ಸಂಕಷ್ಟದಲ್ಲಿ ಅಪ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ನೂತನ ನಾಯಕನ ಘೋಷಣೆ

ಇಡೀ ಅಫ್ಘಾನಿಸ್ತಾನ ಈಗ ಆತಂಕದಲ್ಲಿದೆ. ಇದಕ್ಕೆ ಕಾರಣ ತಾಲಿಬಾನ್. ಅಮೆರಿಕಾ ಸೇನೆ ಅಪಘಾನಿಸ್ತಾನ ಬಿಟ್ಟು ಹೊರಡುತ್ತಿದ್ದಂತೆಯೇ ಇಡೀ ದೇಶವನ್ನು ಈಗ ತಾಲಿಬಾನ್ ವಶಕ್ಕೆ ಪಡೆದುಕೊಂಡಿದೆ. ಈ ಆತಂಕದ ಕಾರ್ಮೋಡ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೂ ಹೊರತಾಗಿಲ್ಲ. ಇದರ ಮಧ್ಯೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಟಿ20 ವಿಶ್ವಕಪ್‌ಗೆ ಅಫ್ಘಾನಿಸ್ತಾನ ತಂಡವನ್ನು ಪ್ರಕಟಿಸಿದ ಕೆಲವೇ ಕ್ಷಣಗಳಲ್ಲಿ ನಾಯಕ ರಶೀದ್ ಖಾನ್ ಅಸಮಾಧಾನಗೊಂಡು ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ತಾಲಿಬಾನ್ ಕರಿಛಾಯೆಯ ಮಧ್ಯೆಯೇ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡ.

ಆದರೆ ಈಗ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ನೂತನ ನಾಯಕನನ್ನು ಘೋಷಣೆ ಮಾಡಲಾಗಿದೆ. ಅಫ್ಘಾನಿಸ್ತಾನ ತಂಡದ ಪ್ರಮುಖ ಆಲ್‌ರೌಂಡರ್ ಮೊಹಮ್ಮದ್ ನಬಿ ಈಗ ನೂತನ ನಾಯಕನಾಗಿ ಘೋಷಣೆತಾಗಿದ್ದು ಮುಂದಿನ ಟಿ20 ವಿಶ್ವಕಪ್‌ಗೆ ತಂಡವನ್ನು ಮುನ್ನಡೆಸಲಿದ್ದಾರೆ. ಈ ಬಗ್ಗೆ ಸ್ವತಃ ಮೊಹಮ್ಮದ್ ನಬಿ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಟಿ20 ವಿಶ್ವಕಪ್‌ಗೆ ಪ್ರಕಟವಾಗಿರುವ ಕೊಹ್ಲಿ ಪಡೆ ವಿರುದ್ಧ ಇದೆಂಥಾ ಆರೋಪ!ಟಿ20 ವಿಶ್ವಕಪ್‌ಗೆ ಪ್ರಕಟವಾಗಿರುವ ಕೊಹ್ಲಿ ಪಡೆ ವಿರುದ್ಧ ಇದೆಂಥಾ ಆರೋಪ!

"ಸಂಕಷ್ಟದ ಸಂದರ್ಭದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ರಾಷ್ಟ್ರೀಯ ತಂಡವನ್ನು ಟಿ20 ಮಾದರಿಯಲ್ಲಿ ಮುನ್ನಡೆಸಲು ನೀಡದ ಜವಾಬ್ಧಾರಿಗೆ ನಾನು ಆಭಾರಿಯಾಗಿದ್ದೇನೆ. ಮುಂಬರುವ ಟಿ20 ವಿಶ್ವಕಪ್‌ನಲ್ಲಿ ನಾವು ಜೊತೆಯಾಗಿ ಸಾಗಿದರೆ ನಮ್ಮ ದೇಶದ ಶ್ರೇಷ್ಠ ಚಿತ್ರಣವನ್ನು ಜಗತ್ತಿಗೆ ತೆರೆದಿಡಬಹುದು" ಎಂದು ನಬಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸಂಕಷ್ಟದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್: ರಶೀದ್ ಖಾನ್ ನಾಯಕತ್ವದಿಂದ ಹಿಂದಕ್ಕೆ ಸರಿದಿರುವುದು ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಮತ್ತಷ್ಟು ಆಘಾತ ನೀಡಿದಂತಾಗಿದೆ. ಈ ಮಧ್ಯೆ ಮುಂದಿನ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದ ಹೋಬರ್ಟ್‌ನಲ್ಲಿ ನಿಗದಿಯಾಗಿರುವ ಏಕೈಕ ಟೆಸ್ಟ್ ಪಂದ್ಯ ಕೂಡ ರದ್ದಾಗುವ ಸಾಧ್ಯತೆಯಿದೆ. ಈ ಬಗ್ಗೆ ಕಳೆದ ಗುರುವಾರ ಕ್ರಿಕೆಟ್ ಆಸ್ಟ್ರೇಲಿಯಾ ಮಾಧ್ಯಮ ಪ್ರಕಟಣೆಯ ಮೂಲಕ ಸ್ಪಷ್ಟನೆಯನ್ನು ನೀಡಿತ್ತು. ತಾಲಿಬಾನ್ ಸರ್ಕಾರ ಅಫ್ಘಾನಿಸ್ತಾನ ಮಹಿಳಾ ಕ್ರಿಕೆಟ್ ತಂಡಕ್ಕೆ ಮಾನ್ಯತೆಯನ್ನು ನೀಡದಿದ್ದರೆ ಅಪ್ಘಾನಿಸ್ತಾನ ಕ್ರಿಕೆಟ್ ತಂಡದೊಂದಿಗೆ ಟೆಸ್ಟ್ ಕ್ರಿಕೆಟ್ ನಡೆಯುವುದು ಅಸಂಭವ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದೆ.

