಗ ಜಹೀರ್ ಭಾಯ್ ನಾವು ಅಭ್ಯಾಸ ನಡೆಸುತ್ತಿರುವುದನ್ನು ನೋಡಲು ಆಗಮಿಸಿದ್ದರು. ಆಗ ಯಾಕೆ ನೀನು ಬೇಗನೆ ಔಟಾಗುತ್ತೀಯಾ ಎಂದು ಕೇಳಿದ್ದರು ಎಂದು ಅಜರುದ್ದೀನ್ ನೆನಪಿಸಿಕೊಂಡಿದ್ದಾರೆ.

ಗ್ರಿಪ್ ಬದಲಾಯಿಸಲು ಸಲಹೆ

ಗ್ರಿಪ್ ಬದಲಾಯಿಸಲು ಸಲಹೆ

ಮುಂದುವರಿದು ಮಾತನಾಡಿದ ಅಜರುದ್ದೀನ್ "ಆ ಸಂದರ್ಭದಲ್ಲಿ ನಾನು ನನ್ನ ಬ್ಯಾಟಿಂಗ್‌ನಲ್ಲಿ ಅನುಭವಿಸುತ್ತಿದ್ದ ಸಮಸ್ಯೆಯನ್ನು ಅವರ ಬಳಿ ಹೇಳಿಕೊಂಡಿದ್ದೆ. ಅದಕ್ಕೆ ಅವರು ಒಂದು ಸಲಹೆಯನ್ನು ನೀಡಿದ್ದರು. ಬ್ಯಾಟ್‌ನ ಹಿಡಿತದಲ್ಲಿ ಒಂದು ಸಣ್ಣ ಬದಲಾವಣೆಯನ್ನು ಮಾಡಲು ಸೂಚಿಸಿದರು. ಈ ಬದಲಾವಣೆಯನ್ನು ಮಾಡಿಕೊಂಡು ನಾನು ಅಭ್ಯಾಸವನ್ನು ನಡಸಿದೆ. ಬಳಿಕ ಯಶಸ್ಸನ್ನೂ ಕಂಡೆ. ಇದು ಮುಂದೆ ನಾನೋರ್ವ ಇನ್ನಷ್ಟು ಆಕ್ರಮಣಕಾರಿ ಬ್ಯಾಟ್ಸ್‌ಮನ್ ಆಗಿ ಬದಲಾಗಲು ಕಾರಣವಾಯಿತು ಎಂದು ಹೇಳಿದ್ದಾರೆ.

ಯೂನಿಸ್ ಖಾನ್‌ಗೆ ಸಲಹೆ ನೀಡಿದ್ದ ಅಜರುದ್ದೀನ್

ಯೂನಿಸ್ ಖಾನ್‌ಗೆ ಸಲಹೆ ನೀಡಿದ್ದ ಅಜರುದ್ದೀನ್

ಮುಂದೆ ಇದೆ ರೀತಿ ಅಜರುದ್ದೀನ್ ಪಾಕಿಸ್ತಾನದ ಇನ್ನೋರ್ವ ಶ್ರೇಷ್ಠ ಕ್ರಿಕೆಟಿಗ ಯೂನಿಸ್ ಖಾನ್ ಬ್ಯಾಟಿಂಗ್‌ನಲ್ಲಿ ತೊಂದರೆ ಅನುಭವಿಸುತ್ತಿದ್ದಾಗ ತಾನು ಅವರಿಗೆ ಸಲಹೆಯನ್ನು ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ. 2016ರಲ್ಲಿ ಯೂನಿಸ್ ಖಾನ್ ಇದೇ ಸ್ಥಿತಿಯಲ್ಲಿದ್ದರು. ಆಗ ನಾನು ಕ್ರಿಸ್‌ನಲ್ಲಿ ನಿಂತು ದೇಹವನ್ನು ಹತ್ತಿರದಲ್ಲಿಟ್ಟುಕೊಂಡು ಬ್ಯಾಟಿಂಗ್ ಮಾಡುವಂತೆ ಸಲಹೆ ನೀಡಿದ್ದೆ. ಅದನ್ನು ಸ್ವೀಕರಿಸಿದ ಅವರು ಓವರ್‌ನಲ್ಲಿ ನಡೆದ ಅಂತಮ ಪಂದ್ಯದಲ್ಲಿ ದ್ವಿಶತಕವನ್ನು ಬಾರಿಸಿದ್ದರು ಎಂದು ಹೇಳಿದ್ದಾರೆ.

Story first published: Thursday, July 30, 2020, 16:15 [IST]
Other articles published on Jul 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X