ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2021: ಭಾರತದಲ್ಲಿ ಅನುಭವಿಸಿದ ಕಷ್ಟವನ್ನು ನೆನೆದು ಕಣ್ಣೀರು ಹಾಕಿದ ನ್ಯೂಜಿಲೆಂಡ್ ಕ್ರಿಕೆಟಿಗ

 New Zealand Cricketer Tim Seifert Breaks Down in Tears While Recounting His Covid 19 quarantine days in India

ಏಪ್ರಿಲ್ 9ರಂದು ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಾವುದೇ ಅಡಚಣೆಗಳಿಲ್ಲದೆ 29 ಪಂದ್ಯಗಳನ್ನು ಯಶಸ್ವಿಯಾಗಿ ಪೂರೈಸಿತು. ಆದರೆ ಐಪಿಎಲ್ ಬಯೋಬಬಲ್ ಒಳಗಡೆ ಕೊರೊನಾ ಪ್ರವೇಶಿಸಿ ವಿವಿಧ ತಂಡಗಳ ಕೆಲ ಆಟಗಾರರು ಮತ್ತು ತರಬೇತುದಾರರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ಮುಂದೂಡಲಾಯಿತು.

ಆರ್‌ಸಿಬಿ ವಿರುದ್ಧ ನಡೆದಿದ್ದ ಆ ಘಟನೆ ನೆನೆದು ಖುಷಿಪಟ್ಟ ಸೂರ್ಯಕುಮಾರ್ ಯಾದವ್ಆರ್‌ಸಿಬಿ ವಿರುದ್ಧ ನಡೆದಿದ್ದ ಆ ಘಟನೆ ನೆನೆದು ಖುಷಿಪಟ್ಟ ಸೂರ್ಯಕುಮಾರ್ ಯಾದವ್

ಹೀಗೆ ಕೊರೊನಾ ಸೋಂಕು ದೃಢಪಟ್ಟ ಆಟಗಾರರ ಪೈಕಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಟಿಮ್ ಸೀಫರ್ಟ್ ಕೂಡ ಒಬ್ಬರು. ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟ ವೇಳೆಯಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರ ಟಿಮ್ ಸೀಫರ್ಟ್ ವರದಿಯು 2 ಬಾರಿ ನಡೆದ ಕೊವಿಡ್ ಪರೀಕ್ಷೆಯಲ್ಲಿಯೂ ಪಾಸಿಟಿವ್ ಬಂದಿತ್ತು. ಹೀಗಾಗಿ ಟಿಮ್ ಸೀಫರ್ಟ್ ನ್ಯೂಜಿಲೆಂಡ್‌ಗೆ ಪ್ರಯಾಣ ಬೆಳೆಸದೆ ಚೆನ್ನೈನಲ್ಲಿ ಕ್ವಾರಂಟೈನ್‌ಗೆ ಒಳಗಾದರು.

ಇದೀಗ ತನ್ನ ತವರು ದೇಶಕ್ಕೆ ಹಿಂದಿರುಗಿರುವ ಟಿಮ್ ಸೀಫರ್ಟ್ ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಗಾಗಿದ್ದು ಐಪಿಎಲ್ ವೇಳೆ ಕೊರೊನಾವೈರಸ್ ಕಾರಣದಿಂದ ಭಾರತದಲ್ಲಿ ಕಳೆದ ದಿನಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದಾರೆ. ಹೀಗೆ ಮಾತನಾಡುವ ವೇಳೆ ಭಾರತದಲ್ಲಿನ ತಮ್ಮ 14 ದಿನಗಳ ಕ್ವಾರಂಟೈನ್‌ನಲ್ಲಿ ಅನುಭವಿಸಿದ ನೋವು ಮತ್ತು ಒತ್ತಾಯವನ್ನು ನೆನೆದು ಟಿಮ್ ಸೀಫರ್ಟ್ ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವ್ಯವಸ್ಥಾಪಕರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮಾಡಿದ ಸಹಾಯವನ್ನು ಸಿಫರ್ಟ್ ನೆನಪಿಸಿಕೊಂಡಿದ್ದಾರೆ. ಟಿಮ್ ಸಿಫರ್ಟ್ ಕಣ್ಣೀರು ಹಾಕಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Story first published: Tuesday, May 25, 2021, 12:52 [IST]
Other articles published on May 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X