"ಜಾಗತಿಕ ಮಟ್ಟದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಉತ್ತೇಜನ ನೀಡುವುದು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಬಹಳಷ್ಟು ಪ್ರಮುಖ ಸಂಗತಿಯಾಗಿದೆ" ಎಂದು ಈ ಪ್ರಕಟಣೆಯಲ್ಕಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ವಿವರಿಸಿತ್ತು. "ಕ್ರಿಕೆಟ್ ಎಲ್ಲಿರಿಗೂ ಎಂದೇ ಎಂಬುದು ನಮ್ಮ ದೃಷ್ಟಿಕೋನವಾಗಿದೆ. ನಾವು ಪ್ರತಿ ಹಂತದಲ್ಲಿಯೂ ಮಹಿಳಾ ಕ್ರಿಕೆಟ್‌ಗೆ ಬೆಂಬಲವನ್ನು ನೀಡಲು ಬದ್ಧವಾಗಿರುತ್ತೇವೆ" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

"ಜಾಗತಿಕ ಮಟ್ಟದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಉತ್ತೇಜನ ನೀಡುವುದು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಬಹಳಷ್ಟು ಪ್ರಮುಖ ಸಂಗತಿಯಾಗಿದೆ. ಕ್ರಿಕೆಟ್ ಎಲ್ಲಿರಿಗೂ ಎಂದೇ ಎಂಬುದು ನಮ್ಮ ದೃಷ್ಟಿಕೋನವಾಗಿದೆ. ನಾವು ಪ್ರತಿ ಹಂತದಲ್ಲಿಯೂ ಮಹಿಳಾ ಕ್ರಿಕೆಟ್‌ಗೆ ಬೆಂಬಲವನ್ನು ನೀಡಲು ಬದ್ಧವಾಗಿರುತ್ತೇವೆ" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

18 ವರ್ಷಗಳ ಬಳಿಕ ಪ್ರವಾಸ ಸರಣಿಗಾಗಿ ಪಾಕ್‌ಗೆ ಬಂದಿಳಿದ ನ್ಯೂಜಿಲೆಂಡ್!18 ವರ್ಷಗಳ ಬಳಿಕ ಪ್ರವಾಸ ಸರಣಿಗಾಗಿ ಪಾಕ್‌ಗೆ ಬಂದಿಳಿದ ನ್ಯೂಜಿಲೆಂಡ್!

"ಕ್ರಿಕೆಟ್‌ನಲ್ಲಿ ಮಹಿಳಾ ಆಟಗಾರ್ತಿಯರ ಮುಖ ಅಥವಾ ದೇಹ ಮುಚ್ಚಿಕೊಳ್ಳದೆ ಇರಬಹುದಾದ ಸಂದರ್ಭಗಳು ಬರಬಹುದು. ಇಸ್ಲಾಂ ಮಹಿಳೆಯರನ್ನು ಈ ರೀತಿಯಾಗಿರಲು ಅನುಮತಿ ನೀಡುವುದಿಲ್ಲ. ಇದು ಮಾಧ್ಯಮಗಳ ಕಾಲ. ಈಗ ಫೋಟೋಗಳು ಹಾಗೂ ವಿಡಿಯೋಗಳು ಚಿತ್ರೀಕರಿಸುತ್ತವೆ. ಬಳಿಕ ಜನರು ಇದನ್ನು ನೊಡುತ್ತಾರೆ. ಇಸ್ಲಾಂ ಮತ್ತು ಇಸ್ಲಾಮಿಕ್ ಎಮಿರೇಟ್ಸ್ ಮಹಿಳೆಯರು ಕ್ರಿಕೆಟ್ ಅಥವಾ ತಮ್ಮನ್ನು ತಾವು ಬಹಿರಂಗಪಡಿಸುವ ಇನ್ಯಾವುದೇ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ನಿರಾಕರಿಸುತ್ತದೆ" ಎಂಬ ತಾಲಿಬಾನ್ ವಕ್ತಾರನ ಹೇಳಿಕೆಯನ್ನು ಉಲ್ಲೇಖಿಸಿ ಎಸ್‌ಬಿಎಸ್ ಟಿವಿ ವರದಿ ಮಾಡಿತ್ತು.

ಇನ್ನು ಈ ಹೇಳಿಕೆ ನಂತರ ಆಸ್ಟ್ರೇಲಿಯಾದ ಫಡರಲ್ ಕ್ರೀಡಾ ಸಚಿವ ಸೆನೆಟರ್ ರಿಚರ್ಡ್ ಕೋಲ್‌ಬೆಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ತಾಲಿಬಾನ್‌ನ ಈ ನಿಲುವಿನ ಕಾರಣಕ್ಕಾಗಿ ಅಪ್ಘಾನಿಸ್ತಾನದ ಪೂರ್ಣ ಪ್ರಮಾಣದ ಸದಸ್ಯತ್ವದ ವಿಚಾರವಾಗಿ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Sunday, September 12, 2021, 20:50 [IST]
Other articles published on Sep 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X