ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಕಳಪೆ ಪ್ರದರ್ಶನ: ನಾಯಕತ್ವ ತೊರೆದ ನಿಕೋಲಸ್ ಪೂರನ್

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡ ಹೀನಾಯ ಪ್ರದರ್ಶನ ನೀಡಿ ಮೂಕ್ಯ ಸುತ್ತಿಗೆ ತಲುಪುವಲ್ಲಿಯೂ ವಿಫಲವಾಗಿತ್ತು. ಅರ್ಹತಾ ಸುತ್ತಿನಿಂದಿಲೇ ನಿರ್ಗಮಿಸಿದ ವೆಸ್ಟ್ ಇಂಡೀಸ್ ಭಾರೀ ಟೀಕೆಗೆ ಗುರಿಯಾಗಿತ್ತು. ಈ ಹೀನಾಯ ಪ್ರದರ್ಶನದ ಬಳಿಕ ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್ ಈಗ ವೈಟ್‌ಬಾಲ್ ತಂಡದ ನಾಯಕತ್ವದಿಂದ ತಾನು ಕೆಳಗಿಳಿವುದಾಗಿ ಪ್ರಕಟಿಸಿದ್ದಾರೆ. ಇದಕ್ಕೂ ಮುನ್ನ ಪೂರನ್ ಈ ಸೋಲಿನ ಕಾರಣಕ್ಕೆ ತಾನು ನಾಯಕತ್ವ ತೊರೆಯಲಾರೆ ಎಂದು ಹೇಳಿಕೆ ನೀಡಿದ್ದರು.

ನಿಕೋಲಸ್ ಪೂರನ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಮೂಲಕ ನಾಯಕತ್ವ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ಪೂರನ್ ಆ ಸ್ಥಾನವನ್ನು ತೊರೆಯುವಂತಾಗಿದೆ. ವೆಸ್ಟ್ ಇಂಡೀಸ್ ತಂಡದ ನಾಯಕನಾಗಿದ್ದ ಕೀರನ್ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ ಬಳಿಕ ಪೂರನ್ ವೈಟ್‌ಬಾಲ್ ತಂಡದ ನಾಯಕನಾಗಿ ನೇಮಕಗೊಂಡಿದ್ದರು.

ವಿಜಯ್ ಹಜಾರೆ ಟ್ರೋಫಿ 2022: ಸತತ 5ನೇ ಶತಕ ಸಿಡಿಸಿ ದಿಗ್ಗಜರನ್ನು ಹಿಂದಿಕ್ಕಿದ ಎನ್ ಜಗದೀಸನ್ವಿಜಯ್ ಹಜಾರೆ ಟ್ರೋಫಿ 2022: ಸತತ 5ನೇ ಶತಕ ಸಿಡಿಸಿ ದಿಗ್ಗಜರನ್ನು ಹಿಂದಿಕ್ಕಿದ ಎನ್ ಜಗದೀಸನ್

ಈ ಬಾರಿಯ ಟಿ20 ವಿಶ್ವಕಪ್ ಹಾಗೂ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವೆಸ್ಟ ಇಂಡೀಸ್ ಕ್ರಿಕೆಟ್ ಮಂಡಳಿ ನಿಕೋಲಸ್ ಪೂರನ್ ಅವರನ್ನು ನಾಯಕನ್ನಾಗಿ ನೇಮಕಗೊಳಿಸಿತ್ತು. ಆ ಸಂದರ್ಭದಲ್ಲಿ ಶಾಯ್ ಹೋಪ್ ಅವರಿಗೆ ತಂಡದ ಉಪನಾಯಕನ ಜವಾಬ್ಧಾರಿ ವಹಿಸಲಾಗಿತ್ತು.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತಕ್ಕೂ ಮುನ್ನ ಅರ್ಹತಾ ಸುತ್ತಿನಲ್ಲಿ ವೆಸ್ಟ್ ಇಂಡೀಸ್ ಈ ಬಾರಿ ಆಡುವ ಅನಿವಾರ್ಯತೆಗೆ ಸಿಲುಕಿತ್ತು. ಆಸ್ಟ್ರೇಲಿಯಾದ ಹೋಬಾರ್ಟ್‌ನ ಬೆಲ್ಲೆರಿವ್ ಓವಲ್ ಮೈದಾನದಲ್ಲಿ ನಡೆದ ಐರ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಐರ್ಲೆಂಡ್ ತಂಡ ವಿಂಡೀಸ್ ಪಡೆಗೆ 9 ವಿಕೆಟ್‌ಗಳ ಸೋಲುಣಿಸಲು ಯಶಸ್ವಿಯಾಗಿತ್ತು.

ಈ ಮೂಲಕ ಐರ್ಲೆಂಡ್ ಸೂಪರ್ 12 ಹಂತವನ್ನು ತಲುಪಿದರೆ ಎರಡು ಬಾರಿಯ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ವಿಶ್ವಕಪ್‌ನಿಂದ ಹೊರಬೀಳುವ ಮೂಲಕ ಆಘಾತಕ್ಕೆ ಒಳಗಾಯಿತು. ಈ ಪಂದ್ಯದಲ್ಲಿ ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿದ್ದಲ್ಲದೆ ಆಮೆಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದು ತಂಡದ ಸೋಲಿಗೆ ಕಾರಣವಾಗಿತ್ತು. ವೆಸ್ಟ್ ಇಂಡೀಸ್ ನೀಡಿದ್ದ 147 ರನ್‌ಗಳ ಗುರಿಯನ್ನ ಐರ್ಲೆಂಡ್ ಬೆನ್ನತ್ತುವಲ್ಲಿ ಯಶಸ್ವಿಯಾಗಿದ್ದಲ್ಲದೆ, ಪಾಲ್ ಸ್ಟಿರ್ಲಿಂಗ್ ಅಜೇಯ ಆಟಕ್ಕೆ ವೀಂಡೀಸ್ ಕನಸು ಛಿದ್ರವಾಯಿತು.

ವೆಸ್ಟ್‌ ಇಂಡೀಸ್ 2014 ಮತ್ತು 2016ರಲ್ಲಿ ಎರಡು ಬಾರಿ ಟಿ20 ವಿಶ್ವಕಪ್‌ ಗೆದ್ದಿದ್ದು ಈ ಸಾಧನೆ ಮಾಡಿರುವ ಏಕೈಕ ತಂಡ ಎನಿಸಿಕೊಂಡಿದೆ ಆದರೆ ಈ ಬಾರಿ ಅರ್ಹತಾ ಸುತ್ತಿನಿಮದಲೆ ಹೊರಬಿದ್ದಿರುವುದು ತಂಡಕ್ಕೆ ಮಾತ್ರವಲ್ಲದೆ ಅಭಿಮಾನಿಗಳಿಗೂ ದೊಡ್ಡ ಆಘಾತವನ್ನುಂಟು ಮಾಡಿತ್ತು

For Quick Alerts
ALLOW NOTIFICATIONS
For Daily Alerts
Story first published: Monday, November 21, 2022, 23:56 [IST]
Other articles published on Nov 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X