ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind Vs Eng: ಸೋಲಿನ ಹೊಣೆಯನ್ನು ಅವರಿಬ್ಬರೂ ಹೊತ್ತು ರಾಜೀನಾಮೆ ಕೊಡಲಿ : ಕ್ರಿಕೆಟ್ ಅಭಿಮಾನಿಗಳ ಆಕ್ರೋಶ

Netizens Slams Team India Coach Rahul Dravid After Loss Against England In T20 World Cup Semifinal

ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಅಂತರದಲ್ಲಿ ಹೀನಾಯ ಸೋಲನುಭವಿಸಿದ ನಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಬಲಿಷ್ಠ ತಂಡವೊಂದು ಯಾವುದೇ ಹೋರಾಟ ನೀಡದೆ ಹೀಗೆ ಸುಲಭವಾಗಿ ಸೋಲುವುದನ್ನು ಅರಗಿಸಿಕೊಳ್ಳಲಾಗದು.

ಟಾಸ್ ಗೆದ್ದ ನಂತರ, ಜೋಸ್ ಬಟ್ಲರ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಭಾರತದ ಆರಂಭಿಕರಾದ ಕೆಎಲ್ ರಾಹುಲ್ (5) ಮತ್ತು ರೋಹಿತ್ ಶರ್ಮಾ (27) ಮತ್ತೊಮ್ಮೆ ರನ್ ಗಳಿಸಲು ವಿಫಲರಾದರು, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಭಾರತ ಗೌರವಾನ್ವಿತ ಮೊತ್ತ ಕಲೆಹಾಕಲು ಕಾರಣವಾದರು. ಇವರಿಬ್ಬರೂ ಅರ್ಧಶತಕ ಗಳಿಸಿ ತಂಡಕ್ಕೆ ಆಸರೆಯಾದರು. ಭಾರತವು ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 168 ರನ್‌ಗಳನ್ನು ಗಳಿಸಿತು.

ಭಾರತದ ಹಲವು ಕ್ರಿಕೆಟಿಗರು ನಿವೃತ್ತಿಯಾಗಲಿದ್ದಾರೆ, ಈತನೇ ಭವಿಷ್ಯದ ನಾಯಕ ಎಂದ ಸುನಿಲ್ ಗವಾಸ್ಕರ್ಭಾರತದ ಹಲವು ಕ್ರಿಕೆಟಿಗರು ನಿವೃತ್ತಿಯಾಗಲಿದ್ದಾರೆ, ಈತನೇ ಭವಿಷ್ಯದ ನಾಯಕ ಎಂದ ಸುನಿಲ್ ಗವಾಸ್ಕರ್

ಈ ಮೊತ್ತವನ್ನು ಭಾರತದ ಬಲಿಷ್ಠ ಬೌಲಿಂಗ್ ವಿಭಾಗ ರಕ್ಷಿಸಿಕೊಳ್ಳುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಬಟ್ಲರ್ ಮತ್ತು ಹೇಲ್ಸ್ ಟೀಂ ಇಂಡಿಯಾ ಬೌಲಿಂಗ್ ದಾಳಿಯನ್ನು ಅಣಕಿಸುವಂತೆ, ಬ್ಯಾಟಿಂಗ್ ಮಾಡಿದರು. ಯಾವುದೇ ಹಂತದಲ್ಲಿ ಇಂಗ್ಲೆಂಡ್‌ಗೆ ಭಾರತದ ಬೌಲಿಂಗ್ ಅಪಾಯಕಾರಿ ಎನಿಸಲೇ ಇಲ್ಲ, ಒತ್ತಡವೇ ಇಲ್ಲದಂತೆ ಅನಾಯಾಸವಾಗಿ ಬೌಂಡರಿಗಳನ್ನು ಹೊಡೆದರು. ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ತಲಾ ಆರ್ಧಶತಕ ಗಳಿಸಿದರು. ಅಂತಿಮವಾಗಿ ಯಾವುದೇ ವಿಕೆಟ್ ಕಳೆದುಕೊಳ್ಳದೆ, ಇನ್ನೂ 4 ಓವರ್ ಬಾಕಿ ಇರುವಂತೆ ಗೆಲುವು ಸಾಧಿಸಿ, ಸೆಮಿಫೈನಲ್ ತಲುಪಿದರು.

ಈ ಸೋಲಿಗೆ ದ್ರಾವಿಡ್, ರೋಹಿತ್ ಹೊಣೆ

ಈ ಸೋಲಿಗೆ ದ್ರಾವಿಡ್, ರೋಹಿತ್ ಹೊಣೆ

ಭಾರತದ ಸೋಲಿನ ಬಳಿಕ ಹಲವರು ತಮ್ಮ ಅಭಿಪ್ರಾಯಗಳನ್ನು, ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗ ಕೆಲವರ ಕೋಪ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ತಿರುಗಿದೆ. ಇಂಗ್ಲೆಂಡ್ ವಿರುದ್ಧ ಸೋತ ಬಳಿಕ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಟ್ವಿಟರ್ ಬಳಕೆದಾರರು ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.

