ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಪತ್ನಿಯಿಂದಲೇ ಆರೋಪ

Posted By:
ಮೊಹಮ್ಮದ್ ಶಮಿ ವಿರುದ್ಧ ಪತ್ನಿಯಿಂದಲೇ ಆರೋಪ | Oneindia Kannada
Mohammed Shami wife alleged that he has extramarital affair

ಮುಂಬೈ, ಮಾರ್ಚ್‌ 08: ಭಾರತದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ವಿರುದ್ಧ ಅವರ ಪತ್ನಿ ಹಸಿನಾ ಜಹಾನ್ ಅವರು ಕಿರುಕುಳ ಮತ್ತು ಅಕ್ರಮ ಸಂಬಂಧದ ಆರೋಪಗಳನ್ನು ಮಾಡಿದ್ದಾರೆ.

ಮೊಹಮ್ಮದ್ ಶಮಿ ಹಲವು ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಶಮಿ ಅವರದ್ದು ಎನ್ನಲಾದ ಹಲವು ವಾಟ್ಸ್‌ಆಪ್ ಚಾಟ್, ಕೆಲವು ಹುಡುಗಿಯರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದಾರೆ.

ವಿವಾಹೇತರ ಸಂಬಂಧ ಆರೋಪ ಅಲ್ಲಗೆಳೆದ ಶಮಿ

ಪತ್ನಿ ಹಸಿನಾ ಜಹಾನ್ ಅವರ ಆರೋಪಗಳನ್ನು ತಳ್ಳಿ ಹಾಕಿರುವ ಮೊಹಮ್ಮದ್ ಶಮಿ ಅವರು ಟ್ವಿಟರ್‌ ನಲ್ಲಿ ಪೊಸ್ಟ್ ಹಾಕಿದ್ದು, ನನ್ನ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳು, ನನ್ನ ತೇಜೋವಧೆ ಮಾಡಲು ಮತ್ತು ನನ್ನ ವೃತ್ತಿ ಜೀವನಕ್ಕೆ ಧಕ್ಕೆ ಉಂಟು ಮಾಡಲು ಮಾಡಲಾಗುತ್ತಿರುವ ಪ್ರಯತ್ನಗಳು ಇವು ಎಂದು ಹೇಳಿದ್ದಾರೆ.

ಹಸಿನಾ ಅವರು ಕೊಲೆ ಹತ್ಯ ಆರೋಪವನ್ನೂ ಮಾಡಿದ್ದು, ಶಮಿ ಅವರ ತಾಯಿ ಮತ್ತು ಸಹೋದರ ತಮ್ಮನ್ನು ಕೊಲ್ಲುವ ಪ್ರಯತ್ನವನ್ನೂ ಮಾಡಿದ್ದರು ಎಂದಿದ್ದಾರೆ. ತಾವು ಶಮಿ ಒಂದಿಗೆ ಸಂಬಂಧ ಮುರಿದುಕೊಳ್ಳುವುದಿಲ್ಲ ಎಂದಿರುವ ಅವರು ಶಮಿ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಮೊಹಮ್ಮದ್ ಶಮಿ ಅವರ ವಿರುದ್ಧ ಆರೋಪ ಬಂದಿರುವ ಕಾರಣ ಅವರನ್ನು ಬಿಸಿಸಿಐ ತನ್ನ ಆಟಗಾರರ ಕೇಂದ್ರೀಯ ಗುತ್ತಿಗೆಯಿಂದ ಹೊರಗಿಟ್ಟಿದೆ.

Story first published: Thursday, March 8, 2018, 13:12 [IST]
Other articles published on Mar 8, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