ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್: 2 ರನ್ನಿಗೆ ಆಲೌಟ್, ಒಂದೇ ಎಸೆತದಲ್ಲಿ ಪಂದ್ಯ ಫಿನಿಶ್

ನವದೆಹಲಿ, ನವೆಂಬರ್ 24: 50 ಓವರ್ ಗಳ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಕೇವಲ 2 ರನ್ನಿಗೆ ಆಲೌಟ್. ಎದುರಾಳಿ ತಂಡದವರು ಜಸ್ಟ್ ಒಂದೇ ಎಸೆತದಲ್ಲಿ ಪಂದ್ಯವನ್ನು ಫಿನಿಶ್ ಮಾಡಿದ್ರು. ಹೌದು ಶುಕ್ರವಾರ ನಡೆದ ಕೇರಳ ಮತ್ತು ನಾಗಾಲ್ಯಾಂಡ್ ನಡುವಿನ ಪಂದ್ಯ ಕ್ರಿಕೆಟ್‌ನಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಬಿಸಿಸಿಐ ಆಯೋಜಿಸಿರುವ ಮಹಿಳೆಯರ ಅಂಡರ್-19 ನಾಕೌಟ್ ಏಕದನ ಪಂದ್ಯದಲ್ಲಿ ಶುಕ್ರವಾರ ಮೊದಲು ಬ್ಯಾಟಿಂಗ್ ಮಾಡಿದ ನಾಗಾಲ್ಯಾಂಡ್‌ ತಂಡ ಕೇವಲ 17 ಓವರ್ ಗಳಲ್ಲಿ 2 ರನ್ ಗಳಿಗೆ ಸರ್ವಪತನ ಕಂಡಿದೆ. ಬಳಿಕ ಬ್ಯಾಟಿಂಗ್ ಆಡಿದ ಕೇರಳ ಜಸ್ಟ್ ಒಂದೇ ಒಂದು ಎಸೆತದಲ್ಲಿ ಪಂದ್ಯವನ್ನು ಗೆದ್ದುಕೊಂಡು ಹೊಸ ದಾಖಲೆ ನಿರ್ಮಿಸಿತು.

Nagaland all out for just two runs in U-19 Women One Day League

ನಾಗಾಲ್ಯಾಂಡ್‌ ನ ಆರಂಭಿಕ ಆಟಗಾರ್ತಿ ಮೇನಕಾ 18 ಬಾಲ್‌ ಗಳನ್ನು ಎದುರಿಸಿ ಒಂದು ರನ್‌ ಗಳಿಸಿದರು. ಮತ್ತೊಂದು ರನ್‌ ವೈಡ್ ನಿಂದ ಬಂದಿದೆ. ಅಂತಿಮವಾಗಿ ನಾಗಾಲ್ಯಾಂಡ್‌ ಕೇರಳಕ್ಕೆ ಮೂರು ರನ್‌ ಗಳ ಗೆಲುವಿನ ಗುರಿ ನೀಡಿತು. ಬಳಿಕ ಬ್ಯಾಟಿಂಗ್ ಮಾಡಿದ ಕೇರಳ ಒಂದೇ ಎಸೆತದಲ್ಲಿ ಬೌಂಡರಿ ಹೊಡೆಯುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.

ಕೇರಳ ಪರ ನಾಯಕಿ ಮಿನ್ನು ಮಣಿ 4 ವಿಕೆಟ್‌ ಕಬಳಿಸಿ ಮಿಂಚಿದರು. ಇನ್ನು ಸೌರಭ್ಯ ಎರಡು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಕ್ರಿಕೆಟ್ ಇತಿಹಾಸದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಈ ಪಂದ್ಯ ಸಾಕ್ಷಿಯಾಗಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X