"ಈ ಸೋಲಿಗೆ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಹೊಣೆ. ತಂಡದ ಆಯ್ಕೆ ಉತ್ತಮವಾಗಿರಲಿಲ್ಲ, ಯಾವುದೇ ಆಕ್ರಮಣಕಾರಿ ಮನೋಭಾವ ತೋರಲಿಲ್ಲ, ಇಂಗ್ಲೆಂಡ್‌ ತಂಡದಲ್ಲಿ ಸಾಕಷ್ಟು ಎಡಗೈ ಬ್ಯಾಟರ್ ಇದ್ದಾಗಲೂ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್‌ರನ್ನು ಆಡಿಸಿದ್ದು ಕೆಟ್ಟ ನಿರ್ಧಾರ" ಎಂದು ಟ್ವಿಟರ್ ಬಳಕೆದಾರರೊಬ್ಬರು ಹೇಳಿದ್ದಾರೆ.

ಭಾರತ ತಂಡದಲ್ಲಿ ಈ ಇಬ್ಬರ ಕ್ರಿಕೆಟ್ ಜೀವನ ಅಂತ್ಯ: 2024ರ ಟೂರ್ನಿಗೆ ಯುವ ತಂಡ?

 ಅವರಿಬ್ಬರೂ ರಾಜೀನಾಮೆ ನೀಡುತ್ತಾರ?

ಅವರಿಬ್ಬರೂ ರಾಜೀನಾಮೆ ನೀಡುತ್ತಾರ?

"ಈ ಸೋಲಿನ ಹೊಣೆಯನ್ನು ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಹೊರುತ್ತಾರ? ರಾಜೀನಾಮೆ ನೀಡುತ್ತಾರ?" ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.

ಸಂಜು ಸ್ಯಾಮ್ಸನ್, ಶುಭ್‌ಮನ್ ಗಿಲ್, ಪೃಥ್ವಿಶಾ ಅಂತಹವರು ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಅವರನ್ನು ತಂಡಕ್ಕೆ ಆಯ್ಕೆ ಮಾಡಲಿಲ್ಲ. ಆಲ್‌ರೌಂಡರ್ ಗಳನ್ನು ಆಡಿಸುವ ರಾಹುಲ್ ದ್ರಾವಿಡ್ ಕೆಟ್ಟ ನಿರ್ಧಾರಕ್ಕೆ ನಾವು ದೊಡ್ಡ ಬೆಲೆ ತೆರಬೇಕಾಯಿತು ಎಂದು ಹೇಳಿದ್ದಾರೆ.

"ನಮಗೆ ಎಂಎಸ್ ಧೋನಿ ಅಥವಾ ಯುವರಾಜ್‌ ಸಿಂಗ್‌ರಂತಹ ಕೋಚ್‌ನ ಅವಶ್ಯಕತೆ ಇದೆ" ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.

2013ರಿಂದ ಒಂದೂ ಐಸಿಸಿ ಟ್ರೋಫಿ ಗೆದ್ದಿಲ್ಲ

2013ರಿಂದ ಒಂದೂ ಐಸಿಸಿ ಟ್ರೋಫಿ ಗೆದ್ದಿಲ್ಲ

ಎಂಎಸ್ ಧೋನಿ ನೇತೃತ್ವದಲ್ಲಿ ಇಂಗ್ಲೆಂಡ್‌ನಲ್ಲಿ 2013 ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಭಾರತವು ಇದುವರೆಗೂ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. 2015 ಏಕದಿನ ವಿಶ್ವಕಪ್, 2016 ಟಿ20 ವಿಶ್ವಕಪ್, 2019 ವಿಶ್ವ ಕಪ್ ಮತ್ತು 2022 ಟಿ20 ವಿಶ್ವಕಪ್, ಒಟ್ಟಾರೆ ನಾಲ್ಕು ವಿಶ್ವಕಪ್ ಪಂದ್ಯಗಳಲ್ಲಿ ಸತತವಾಗಿ ಸೆಮಿಫೈನಲ್‌ನಲ್ಲಿ ಸೋಲುವ ಮೂಲಕ ನಿರಾಸೆ ಅನುಭವಿಸಿದೆ.

2021ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ಕೂಡ ತಲುಪುವಲ್ಲಿ ವಿಫಲವಾಗಿತ್ತು. ನಂತರ ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. ಹೊಸ ನಾಯಕತ್ವ ಮತ್ತು ಕೋಚ್ ನೇತೃತ್ವದಲ್ಲಿ ಭಾರತ ಈ ಬಾರಿ ಏಷ್ಯಾಕಪ್ ಮತ್ತು ವಿಶ್ವಕಪ್ ಗೆಲ್ಲುವ ವಿಶ್ವಾಸವಿತ್ತು, ಆದರೆ ಎರಡರಲ್ಲೂ ಟೀಂ ಇಂಡಿಯಾ ವಿಫಲವಾಗಿದೆ.

Story first published: Thursday, November 10, 2022, 23:06 [IST]
Other articles published on Nov 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X